(1) 112 ನಿಯಮ ಮತ್ತು (2)ನೇ ಉಪ-ನಿಯಮದಲ್ಲಿ ನಿರ್ದಿಷ್ಟಪಡಿಸಿದ ಮಾರ್ಪಾಟುಗಳಿಗೆ ಒಳಪಟ್ಟು ಖಾಯಂ ಸಿನಿಮಾಗಳಿಗೆ ಅನ್ವಯವಾಗಬಹುದಾದ ಈ ನಿಯಮಗಳ ಎಲ್ಲ ಇತರ ಉಪಬಂಧಗಳು ಡ್ರೈವ್ ಇನ್ ಸಿನಿಮಾಗಳಿಗೆ ಯಥೋಚಿತ ವ್ಯತ್ಯಾಸಗಳೊಂದಿಗೆ ಅನ್ವಯವಾಗತಕ್ಕದ್ದು.
(2) ಡ್ರೈವ್ ಇನ್ ಸಿನಿಮಾಗಳಿಗೆ ಅವುಗಳ ಅನ್ವಯದ ಬಗ್ಗೆ 24ನೇ, 27ನೇ ಮತ್ತು 38ನೇ ನಿಯಮಗಳು ಈ ಕೆಳಕಂಡ ಮಾರ್ಪಾಟುಗಳಿಗೆ ಒಳಪಟ್ಟು ಅನ್ವಯವಾಗತಕ್ಕದ್ದು ಎಂದರೆ,-
(ಎ) 24ನೇ ನಿಯಮದಲ್ಲಿ,-
(i) 2ನೇ ಉಪ-ನಿಯಮದ (ಎ) ಖಂಡದಲ್ಲಿ "ಐದು ನೂರು ಮೀಟರುಗಳು' dow ಪದಗಳಿಗೆ ಬದಲಾಗಿ "ಒಂದು ಕಿಲೋಮೀಟರು' ಎಂಬ ಪದಗಳನ್ನು ಪ್ರತ್ಯಾಯೋಜಿಸತಕ್ಕದ್ದು; ಮತ್ತು
(ii) ಸರ್ಕಾರವು ನಿರ್ದಿಷ್ಟಪಡಿಸಿದ ಫೀಜುಗಳಿಗನುಸಾರ ಎಂಬ ಪದಗಳನ್ನು ಪ್ರತ್ಯಾಯೋಜಿಸತಕ್ಕದ್ದು;
(ಬಿ) 28ನೇ ನಿಯಮದಲ್ಲಿ, "ಒಂಭತ್ತು Sori’ ಎಂಬ ಪದಗಳು ಬರುವ ಎರಡೂ ಕಡೆಗಳಲ್ಲಿ ಅವುಗಳಿಗೆ ಬದಲಾಗಿ "ಒಂದು ವರ್ಷ' ಎಂಬ ಪದಗಳನ್ನು ಪ್ರತ್ಯಾಯೋಜಿಸತಕ್ಕದ್ದು;