ಈ ನಿಯಮಗಳಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(1) “ಅಧಿನಿಯಮ” ಎಂದರೆ, ಕರ್ನಾಟಕ ಸಿನಿಮಾಗಳ (ನಿಯಂತ್ರಣ) ಅಧಿನಿಯಮ, 1964, (1964ರ ಕರ್ನಾಟಕ ಅಧಿನಿಯಮ 23);
(2) “ಸಭಾಂಗಣ” ಎಂದರೆ, ಚಲನಚಿತ್ರ ಪ್ರದರ್ಶನ ವೀಕ್ಷಿಸಲು ಸಾರ್ವಜನಿಕರಿಗೆ ಸ್ಥಳಾವಕಾಶ ಶಲ್ಪಿಸಿದ ಯಾವುದೇ ಲೈಸೆನ್ಸ್ ಪಡೆದ ಸ್ಥಳ;
(3) “ಪೋಲಿಸ್ ಆಯುಕ್ತರು” ಎಂದರೆ, ಸಭಾಂಗಣ ಇರುವ ನಗರದ ಪೋಲಿಸ್ ಆಯುಕ್ತರು;
(4) “ಸಿನಿಮಾ ಆಪರೇಟರ್” ಎಂದರೆ, ಈ ನಿಯಮಗಳಲ್ಲಿ ನಿರ್ದಿಷ್ಟಪಡಿಸಲಾದಂತೆ ಪ್ರೊಜೆಕ್ಟರ್ ಕೊಠಡಿಯ ಪ್ರಭಾರದಲ್ಲಿರುವ ವ್ಯಕ್ತಿ;
(5) “ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್” ಎಂದರೆ, ಸಭಾಂಗಣ ಅಥವಾ ಮಲ್ಟಿಪ್ಲೆಕ್ಸ್ ಕಾಂಪ್ಲೆಕ್ಸ್ ಇರುವ ಜಿಲ್ಲೆ ಅಥವಾ ಪ್ರದೇಶದ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್;
(6) “ನಿರ್ದೇಶಕರು” ಎಂದರೆ, ಕರ್ನಾಟಕದಲ್ಲಿ ನಗರ ಮತ್ತು ಪಟ್ಟಣ ಯೋಜನೆಯ ನಿರ್ದೇಶಕರು;
(7) “ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮಹಾ ನಿರ್ದೇಶಕರು” ಎಂದರೆ, ಕರ್ನಾಟಕದಲ್ಲಿನ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಮಹಾನಿರ್ದೇಶಕರು;
(8) “ಇಲೆಕ್ಟ್ರಿಕಲ್ ಇನ್ಸ್ಪೆಕ್ಟರ್” ಎಂದರೆ, ವಿದ್ಯುಚ್ಛಕ್ತಿ ಅಧಿನಿಯಮದ 2003ರ (2003ರ ಕೇಂದ್ರ ಅಧಿನಿಯಮ 36ರ) 162ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೇರೆಗೆ ಸರ್ಕಾರವು ಹಾಗೆಂದು ನೇಮಕ ಮಾಡಿದ ವ್ಯಕ್ತಿ ಮತ್ತು ರಾಜ್ಯದ ಮುಖ್ಯ ಇಲೆಕ್ಟ್ರಿಕಲ್ ಇನ್ಸ್ಪೆಕ್ಟರ್, ವಿಭಾಗೀಯ ಅಪರ ಮುಖ್ಯ ಇಲೆಕ್ಟ್ರಿಕಲ್ ಇನ್ಸ್ಪೆಕ್ಟರ್, ಪ್ರೇಕ್ಷಕ ಮಂದಿರ ಅಥವಾ ಮಲ್ಟಿಪ್ಲೆಕ್ಸ್ ಇರುವ ಜಿಲ್ಲೆ ಅಥವಾ ಪ್ರದೇಶದ ಇಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ಒಳಗೊಳ್ಳುತ್ತಾರೆ;
