ಅರೆಖಾಯಂ ಸಿನಿಮಾ ಕಟ್ಟಡಗಳ ನಿರ್ಮಾಣಕ್ಕಾಗಿ ಸಾಧ್ಯವಾದಮಟ್ಟಿಗೆ ಸ್ಥಳೀಯವಾಗಿ ಲಭ್ಯವಿರುವ ಬಿಟುಮಿನ್. (ಅಸ್ಟಾಲ್ವಿಕ್. ಶೀಟುಗಳು) ಇತ್ಯಾದಿಗಳಲ್ಲಿ ಹುದುಗಿಸಿದ. ಕಲ್ಲು, ಇಟ್ಟಿಗೆ, ಸಿಮೆಂಟು/ಸುಣ್ಣದಕಲ್ಲು. ಅಥವಾ ಕಾಡುಮರ, Bost ಶೀಟುಗಳು/ ಎ,ಸಿ. ಶೀಟುಗಳು, ಬ್ಲಾಕ್ ಬೋರ್ಡ್ಗಳನ್ನು ಉಪಯೋಗಿಸಬಹುದು. ಬಾಗಿಲು ಮತ್ತು ಕಿಟಕಿಗಳು ಸ್ಟೀಲು ಅಥವಾ ಕಾಡುಮರಗಳಾಗಿದ್ದಾಗಿರಬಹುದು. ಹೊರಗೋಡೆಗಳು ಸಿಮೆಂಟು ಇಟ್ಟಿಗೆ/ ಸುಣ್ಣದ ಕಲ್ಲುಗಳಾದ್ದಾಗಿರಬಹುದು ಮತ್ತು ಗೋಡೆಗಳ ಎತ್ತರ 2.6 ಮೀಟರುಗಳಿಗಿಂತ ಕಡಿಮೆಯಿರತಕ್ಕದ್ದಲ್ಲ.
144, ಪ್ರೊಜೆಕ್ಷನ್ ಕೊಠಡಿ.- (1) ಚಲನಚಿತ್ರಗ್ರಾಹಕ ಯಂತ್ರದ ಸಲಕರಣೆಯನ್ನು, 24 ಗಂಟೆ ರೇಟಿಂಗ್ ಮಾಡುವ ಅಗ್ನಿನಿರೋಧಕ ಸಾಮಗ್ರಿಯಿಂದ ದೃಢವಾಗಿ ನಿರ್ಮಿಸಲಾದ ಕೊಠಡಿಯಲ್ಲಿ ಇಡತಕ್ಕದ್ದು. . ಅದರ ನೆಲ ಮಹಡಿಯು, 132ನೇ ನಿಯಮದ ಮೇರೆಗೆ ಕೇಬಲ್ಲುಗಳನ್ನು ಹೂಳಲು ಕನಿಷ್ಠ ಐವತ್ತು ಮಿಲಿ ಮೀಟರುಗಳ ಪೂರ್ಣಗೊಳಿಸಿದ ನೆಲವನ್ನು ಹೊಂದಿರತಕ್ಕದ್ದು:
ಪರಂತು, ಡಿಜಿಟಲ್ ಪ್ರೊಜೆಕ್ಟರ್ಗಳು, ಡಿಜಿಟಲ್ ಧ್ವನಿ ವ್ಯವಸ್ಥೆಯಂಥ ಮುಂದುವರೆದ ತಂತ್ರಜ್ಞಾನದೊಂದಿಗೆ ಇರುವ ಪ್ರಸ್ತುತ ಮತ್ತು ಪ್ರಸ್ತಾವಿತ ಅರೆಖಾಯಂ ಸಿನಿಮಾ ಥಿಯೇಟರುಗಳ ಸಂದರ್ಭದಲ್ಲಿ, ಪ್ರತ್ಯೇಕ ಪ್ರೊಜೆಕ್ಷನ್ ಕೊಠಡಿಯು ಕಡ್ಡಾಯವಾಗತಕ್ಕದ್ದಲ್ಲ.
(2). ಪ್ರೊಜೆಕ್ಷನ್ ಮತ್ತು ಪ್ರೇಕ್ಷಕ ಕಿಟಕಿಗಳನ್ನು ಹೊರತುಪಡಿಸಿ, ಪ್ರೊಜೆಕ್ಷನ್ ಕೊಠಡಿಯು ಸಭಾಂಗಣದೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿರತಕ್ಕದ್ದಲ್ಲ. ಪರಂತು, ಡಿಜಿಟಲ್ ಪ್ರೊಜೆಕ್ಟರ್ಗಳು, ಡಿಜಿಟಲ್ ಧ್ವನಿ ವ್ಯವಸ್ಥೆಯಂಥ ಮುಂದುವರೆದ ತಂತ್ರಜ್ಞಾನದೊಂದಿಗೆ ಇರುವ ಪ್ರಸ್ತುತ ಮತ್ತು ಪ್ರಸ್ತಾವಿತ ಅರೆಖಾಯಂ ಸಿನಿಮಾ ಥಿಯೇಟರುಗಳ ಸಂದರ್ಭದಲ್ಲಿ, ಪ್ರತ್ಯೇಕ ಪ್ರೊಜೆಕ್ಷನ್ ಕೊಠಡಿಯು ಕಡ್ಡಾಯವಾಗತಕ್ಕದ್ದಲ್ಲ.
(3) ಒಂದು ಪ್ರೊಜೆಕ್ಟರನ್ನು ಹೊಂದಿರುವ ಪ್ರೊಜೆಕ್ಷನ್ ಕೊಠಡಿಯು, ಅತಿ ಚಿಕ್ಕ ಉದ್ದಗಲವಾದ 2.5 ಮೀಟರುಗಳ ಮತ್ತು 3 ಮೀಟರುಗಳಿಗೆ ಕಡಿಮೆಯಿಲ್ಲದ ಪೂರ್ತಿ ಎತ್ತರದ ಕನಿಷ್ಠ ಪಕ್ಷ ಏಳೂವರೆ ಚದುರ ಮೀಟರುಗಳ ನೆಲ ಪ್ರದೇಶವನ್ನು ಹೊಂದಿರಬೇಕು. ಪ್ರತಿಯೊಂದು ಹೆಚ್ಚುವರಿ ಪ್ರೊಜೆಕ್ಟರಿಗಾಗಿ 23 ಚದರ ಮೀಟರುಗಳ ನೆಲದ ಜಾಗವು ಇರತಕ್ಕದ್ದು.
ಪರಂತು, ಡಿಜಿಟಲ್ ಪ್ರೊಜೆಕ್ಟರ್ಗಳು, ಡಿಜಿಟಲ್ ಧ್ವನಿ ವ್ಯವಸ್ಥೆಯಂಥ ಮುಂದುವರೆದ ತಂತ್ರಜ್ಞಾನದೊಂದಿಗೆ ಇರುವ ಪ್ರಸ್ತುತ ಮತ್ತು ಪ್ರಸ್ತಾವಿತ ಅರೆಖಾಯಂ ಸಿನಿಮಾ ಥಿಯೇಟರುಗಳ ಸಂದರ್ಭದಲ್ಲಿ, ಪ್ರತ್ಯೇಕ ಪ್ರೊಜೆಕ್ಷನ್ ಕೊಠಡಿಯು ಕಡ್ಡಾಯವಾಗತಕ್ಕದ್ದಲ್ಲ.
(4) ನೆಲ ಅಂತಸ್ತು ಅಥವಾ ಅದರ ಕೆಳಗಿನ ಅಂತಸ್ತಿಗೆ ಹೋಗಲು ಕ್ರಮವಾದ ಸ್ಟೇರ್ಕೇಸ್ಗಳು ಇರತಕ್ಕದ್ದು.
(5) ಪ್ರೊಜೆಕ್ಷನ್ ಕೊಠಡಿಯ ಬಾಗಿಲು ಅಗ್ನಿ ನಿರೋಧಕದ್ದಾಗಿರತಕ್ಕದ್ದು ಮತ್ತು ಎಲ್ಲಾ ಸಂದುಗಳು, ಬುಷ್ಗಳು ಮತ್ತು ಜೋಡಣೆಗಳು ಸಭಾಂಗಣದೊಳಕ್ಕೆ ಯಾವುದೇ ಹೊಗೆಯು ಹೋಗುವುದನ್ನು ಸಾಧ್ಯವಾದಷ್ಟು ಮಟ್ಟಿಗೆ ತಡೆಗಟ್ಟುವ ಹಾಗೆ ನಿರ್ಮಿಸತಕ್ಕದ್ದು ಮತ್ತು ನಿರ್ವಹಿಸತಕ್ಕದ್ದು, ಪ್ರೊಜೆಕ್ಷನ್ ಕೊಠಡಿಗಾಗಿ ವಾಯು ಸಂಚಾರವನ್ನು ಒದಗಿಸತಕ್ಕದ್ದು. ಆದರೆ ವಾಯು ಸಂಚಾರ ಕೊಳವೆಗಳು ಸಭಾಂಗಣದೊಂದಿಗೆ ನೇರ ಸಂಪರ್ಕವನ್ನು ಹೊಂದಿರತಕ್ಕದ್ದಲ್ಲ. ವಾಯು ಸಂಚಾರವನ್ನು ಪೈಪುಗಳ ಮೂಲಕ ಹರಿಸುವ ಪ್ರದೇಶವು ಪ್ರೊಜೆಕ್ಷನ್ ಕೊಠಡಿಯ ನೆಲಪ್ರದೇಶದ ಶೇಕಡಾ ಒಂದಕ್ಕಿಂತ ಕಡಿಮೆಯಿರತಕ್ಕದ್ದಲ್ಲ.
