ಯಾವ ವರ್ಷದಲ್ಲಿ ಮಜೂರಿಗಳ ಸಹಿತ ರಜೆಯು ಒದಗಿಬರುವುದೋ ಆ ವರ್ಷದಲ್ಲಿ ಅದನ್ನು ಅವನು ಉಪಯೋಗಿಸಿಕೊಳ್ಳದೇ ಇರುವ ಅವನ ಉದ್ದೇಶದ ಬಗ್ಗೆ ನೋಟಿಸನ್ನು ಕೊಟ್ಟಿರುವ ನಿಯೋಜಿತನಿಗೆ ಸಂಬಂಧಿಸಿದಂತೆ ಹೊರತು ನಿಯೋಜಕನು ಪ್ರತಿಯೊಂದು 240 ದಿವಸಗಳ ಎರಡು ಅವಧಿಗಳ ಮಜೂರಿಗಳ ಸಹಿತ ಅವನ ರಜೆಯನ್ನು ಮಾಡಿಟ್ಟುಕೊಂಡಿರುವ ನಿಯೋಜಿತನನ್ನು ಒಳಗೊಂಡು ಸಂದರ್ಭಾನುಸಾರ ಪ್ರತಿಯೊಬ್ಬ ನಿಯೋಜತನಿಗೆ ಅಥವಾ ನಿಯೋಜಿತರ ಗುಂಪುಗಳಿಗೆ ಮಜೂರಿಗಳ ಸಹಿತ ರಜೆಗಳನ್ನು ಯಾವ ದಿನಾಂಕಗಳಂದು ಕೊಡತಕ್ಕದ್ದೋ ಆ ದಿನಾಂಕಗಳನ್ನು ನಿರೂಪಿಸಿ ರಜಾ ದಿವಸಗಳ ಕಾರ್ಯಕ್ರಮಗಳನ್ನು ತಯಾರಿಸತಕ್ಕದ್ದು ಮತ್ತು ಹಾಗೆ ನಿಗದಿಪಡಿಸಿದ ದಿನಾಂಕಗಳ ನೋಟಿಸನ್ನು ಪ್ರತಿಯೊಬ್ಬ ನಿಯೋಜಕನಿಗೆ ಕೊಡತಕ್ಕದ್ದು. ನಿಯೋಜಕನು ಹಾಗೆ ನಿಗದಿಪಡಿಸಿದ ಯಾವುದೇ ದಿನಾಂಕವು ಯಾವುದೇ ವೈಯಕ್ತಿಕ ಪ್ರಕರಣದಲ್ಲಿ ನಿಯೋಜಿತನು ಮಜೂರಿಗಳ ಸಹಿತ ರಜೆಯನ್ನು ಇನ್ನು ಮೊದಲೇ ತೆಗೆದುಕೊಳ್ಳಲು ಒಪ್ಪಿದ ಹೊರತು, ನಿಯೋಜಕನು ಹಿಂದೆ ಹೇಳಿದಂತೆ ನೋಟಿಸನ್ನು ಕೊಟ್ಟಿರುವಂಥ ದಿನಾಂಕದಿಂದ ಮೂರು ವಾರಗಳಿಗಿಂತ ಮುಂಚಿತವಾಗಿರೆತಕ್ಕದ್ದದಲ್ಲ. ಅವಶ್ಯಕವಾದ ನಮೂದನೆಗಳನ್ನು ರಿಜಿಸ್ಟರು ಮತ್ತು ಮಜೂರಿಗಳ ಸಹಿತ ರಜೆ ಪುಸ್ತಕದಲ್ಲಿ ಮಾಡತಕ್ಕದ್ದು.
Loading…