8,9-12,14,-16-17-,18-,19-20 ಅಥವಾ 21ನೇ ನಿಯಮಗಳನ್ನು ಉಲ್ಲಂಘಿಸುವವರು ಯಾರೇ ಆಗಲಿ ಅಪರಾಧ ನಿರ್ಣಯವಾದ ಮೇಲೆ ಐವತ್ತು ರೂಪಾಯಿಗಳಿಗೆ ವಿಸ್ತರಿಸಬಹುದಾದಂಥ ಜುಲ್ಮಾನೆಯಿಂದ ದಂಢನೀಯವಾಗತಕ್ಕದ್ದು.
ನಮೂನೆ ‘‘ಕ’’
(3ನೇ ನಿಯಮವನ್ನು ನೋಡಿ)
[4 (1)ನೇ ಪ್ರಕರಣದ ಮೇರೆಗೆ ವಿವರಣಾ ಪತ್ರ] 1. ಕಾರ್ಯಸಂಸ್ಥೆಯ ಹೆಸರು, ಯಾವುದಾದರೂ ಇದ್ದರೆ, ಅದು. 2. ಕಾರ್ಯಸಂಸ್ಥೆಯ ಅಂಚೆ ವಿಳಾಸ ಮತ್ತು ಇರುವ ಸ್ಥಳ. 3. ಅಂಗಡಿಗೆ ಲಗತ್ತಾದ ಆದರೆ ಅಂಗಡಿಯ ಆವರಣದಿಂದ ಬೇರೆ ಆವರಣದಲ್ಲಿ ಇರುವ ಕಚೇರಿ ಉಗ್ರಾಣ, ಗೋದಾಮು, ಸರಕುಗಳ ಉಗ್ರಾಣ ಅಥವಾ ಕೆಲಸದ ಸ್ಥಳ ಯಾವುದಾದರೂ ಇದ್ದರೆ ಅದು ಇರುವ ಸ್ಥಳ. 4. ನಿಯೋಜಕನ ಹೆಸರು. 5. ನಿಯೋಜಕನ ನಿವಾಸದ ವಿಳಾಸ. 6. ವ್ಯವಸ್ಥಾಪಕನು ಯಾವನಾದರೂ ಇದ್ದರೆ ಅವನ ಹೆಸರು ಮತ್ತು ಅವನ ನಿವಾಸದ ವಿಳಾಸ. 7. ಕಾರ್ಯಸಂಸ್ಥೆಯ ಪ್ರವರ್ಗ, ಅಂದರೆ ಅದು ಅಂಗಡಿಯೇ ಅಥವಾ ವಾಣಿಜ್ಯ ಕಾರ್ಯಸಂಸ್ಥೆಯೇ ವಸತಿಯ ಹೊಟೇಲ್ ಉಪಹಾರ ಗೃಹವೇ, ಭೋಜನ ಗೃಹವೇ, ಥಿಯೇಟರೇ ಅಥವಾ ಇತರ ಸಾರ್ವಜನಿಕ ವಿನೋದ ಅಥವಾ ಮನೋರಂಜನಾ ಸ್ಥಳವೇ. 8. ವ್ಯವಹಾರದ ಸ್ವರೂಪ. 9. ವ್ಯವಹಾರವನ್ನು ಪ್ರಾರಂಭಿಸಿದ ದಿನಾಂಕ. 10. ಕಾರ್ಯಸಂಸ್ಥೆಯಲ್ಲಿ ನಿಯೋಜಿತರಾದ ನಿಯೋಜಕನ ಕುಟುಂಬದ ಸದಸ್ಯರ ಹೆಸರು ವಯಸ್ಕರು................................... ಪುರುಷರು ............................. ಮಹಿಳೆಯರು ......................... ಯುವ ವ್ಯಕ್ತಿಗಳು ........................ ಒಟ್ಟು ........................................ 11. ವ್ಯವಸ್ಥಾಪನೆಯ ಸ್ಥಾನದಲ್ಲಿರುವ ಇತರ ವ್ಯಕ್ತಿಗಳ ಅಥವಾ ವಿಶ್ವಾಸದನಾತೆಯಲ್ಲಿ ತೊಡಗಿರುವ ನಿಯೋಜಿತರ ಹೆಸರುಗಳು (ಯುವ ವ್ಯಕ್ತಿಗಳ ಸಂದರ್ಭದಲ್ಲಿ ಲಿಂಗ ಮತ್ತು ವಯಸ್ಸನ್ನು ಸೂಚಿಸಿ) 12. ನಿಯೋಜಿತರ ಒಟ್ಟು ಸಂಖ್ಯೆ ವಯಸ್ಕರು................................... ಪುರುಷರು ............................. ಮಹಿಳೆಯರು ......................... ಯುವ ವ್ಯಕ್ತಿಗಳು ........................ ಒಟ್ಟು ........................................ (ನಿಯೋಜಕರು ರುಜು) ದಿನಾಂಕ .................................. (ನಿಯೋಜಕರು ರುಜು) ಟಿಪ್ಪಣಿ: (1) 1ನೇ ಅನುಸೂಚಿಯಲ್ಲಿ ನಿಯಮಿಸಿದಂಥ ಫೀಜಿನೊಂದಿಗೆ ಸಂಬಂಧಪಟ್ಟ ಸ್ಥಳೀಯ ಪ್ರದೇಶದ ಪರಿಶೀಲಕನಿಗೆ ವಿವರ ಪತ್ರವನ್ನು ಕಳುಹಿಸತಕ್ಕದ್ದು.
(2) 3ನೇ ಬಾಬನ್ನು ಕಚೇರಿ ಉಗ್ರಾಣ ಇತ್ಯಾದಿಗಳನ್ನು ಅಧಿನಿಯಮದ ಮೇರೆಗೆ ಪ್ರತ್ಯೇಕವಾಗಿ ನೊಂದಾಯಿಸದೆ ಇದ್ದಾಗ ಮಾತ್ರ ಭರ್ತಿ ಮಾಡತಕ್ಕದ್ದು ಅಂತಹ ಕಚೇರಿಗಳು, ಉಗ್ರಾಣಗಳು ಇತ್ಯಾದಿಗಳಿಗೆ ಸಂಬಂಧಿಸಿದಂತೆ 10-11, 12ನೇ ಬಾಬುಗಳ ಮೇರೆಗೆ ಅಗತ್ಯಪಡಿಸಿದ ವಿವರಗಳನ್ನು ಈ ವಿವರಣಾ ಪತ್ರದಲ್ಲಿ ಪ್ರತ್ಯೇಕವಾಗಿ ಕೊಡತಕ್ಕದ್ದು.
(4ನೇ ನಿಯಮ ನೋಡಿ)