ವಿವರಣೆ.- ಈ ನಿಯಮದಲ್ಲಿ, ಬುಷ್ ಎಂದರೆ, ಯಾವ ರಂಧ್ರಗಳ ಮೂಲಕ ಪೈಪುಗಳು ಮತ್ತು ಕೇಬಲ್ಲುಗಳನ್ನು ಹಾಯಿಸಲಾಗಿದೆಯೋ, ಅಂತಹ ರಂಧ್ರಗಳನ್ನು ಯುಕ್ತವಾಗಿ ಹೊಗೆ ನಿರೋಧಕಗೊಳಿಸುವ ದೃಷ್ಟಿಯಿಂದ ಸೇರಿಸಲಾದ ಪ್ಯಾಕಿಂಗ್. ಪರಂತು, ಡಿಜಿಟಲ್ ಪ್ರೊಜೆಕ್ಟರ್ಗಳು, ಡಿಜಿಟಲ್ ಧ್ವನಿ ವ್ಯವಸ್ಥೆಯಂಥ ಮುಂದುವರೆದ ತಂತ್ರಜ್ಞಾನದೊಂದಿಗೆ ಇರುವ ಪ್ರಸ್ತುತ ಮತ್ತು ಪ್ರಸ್ತಾವಿತ ಅರೆಖಾಯಂ ಸಿನಿಮಾ ಥಿಯೇಟರುಗಳ ಸಂದರ್ಭದಲ್ಲಿ, ಪ್ರತ್ಯೇಕ ಪ್ರೊಜೆಕ್ಷನ್ ಕೊಠಡಿಯು ಕಡ್ಡಾಯವಾಗತಕ್ಕದ್ದಲ್ಲ.
(6) ಫಿಲ್ಮುಗಳನ್ನು ಸುತ್ತುವ ಉದ್ದೇಶಕ್ಕಾಗಿ ಪ್ರೊಜೆಕ್ಷನ್ ಕೊಠಡಿಯ ಪಕ್ಕದಲ್ಲಿ ರಿವೈಂಡಿಂಗ್ ಕೊಠಡಿ ಅಥವಾ ಆವರಣ ಇರತಕ್ಕದ್ದು ಮತ್ತು ರಿವೈಂಡಿಂಗ್ ಕೊಠಡಿ ಅಥವಾ ಆವರಣವು ಪ್ರೊಜೆಕ್ಷನ್ ಕೊಠಡಿಗೆ ಹೊಂದಿಕೊಂಡಿರುವಲ್ಲಿ ಮತ್ತು ಒಂದರಿಂದ ಮತ್ತೊಂದಕ್ಕೆ ಹೋಗಲು ಅವುಗಳ ನಡುವೆ ಬಾಗಿಲು ಇರುವಲ್ಲಿ, ಅಗ್ನಿ ನಿರೋಧಕ ಬಾಗಿಲು ಅದೇ ಮುಚ್ಚಿಕೊಳ್ಳುವಂತೆ ಬಾಗಿಲು ಇರತಕ್ಕದ್ದು.
ಪರಂತು, ಡಿಜಿಟಲ್ ಪ್ರೊಜೆಕ್ಟರ್ಗಳು, ಡಿಜಿಟಲ್ ಧ್ವನಿ ವ್ಯವಸ್ಥೆಯಂಥ ಮುಂದುವರೆದ ತಂತ್ರಜ್ಞಾನದೊಂದಿಗೆ ಇರುವ ಪ್ರಸ್ತುತ ಮತ್ತು ಪ್ರಸ್ತಾವಿತ ಅರೆಖಾಯಂ ಸಿನಿಮಾ ಥಿಯೇಟರುಗಳ ಸಂದರ್ಭದಲ್ಲಿ, ಪ್ರತ್ಯೇಕ ಪ್ರೊಜೆಕ್ಷನ್ ಕೊಠಡಿಯು ಕಡ್ಡಾಯವಾಗತಕ್ಕದ್ದಲ್ಲ.
(7) ಆವರಣವು ಸಭಾಂಗಣದೊಳಗಿದ್ದರೆ, ಆವರಣದ ಪ್ರೊಜೆಕ್ಷನ್ಗಾಗಿ ಮತ್ತು ವೀಕ್ಷಣೆಗಾಗಿ ಅಗತ್ಯವಾದುವುಗಳನ್ನು ಹೊರತುಪಡಿಸಿ ಯಾವುದೇ ಸಂದುಗಳಿಗೆ ಸಭಾಂಗಣದೊಂದಿಗೆ ಸಂಪರ್ಕಿಸಲು ಅವಕಾಶವಿರತಕ್ಕದ್ದಲ್ಲ. ರಿವೈಂಡಿಂಗ್ ಕೊಠಡಿಗಳ ಉದ್ದೇಶಕ್ಕಾಗಿ ಪ್ರೊಜೆಕ್ಷನ್ ಕೊಠಡಿಯ ಪಕ್ಕ / ಒಳಗೆ ರಿವೈಂಡಿಂಗ್ ಕೊಠಡಿ ಅಥವಾ ಆವರಣವು, ಅಗ್ನಿ ನಿರೋಧಕ ಬಾಗಿಲು ಅದೇ ಮುಚ್ಚಿಕೊಳ್ಳುವಂಥದ್ದನ್ನು ಹೊಂದಿರತಕ್ಕದ್ದು:
ಪರಂತು, ಡಿಜಿಟಲ್ ಪ್ರೊಜೆಕ್ಟರ್ಗಳು, ಡಿಜಿಟಲ್ ಧ್ವನಿ ವ್ಯವಸ್ಥೆಯಂಥ ಮುಂದುವರೆದ ತಂತ್ರಜ್ಞಾನದೊಂದಿಗೆ ಇರುವ ಪ್ರಸ್ತುತ ಮತ್ತು ಪ್ರಸ್ತಾವಿತ ಸಿನಿಮಾ ಮಂದಿರಗಳು ಅಥವಾ ಮಲ್ಟಿಷ್ಲೆಕ್ಸ್ಗಳ ಸಂದರ್ಭದಲ್ಲಿ ರಿವೈಂಡಿಂಗ್ ಕೊಠಡಿಯು ಕಡ್ಡಾಯವಾಗತಕ್ಕದ್ದಲ್ಲ.
(8) ಪ್ರೊಜೆಕ್ಟರ್ ಸಂದುಗಳು, 35 ಮಿಲಿಮೀಟದ್ಗಳು, 70 ಮಿಲಿಮೀಟರಿನ ಸಿನಿಮಾ ಸ್ಕೋಪ್ ಮತ್ತು ಸಿನೇರಾಮ, ವೈಡ್-ಅ್ಯಂಗಲ್, ವಿಸ್ಟಾ ವಿಷನ್ಗಳಂಥ ಪ್ರೊಜೆಕ್ಷನ್ ಮಾದರಿಗಳಿಗೆ ಅನುಸಾರವಾಗಿರತಕ್ಕದ್ದು: ಪರಂತು, ಡಿಜಿಟಲ್ ಪ್ರೊಜೆಕ್ಟರ್ಗಳು, ಡಿಜಿಟಲ್ ಧ್ವನಿ ವ್ಯವಸ್ಥೆಯಂಥ ಮುಂದುವರೆದ ತಂತ್ರಜ್ಞಾನದೊಂದಿಗೆ ಇರುವ ಪ್ರಸ್ತುತ ಮತ್ತು ಪ್ರಸ್ತಾವಿತ ಸಿನಿಮಾ ಮಂದಿರಗಳು ಅಥವಾ ಮಲ್ಟಿಷ್ಲೆಕ್ಸ್ಗಳ ಸಂದರ್ಭದಲ್ಲಿ ಈ ಉಪ ನಿಯಮವು ಅನ್ವಯವಾಗತಕ್ಕದ್ದಲ್ಲ.
(9) ಪ್ರತಿಯೊಂದು ಸಂದವು ದಪ್ಪದಲ್ಲಿ 5 ಮಿಲಿಮೀಟರಿಗಿಂತ ಕಡಿಮೆಯಿಲ್ಲದ ಪ್ಲೇಟ್ ಗಾಜು ಪರದೆಯನ್ನು, ಹೊಗೆ ಬರದಂತೆ ಜೋಡಸೆ ಸ್ಥಿತಿಯಲ್ಲಿ ಕೂಡಿಸಿ ಒದಗಿಸತಕ್ಕದ್ದು:
ಪರಂತು, 250 ಚದರ ಮಿಲಿಮೀಟದ್ಗಳಿಗಿಂತ ಹೆಚ್ಚಿಗೆ ಆದ ಸಂದುಗಳಿಗಾಗಿ,-
(ಎ) ಉಪಯೋಗಿಸಿದ ಗಾಜಿನ ಪರದೆಗಳು ದಪ್ಪ ಅಥವಾ ತಂತಿ ಕೂಡಿದ ದಪ್ಪ ಗಾಜಿನವು ಆಗಿರತಕ್ಕದ್ದು;
(ಬಿ) ಗಾಜಿನ ಪರದೆಗಳ ಜೊತೆಗೆ ಲೋಹದ ಪರದೆಗಳನ್ನು ಒದಗಿಸತಕ್ಕದ್ದು ಮತ್ತು ಪ್ರೊಜೆಕ್ಷನ್ಗಾಗಿ ಉಪಯೋಗಿಸದೆ ಇರುವಾಗ ಸಂದುಗಳನ್ನು ಲೋಹ ಪರದೆಗಳಿಂದ ಮುಚ್ಚತಕ್ಕೆದ್ದು; ಮತ್ತು
(ಪಿ) ಸಂದುಗಳು ಉಪಯೋಗದಲ್ಲಿಲ್ಲದೆ ಇರುವಾಗ ಆ ಸಂದುಗಳನ್ನು ಲೋಹ ಪರದೆಗಳಿಂದ ಮುಚ್ಚಿಸತಕ್ಕದ್ದೆಂದು ಕ್ಯಾಬಿನ್ನಲ್ಲಿ ನೋಟೀಸು ಹಾಕತಕ್ಕದ್ದು.
