ಪರಿಶೀಲಕನು ಈ ಅಧಿನಿಯಮದ ಅಥವಾ ಈ ನಿಯಮಗಳ ಉಪಬಂಧಗಳ ಮತ್ತು ಈ ಅಧಿನಿಯಮದ ಮೇರೆಗೆ ಸರ್ಕಾರವು ಮಾಡಿದ ಯಾವುದೇ ಆದೇಶವನ್ನು ಸರಿಯಾಗಿ ಪಾಲಿಸಲಾಗುತ್ತಿದೆಯೋ ಎಂಬುದರ ಬಗ್ಗೆ ತಾನೇ ಮನದಟ್ಟು ಮಾಡಿಕೊಳ್ಳುವ ಉದ್ದೇಶಕ್ಕಾಗಿ ಅವನಿಗೆ ಅವಶ್ಯವೆಂದು ಕಂಡುಬರಬಹುದಾದಂಥ ಪರೀಕ್ಷೆಯನ್ನು ಮಾಡತಕ್ಕದ್ದು.
ವಿಶೇಷವಾಗಿ,-
(i) ಕಾರ್ಯಸಂಸ್ಥೆಯು ಅಧಿನಿಯಮದ ಮೇರೆಗೆ ಕ್ರಮಬದ್ಧವಾಗಿ ನೋಂದಾಯಿತವಾಗಿದೆ;
(ii) ಅಧಿನಿಯಮದ ಅಥವಾ ಈ ನಿಯಮಗಳಮೇರೆಗೆ ಇಡಬೇಕೆಂದು ಅಥವಾ ಪ್ರದರ್ಶಿಸಬೇಕೆಂದು ಅಗತ್ಯಪಡಿಸಿದ ರಿಜಿಸ್ಟರುಗಳು, ದಾಖಲೆಗಳು ಮತ್ತು ನೋಟೀಸುಗಳನ್ನು ಯುಕ್ತವಾಗಿ ಇಡಲಾಗಿದೆ ಅಥವಾ ಪ್ರದರ್ಶಿಸಲಾಗಿದೆ;
(iii) ಅಧಿನಿಯಮದ ಮೇರೆಗೆ ಕೊಡಬೇಕಾದ ಅಥವಾ ಪಾಲಿಸಬೇಕಾದ ವಿಶ್ರಾಂತಿಯ ಮಧ್ಯಂತರಗಳು ಮತ್ತು ರಜಾ ದಿವಸ ಕೊಡಲಾಗಿದೆ ಮತ್ತು ಪಾಲಿಸಲಾಗಿದೆ ಮತ್ತು ಅಧಿನಿಯಮದ ಮೇರೆಗೆ ವಿಧಿಸಿದ ಕೆಲಸದ ವೇಳೆಗಳ ಮಿತಿಗಳು ಮತ್ತು ಹರಡುವಿಕೆಯನ್ನು ಕೊಡಲಾಗುತ್ತಿದೆ ಮತ್ತು ಪಾಲಿಸಲಾಗುತ್ತಿದೆ ಮತ್ತು ಅಧಿನಿಯಮದ ಮೇರೆಗೆ ವಿಧಿಸಿದ ಕೆಲಸದ ವೇಳೆಗಳ ಮಿತಿಗಳು ಮತ್ತು ಹರಡುವಿಕೆಯನ್ನು ಮೀರಲಾಗಿಲ್ಲ.
