(1) (ಕ) ಪ್ರತಿಯೊಂದು ಕಾರ್ಯಸಂಸ್ಥೆಯಲ್ಲಿ ಕೊಠಡಿಗಳ ಎಲ್ಲಾ ಒಳಗೋಡೆಗಳು ಮತ್ತು ಅಂತಹ ಕೊಠಡಿಗಳ ಎಲ್ಲಾ ಒಳಮಾಳಿಗೆಗಳು ಅಥವಾ ಛಾವಣಿಗಳು (ಅಂಥ ಗೋಡೆಗಳು, ಒಳಮಾಳಿಗೆಗಳು ಅಥವಾ ಛಾವಣಿಗಳಿಗೆ ಗಿಲಾವು ಮಾಡಿರಲಿ ಅಥವಾ ಮಾಡಿಲ್ಲದಿರಲಿ) ಮತ್ತು ಎಲ್ಲಾ ದಾರಿಗಳು ಮತ್ತು ಪಾವಟಿಗಳಿಗಳಿಗೆ ಕೊನೆಯ ಸಲ ಸುಣ್ಣ ಹೊಡೆದಾಗಿನ ಅವಧಿಯಿಂದ ಕನಿಷ್ಟ ಪಕ್ಷ ವರ್ಷದಲ್ಲೊಮ್ಮೆ ಸುಣ್ಣ ಹಚ್ಚತಕ್ಕದ್ದು. ಎಲ್ಲಾ ತೊಲೆಗಳಿಗೆ, ದೂಲಗಳಿಗೆ, ಬಾಗಿಲುಗಳಿಗೆ ಕಿಟಕಿ ಚೌಕಟ್ಟುಗಳಿಗೆ ಮತ್ತು ಇತರ ಮರದ ಸಾಮಾನಿಗೆ ನೆಲಗಳನ್ನು ಹೊರತುಪಡಿಸಿ ಸುಣ್ಣು ಹಚ್ಚುವುದನ್ನಾಗಲಿ ಅಥವಾ ಬಣ್ಣ ಹಚ್ಚವುದನ್ನಾಗಲಿ ಕೊನೆಯ ಸಲ ಸುಣ್ಣ ಹಚ್ಚಿದ ಅಥವಾ ಬಣ್ಣ ಹಚ್ಚಿದಾಗಿನ ಅವಧಿಯಿಂದ ಪ್ರಾರಂಭಿಸಿ ವರ್ಷಕ್ಕೆ ಕನಿಷ್ಟ ಒಂದು ಬಾರಿ ಮಾಡತಕ್ಕದ್ದು ಅಥವಾ ಕೊನೆಯ ಬಾರಿ ಬಣ್ಣ ಹಚ್ಚಿದ ಅಥವಾ ವಾರ್ನಿಷು ಮಾಡಿದ ಅವಧಿಯಿಂದ ಪ್ರಾರಂಬಿಸಿ ಏಳು ವರ್ಷಗಳಿಗೆ ಒಂದು ಬಾರಿ ಬಣ್ಣ ಹಚ್ಚತಕ್ಕದ್ದು ಅಥವಾ ವಾರ್ನಿಷು ಮಾಡತಕ್ಕದ್ದು ಮತ್ತು ಸ್ವಚ್ಛ ಸ್ಥಿತಿಯಲ್ಲಿ ಇಡತಕ್ಕದ್ದು.