(10) (i) ಪ್ರೊಜೆಕ್ಷನ್ ಕೊಠಡಿಯು 18 ವರ್ಷ ವಯಸ್ಸು ತುಂಬಿದ ಮತ್ತು ಸರ್ಕಾರದ ಮುಖ್ಯ ವಿದ್ಯುಚ್ಛಕ್ತಿ ಪರಿಶೀಲಕನು ನೀಡಿದ ಸಿನಿಮಾ ಆಪರೇಟರ್ ಲೈಸೆನ್ಸ್ನ್ನು ಹೊಂದಿರುವ ವ್ಯಕ್ತಿಯ ಪ್ರಭಾರದಲ್ಲಿರತಕ್ಕದ್ದು:
ಪರಂತು, ಕರ್ನಾಟಕದಲ್ಲಿ ಸಿನಿಮಾಟೋಗ್ರಫಿಯ ತಾಂತ್ರಿಕ ಶಿಕ್ಷಣ ಮಂಡಳಿಯು ನಡೆಸಿದ ಸಿನಿಮಾಟೋಗ್ರಫಿಯಲ್ಲಿ ಸಿನಿಮಾ ಆಪರೇಷನ್ ಅಥವಾ ಡಿಪ್ಲೊಮಾದಲ್ಲಿ ಕ್ರಾಫ್ಟ್ ಕೋರ್ಸ್ ಉತ್ತೀರ್ಣಗೊಂಡು ಅಥವಾ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದಿಂದ ಮನ್ನಣೆ ಪಡೆದ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ನಲ್ಲಿ ಪದವಿ. ಮತ್ತು ಡಿಪ್ಲೊಮಾದಲ್ಲಿ ಪ್ರಮಾಣಪತ್ರವನ್ನು ಅಭ್ಯರ್ಥಿಯು ಹೊಂದಿರುವಲ್ಲಿ, ಸಿನಿಮಾ ಆಪರೇಟರ್ ಲೈಸೆನ್ಸ್ ಪಡೆಯುವುದಕ್ಕಾಗಿ ಕರ್ನಾಟಕ ಸಿನಿಮಾ ಚಾಲಕರ ಪರೀಕ್ಷಾ ಮಂಡಳಿಯು ನಡೆಸುವ ಪರೀಕ್ಷೆಗೆ ಹಾಜರಾಗುವುದರಿಂದ ವಿನಾಯಿತಿ ನೀಡತಕ್ಕದ್ದು:
(ii) ಆಪರೇಟರ್, ಎಲ್ಲ ಕೇಬಲ್ಲುಗಳು, ಲೀಡ್ಗಳು, ಸಂಯೋಗಗಳು ಮತ್ತು ಪ್ರತಿರೋಧಗಳು ಮತ್ತು ಪ್ರೊಜೆಕ್ಷನ್ ಕೊಠಡಿಯಲ್ಲಿರುವ ಸಾಗಿಸಬಹುದಾದ ಅಗ್ನಿಶಾಮಕ ಉಪಕರಣಗಳು. ಸರಿಯಾದ ಸುಸ್ಥಿತಿಯಲ್ಲಿವೆಂಬುದನ್ನು ಪ್ರತಿಯೊಂದು ಪ್ರದರ್ಶನವು ಪ್ರಾರಂಭವಾಗುವುದಕ್ಕೆ ಮುಂಚೆ ಅವನು ಮನದಟ್ಟು ಮಾಡಿಕೊಳ್ಳತಕ್ಕದ್ದು, ಅವನು ಯಂತ್ರ ಚಾಲನೆಯಲ್ಲಿರುವ ಸಮಯದಲ್ಲಿ ಪ್ರೊಜೆಕ್ಷನ್ ಕೊಠಡಿಯಲ್ಲಿ ಹಾಜರು ಇರತಕ್ಕದ್ದು:
(iii) ಪರಂತು, ಡಿಜಿಟಲ್ ಪ್ರೊಜೆಕ್ಟರ್ಗಳು, ಡಿಜಿಟಲ್ ಧ್ವನಿ ವ್ಯವಸ್ಥೆಯಂಥ ಮುಂದುವರೆದ ತಂತ್ರಜ್ಞಾನದೊಂದಿಗೆ ಇರುವ ಮಲ್ಟಿಷ್ಣೆಕ್ಸ್ ಅಥವಾ ಪ್ರಸ್ತುತ ಅಥವಾ ಉದ್ದೇಶಿತ ಸಿನಿಮಾ ಥಿಯೇಟರಿನ ಸಂದರ್ಭದಲ್ಲಿ, ಆದಾಗ್ಯೂ, ಪ್ರೊಜೆಕ್ಷನ್ ಕೊಠಡಿಯು ಕಡ್ಡಾಯವಾಗಿರದಿದ್ದಾಗ್ಯೂ. ಆಪರೇಟರ್ ಯಂತ್ರ ಚಾಲನೆಯಲ್ಲಿರುವ ಸಮಯದಲ್ಲಿ ಪ್ರೊಜೆಕ್ಷನ್ ಕೊಠಡಿಯಲ್ಲಿ ಹಾಜರಿರತಕ್ಕದ್ದು.
(iv) ಆಪರೇಟರನ ನಿಯೋಜನೆಗೆ ವಿಫಲವಾಗಿದ್ದಲ್ಲಿ ತಡೆಹಿಡಿಯುವಿಕೆಗೆ... ಅಥವಾ ರದ್ದಿಯಾತಿಗೆ ಹೊಣೆಯಾಗಬಹುದಾದ ಸಿನಿಮಾ ಥಿಯೇಟರನ ಅಥವಾ ಮಲ್ಟಿಪ್ಲೆಕ್ಸ್ನ ವಿದ್ಯುಚ್ಛಕ್ತಿ ಪ್ರಮಾಣಪತ್ರವನ್ನು ಒಪ್ಪಿಸತಕ್ಕದ್ದು.
11. ಇಬ್ಬರು ಆಪರೇಟರುಗಳು ಹಿಂಬರಹ ಮಾಡಲಾದ ಅನುಕೂಲವಾದ ಥಿಯೇಟರ್ ಜೊತೆಗೆ ಸಾಂಪ್ರದಾಯಿಕ ಪ್ರೊಜೆಕ್ಟರುಗಳು ಮತ್ತು ಪ್ರತಿಯೊಂದು ಸ್ಕ್ರೀನ್ಗೂ ಒಬ್ಬ ಆಪರೇಟರ್ ಇರತಕ್ಕದ್ದು, ಇಲಾಖೆಯ ವಿದ್ಯುಚ್ಛಕ್ತಿ ಪರಿಶೀಲಕನಿಂದ ಹಿಂಬರಹ ಮಾಡಲಾದ ಅನುಕೂಲವಾದ ಥಿಯೇಟರ್ ಉನ್ನತ ತಂತ್ರಜ್ಞಾನದಂತಿರುವ ಡಿಜಿಟಲ್ ಪ್ರೊಜೆಕ್ಷನ್ ಸಿಸ್ಟಮ್ ಇರತಕ್ಕದ್ದು.
145, ವಾಯು ಸಂಚಾರಕಗಳು,- (1) ಪ್ರತಿ ಅರೆಖಾಯಂ ಸಿನಿಮಾ ಪ್ರದೇಶವೂ ನೆಲಪ್ರದೇಶದ ಎಂಟನೇ ಒಂದು ಭಾಗಕ್ಕಿಂತ ಕಡಿಮೆ ಇಲ್ಲದಂತ ಮೂರನೇ-ಎರಡು ಭಾಗದಷ್ಟು ವ್ಯವಸ್ಥೆ ಮಾಡಲಾದ ತೆರೆದ ಅವಧಿಯಲ್ಲಿ ಇಟ್ಟುಕೊಂಡು ಮಾಡಲಾದ ಕಾರ್ಯಸಾಧನೆಗಳ ಸಾಕಷ್ಟು ವಾಯು ಸಂಚಾರಕಗಳಿರತಕ್ಕದ್ದು, ಸಾಕಷ್ಟು/ಪರ್ಯಾಪ್ತಗಳ ಎಂದರೆ ಕೃತಕ ವಾಯು ಸಂಚಾರಕದ ಜೊತೆಗೆ ಪ್ರತಿ ಐವತ್ತು ಆಸನಗಳಿಗೆ ಕಡಿಮೆ ಇಲ್ಲದಂತೆ ಒಳಮಳಿಗೆಯಲ್ಲಿ ಒಂದು ಪ್ಯಾನ್ ಮತ್ತು ಸಭಾಂಗಣದ ಪ್ರತಿ ಐವತ್ತು ಚದರ ಮೀಟರ್ಗಳಿಗೆ ಸಂಪೂರ್ಣವಾಗಿ ಉಪಯೋಗವಾಗುವಂತೆ ಒಂದು ಪ್ಯಾನ್ನ್ನು ಲೋಕೋಪಯೋಗಿ, ಬಂದರುಗಳ ಮತ್ತು ಅಂತರ್ದೇಶೀಯ ಸಾರಿಗೆ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರರಿಂದ ಅನುಮೋದನೆಗೊಂಡಿರತಕ್ಕದ್ದು.
