(1) ಕಾರ್ಮಿಕ ಅಸಿಸ್ಟೆಂಟ್ ಕಮೀಷನರ್ಗಳು ಅವರವರ ಅಧಿಕಾರ ವ್ಯಾಪ್ತಿಯ ಪ್ರದೇಶಗಳೊಳಗೆ 39ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೇರೆಗಿನ ಆದೇಶಗಳಿಗೆ ಸಂಬಂಧಿಸಿದಂತೆ ಅಪೀಲುಗಳನ್ನು ಮಾಡಿಕೊಳ್ಳತಕ್ಕ ಅಧಿಕಾರಿಗಳಾಗಿತಕ್ಕದ್ದು.
(2) ಅಂತಹ ಪ್ರತಿಯೊಂದು ಅಪೀಲನ್ನು ನಿಯೋಜಿತನಿಗೆ ಆತನನ್ನು ತೆಗೆದು ಹಾಕುವ ಅಥವಾ ವಜಾ ಮಾಡುವುದಕ್ಕಾಗಿನ ಆದೇಶವನ್ನು ಅವನಿಗೆ ತಿಳಿಸಿದಂಥ ದಿನಾಂಕದಿಂದ 30 ದಿವಸಗಳೊಳಗೆ ಸಲ್ಲಿಸತಕ್ಕದ್ದು:
ಪರಂತು, ಸಕಾಲದೊಳಗೆ ಅಫೀಲನ್ನು ಸಲ್ಲಿಸಲಾಗದೇ ಇರುವುದಕ್ಕೆ ಸಾಕಷ್ಟು ಕಾರಣಗಳನ್ನು ಅಪೀಲುದಾರನು ತೋರಿಸಿದರೆ ಸದರಿ 30 ದಿವಸಗಳ ಅವಧಿಯ ತರುವಾಯ ಅಫೀಲನ್ನು ಅಂಗೀಕರಿಸಬಹುದು.
(3) ಪ್ರತಿಯೊಂದು ಅಪೀಲು ಆದೇಶಕ್ಕೆ ಆಕ್ಷೇಪಣೆಯ ಆಧಾರಗಳನ್ನು ಸಂಕ್ಷಿಪ್ತವಾಗಿ ನಿರೂಪಿಸಿರುವ ವಿವರಣೆ ಪತ್ರದ ರೂಪದಲ್ಲಿ ಇರತಕ್ಕದ್ದು ಮತ್ತು ಅದರೊಂದಿಗೆ ಅಫೀಲನ್ನು ಯಾವ ಆದೇಶದ ವಿರುದ್ಧ ಸಲ್ಲಿಸಲಾಗಿದೆಯೋ ಆ ಆದೇಶದ ಪ್ರತಿಯು ಇರತಕ್ಕದ್ದು.