(9) “ಕಾರ್ಯನಿರ್ವಾಹಕ ಅಭಿಯಂತರರು” ಎಂದರೆ, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಸಭಾಂಗಣ ಅಥವಾ ಮಲ್ಟಿಪ್ಲೆಕ್ಸ್ ಕಾಂಪ್ಲೆಕ್ಸ್ ಇರುವ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಸಾರಿಗೆ ವಿಭಾಗದ ಪ್ರಭಾರದಲ್ಲಿರುವವರು;
(10) . “ಅಧಿಕ ವೋಲ್ಟೇಜ್” ಎಂದರೆ, ಸಾಮಾನ್ಯ ಷರತ್ತುಗಳ ಮೇರೆಗೆ 33,000 (ಮೂವತ್ತೂರು ಸಾವಿರ) ವೋಲ್ಟ್ಸ್ನ್ನು ಮೀರುವ ವೋಲ್ಟೇಜ್;
(11) . “ಚಲನಚಿತ್ರ ಸಲಹಾ ಮಂಡಳಿ” ಎಂದರೆ, 7ನೇ ನಿಯಮದ ಮೇರೆಗೆ ರಚಿಸಿದ ಚಲನಚಿತ್ರ ಸಲಹಾ ಮಂಡಳಿ;
(12) “ಅಗ್ನಿಶಾಮಕ ಅಧಿಕಾರಿ” ಎಂದರೆ, ಸಭಾಂಗಣ ಅಥವಾ ಮಲ್ಟಿಫ್ಲೆಕ್ಸ್ ಕಾಂಪ್ಲೆಕ್ಸ್ ಇರುವ ಜಿಲ್ಲೆ ಅಥವಾ ಪ್ರದೇಶದಲ್ಲಿ ಅಧಿಕಾರ ವ್ಯಾಪ್ತಿ ಹೊಂದಿರುವ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಅಗ್ನಿಶಾಮಕ ಅಧಿಕಾರಿ;
(13) “ಅಗ್ನಿ ನಿರೋಧಕ ಸಾಮಾಗ್ರಿ” ಎಂದರೆ, "ಎ' ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಸಾಮಾಗ್ರಿ;
(14) “ಅಗ್ನಿಶಾಮಕ ಪ್ರತಿರೋಧ ಸಾಮಾಗ್ರಿ” ಎಂದರೆ, ‘OD’ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಸಾಮಗ್ರಿ;
(15) “ನಮೂನೆ” ಎಂದರೆ, ಈ ನಿಯಮಗಳಿಗೆ ಸೇರಿಸಿದ ನಮೂನೆ;
(16) “ಆರೋಗ್ಯಾಧಿಕಾರಿ” ಎಂದರೆ, ಜಿಲ್ಲೆಯ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ; ಮತ್ತು ನಿಗಮ, ಪುರಸಭೆ, ಪಟ್ಟಣ ಪಂಚಾಯಿತಿ ಅಥವಾ ದಂಡು ಪ್ರದೇಶದ ಸಂದರ್ಭದಲ್ಲಿ, ಅಂತಹ ನಿಗಮಕ್ಕೆ ಸೇರಿದ ಆರೋಗ್ಯ ಅಧಿಕಾರಿ ಅಥವಾ ತಾಲ್ಲೂಕು ಆರೋಗ್ಯಾಧಿಕಾರಿ; ನಗರಪಾಲಿಕೆ, ಪುರಸಭೆ, ಪಟ್ಟಣ ಪಂಚಾಯಿತಿ ಅಥವಾ ದಂಡು ಪ್ರದೇಶ ಮಂಡಳಿಯ ಸಂದರ್ಭದಲ್ಲಿ ಹಾಗೂ ನಗರಪಾಲಿಕೆ ಪುರಸಭೆ, ಪಟ್ಟಣ ಪಂಚಾಯಿತಿ ಅಥವಾ ದಂಡು ಪ್ರದೇಶ ಮಂಡಳಿಯ ಸಂದರ್ಭಗಳಲ್ಲಿ, ಆರೋಗ್ಯಾಧಿಕಾರಿ ವರ್ಗ “ಎ ದರ್ಜೆಯ ಅಧಿಕಾರಿಯು ಲಭ್ಯವಿಲ್ಲದಿದ್ದಾಗ, ಅಂತಹ ಪ್ರದೇಶದಲ್ಲಿ ಅಧಿಕಾರವ್ಯಾಪ್ತಿ ಹೊಂದಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ;