(2) ಪರ್ಯಾಯವಾಗಿ/ಬದಲಾಗಿ, ಲೋಕೋಪಯೋಗಿ, ಬಂದರುಗಳು ಮತ್ತು ಅಂತದ್ದೇಶೀಯ ಸಾರಿಗೆ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಿಂದ ಅನುಮೋದನೆಗೊಂಡ ಸೂಕ್ತವಾದ ಸಾಮರ್ಥ್ಯದ ಕೇಂದ್ರಿಕೃತ ವಾಯುಸಂಚಾರಕ ವ್ಯವಸ್ಥೆಯ ಸಾಕಷ್ಟು ಸ್ಥಾನಗಳಿರತಕ್ಕದ್ದು.
(3) ಅರೆಖಾಯಂ ಸಿನಿಮಾದ ಸಭಾಂಗಣದಲ್ಲಿ ವಾಯು/ಹವಾನಿಯಂತ್ರಿತ ಅಥವಾ ವಾಯು ಶೈತ್ಯಾಕಗಳನ್ನು ಲೋಕೋಪಯೋಗಿ, ಬಂದರುಗಳು ಮತ್ತು ಅಂತದ್ದೇಶೀಯ ಸಾರಿಗೆ ಇಲಾಖೆಯಿಂದ ಅನುಮೋದನೆಗೊಂಡ ಅರೆ-ಖಾಯಂ ಸಿನಿಮಾ ಥಿಯೇಟರುಗಳಲ್ಲಿ ಸೂಕ್ತವಾದ ವಾಯು ಸಂಚಾರಕಗೊಳಿಸಿರತಕ್ಕದ್ದು.
ಪರಂತು, ವಾಯುಸಂಚಾರಕ ವ್ಯವಸ್ಥೆಯ ಕಾರ್ಯಸಾಧನೆಯ ಅವಧಿಯಲ್ಲಿ ವಿಫಲತೆಗಳಿಂದಾಗಿ ತಪ್ಪಿದಲ್ಲಿ ಅವಧಿಯಲ್ಲಿ ಪ್ರದರ್ಶನವನ್ನು ನಿಲ್ಲಿಸತಕ್ಕದ್ದು.
146, ಟಿಕೆಟು ಬೂತುಗಳು,- (1) ವಿವಿಧ ವರ್ಗಗಳಿಗೆ ಅನುಗುಣವಾಗಿ ಸೂಕ್ತವಾದ ಬುಕಿಂಗ್ ಕಿಟಕಿಗಳನ್ನು ಆವರಣಗಳಲ್ಲಿ ಕೊಠಡಿಗಳ ಮುಂದೆ ಸಾಲಿನಲ್ಲಿ ನಿಂತು ಟಿಕೇಟುಗಳನ್ನು ಕೊಂಡುಕೊಳ್ಳುವವರು ಸಾರ್ವಜನಿಕ ರಸ್ತೆಯಲ್ಲಿ ಸಂಚಾರಕ್ಕೆ ಯಾವುದೇ ಅಡ್ಡಿಯಾಗದಂತೆ ಆವರಣದೊಳಗೆ ಕೊಂಡುಕೊಳ್ಳುವಂತೆ ಒದಗಿಸತಕ್ಕದ್ದು.
(2) ಪರ್ಯಾಪ್ತ ಎಂದರೆ, ಸಾರ್ವಜನಿಕರಿಗೆ ಟಿಕೆಟ್ ಬೂತನ್ನು ಪ್ರದೇಶದ ಮತ್ತು ಹೊರಗೆ ಮುಂಭಾಗದಲ್ಲಿ ಒದಗಿಸತಕ್ಕದ್ದು.
(3) (1) ಯಾವುದೇ ಟಿಕೇಟು ಅಥವಾ ಇತರ ಯಾವುದೇ ಸರಿಯದ ಸಾಕ್ಷ್ಯವು ಯಾವುದೇ ಸಿನಿಮಾ ಅಥವಾ ಥಿಯೇಟರ್ ಅಥವಾ DO Bess ಲೈಸನ್ಸ್ದಾರ ಟಿಕೇಟು ಮಾರಾಟ ಮಾಡುವ/ಇಟ್ಟುಕೊಳ್ಳುವ ಅಥವಾ ಕೊಡಮಾಡುವುದು ಅಥವಾ ಮಾರಾಟಕ್ಕಾಗಿ ಇಡುವುದು ಅಥವಾ ಮಾರುವಂತೆ ಮಾಡು ಅಥವಾ ಇಟ್ಟುಕೊಳ್ಳುವಂತೆ ಮಾಡುವ ಅಥವಾ ಮಾರಾಟ ಮಾಡಲಾದ ಯಾರೇ ವ್ಯಕ್ತಿ ಅಥವಾ ಅವನ ಏಜೆಂಟ್ ಕ್ರಮಬದ್ಧವಾಗಿ ಲಿಖಿತದಲ್ಲಿ ಅಧಿಕೃತಗೊಳಿಸತಕ್ಕದ್ದು.
(ii) ಯಾವುದೇ ಅರೆಖಾಯಂ ಸಿನಿಮಾ ಥಿಯೇಟರ್ನ ಪ್ರಾರಂಭ ಯಾವುದೇ ಇತರೆ ಸರಿಯಾದ ಸಾಕ್ಷ್ಯದೊಂದಿಗೆ ಯಾವುದೇ ಟೀಕೇಟು ಅಥವಾ ಕೊಡುವುದು ಅಥವಾ ಮಾರಾಟ ಮಾಡತಕ್ಕದ್ದು ಅಥವಾ ಇಟ್ಟುಕೊಳ್ಳುವುದು ಅಥವಾ ಕೊಟ್ಟ ಅಥವಾ ಮಾರಾಟ ಮಾಡಲಾದ ಯಾವುದೇ ಸ್ಥಳ ಇತರೆ ಬುಕ್ಕಿಂಗ್ ಕಿಟಕಿಗಳನ್ನು ಉದ್ದೇಶದಿಂದ ಒದಗಿಸಲಾದ ಮತ್ತು ವ್ಯಕ್ತಿ ಸಾಲಿನಲ್ಲಿರುವ ಇತರೇ ವ್ಯಕ್ತಿಯು ಬುಕ್ಕಿಂಗ್ ಕಿಟಕಿಗಳ ಹಿಂದಿನಿಂದ ಮಾರಾಟ ಮಾಡತಕ್ಕದ್ದಲ್ಲ.
ಪರಂತು, ಲೈಸನ್ಸ್ ಪ್ರಾಧಿಕಾರವು ಧರ್ಮದರ್ಶಿ ಪ್ರದರ್ಶನಗಳಿಗೆ ಬುಕಿಂಗ್ ಕಿಟಕಿಗಳು ಮತ್ತು ಲೈಸನ್ಸ್ದಾರನ ಇತರ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಆ ಸ್ಥಳದಲ್ಲಿ ಪ್ರವೇಶ ಹಕ್ಕಿನ ಇತರೆ ಯಾವುದೇ ಸಾಕ್ಷ್ಯದೊಂದಿಗೆ ಟಿಕೆಟುಗಳು, ಪಾಸುಗಳನ್ನು ಮಾರಾಟ ಮಾಡಲು ಲಿಖಿತದಲ್ಲಿ ಅನುಮತಿ ನೀಡಬಹುದು.
(0) (i) ಟಿಕೆಟುಗಳನ್ನು ಮಾರಾಟ ಮಾಡುವ ಮೂಲಕ ಅಥವಾ ಅನ್ಯಥಾ ಮುಂಗಡವಾಗಿ ಯಾವುದೇ ವರ್ಗಕ್ಕೆ ಸೀಟುಗಳನ್ನು ಬುಕ್ ಮಾಡುವುದು ಪಿಲ್ಮ್ ಪ್ರದರ್ಶನದ ದಿನದಿಂದ ಏಳು ದಿನಗಳ ಮುಂಚಿತವಾಗಿ ಲೈಸನ್ಸ್ದಾರನು ಮಾರಾಟ ಮಾಡತಕ್ಕದ್ದಲ್ಲ.
(ii) ಆರೆಖಾಯಂ ಸಿನಿಮಾ ಥಿಯೇಟದ್ಗಳಲ್ಲಿ ಸುಸಂಬದ್ಧ ನಿಯಮಗಳಿಗೆ ಅನುಗುಣವಾಗಿ ಆನ್ಲೈನ್ನಲ್ಲಿ ಮಾರಾಟವಾದ ಟಿಕೆಟುಗಳಿಗೆ ಅವಕಾಶಕೊಡತಕ್ಕದ್ದು.
(iii) ಪ್ರತಿ ಟಿಕೆಟ್ನ ವೆಚ್ಚಗಳು ಇತರೆ ವೆಚ್ಚಗಳು ಸಂಬಂಧಿಸಿದ ಅಧಿನಿಯಮಗಳು ಮತ್ತು ನಿಯಮಗಳಂತೆಯೇ ಅನ್ವಯವಾಗತಕ್ಕದ್ದು.
