(1) 11ನೇ ಪ್ರಕರಣದ (1) ನೇ ಉಪ-ಪ್ರಕರಣದ ಮೇರೆಗೆ ಅಧಿಸೂಚನೆಯನ್ನು ಹೊರಡಿಸುವುದಕ್ಕೆ ಮುಂಚೆ ಸರ್ಕಾರವು ಈ ಕೆಳಕಂಡ ಉಪ-ನಿಯಮಗಳಲ್ಲಿ ನಿರ್ದಿಷ್ಟಪಡಿಸಿದ ರೀತಿಯಲ್ಲಿ 11ನೇ ಪ್ರಕರಣದ (2) ನೇ ಉಪ- ಪ್ರಕರಣದ ಮೇರೆಗೆ ವಿಚಾರಣೆಯನ್ನು ನಡೆಸತಕ್ಕದ್ದು.
(2) ಸರ್ಕಾರದ ಅಂತಹ ಆದೇಶವನ್ನು ಮಾಡಲು ಅದರ ಉದ್ದೇಶದ ನೋಡೀಸನ್ನು ಕೊಡತಕ್ಕದ್ದು. ಆ ನೋಟಿಸು ‘‘ಙ’’ ನಮೂನೆಯಲ್ಲಿರತಕ್ಕದ್ದು ಮತ್ತು ಮಾಡಲು ಉದ್ದೇಶಿಸಲಾದ ಆದೇಶದ ಪ್ರತಿಯನ್ನು ಅದಕ್ಕೆ ಲಗತ್ತಿಸಿದ ಹೊರತು ಆ ಆದೇಶವು ಅನ್ವಯವಾಗತಕ್ಕಂಥ ಪ್ರದೇಶ ಮತ್ತು ಕಾರ್ಯಸಂಸ್ಥೆ ಅಥವಾ ಕಾರ್ಯಸಂಸ್ಥೆಗಳ ವರ್ಗ ಅಥವಾ ವರ್ಗಗಳು ನಿಗದಿಪಡಿಸಬೇಕೆಂದು ಪ್ರಸ್ತಾವಿಸಲಾಗಿರುವಂಥ ತೆರೆಯುವ ವೇಳೆಗಳು ಅಥವಾ ಮುಚ್ಚುವ ವೇಳೆಗಳು ಅಥವಾ ಅವೆರಡನ್ನು ಮತ್ತು ಯಾವ ದಿವಸಗಳಿಗಾಗಿ ಅಂತಹ ವೇಳೆಗಳನ್ನು ನಿಗದಿಪಡಿಸಬೇಕೆಂದು ಪ್ರಸ್ತಾವಿಸಲಾಗಿದೆಯೋ ಆ ದಿವಸವನ್ನು ನಿರ್ದಿಷ್ಟಪಡಿಸತಕ್ಕದ್ದು. ಆ ನೋಟೀಸು ಅಂತಹ ಆದೇಶಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳು ಮತ್ತು ಸೂಚನೆಗಳು ಯಾವುದಾದರೂ ಇದ್ದರೆ ಅವುಗಳನ್ನು ಇಂತಹ ನೊಟೀಸಿನ ದಿನಾಂಕದಿಂದ ಒಂದು ತಿಂಗಳೊಳಗೆ ಆ ನೋಟಿಸಿನಲ್ಲಿ ನಮೂದಿಸಿದ ಅಧಿಕಾರಿಗೆ ಕಳುಹಿಸಬಹುದೆಂದು ಸಹ ತಿಳಿಸತಕ್ಕದ್ದು.
(3) ಆ ನೊಟೀಸನ್ನು ಸರ್ಕಾರಿ ರಾಜಪತ್ರದಲ್ಲಿ ಪ್ರಕಟಿಸತಕ್ಕದು ಮತ್ತು ಅಂತಹ ನೋಟಿಸಿನ ಪ್ರತಿಯನ್ನು ರಾಜ್ಯ ಸರ್ಕಾರವು ಸೂಕ್ತವೆಂದು ಭಾವಿಸುವಂತೆ ಆ ಆದೇಶವನ್ನು ಅನ್ವಯಿಸಬೇಕೆಂದು ಪ್ರಸ್ತಾವಿಸಲಾದಂಥ ಪ್ರದೇಶದಲ್ಲಿ ಅಂತ ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸತಕ್ಕದ್ದು. ಆ ನೋಟಿಸಿನ ಪ್ರತಿಗಳನ್ನು ಅಂತಹ ಪ್ರದೇಶವು ಯಾವುದರ ಅಧಿಕಾರ ವ್ಯಾಪ್ತಿಯಲ್ಲಿ ಇರುವುದೋ ಆ ಸ್ಥಳೀಯ ಪ್ರಾಧಿಕಾರಕ್ಕೆ ಮತ್ತು ರಾಜ್ಯ ಸರ್ಕಾರಕ್ಕೆ ಸೂಕ್ತವೆಂದು ಭಾವಿಸವಂಥ ಸಂಘಗಳು ಅಥವಾ ಸಂಸ್ಥೆಗಳಿಗೆ ಕಳುಹಿಸತಕ್ಕದ್ದು. ನೊಟೀಸನ್ನು ಅಂತಹ ಪ್ರದೇಶದಲ್ಲಿ ಪ್ರಸಾರವನ್ನು ಹೊಂದಿರುವ ಕನಿಷ್ಟ ಪಕ್ಷ ಒಂದು ವೃತ್ತಪತ್ರಿಕೆಯಲ್ಲಿ ಪ್ರಕಟಿಸತಕ್ಕದ್ದು.
(4) ರಾಜ್ಯ ಸರ್ಕಾರವು 11ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೇರೆಗೆ ಅಧಿಸೂಚನೆಯನ್ನು ಹೊರಡಿಸುವುದಕ್ಕೆ ಮುಂಚೆ ಅದು ಸ್ವೀಕರಿಸಿದ ಎಲ್ಲಾ ಆಕ್ಷೇಪಣೆಗಳನ್ನು ಮತ್ತು ಸೂಚನೆಗಳನ್ನು ಪರ್ಯಾಲೋಚಿಸತಕ್ಕದ್ದು.