(17) “ಅಧಿಕ ವೋಲ್ಟೇಜ್” ಎಂದರೆ, ಸಾಮಾನ್ಯ ಸ್ಥಿತಿಗಳಲ್ಲಿ 33,000 (ಮೂವತ್ತೂರು ಸಾವಿರ) ವೋಲ್ಫ್ಸ್ ಮೀರದ ವೋಲ್ಟೇಜ್;
(18) “ಸ್ಥಳೀಯ ಪ್ರಾಧಿಕಾರ” ಎಂದರೆ,-
(i) ಯಾವುದೇ ಪುರಸಭೆ ಪ್ರದೇಶದಲ್ಲಿ, ಕರ್ನಾಟಕ ಪುರಸಭೆಗಳ ಅಧಿನಿಯಮ, 1964ರ ಮೇರೆಗೆ ಅಥವಾ ಸಂದರ್ಭಾನುಸಾರ ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ, 1976ರ ಮೇರೆಗೆ ರಚಿತವಾದ ನಗರಪಾಲಿಕೆ, ನಗರಸಭೆ, ಪಟ್ಟಣ ಪುರಸಭೆ ಕೌನ್ಸಿಲ್, ಪಟ್ಟಣ ಪಂಚಾಯಿತಿ, ದಂಡು ಪ್ರದೇಶ ಮಂಡಳಿ, ನೈರ್ಮಲ್ಯ ಮಂಡಳಿ ಅಥವಾ ಅಧಿಸೂಚಿತ ಪ್ರದೇಶ ಸಮಿತಿ;
(ii) ಇತರೆ ಪ್ರದೇಶಗಳಲ್ಲಿ, ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993ರ (1993ರ ಕರ್ನಾಟಕ ಅಧಿನಿಯಮ 14) ಮೇರೆಗೆ ರಚಿತವಾದ ಗ್ರಾಮ ಪಂಚಾಯಿತಿ;
(19) “ಕಡಿಮೆ ವೋಲ್ಟೇಜ್” ಎಂದರೆ, ಸಾಮಾನ್ಯ ಸ್ಥಿತಿಗಳಲ್ಲಿ ಎರಡುನೂರ ಐವತ್ತು ವೋಲ್ಬುಗಳನ್ನು ಮೀರದ ವೋಲ್ಟೇಜ್;
(20) “ಮಧ್ಯಮ ವೋಲ್ಟೇಜ್” . ಎಂದರೆ, ಸಾಮಾನ್ಯ ಸ್ಥಿತಿಗಳಲ್ಲಿ ಆರುನೂರ ಐವತ್ತು ವೋಲ್ಬುಗಳನ್ನು ಮೀರದ ವೋಲ್ಟೇಜ್;
(21) “ಮಲ್ಟಿಪ್ಲೆಕ್ಸ್ ಕಾಂಪ್ಲೆಕ್ಸ್” ಎಂದರೆ, ಹೋಟೆಲುಗಳು, ಉಪಾಹಾರ ಗೃಹಗಳು, ಅಂಗಡಿಗಳನ್ನು ಒಳಗೊಂಡು ಒಂದಕ್ಕಿಂತ ಹೆಚ್ಚಿನ ಸಭಾಂಗಣ ಮತ್ತು ಮನರಂಜನೆ ಮತ್ತು ಸಾಂಸ್ಕೃತಿಕ ಕೇಂದ್ರದ ಸ್ಥಳಾವಕಾಶ ಕಲ್ಪಿಸಿದ ಕಟ್ಟಡ;
ವಿವರಣೆ: ಮಲ್ಟಿಪ್ಲೆಕ್ಸ್ ಕಾಂಪ್ಲೆಕ್ಸ್ನ ಸಂದರ್ಭದಲ್ಲಿ, ಎಲ್ಲ ಪೂರಕ ಸ್ಥಳಗಳು ಹಾಗೆಂದು, ಚಲನಚಿತ್ರ ಮಂದಿರ ಮತ್ತು ಟಿಕೇಟು ಕೌಂಟದ್ಗಳಿಗೆ ಹೊಂದಿಕೊಂಡಂತೆ ಪ್ರೊಜೆಕ್ಟರ್ ಕೊಠಡಿ, ಶೌಚಾಲಯಗಳು, ಪ್ರವೇಶ/ ನಿರ್ಗಮನ ದ್ವಾರಗಳು/ ದಾರಿಗಳು, ಉಪಾಹಾರ ಗೃಹಗಳು/ ಕೆಫೆಗಳು/ ಕ್ಯಾಂಟೀನುಗಳನ್ನು ಉಪಯೋಗಿಸುವುದನ್ನು ಒಳಗೊಂಡಂತೆ ಚಲನಚಿತ್ರ ಮಂದಿರಗಳು, ಸಭಾಂಗಣದ ಉದ್ದೇಶಕ್ಕಾಗಿ ಬಳಸಿಕೊಂಡ ಖಾಯಂ ಕಟ್ಟಡದ ಭಾಗವನ್ನು ಮಾತ್ರ ಪರಿಗಣಿಸತಕ್ಕದ್ದು.