(ಖ) ನಿರ್ದಿಷ್ಟಪಡಿಸಿದ ಭಾಗಗಳಿಗೆ ಪದೇ ಪದೇ ಸಂಸ್ಕರಣೆಯನ್ನು ಪರಿಶೀಲಕನು ಬರಹದಲ್ಲಿನ ಆದೇಶದ ಮೂಲಕ ಅಗತ್ಯಪಡಿಸಿದ ಹೊರತು ಎಲ್ಲಾ ಒಳರಚನೆಯ ಕಬ್ಬಿಣ ಮತ್ತು ಉಕ್ಕಿನ ಸಾಮಾನಿಗೆ ಕೊನೆಯದಾಗಿ ಬಣ್ಣ ಹಚ್ಚಿದ ವಾರ್ನಿಷು ಮಾಡಿದ ಅವಧಿ ಹಚ್ಚತಕ್ಕದ್ದು ಅಥವಾ ವಾರ್ನಿಷು ಮಾಡತಕ್ಕದ್ದು ಯಾವ ದಿನಾಂಕದಂದು ಸುಣ್ಣ ಹಚ್ಚಲಾಯಿತೋ ಬಣ್ಣ ಹಚ್ಚಲಾಯಿತೋ ಅಥವಾ ವಾರ್ನಿಷು ಹಚ್ಚುವುದನ್ನು ಮಾಡಲಾಯಿಯೋ ಆ ದಿನಾಂಕವನ್ನು 1ನೇ ನಮೂನೆಯಲ್ಲಿ ಕ್ರಮಬದ್ಧವಾಗಿ ನಮೂದಿಸತಕ್ಕದ್ದು ಅದನ್ನು ಅಗತ್ಯಪಡಿಸಿದಾಗ ಪರಿಶೀಲಕನಿಗೆ ತೋರಿಸತಕ್ಕದ್ದು;
(ಗ) ಈ ಉಪ-ನಿಯಮದ ಉಪಬಂಧಗಳು;
(i) ಸಾಮಾಗ್ರಿಗಳನ್ನು ದಾಸ್ತಾನಿಗಾಗಿ ಮಾತ್ರ ಉಪಯೋಗಿಸುವ ಕೊಠಡಿಗಳಿಗೆ;
(ii) ವಿದ್ಯನ್ಮುಲಾಮು ಮಾಡಿದ ಕಬ್ಬಿಣ ಹೆಂಚುಗಳು ಕಲ್ನಾರು ತಗಡುಗಳು ಅಥವಾ ಅಂಥದೇ ವಸ್ತು ಅಥವಾ ಹೊಳೆಯುವ ಇಟ್ಟಿಗೆಗಳಿಂದ ಮಾಡಿದಂಥ ಕೊಠಡಿಗಳ ಗೋಡೆಗಳು ಅಥವಾ ಮೇಲ್ಛಾವಣಿಗಳಿಗೆ;
(iii) ರಾಜ್ಯ ಸರ್ಕಾರದ ಅಭಿಪ್ರಾಯದಲ್ಲಿ ಯಾವ ಕಾರ್ಯಸಂಸ್ಥೆ ಅಥವಾ ಅದರ ಭಾಗಕ್ಕೆ ಸುಣ್ಣ ಬಳಿಯುವುದು ಅಥವಾ ಬಣ್ಣ ಲೇಪಿಸುವುದು ಅನವಶ್ಯವೆನಿಸುವ ಯಾವುದೇ ಇತರ ಕಾರ್ಯಸಂಸ್ಥೇ ಅಥವಾ ಅದರ ಭಾಗಗಳಿಗೆ
- ಅನ್ವಯವಾಗತಕ್ಕದ್ದಲ್ಲ. (2) ಕಾರ್ಯಸಂಸ್ಥೆಯಲ್ಲಿನ ಯಾವುದೇ ಆವರಣದಲ್ಲಿ ಯಾವುದೇ ಕಸ, ಹೊಲಸು ಅಥವಾ ಚೂರುಪಾರನ್ನು 12 ಗಂಟೆಗಳಿಗಿಂತ ಹೆಚ್ಚಿಗೆ ರಾಶಿ ಬೀಳಲು ಅಥವಾ ಇರಲು ಬಿಡತಕ್ಕದ್ದಲ್ಲ ಪರಿಶೀಲಕನು ಅನುಮೋದಿಸಿದಂಥ ರೀತಿಯಲ್ಲಿ ಅದನ್ನು ವಿಲೆ ಮಾಡತಕ್ಕದ್ದು.
(3) ಪ್ರತಿಯೊಂದು ಕಾರ್ಯಸಂಸ್ಥೆಯನ್ನು, ಸುತ್ತಣ ಕೌಂಪೌಂಡನ್ನು ಸ್ವಚ್ಛ ಮತ್ತು ನಿರ್ಮಲ ಸ್ಥಿತಿಯಲ್ಲಿ ಇಟ್ಟಿರತಕ್ಕದ್ದು.