(iv) ತೆರೆಯುವ ಮತ್ತು ಮುಚ್ಚುವ ವೇಳೆಗಳಿಗೆ ಸಂಬಂಧಿಸಿದಂತೆ ಅಧಿನಿಯಮದ ಉಪಬಂಧಗಳು ಮತ್ತು ಸರ್ಕಾರವು ಹೊರಡಿಸಿದ ಯಾವುದೇ ಅಧಿಸೂಚನೆಯನ್ನು ಸರಿಯಾಗಿ ಪಾಲಿಸಲಾಗುತ್ತಿದೆ;
(v) ರಜೆಗೆ ಸಂಬಂಧಿಸಿದಂತೆ ಅಧಿನಿಯಮದ ಉಪಬಂಧಗಳು ಮತ್ತು ನಿಯಮಗಳನ್ನು ಸರಿಯಾಗಿ ಪಾಲಿಸಲಾಗುತ್ತಿದೆ;
(ತi) ಸ್ವಚ್ಛತೆ, ಬೆಳಕಿನ ವ್ಯವಸ್ಥೆ ಮತ್ತು ಬೆಂಕಿಯ ವಿರುದ್ಧ ಮುನ್ನೆಚ್ಚರಿಕೆಗೆ ಸಂಬಂಧಿಸಿದ ಈ ನಿಯಮಗಳ ಉಪಬಂಧಗಳನ್ನು ಸರಿಯಾಗಿ ಪಾಲಿಸಲಾಗುತ್ತಿದೆ;
(ತii) ಅತಿಕಾಲಿಕ ಕೆಲಸಕ್ಕಾಗಿ ಸಂದಾಯಕ್ಕೆ ಸಂಬಂಧಿಸಿದ ಈ ಅಧಿನಿಯಮದ ಉಪಬಂಧಗಳನ್ನು ಸರಿಯಾಗಿ ಪಾಲಿಸಲಾಗುತ್ತಿದೆ;
(ತiii) ಯಾವುದೇ ಕಾರ್ಯಸಂಸ್ಥೆಯಲ್ಲಿ ಯಾವುದೇ ಮಗುವು ಕೆಲಸ ಮಾಡಲು ಅವಕಾಶ ಕೊಟ್ಟಿಲ್ಲ:
- ಇವುಗಳ ಬಗ್ಗೆ ಮನದಟ್ಟು ಮಾಡಿಕೊಳ್ಳತಕ್ಕದ್ದು. (2) ಅಂತಹ ಪರೀಕ್ಷೆಯನ್ನು ನಡೆಸುವುದಕ್ಕಾಗಿ ಪರಿಶೀಲಕನು ಅವನು ಅವಶ್ಯವೆಂದು ಭಾವಿಸಬಹುದಾದಂಥ ಆವರಣದ ಮೇಲಿನ ವ್ಯಕ್ತಿಯನ್ನು ಪ್ರಶ್ನಿಸಬಹುದು, ಪರಂತು, ಈ ನಿಯಮದ ಮೇರೆಗೆ ಅಂತಹ ಯಾವನೇ ವ್ಯಕ್ತಿಯನ್ನು ಯಾವ ಪ್ರಶ್ನೆಗೆ ಉತ್ತರವು ಅವನನ್ನು ಅಪರಾಧದಲ್ಲಿ ಸಿಕ್ಕಿ ಸುವಂಥದು ಆಗಿದೆಯೋ ಆ ಯಾವುದೇ ಪ್ರಶ್ನೆಗೆ ಉತ್ತರಿಸಲು ಅಗತ್ಯಪಡಿಸಬೇಕಾಗಿಲ್ಲ.
21ಕ. ಪ್ರಾಸಿಕ್ಯೂಷನ್ನಿಗಾಗಿ ಪ್ರಕ್ರಿಯೆ:- ಅಧಿನಿಯಮ, ನಿಯಮಗಳು ಅಥವಾ ಅದರ ಮೇರೆಗೆ ಮಾಡಿದ ಆದೇಶಗಳ ಮೇರೆಗೆ ದಂಡನೀಯವಾಗದ ಅಪರಾಧಕ್ಕೆ ಸಂಬಂಧಿಸಿದಂತೆ ಫಿರ್ಯಾದನ್ನು ಸಲ್ಲಿಸುವುದಕ್ಕೆ ಮುಂಚೆ ಪರಿಶೀಲಕನು ಮುಖ್ಯ ಪರಿಶೀಲಕನ ಪೂರ್ವಾನುಮೋದನೆಯನ್ನು ಪಡೆಯತಕ್ಕದ್ದು.