(22) . “ಖಾಯಂ ಕಟ್ಟಡ” ಎಂದರೆ, 24 ಗಂಟೆಗಿಂತ ಕಡಿಮೆ ಇಲ್ಲದಂತೆ ಅಗ್ನಿಶಾಮಕ ನಿರೋಧಕ ಮತ್ತು ಅಗ್ನಿಶಾಮಕ ಪ್ರತಿರೋಧಕದ ಸಾಮಗ್ರಿಗಳೊಂದಿಗೆ ಖಾಯಂ ಉಪಯೋಗಕ್ಕಾಗಿ ನಿರ್ಮಿಸಿದಂಥ ಕಟ್ಟಡ;
(23) “ಜನಸಂಖ್ಯೆ” ಎಂದರೆ, ಸಭಾಂಗಣ ಅಥವಾ ಮಲ್ಟಿಷೆ್ಲಕ್ಸ್ ಕಾಂಪ್ಲೆಕ್ಸ್ ಇರುವ ಲೈಸೆನ್ಸ್ ಪಡೆದ ಸ್ಥಳಕ್ಕಾಗಿ ಹಿಂದಿನ ಎರಡು ಜನಗಣತಿ ವರದಿಗಳಲ್ಲಿ ಹೆಚ್ಚಿಸಿದ ಸರಾಸರಿ ದರದಿಂದ ಲೆಕ್ಕಹಾಕಲಾದ ವಾರ್ಷಿಕ ಹೆಚ್ಚಿಸಿದ ಹಿಂದಿನ ಸರ್ಕಾರಿ ಜನಗಣತಿಯನ್ನು ಸೇರಿಸಿ ನಿವಾಸಿಗಳ ಒಟ್ಟು ಸಂಖ್ಯೆ;
(26) “ಪ್ರೊಜೆಕ್ಟರ್ ಕೊಠಡಿ” ಎಂದರೆ, ಸಿನಿಮೊಟೋಗ್ರಾಫಿ ಸಲಕರಣೆಗಳನ್ನು ನಿಲ್ಲಿಸಿರುವಂಥ ಲೈಸೆನ್ಸ್ ಪಡೆದ ಸ್ಥಳದ ಭಾಗ ಮತ್ತು ತಾಂತ್ರಿಕವಾಗಿ ಮುಂದುವರಿದ ಡಿಜಿಟಲ್ ಪ್ರೊಜೆಕ್ಟರ್ ಅಥವಾ ಡಿಜಿಟಲ್ ಧ್ವನಿವ್ಯವಸ್ಥೆ ಯಾವುದಾದರನ್ನು ಅಳವಡಿಸಲಾಗಿದ್ದರೆ, ಚಿತ್ರಮಂದಿರದ ಆ ಭಾಗವನ್ನು ಒಳಗೊಳ್ಳುತ್ತದೆ;
(25) “ಪ್ರಾದೇಶಿಕ ಆಯುಕ್ತರು”. ಎಂದರೆ, ಸಭಾಂಗಣ ಅಥವಾ ಮಲ್ಟಿಪ್ಲೆಕ್ಸ್ ಕಾಂಪ್ಲೆಕ್ಸ್. ಇರುವ ವಿಭಾಗ ಪ್ರಾದೇಶಿಕ ಆಯುಕ್ತರು;
(26). “ಪ್ರಕರಣ” ಎಂದರೆ, ಅಧಿನಿಯಮದ ಪ್ರಕರಣ;
(27) . “ಅನುಸೂಚಿ” ಎಂದರೆ, ಈ ನಿಯಮಗಳಿಗೆ ಸೇರಿಸಲಾದ ಅನುಸೂಚಿ;
(28) “ಠಾಣಾಧಿಕಾರಿ” . ಎಂದರೆ, ಸಭಾಂಗಣ ಅಥವಾ ಮಲ್ಟಿಪ್ಲೆಕ್ಸ್ ಕಾಂಪ್ಲೆಕ್ಸ್ ಇರುವ ಪೊಲೀಸ್ ಠಾಣೆಯ ಠಾಣಾಧಿಕಾರಿ;
(29) “ತಾತ್ಕಾಲಿಕ ಕಟ್ಟಡ” ಎಂದರೆ, ಖಾಯಂ ಕಟ್ಟಡವಲ್ಲದಂಥ ಕಟ್ಟಡ;
(30). (॥ “ಚಿತ್ರಮಂದಿರ” ಎಂದರೆ, ಒಂದೇ ಪರದೆ ಇರುವ ಸಿನಿಮಾ ಚಿತ್ರಮಂದಿರ;