147, ಶೌಚಗೃಹಗಳು, ಮೂತ್ರಿಗಳು ಮತ್ತು ನೀರಿನ ಸೌಲಭ್ಯಗಳು,- (1) ಪ್ರತಿ ಅರೆಖಾಯಂ ಸಿನಿಮಾದ ಮುಖ್ಯ ಕಟ್ಟಡದಲ್ಲಿ ಪುರುಷರಿಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗೆ, ತೃತೀಯ ಲಿಂಗ ಮತ್ತು ವಿಕಲಚೇತನರಿಗೆ ಪ್ರತ್ಯೇಕವಾಗಿ ಶೌಚಗೃಹಗಳು ಮತ್ತು ಮೂತ್ರಗಳನ್ನು ಸೂಕ್ತವಾದ ಸಂಖ್ಯೆಗೆ ಅನುಗುಣವಾಗಿ ಒದಗಿಸತಕ್ಕದ್ದು.
(2) ಅನುಸೂಚಿ. "ಸಿ' ಯಲ್ಲಿ. ಉಪಬಂಧಿಸಲಾದ ನೈರ್ಮಲ್ಯ ಅನುಕೂಲವನ್ನು . ನಿರ್ಮಿಸಲು ನಿರ್ಧರಿಸಬಹುದಾದಂತೆ ಇರತಕ್ಕದ್ದು.
(3) ನೀರಿನ ಸೌಲಭ್ಯಗಳು ಮತ್ತು ಶೌಚಗೃಹಗಳು ಭೂಮಿಯ ಒಳಗೆ ಚರಂಡಿ ವ್ಯವಸ್ಥೆಯಲ್ಲಿ ಜೋಡಿಸತಕ್ಕದ್ದು.
(4) ಮಳೆ ನೀರನ್ನು ಸಮರ್ಥವಾಗಿ ಸಂರಕ್ಷಿಸಲು ಮತ್ತು ಬಳಸಲು ಮಳೆ ನೀರು ಕೊಯ್ಲ ವ್ಯವಸ್ಥೆಯನ್ನು ಅಳವಡಿಸತಕ್ಕದ್ದು.
(5) ಪ್ರತಿ ಅರೆಖಾಯಂ ಸಿನಿಮಾದಲ್ಲಿ ಪುರುಷರಿಗೆ ಮತ್ತು ಸ್ತ್ರಿಯರಿಗೆ ಪ್ರತ್ಯೇಕವಾಗಿ ಸೂಕ್ತ ಸಂಖ್ಯೆಯ ಕುಡಿಯುವ ನೀರಿನ ಸೌಲಭ್ಯಗಳನ್ನು ಒದಗಿಸತಕ್ಕದ್ದು. ಆದರೆ ಅಲ್ಲಿನ ಸಂಖ್ಯೆ ಎರಡು ನೀರಿನ ಕೊಳಾಯಿಗಿಂತ ಕಡಿಮೆಯಿರತಕ್ಕದ್ದಲ್ಲ. ಅದರಲ್ಲಿ ಒಂದು ಪುರುಷರಿಗೆ ಮತ್ತು ಮತ್ತೊಂದು ಮಹಿಳೆಯರಿಗೆ. ನೀರಿನ ಕೊಳಾಯಿಗಳನ್ನು ನೀರಿನ ಸರಬರಾಜು ಪೈಪ್ನಲ್ಲಿ ಜೋಡಿಸತಕ್ಕದ್ದು ಅಥವಾ ಯಾವಾಗ ನೀರಿನ ಸರಬರಾಜು ಮಾಡಲಾಗುತ್ತದೋ ಪೈಪ್ ಕೂಡಿಸುವುದು ಅಥವಾ ನೀರಿನ ಸರಬರಾಜು ಮಾಡಲು ಪೈಪ್ನ ವ್ಯವಸ್ಥೆ ಇಲ್ಲದಿದ್ದಾಗ ಟ್ಯಾಂಕ್ಗೆ ಅಥವಾ ನೀರು ಶೇಖರಗೊಳ್ಳುವ/ಅಡಕಗೊಳ್ಳುವ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿರತಕ್ಕದ್ದು.
148, ಔಟ್ಹೌಸ್ ಇತ್ಯಾದಿ,- (1) ಉಪ-ನಿಯಮಗಳು (2) ಮತ್ತು (3)ರ ಕೆಳಗೆ ಉಪಬಂಧಿಸಿದುದನ್ನು ಹೊರತುಪಡಿಸಿ ಸಿನಿಮಾ ಕಟ್ಟಡದ ಬಳಿ ಯಾವುದೇ ಹೋಟೆಲುಗಳು, ಅಂಗಡಿಗಳು ಮತ್ತು ಕ್ಯಾಂಟಿನ್ಗಳಿಗೆ ಅವಕಾಶ ಕೊಡತಕ್ಕದ್ದಲ್ಲ.
(2) ಸಿನಿಮಾ ಕಟ್ಟಡವು ಶಬ್ದ ನಿರೋಧಕ ಮತ್ತು ಸುಲಭವಾಗಿ ದಹ್ಯವಲ್ಲದ ಸಾಮಗ್ರಿಗಳಲ್ಲಿ ನಿರ್ಮಾಣವಾದ ಸಿನಿಮಾ ಕಟ್ಟಡವಾಗಿದ್ದರೆ, ಲೈಸನ್ಸ್ ಪ್ರಾಧಿಕಾರವು ಸ್ಥಳೀಯ ಪ್ರಾಧಿಕಾರದೊಂದಿಗೆ ಸಮಾಲೋಚಿಸಿ, ಅವರ ಅಧಿಕಾರ ವ್ಯಾಪ್ತಿ ಹೊಂದಿರುವ ಸ್ಥಳದಲ್ಲಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ ಪಟ್ಟಣ ಯೋಜನಾ ಅಧಿಕಾರಿ/ ನಗರ ನಿಗಮ/ ಸ್ಥಳೀಯ ಯೋಜನಾ ಪ್ರಾಧಿಕಾರ/ ಜಿಲ್ಲೆಯ ನಗರ & ಪಟ್ಟಣ ಯೋಜನಾ ಸಹಾಯಕ ನಿರ್ದೇಶಕರಿಂದ ಅನುಮತಿ ಪಡೆದು ಸಿನಿಮಾ ಕಟ್ಟಡದ ಕಾಂಪೌಂಡ್ ಒಳಗೆ ಹೋಟೇಲುಗಳು, ಅಂಗಡಿಗಳು ಮತ್ತು ಕ್ಯಾಂಟೀನುಗಳನ್ನು ಸ್ಥಾಪಿಸ, ಬಹುದು. ಪರಂತು, ಇವುಗಳು ಸಿನಿಮಾ ಕಟ್ಟಡವನ್ನು ಸ್ಥಗಿತಗೊಳಿಸುವಂತಿರಬಾರದು ಮತ್ತು ಸಿನಿಮಾ ಕಟ್ಟಡಕ್ಕೆ ತೆರೆದುಕೊಳ್ಳುವಂತಿರಬಾರದು.
(3) ಉಪ-ನಿಯಮ (2)ರ ಮೇರೆಗೆ ಲೈಸನ್ಸ್ ಪ್ರಾಧಿಕಾರಕ್ಕೆ ಈ ಮುಂದಿನವುಗಳ ಬಗ್ಗೆ ಮನವರಿಕೆಯಾಗುವ ಹೊರತು ಅನುಮತಿಯನ್ನು ಮಂಜೂರು ಮಾಡತಕ್ಕದ್ದಲ್ಲ,-
(ಎ) ಅಂತಹ ಕಟ್ಟಡಗಳಲ್ಲಿ ಮುಕ್ತವಾಗಿದ್ದು ಅಂತಸ್ತಿನಲ್ಲಿ ಬೆಂಕಿಯನ್ನು ತಡೆಗಟ್ಟುವುದಕ್ಕಾಗಿ ಅಥವಾ ಆರಿಸುವುದಕ್ಕಾಗಿ ಸಾಕಷ್ಟು ಅವಕಾಶಗಳನ್ನು ಕಲ್ಪಿಸಲಾಗಿದೆ ಎಂದು;
(ಬಿ) ಬೆಂಕಿ ಉಂಟಾದ ಸಂದರ್ಭದಲ್ಲಿ ಸಂದರ್ಶಕರು ಸುಲಭವಾಗಿ ಮತ್ತು ಅತಿಶೀಘ್ರವಾಗಿ ಹೊರಹೋಗಲು ಅಂತಹ ಸ್ಥಾಪನೆಗಳಲ್ಲಿ ಪ್ರತ್ಯೇಕವಾಗಿ ದಾರಿ ಮತ್ತು ನಿರ್ಗಮನ ಇರುವುದೆಂದು;
(2) ಅಂತಹ ಸ್ಥಾಪನೆಗಳಿಗೆ ರಸ್ತೆ ಮುಕ್ತವಾಗಿರುವುದೆಂದು ಅಗ್ನಿಶಾಮಕ ಎಂಜಿನ್ಗಳು ಮತ್ತು ಸಾಧನ ಸಲಕರಣೆಗಳು ಸುಲಭವಾಗಿ ಹೋಗಲು ಸಾಕಷ್ಟು ಅನುಕೂಲ ಇದೆ ಎಂಬುದನ್ನು ಮನಗೊಳ್ಳುವುದು;
148. ಔಟ್ಹ್ಸ್, ಇತ್ಯಾದಿ,- (1), (2) ಮತ್ತು (3)ನೇ ಉಪನಿಯಮಗಳಲ್ಲಿ ಉಪಬಂಧಿಸಲಾದಂತೆ, ಸಿನಿಮಾ ಕಟ್ಟಡ ಹೊರತುಪಡಿಸಿ, ಯಾವುದೇ ಷೋರೂಮುಗಳು, ಹೋಟೇಲುಗಳು, ಅಂಗಡಿಗಳು, ಕಛೇರಿಗಳು, ಬ್ಯಾಂಕುಗಳು ಮತ್ತು ಕ್ಯಾಂಟಿನ್ಗಳಿಗೆ ಅವಕಾಶಕೊಡತಕ್ಕದ್ದಲ್ಲ.
