ಕಕ್ಕಸುಗಳು, ದಾರಿಗಳು, ಮೆಟ್ಟಿಲುಗಳು, ಎತ್ತಿಗೆಗಳು ಕಾರ್ಯಸಂಸ್ಥೆಯ ಬಯಲಿನ ಪ್ರವೇಶ ದ್ವಾರವನ್ನು ಮುಚ್ಚಿಲ್ಲದಿರುವಷ್ಟರ ಮಟ್ಟಿಗೆ ಕೆಲಸದ ವೇಳೆಗಳಲ್ಲಿ ಅವುಗಳ ಮೂಲಕ ಚಲಿಸುವುದು ಅಥವಾ ಹಾದು ಹೋಗುವುದರ ಸುರಕ್ಷೆಯನ್ನು ಖಚಿತಪಡಿಸುವಂಥ ಬೆಳಕನ್ನು ಒದಗಿಸತಕ್ಕದ್ದು. 18. ಒಂದಕ್ಕಿಂತ ಹೆಚ್ಚಿನ ಅಂತಸ್ತಿನ ಕಟ್ಟಡಕ್ಕೆ ಎರಡು ಮೆಟ್ಟಿಲು ಕಾಲುಗಳನ್ನು ಒದಗಿಸತಕ್ಕದ್ದು: ಕಾರ್ಯಸಂಸ್ಥೆಯ ಪ್ರತಿಯೊಂದು ಭಾಗದಿಂದ ನೆಲದ ಮಟ್ಟಕ್ಕೆ ನೇರವಾಗಿ ಮತ್ತು ನಿರಾಂತಕವಾದ ಪ್ರವೇಶಾವಕಾಶಗಳನ್ನು ಒದಗಿಸುವ ಹಾಗೆ ಕಟ್ಟಡದ ಒಳಗಡೆಯಾಗಲಿ ಅಥವಾ ಹೊರಗಡೆಯಾಗಲಿ ಕಾಯಂ ಆಗಿ ನೆಲೆಗೊಳಿಸಿದ್ದ ಕನಿಷ್ಟ ಪಕ್ಷ ಎರಡು ಮೆಟ್ಟಿಲುಗಳ ಸಾಲುಗಳನ್ನು ಅಥವಾ ಮೆಟ್ಟಿಲುಗಳನ್ನು ಒದಗಿಸತಕ್ಕದ್ದು. ಅಂತಹ ಮೆಟ್ಟಿಲುಗಳ ಸಾಲುಗಳಿಗೆ ಸೂಕ್ತವಾದ ಮತ್ತು ಸಾಕಾಷ್ಟಾದ ಹಸ್ತಕಟಾಂಜನ ಅಥವಾ ಇತರ ಅನುಕೂಲಕರ ಆಸರೆಯನ್ನು ಒದಗಿಸತಕ್ಕದ್ದು. 40 ವ್ಯಕ್ತಿಗಳಿಗಿಂತ ಕಡಿಮೆಯವರನ್ನು ನಿಯೋಜಿಸಿಕೊಳ್ಳುವ ಕಾರ್ಯಸಂಸ್ಥೆಯಲ್ಲಿ ಪರಿಶೀಲಕನು ಎರಡನೇ ಮೆಟ್ಟಿಲುಗಳ ಸಾಲು ಅಥವಾ ಮೆಟ್ಟಿಲುಗಳಿಗೆ ಬದಲಾಗಿ ಬೆಂಕಿಯ ಸಂದರ್ಭದಲ್ಲಿ ಪ್ರಕರಣದ ಸನ್ನಿವೇಶಗಳಲ್ಲಿ ಯಥೋಚಿತವಾಗಿ ಅಗತ್ಯವಾಗಿರುವಂಥ ತಪ್ಪಿಸಿಕೊಳ್ಳುವ ಇತರ ಸಾಧನೆಗಳನ್ನು ಅಂಗೀಕರಿಸಬಹುದು.
Loading…