(ii) “ಬಹುಪರದೆಗಳ ಚಿತ್ರಮಂದಿರ” ಎಂದರೆ, ಒಂದೇ ಚಿತ್ರಮಂದಿರ ಕಟ್ಟಡದಲ್ಲಿ ಒಂದು ಪರದೆಗಿಂತ ಹೆಚ್ಚು ಪರದೆಯೊಂದಿಗೆ ಖಾಯಂ ಕಟ್ಟಡದಲ್ಲಿ ಚಿತ್ರಮಂದಿರ;
(31) . “ನಗರ ಯೋಜನಾಧಿಕಾರಿ” ಎಂದರೆ, ಸಭಾಂಗಣ ಅಥವಾ ಮಲ್ಟಿಪ್ಲೆಕ್ಸ್ ಅಥವಾ ಲೈಸೆನ್ಸ್ ಪಡೆದ ಸ್ಥಳವು ನಗರ ಪಾಲಿಕೆಯ ಪರಿಮಿತಿಯೊಳಗಿದ್ದರೆ, ಆ ನಗರ ಪಾಲಿಕೆಯ ನಗರ ಯೋಜನಾಧಿಕಾರಿ; ಸಭಾಂಗಣ ಅಥವಾ ಮಲ್ಟಿಪ್ಲೆಕ್ಸ್ ಅಥವಾ ಲೈಸೆನ್ಸ್ ಪಡೆದ ಸ್ಥಳವು ನಗರಾಭಿವೃದ್ಧಿ ಪ್ರಾಧಿಕಾರದ ಪರಿಮಿತಿಯೊಳಗಿದ್ದರೆ, (ನಗರ ಪಾಲಿಕೆ ಪರಿಮಿತಿಗಳನ್ನು ಹೊರತುಪಡಿಸಿ), ಆ ನಗರಾಭಿವೃದ್ಧಿ ಪ್ರಾಧಿಕಾರದ ನಗರ ಯೋಜನಾ ಸದಸ್ಯ; ಸಭಾಂಗಣ ಅಥವಾ ಮಲ್ಟಿಪ್ಲೆಕ್ಸ್ ಅಥವಾ ಲೈಸೆನ್ಸ್ ಪಡೆದ ಸ್ಥಳವು ಯೋಜನಾ ಪ್ರಾಧಿಕಾರದ ಪರಿಮಿತಿಯೊಳಗಿದ್ದರೆ, ಆ ಯೋಜನಾ ಪ್ರಾಧಿಕಾರದ ನಗರ ಯೋಜನಾಧಿಕಾರಿ; ಸಭಾಂಗಣ ಅಥವಾ DO BS, ಅಥವಾ ಲೈಸೆನ್ಸ್ ಪಡೆದ ಸ್ಥಳವು ನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಯೋಜನಾ ಪ್ರಾಧಿಕಾರದ ಅಧಿಕಾರವ್ಯಾಪ್ತಿಯ ಹೊರಗೆ ಆದರೆ, ಜಿಲ್ಲೆಯೊಳಗೆ ಇದ್ದರೆ, ಆ ಜಿಲ್ಲೆಯ ಜಿಲ್ಲಾ ನಗರ ಮತ್ತು ಪಟ್ಟಣ ಯೋಜನೆಯ ಸಹಾಯಕ ನಿರ್ದೇಶಕರು;
(32) “ವೋಲ್ಟೇಜ್” ಎಂದರೆ, ಭಾರತೀಯ ಗುಣಮಟ್ಟಗಳಿಂದ ಕೂಡಿದ ವೋಲ್ಫ್ ಮೀಟರಿನಿಂದ ಅಳತೆ ಮಾಡಲಾದಂತೆ ಯಾವುದೇ ಎರಡು ವಿದ್ಯುತ್ ವಾಹಕಗಳ ನಡುವೆ ಅಥವಾ ವಿದ್ಯುತ್ ವಾಹಕ ಮತ್ತು ಭೂಸಂಪರ್ಕದ ಯಾವುದೇ ಭಾಗದ ನಡುವೆಯಾಗಲಿ ವೋಲ್ಬುಗಳಲ್ಲಿ ಅಳತೆ ಮಾಡಲಾದ ವಿವಿಧ ವಿದ್ಯುತ್ ವಿಭವಾಂತರ;
(38) “ವ್ನಾಟ್” ಎಂದರೆ, ಕ್ರಿಯಾಶೀಲ ವಿದ್ಯುತ್ ಘಟಕ ಮತ್ತು “ಎಂ.ಡಬ್ಲ್ಯೂ” ಎಂದರೆ 106 ವ್ಯಾಟ್ಗಳಿಗೆ 3 ಸಮನಾದ' ಮೆಗಾವ್ಯಾಟ್.
ಅಧ್ಯಾಯ -॥ ಸಾಮಾನ್ಯ ಉಪಬಂಧ