(2) ಸಿನಿಮಾ ಕಟ್ಟಡವು ಶಬ್ದ ನಿರೋಧಕ ಮತ್ತು ಸುಲಭವಾಗಿ ದಹ್ಯವಲ್ಲದ ಸಾಮಗ್ರಿಗಳಲ್ಲಿ ನಿರ್ಮಾಣವಾದ ಸಿನಿಮಾ ಕಟ್ಟಡವಾಗಿದ್ದರೆ, ಲೈಸನ್ಸ್ ಪ್ರಾಧಿಕಾರವು ಸ್ಥಳೀಯ ಪ್ರಾಧಿಕಾರದೊಂದಿಗೆ ಸಮಾಲೋಚಿಸಿ, ಅವರ ಅಧಿಕಾರವ್ಯಾಪ್ತಿಯ ಸ್ಥಳದಲ್ಲಿ ಷೋರೂಮುಗಳು, ಹೋಟೇಲುಗಳು, ಅಂಗಡಿಗಳು, ಕ್ಯಾಂಟೀನುಗಳು, ಬ್ಯಾಂಕುಗಳು ಮತ್ತು ಕಛೇರಿಗಳನ್ನು ಸಿನಿಮಾ ಕಟ್ಟಡ ಇರುವ ಮಹಡಿಯನ್ನು ಹೊರತುಪಡಿಸಿ ತೆರೆಯಲು ಅನುಮತಿಸಬಹುದು ಮತ್ತು ಆಲ್ಕೋಹಾಲ್ನ್ನು (ಮದ್ಯ) ಮಾರುವುದು ಮತ್ತು ಸೇವಿಸುವುದಕ್ಕೆ ಸಂಬಂಧಿಸಿದ ಅಂಗಡಿಗಳನ್ನು ಸ್ಥಾಪಿಸುವುದಕ್ಕೆ ಅನುಮತಿಸತಕ್ಕದ್ದಲ್ಲ.
149. ವಿದ್ಯುಚ್ಛಕ್ತಿ ಸ್ಥಾಪನೆಗಳು,- ಈ ಅಧ್ಯಾಯದ ಉದ್ದೇಶಗಳಿಗಾಗಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು, ‘was’ ಎಂದರೆ ಯಾವ ಸಂದುಗಳ ಮೂಲಕ ಕೊಳವೆಗಳು ಮತ್ತು ಕೇಬಲ್ಲುಗಳನ್ನು ಹಾಯಿಸಲಾಗಿದೆಯೋ ಆ ಸಂದುಗಳಲ್ಲಿ ಅಂತಹ ಸಂದುಗಳನ್ನು ಯುಕ್ತವಾಗಿ ಹೊಗೆ ನಿರೋಧಕಗೊಳಿಸವ ದೃಷ್ಟಿಯಿಂದ ಸೇರಿಸಲಾದ ಪ್ಯಾಕಿಂಗ್.
(2) ವಿದ್ಯುಚ್ಛಕ್ತಿ ಅಧಿನಿಯಮ 2003 ಮತ್ತು ಕೇಂದ್ರಿಯ ವಿದ್ಯುಚ್ಛಕ್ತಿ ಪ್ರಾಧಿಕಾರ (ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ಸುರಕ್ಷತೆ ಮತ್ತು ಕಾನೂನುಕ್ರಮಗಳು) ನಿಯಂತ್ರಣಗಳು 2010 ಮತ್ತು ನಿಯಮಗಳು ಮತ್ತು ನಿಯಂತ್ರಣಗಳಿಗೆ ತದನಂತರ ಮಾಡಲಾದ ಈ ಅಧ್ಯಾಯದಲ್ಲಿ ನಿರ್ದಿಷ್ಟವಾಗಿ ಪರಿಭಾಷಿಸಲಾಗದಂಥ ಈ ನಿಯಮಗಳಿಗೆ ಯಾವುದೇ ಪದ ಅದೇ ಅರ್ಥ ಮತ್ತು ಪದಗಳನ್ನು ಪರಿಭಾಷಿಸತಕ್ಕದ್ದಲ್ಲ.
150. ಮುಖ್ಯ ಸಕ್ರ್ಯೂಟ್ಗಳು.- ಆವರಣಗಳ ವಿದ್ಯುತ್ ದೀಪ ವ್ಯವಸ್ಥೆಯು ಕನಿಷ್ಠ ಪಕ್ಷ ಮೂರು ಪ್ರತ್ಯೇಕ ಮತ್ತು ವಿಭಿನ್ನ ಮುಖ್ಯ ಸಕ್ರ್ಯೂಟ್ಗಳನ್ನು ಹೊಂದಿರತಕ್ಕದ್ದು ಮತ್ತು ಅವುಗಳು,-
(ಎ) ಪ್ರೊಜೆಕ್ಷನ್ ಕೊಠಡಿಗಾಗಿ ಮತ್ತು ಅಲ್ಲಿಂದ ಡಿಮ್ಮಿಂಗ್ ರೆಗ್ಯುಲೇಟರು ಯಾವುದಾದರೂ ಇದ್ದರೆ, ಅದರ ಮೂಲಕ ಸಭಾಂಗಣದ ಕೇಂದ್ರ ದೀಪ ವ್ಯವಸ್ಥೆಗಾಗಿ "ಎ' ಸರ್ಕ್ಯೂಟ್;
(ಬಿ) ಸಭಾಂಗಣದ ಸರಿಸುಮಾರು ಅರ್ಧಭಾಗ ಸಾರ್ವಜನಿಕರಿಗೆ ತೆರೆದಿರುವ ದಾರಿಗಳು, ಮೆಟ್ಟಲು ದಾರಿಗಳು, ಹೊರಕ್ಕೆ ಹೋಗುವ ದಾರಿಗಳು ಮತ್ತು ಕಟ್ಟಡಗಳ ಭಾಗಗಳಿಗಾಗಿ 'ಬಿ' ಸರ್ಕ್ಯೂಟ್; ಮತ್ತು
(ಸಿ) ಸಭಾಂಗಣದ ಉಳಿದ ಅರ್ಧಭಾಗ ಸಾರ್ವಜನಿಕರಿಗೆ ತೆರೆದಿರುವ ದಾರಿಗಳು, ಮೆಟ್ಟಲು ದಾರಿಗಳು, ಹೊರಕ್ಕೆ ಹೋಗುವ ದಾರಿ ಮತ್ತು ಕಟ್ಟಡಗಳ ಭಾಗಗಳಿಗಾಗಿ "ಸಿ' , ಸಕ್ರ್ಯೂಟ್ಗಳು - ಇರತಕ್ಕದ್ದು.
(2) 'ಬಿ'. ಮತ್ತು 'ಸಿ' ಸಕ್ರ್ಯೂಟ್ಗಳಿಗೆ ಸಂಬಂಧಿಸಿದಂತೆ ಸಕ್ರ್ಯೂಟ್ಗಳ ನಿಯಂತ್ರಣವು. ಒಂದರಿಂದ ಇನ್ನೊಂದಕ್ಕೆ ದೂರದಲ್ಲಿರತಕ್ಕದ್ದು.
151... ಸರಬರಾಜು ವ್ಯವಸ್ಥೆ.- (1) ಸರಬರಾಜು ಮೂರು ಹಂತಗಳ ಎಸಿ ವ್ಯವಸ್ಥೆಯಲ್ಲಿ ಲಭ್ಯವಿರುವಲ್ಲಿ, ‘a’ 'ಬಿ' ಮತ್ತು 'ಸಿ' ಸಕ್ರ್ಯೂಟ್ಗಳ ಲೋಡನ್ನು ಸರಿತೂಗಿಸಲು ಮೂರು ವಿವಿಧ ಸ್ಥಳಗಳಿಂದ ಸರಬರಾಜು ಮಾಡತಕ್ಕದ್ದು.
(2) “ಎ” , “ಬಿ” ಮತ್ತು “ಸಿ” ಮುಖ್ಯ ಸಕ್ರ್ಯೂಟ್ಗಳನ್ನು ಅವಶ್ಯವೆಂದು ಪರ್ಯಾಲೋಚಿಸಬಹುದಾದಷ್ಟು ಉಪ-ಸಕ್ರ್ಯೂಟ್ಗಳಿಗಾಗಿ ಉಪ-ವಿಭಾಗಿಸಬಹುದು. ಪ್ರತಿಯೊಂದು ಉಪ-ಸರ್ಕ್ಯೂಟ್ ವಿತರಣಾ ಫಲಕದಿಂದ ಪ್ರಾರಂಭವಾಗತಕ್ಕದ್ದು ಮತ್ತು ಅರ್ಥ್ ಲಿಕೇಜುಗಳ ಸರ್ಕ್ಯೂಟ್ ಬ್ರೇಕರ್ಗಳ (ಇಎಲ್ಸಿಬಿ) ಸೂಕ್ತ ಸಾಮರ್ಥ್ಯದಿಂದರತಕ್ಕದ್ದು.
