ಶಿಕ್ಷಕರ ಸಮರ್ಪಕ ಮರುಹಂಚಿಕೆ ಅಥವಾ ವಲಯ ವರ್ಗಾವಣೆಯ ಅಡಿಯಲ್ಲಿ ವರ್ಗಾಯಿಸಬೇಕಾದ ಶಿಕ್ಷಕರ ಕರಡು ಪಟ್ಟಿಯನ್ನು ಸಂಬಂಧಪಟ್ಟ ಜಿಲ್ಲೆಯ ಡಿಡಿಪಿಐ ರವರಿಂದ ಅಧಿಸೂಚಿಸತಕ್ಕದ್ದು.
(i) ಶಿಕ್ಷಕರ ಸಮರ್ಪಕ ಮರುಹಂಚಿಕೆ ಅಡಿಯಲ್ಲಿ ವರ್ಗಾಯಿಸಬೇಕಾದ ಶಿಕ್ಷಕರ ಕರಡು ಪಟ್ಟಿಯನ್ನು ಸಿದ್ಧಪಡಿಸುವಾಗ, ಶಾಲೆಯಲ್ಲಿ ಒಂದು ವಿಷಯದ ಹುದ್ದೆ ಹೆಚ್ಚುವರಿ ಎಂದು ಕಂಡು ಬಂದಲ್ಲಿ, ಆಗ ಛಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆ ವಿಷಯದ ಎಲ್ಲ ಶಿಕ್ಷಕರನ್ನು ಪಟ್ಟಿಯಲ್ಲಿ ಸೇರಿಸತಕ್ಕದ್ದು.
(ii) ವಲಯ ವರ್ಗಾವಣೆ ಅಡಿಯಲ್ಲಿ ವರ್ಗಾಯಿಸಬೇಕಾದ ಶಿಕ್ಷಕರ ಕರಡು ಪಟ್ಟಿಯನ್ನು ಸಿದ್ಧಪಡಿಸುವಾಗ, ಸಿ ವಲಯ-ಎ ರಲ್ಲಿ ನಿರಂತರವಾಗಿ ಹತ್ತು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿರುವ, ವಲಯ- ರಲ್ಲಿ ಕನಿಷ್ಠ ಹತ್ತು ವರ್ಷಗಳ ಸೇವೆಯನ್ನು ಸಲ್ಲಿಸದೆ ಇರುವ ಮತ್ತು ನಿರ್ದಿಷ್ಟಪಡಿಸಿದ ವಯಸ್ಸಿನ ಮಿತಿಯೊಳಗೆ ಇರುವ ಎಲ್ಲ ಶಿಕ್ಷಕರನ್ನು ಪಟ್ಟಿಯಲ್ಲಿ ಸೇರಿಸತಕ್ಕದ್ದು.