(1) ರಜೆಯ ಮೇಲೆ ಹೋಗುವ ಕೆಲಸಗಾರರಿಗೆ ಸಂದಾಯವಾಗಬೇಕಾದ ಆಹಾರ ಧಾನ್ಯಗಳು ಮತ್ತು ಇತರ ವಸ್ತುಗಳನ್ನು ರಿಯಾಯಿತಿ ಮಾರಾಟದ ಮೂಲಕ ಒದಗಿ ಬರುವ ಪ್ರಯೋಜನದ ಸಮಾನ ನಗದು ಅಥವಾ ಮಜೂರಿಗಳ ಅತಿಕಾಲಿಕ ದರವನ್ನು ಲೆಕ್ಕ ಹಾಕುವ ಉದ್ದೇಶಕ್ಕಾಗಿ ಅದು ಅವನ ರಜೆಗೆ ನಿಕಟ ಪೂರ್ವದ ತಿಂಗಳಿನಲ್ಲಿ ಅತಿ ಸಮೀಪದ ಮಾರುಕಟ್ಟೆಯಲ್ಲಿ ಇದ್ದ ಸರಾಸರಿ ದರಗಳ ಮೌಲ್ಯ ಮತ್ತು ಅವನು ಅರ್ಹನಾಗಿರುವ ಆಹಾರ ಧಾನ್ಯಗಳಿಗೆ ಮತ್ತು ಇತರ ವಸ್ತುಗಳಿಗೆ ಅನುಮತಿಸಲಾದ ರಿಯಾಯಿತಿ ರದಗಳ ಮೌಲ್ಯ ಇವುಗಳ ನಡುವಣ ವ್ಯತ್ಯಾಸವಾಗಿರತಕ್ಕದು.
(2) ಸಮಾನ ನಗದಿನ ಉದ್ದೇಶಕ್ಕಾಗಿ ಆಹಾರ ಧಾನ್ಯಗಳ ಮತ್ತು ಇತರ ವಸ್ತುಗಳ ತಿಂಗಳಿನ ಸರಾಸರಿ ಮಾರುಕಟ್ಟೆ ದರವು ಕಾರ್ಮಿಕ ಇಲಾಖೆಯು ಲೆಕ್ಕ ಹಾಕಿದಂತೆ ಇರತಕ್ಕದ್ದು.