(3) ಆವರಣದ ಒಳಗಡೆ ಮತ್ತು ಹೊರಗಡೆಯ ದೀಪಗಳು ಪ್ರತ್ಯೇಕ ಸರ್ಕ್ಯೂಟ್ ಇರತಕ್ಕದ್ದು. ಫ್ಯಾನುಗಳು, ವಿದ್ಯುತ್ ಮತ್ತು ತಂಪುಗೊಳಿಸುವ ಉದ್ದೇಶಗಳಿಗಾಗಿನ ಸಕ್ರ್ಯೂಟ್ಗಳನ್ನು ದೀಪ ಸಕ್ರ್ಯೂಟ್ಗಳಿಂದ ವಿಭಿನ್ನ ಮತ್ತು ಪ್ರತ್ಯೇಕವಾಗಿ ಇಡತಕ್ಕದ್ದು.
(4) ವಿದ್ಯುತ್ ಉಳಿತಾಯ ಮತ್ತು ಆಧುನಿಕ ತಂತ್ರಜ್ಞಾನ ದೀಪ ವ್ಯವಸ್ಥೆಯ ಎಲ್ಇಡಿ ಮೊದಲಾದವುಗಳಿಂದ ಕೂಡಿರತಕ್ಕದ್ದು.
152. ಸ್ವಿಚ್ಚು ಮತ್ತು ಫ್ಯೂಸ್.- ಎಲ್ಲ ವಿದ್ಯುತ್ ಸ್ಥಾಪನೆಗಳ ನಿಯಂತ್ರಣಕ್ಕಾಗಿ ಮುಖ್ಯ ಸ್ವಿಚ್ಚು ಬೋರ್ಡಿನಲ್ಲಿ ಓವರ್ ಲೋಡ್ ಮತ್ತು ಅರ್ಥ್ ಲೀಕೇಜ್ ಸಂರಕ್ಷಣೆಗೆ ಮುಖ್ಯ ಸ್ವಿಚ್ಚನ್ನು ಒದಗಿಸತಕ್ಕದ್ದು. ಎಲ್ಲ ಸಕ್ರ್ಯೂಟ್ಗಳನ್ನು ಸಿಬ್ಬಂದಿ ವರ್ಗಕ್ಕೆ ಸುಲಭವಾಗಿ ಸಿಗಬಹುದಾದ ಸ್ಥಾನಗಳಲ್ಲಿ ಮತ್ತು ಅವುಗಳು ಯಾವುದೇ ದಾರಿ ಅಥವಾ ಹೊರಕ್ಕೆ ಹೋಗುವ ದಾರಿಗೆ ಅಡ್ಡಿಪಡಿಸುವ ಸಂಭವವಿಲ್ಲದಿರಬಹುದಾದ ಸ್ಥಳದಲ್ಲಿ ಇಟ್ಟು ಸೂಕ್ತ ಸಾಮರ್ಥ್ಯದ ಸರ್ಕ್ಯೂಟ್ ಬ್ರೇಕಂ್ಗಳ ಮೂಲಕ ಸಮರ್ಥವಾಗಿ ಪರಿರಕ್ಷಿಸತಕ್ಕದ್ದು.
(2) ಸ್ವಿಚ್ಚುಗಳು ಮತ್ತು ಫ್ಯೂಸ್ ಫಲಕಗಳಿಗೆ ಅವು ಸಾರ್ವಜನಿಕರಿಗೆ ಸಿಗುವಂತಿದ್ದರೆ ಮತ್ತು ಅವು ಟಿಕೆಟ್ ಕಿಂಡಿಗಳಲ್ಲಿ ಇದ್ದರೆ, ಗಾಜು ಅಥವಾ ಲೋಹದ ಮುಂಭಾಗದಿಂದ ಸರಿಯಾದ ಬೀಗ ಹಾಕುವ ಪೆಟ್ಟಿಗೆಗಳನ್ನು ಒದಗಿಸತಕ್ಕದ್ದು ಮತ್ತು ಗಾಜನ್ನು (ಸಾಕಷ್ಟು ದಪ್ಪವಾಗಿದ್ದ ಹೊರತು) ಸೂಕ್ತ ಅಗ್ನಿ ನಿರೋಧ ಸಾಧನವನ್ನು ಬಳಸುವ ಮೂಲಕ ಅಗ್ನಿ ನಿರೋಧಕದಿಂದ ಮಾಡಿದ ರಕ್ಷಕ ತಂತಿಯ ಮೂಲಕ ಅಥವಾ ಪರ್ಯಾಯವಾಗಿ ಮುಚ್ಚಳವಿರುವ ಮತ್ತು ಪ್ರಾಸಂಗಿಕ ಪೆಟ್ಟಿಗೆಗಳಿಂದ ಪರಿರಕ್ಷಿಸತಕ್ಕದ್ದು.
(3) ಎಲ್ಲ ಸ್ವಿಚ್ಚುಗಳು ಮತ್ತು ಸೂಕ್ತ ಸಾಮರ್ಥ್ಯದ ಸರ್ಕ್ಯೂಟ್ ಬ್ರೇಕರ್ಗಳನ್ನು ಯಾವ, ದೀಪಗಳ ಸಕ್ರ್ಯೂಟ್ನ್ನು ಅಥವಾ ಲ್ಯಾಂಪ್ಗಳನ್ನು ಅವುಗಳು ನಿಯಂತ್ರಿಸುವುವೋ ಅವುಗಳನ್ನು ಸ್ಪಷ್ಟವಾಗಿ ತೋರಿಸುವ ಹಾಗೆ ಗುರುತು ಮಾಡತಕ್ಕದ್ದು.
153. ಸಂಚಾಯಕ ಸಲಕರಣೆಗಳು.- ವಿದ್ಯುಚ್ಛಕ್ತಿ ಇನ್ಸ್ಪೆಕ್ಟರನು ಸಂಚಾಯಕ ಸಲಕರಣೆಗಳನ್ನು ಅಥವಾ ಸ್ವಯಂಚಾಲಿತ ಡಿಸಿ ದೀಪಗಳ ಸಂಖ್ಯೆ ಮತ್ತು ತುರ್ತು ಪರಿಸ್ಥಿತಿ ಅಥವಾ ವಿದ್ಯುಚ್ಛಕ್ತಿಯು ನಿಂತು ಹೋದ ಸಮಯದಲ್ಲಿ, ಸಭಾಂಗಣವನ್ನು ದೀಪದಿಂದ ಬೆಳಗಿಸುವ ವ್ಯವಸ್ಥೆಯನ್ನು ಸ್ಥಾಪಿಸತಕ್ಕದ್ದು.
(2) ಸಂಚಾಯಕ ಸಲಕರಣೆಗಳನ್ನು ಹೊರಗಿನ ಗಾಳಿಗೆ ಸಾಕಷ್ಟು ವಾಯು ಸಂಚಾರವಿರುವ ಕೊಠಡಿಯಲ್ಲಿ ಇಡತಕ್ಕದ್ದು ಮತ್ತು ಈ ಕೊಠಡಿಯು ಅಗ್ನಿ ನಿರೋಧಕ ಬಾಗಿಲುಗಳೊಂದಿಗೆ ಅಗ್ನಿ ನಿರೋಧಕ ರಚನೆಯದ್ದಾಗಿರತಕ್ಕದ್ದು ಮತ್ತು ಅದನ್ನು ಯಾವುದೇ ಇತರ ಉದ್ದೇಶಕ್ಕಾಗಿ ಉಪಯೋಗಿಸತಕ್ಕದ್ದಲ್ಲ.
154. ರೂಪಾಂತರಿಸುವ ಮತ್ತು ಪರಿವರ್ತಿಸುವ ಯಂತ್ರಸಾಮಗ್ರಿ.- ನಿಯಂತ್ರಿಸುವ ಸ್ವಿಚ್ಚುಗಳು ಮತ್ತು ಸರ್ಕ್ಯೂಟ್ ಬ್ರೇಕರ್ಗಳೊಂದಿಗೆ ರೂಪಾಂತರಿಸುವ ಮತ್ತು ಪರಿವರ್ತಿಸುವ ಯಂತ್ರ ಸಾಮಗ್ರಿಯನ್ನು, ಹೊರಗಿನ ಗಾಳಿಗೆ ಸಾಕಷ್ಟು ವಾಯುಸಂಚಾರವಿರುವ, ಸರಿಯಾಗಿ ಬೆಳಕಿರುವ ಮತ್ತು ಆಡಳಿತ ವರ್ಗಕ್ಕೆ ಸಿಗುವ ಸ್ಥಳದಲ್ಲಿಡತಕ್ಕದ್ದು ಮತ್ತು ಅದನ್ನು ಯಾವುದೇ ಇತರ ಉದ್ದೇಶಕ್ಕಾಗಿ ಉಪಯೋಗಿಸತಕ್ಕದ್ದಲ್ಲ.
155. ಮೋಟಾರುಗಳು, ಇತ್ಯಾದಿ.- ಎಲ್ಲ ಮೋಟಾರುಗಳು ಮತ್ತು ವಿದ್ಯುಚ್ಛಕ್ತಿ ಸಾಧನ ಸಾಮಗ್ರಿಗಳು, ಅವುಗಳಿಗೆ ಅವಕಾಶ ಕೊಟ್ಟಿದ್ದರೆ, ಅವುಗಳು ವಿಶೇಷ ಷರತ್ತುಗಳಿಗೊಳಪಟ್ಟಿರತಕ್ಕದ್ದು. . ಆದರೆ, ಮುನ್ನೂರು ವ್ಯಾಟ್ಗಳಿಗಿಂತ ಹೆಚ್ಚಾಗಿ ತೆಗೆದುಕೊಳ್ಳದ ವಿದ್ಯುತ್ ಪ್ಯಾನ್ಗಳು ಮತ್ತು ಅಂತಹವೇ ಮೋಟಾರುಗಳನ್ನು ಸೂಕ್ತ ವಿತರಣಾ ಫಲಕದ ಮೇಲೆ ಸರ್ಕ್ಯೂಟ್ ಬ್ರೇಕರ್ಗಳಿಂದ ಪ್ರತ್ಯೇಕವಾಗಿ ವೈರಿಂಗ್ ಮಾಡಿದ್ದರೆ ಉಪಯೋಗಿಸಬಹುದು.
