(1) ಶಿಕ್ಷಕರ. ಸಮರ್ಪಕ ಮರುಹಂಚಿಕೆಗೊಳಿಸುವುದನ್ನು ಕೈಗೊಂಡ ವರ್ಷದಲ್ಲಿ ಡಿಡಿಪಿಐ ರವರು, ಸುವ್ಯವಸ್ಥೆಗೊಳಿಸುವುದರ ಪ್ರಕ್ರಿಯೆಯ ತರುವಾಯ ತಾಲ್ಲೂಕುವಾರು ಮಟ್ಟದ ಖಾಲಿ ಸ್ಥಾನಗಳನ್ನು ಪ್ರಕಟಿಸತಕ್ಕದ್ದು; ಅಥವಾ ವಲಯ ವರ್ಗಾವಣೆಯನ್ನು ಕೈಗೊಂಡ ವರ್ಷದಲ್ಲಿ, ಸಂಬಂಧಪಟ್ಟ ಜಿಲ್ಲೆಯ ಡಿಡಿಪಿಐ ರವರು, ವಲಯ ವರ್ಗಾವಣೆಯ ಅಂತಿಮ ಪಟ್ಟಿಯಲ್ಲಿ ಸೇರಿಸಿರುವ ಶಿಕ್ಷಕರ ಭಾವಿತ ಖಾಲಿ ಸ್ಥಾನಗಳೂೊಂದಿಗೆ ತಾಲ್ಲೂಕುವಾರು ಖಾಲಿ ಸ್ಥಾನಗಳನ್ನು ಪ್ರಕಟಿಸತಕ್ಕದ್ದು. 18. ಜಿಲ್ಲೆಯ ವ್ಯಾಪ್ತಿಯೊಳಗೆ ಕೋರಿಕೆ ವರ್ಗಾವಣೆಗಳು. (i) ಜಿಲ್ಲೆ ವ್ಯಾಪ್ತಿಯೊಳಗೆ ಕೋರಿಕೆ. ವರ್ಗಾವಣೆಗಾಗಿ ಸ್ವೀಕರಿಸಿದ ಅರ್ಜಿಗಳ ಆಧಾರದ ಮೇಲೆ ಅಧಿನಿಯಮದ 10ನೇ ಪ್ರಕರಣದ ಮೇರೆಗೆ ನಿರ್ದಿಷ್ಟಪಡಿಸಿದಂತೆ ವಿವಿಧ ಪ್ರವರ್ಗಗಳಿಗಾಗಿ ಮತ್ತು ಸಾಮಾನ್ಯ ಪ್ರವರ್ಗಕ್ಕಾಗಿ ಅಂತಿಮ ಆದ್ಯತಾ ಪಟ್ಟಿಯನ್ನು ಸಿದ್ಧಪಡಿಸತಕ್ಕದ್ದು. ಮತ್ತು ವರ್ಗಾವಣೆ “tC ಪೋರ್ಟಲ್ನಲ್ಲಿ ಸಕ್ಷಮ ಪ್ರಾಧಿಕಾರವು ಪ್ರಕಟಿಸತಕ್ಕದ್ದು. oO
(ii) ಶೇಕಡಾ ಇಪ್ಪತ್ತೆದಕ್ಕಿಂತ ಹೆಚ್ಚಿನ ಖಾಲಿ ಹುದ್ದೆಗಳನ್ನು ಹೊಂದಿರುವ ತಾಲ್ಲೂಕಿನಿಂದ ಸ್ವೀಕರಿಸಿದ ಅರ್ಜಿಗಳನ್ನು ವರ್ಗಾವಣೆಗಾಗಿ ಪರಿಗಣಿಸತಕ್ಕದ್ದಲ್ಲ.
(ii) ಪ್ರತಿಯೊಂದು ಪ್ರವರ್ಗಗಳಲ್ಲಿ ಜ್ಯೇಷ್ಠತೆಯನ್ನು, ಆದ್ಯತಾ ಕ್ರಮಾನುಸಾರ ಆಧಾರದ ಮೇಲೆ ನಿರ್ಧರಿಸತಕ್ಕದ್ದು.
(iv) 10ನೇ ಪ್ರಕರಣದ ಖಂಡ ಗಿ ರ ಮೇರೆಗೆ ನಿರ್ದಿಷ್ಟಪಡಿಸಿದ ಕೋರಿಕೆ ವರ್ಗಾವಣೆಗಳು ಹಾಗೂ ಸಾಮಾನ್ಯ ವರ್ಗಾವಣೆಗಳ ಒಟ್ಟು ಸಂಖ್ಯೆಯು 5ನೇ ನಿಯಮದ ಮೇರೆಗೆ ನಿರ್ದಿಷ್ಟಪಡಿಸಿದ ವರ್ಗಾವಣೆಯ ಪರಿಮಿತಿಗಳೊಳಗಿರತಕ್ಕದ್ದು.
(v) ವರ್ಗಾವಣೆಗಾಗಿನ ಕೌನ್ಸಿಲಿಂಗ್ನ್ನು, 10ನೇ ಪ್ರಕರಣದ (1ನೇ ಉಪ-ಪ್ರಕರಣದ () ರಿಂದ (1)ರ ವರೆಗಿನ ಖಂಡಗಳ ಮೇರೆಗಿನ ಅನುಕ್ರಮದಲ್ಲಿ ಹಾಗೂ ಸಾಮಾನ್ಯ ವರ್ಗದಡಿ ಕೈಗೊಳ್ಳತಕ್ಕದ್ದು.
(vi) ಕೌನ್ಸಿಲಿಂಗ್ಗೆ ಹಾಜರಾದ ಶಿಕ್ಷಕರು ಜಿಲ್ಲೆಯೊಳಗಿನ ಯಾವುದೇ ಖಾಲಿ ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ವರ್ಗಾವಣೆ ಪ್ರಾಧಿಕಾರವು, ಕಂಪ್ಯೂಟರ್ನಲ್ಲಿ ಸೃಜಿಸಿರುವ ವರ್ಗಾವಣಾ ಆದೇಶವನ್ನು ಕೌನ್ಸಿಲಿಂಗ್ ಕೇಂದ್ರದಲ್ಲಿ ತಾನೇ ಸ್ವತಃ ಹೊರಡಿಸತಕ್ಕದ್ದು. ಸೂಕ್ತ ಖಾಲಿ ಹುದ್ದೆಯು ಲಭ್ಯವಿಲ್ಲದಿದ್ದರೆ, . ಶಿಕ್ಷಕರು. ಹಾಲಿ. ಇರುವ ಹುದ್ದೆಯಲ್ಲಿ ಮುಂದುವರಿಯುವುದನ್ನು woh, ಮಾಡಿಕೊಳ್ಳಬಹುದು... ಈ ಬಗ್ಗೆ ಸಂಬಂಧಪಟ್ಟ ಶಿಕ್ಷಕರಿಂದ ವಚನಾದೇಶವನ್ನು ವರ್ಗಾವಣೆ ಪ್ರಾಧಿಕಾರವು ಪಡೆಯತಕ್ಕದ್ದು. ಆದಾಗ್ಯೂ, ಖಾಲಿ ಹುದ್ದೆಯನ್ನು ಒಂದು ಬಾರಿ ಆಯ್ಕೆ ಮಾಡಿಕೊಂಡರೆ ಅದನ್ನು ಮಾರ್ಪಾಟು ಮಾಡತಕ್ಕದ್ದಲ್ಲ ಅಥವಾ ರದ್ದುಗೊಳಿಸತಕ್ಕದ್ದಲ್ಲ.