156, ಪ್ರತಿರೋಧಗಳು.- ನಿಯಂತ್ರಣ ಉದ್ದೇಶಕ್ಕಾಗಿ ಪ್ರತಿರೋಧವನ್ನು ಹೊರತುಪಡಿಸಿ ಎಲ್ಲ ಪ್ರತಿರೋಧಗಳನ್ನು ಪ್ರೊಜೆಕ್ಷನ್ ಕೊಠಡಿಯ ಹೊರಗೆ ಮತ್ತು ಯುಕ್ತವಾಗಿ ಕಾರ್ಯಸಾಧ್ಯವಿದ್ದರೆ ಸಭಾಂಗಣದ ಹೊರಗಡೆ ಇಡತಕ್ಕದ್ದು, ಸಭಾಂಗಣದ ಒಳಗಡೆ ಇಟ್ಟರೆ, ಅಂತಹ ಪ್ರತಿರೋಧವನ್ನು ಹೂತ ತಂತಿಯ ರಕ್ಷಕ ಮೂಲಕ ಅಥವಾ ಆಕಸ್ಮಿಕ ಸಂಪರ್ಕಗಳನ್ನು ತಡೆಗಟ್ಟುವ ಇತರ ಸಮರ್ಥ ಸಾಧನಗಳಿಂದ ಪರಿರಕ್ಷಿಸತಕ್ಕದ್ದು.
157. wed ದೀಪಗಳು.- (1) ಯಾವುದೇ ಸಿನಿಮಾ ಥಿಯೇಟರು ಅಥವಾ ಮಲ್ಟಿಷ್ಣೆಕ್ಸ್ನಲ್ಲಿ, ವಿದ್ಯುಚ್ಛಕ್ತಿ ಇನ್ಸ್ಪೆಕ್ಟರನ ಅನುಮತಿಯಿಲ್ಲದೆ ಸಭಾಂಗಣದಲ್ಲಿ ಅಥವಾ ಸಾರ್ವಜನಿಕರಿಗಾಗಿ ತೆರೆದಿರುವ ಯಾವುದೇ ಭಾಗದಲ್ಲಿ ಚಾಪ ದೀಪಗಳನ್ನು ಉಪಯೋಗಿಸತಕ್ಕದ್ದಲ್ಲ. ಅಂತಹ ಆವರಣಗಳ ಯಾವುದೇ ಭಾಗದಲ್ಲಿ ಅವುಗಳನ್ನು ಉಪಯೋಗಿಸಿದಾಗ, ಬೀಳುವ ಗಾಜು ಮತ್ತು ಪ್ರಜ್ವಲಿಸುವ ಕಣಗಳು ಅಥವಾ ಇಂಗಾಲದ ಅಪಾಯದ ವಿರುದ್ಧ ರಕ್ಷಿಸಲು ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳತಕ್ಕದ್ದು. ಬೇರೆಯವರು ಸ್ಪರ್ಶಿಸಬಹುದಾದಂಥ ದೀಪಗಳು, ಲಾಂದ್ರಗಳ ಮತ್ತು ಜೋಡಣೆಗಳ ಎಲ್ಲ ಭಾಗಗಳನ್ನು (ಅವುಗಳನ್ನು ಸ್ಪರ್ಶಿಸಲು ನಿಯೋಜಿತನಾದ ವ್ಯಕ್ತಿಯ ಹೊರತು) ಚೌಕಟ್ಟಿನಿಂದ ವಿದ್ಯುತ್ ನಿರೋಧಕಗೊಳಿಸತಕ್ಕದ್ದು.
(2) ಸೀನರಿ ಅಥವಾ ಇತರ ಸುಲಭವಾಗಿ ಬೆಂಕಿ ಹತ್ತುವ ಸಾಮಗ್ರಿಗಳೊಂದಿಗೆ ಸಂಪರ್ಕದಿಂದ ಮೂಲಕ ಬೆಂಕಿ ಹೊತ್ತಿಕೊಳ್ಳಲು ಸಾಕಷ್ಟು ಉಷ್ಣಾಂಶ ಹೆಚ್ಚಾಗಬಹುದಾದ ಚಾಪ ದೀಪದ ಲೋಹದ ಕೆಲಸ ಯಾವುದೇ ತೆರೆದ ಭಾಗವನ್ನು ತಂತಿ ರಕ್ಷಕ ಮೂಲಕ ಪರಿರಕ್ಷಿಸತಕ್ಕದ್ದು. ಯಾವುದೇ ಸಂದರ್ಭದಲ್ಲಿ ಚಾಪ ದೀಪಗಳನ್ನು ಸಂವಾಹಕಗಳ ಮೂಲಕ ತೂಗುಬಿಡತಕ್ಕದ್ದಲ್ಲ.
(3) ಎಲ್ಲ ಚಾಪ ದೀಪಗಳನ್ನು ವಾತಾವರಣಕ್ಕೆ ಒಯ್ಯುವ ಗಾಳಿ ತೂರದ ನಾಳಗಳೊಂದಿಗೆ ಸಂಪರ್ಕಿಸತಕ್ಕದ್ದು.
(4) ಡಿಜಿಟಲ್ ಪ್ರಾಜೆಕ್ಟರ್ಗಳು, ಡಿಜಿಟಲ್ ಶಬ್ದ ವ್ಯವಸ್ಥೆಯಂಥ ಮುಂದುವರೆದ ತಂತ್ರಜ್ಞಾನದ ಪ್ರೊಜೆಕ್ಟರ್ ಮತ್ತು ಶಬ್ದ ವ್ಯವಸ್ಥೆ ಮತ್ತು ಮುಂದುವರೆದ ತಂತ್ರಜಾನದ ಯಾವುದೇ ಇತರ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು ಮತ್ತು ಜಿಲ್ಲಾ ಅಥವಾ ಆ ಪ್ರದೇಶದ ವಿದ್ಯುಚ್ಛಕ್ತಿ ಇನ್ಸ್ಪೆಕ್ಟರನಿಂದ ಅನುಮತಿಯನ್ನು ಪಡೆದ ತರುವಾಯ ಸಿನಿಮಾ ಥಿಯೇಟರು ಅಥವಾ ಮಲ್ಟಿಪ್ಲೆಕ್ಸ್ನ ಯಾವುದೇ ಭಾಗದಲ್ಲಿ ಬಳಸಬಹುದು.
158. ಚಲನಚಿತ್ರ ದೀಪಗಳಿಗಾಗಿ ಕೇಬಲ್ಗಳು.- ಚಲನಚಿತ್ರ ದೀಪಗಳು ಅಥವಾ ಡಿಜಿಟಲ್ ಪ್ರೊಜೆಕ್ಟರ್ಗಾಗಿ ಕೇಬಲ್ಗಳನ್ನು ಪ್ರೊಜೆಕ್ಟರ್ ಕೊಠಡಿಯಿಂದ ವಿದ್ಯುತ್. ಸರಬರಾಜು ಬೋರ್ಡಿನಿಂದ ಪ್ರತ್ಯೇಕ ಸಕ್ರ್ಯೂಟ್ಗಳಿಗಾಗಿ ತೆಗೆದುಕೊಳ್ಳತಕ್ಕದ್ದು. ಸೂಕ್ತವಾದ ಫ್ಯೂಜ್ ರಕ್ಷಣೆಯೊಂದಿಗೆ ಸ್ವಿಚ್ಚನ್ನು ಸಮರ್ಥ ಜೋಡಿ ಕಂಬದಿಂದ ಚಲನಚಿತ್ರ ದೀಪ ಪಥದಲ್ಲಿ ಪ್ರೊಜೆಕ್ಷನ್ ಕೊಠಡಿಯೊಳಗೆ ಜೋಡಿಸತಕ್ಕದ್ದು.
159, ಕೇಬಲ್ಗಳಿಗಾಗಿ ವಿದ್ಯುತ್ ನಿರೋಧಕ ಸಾಮಗ್ರಿ. ಪ್ರೊಜೆಕ್ಷನ್ ಕೊಠಡಿಯೊಳಗೆ, ಅಗ್ನಿ ಪ್ರತಿರೋಧಕ ಕಡಿಮೆ ಹೊಗೆ ಬರುವ ರೀತಿಯ ಎಲ್ಲಾ ವಿದ್ಯುತ್ ಕೇಬಲ್ಗಳನ್ನು ಮತ್ತು ಎಲ್ಲಾ ಕೇಬಲ್ಗಳನ್ನು ನಳಿಕೆಗಳಿಂದ ಮುಚ್ಚತಕ್ಕದ್ದು. ಸ್ವಿಚ್ಚು ಬೋರ್ಡಿನಿಂದ ಪ್ರೊಜೆಕ್ಟರು ಮತ್ತು ಮೋಟಾರುಗಳಿಗೆ ಹೋಗುವ ಎಲ್ಲಾ ನಳಿಕೆಗಳನ್ನು ನೆಲದ ಹಾಸನ್ನು ಅಗೆಯದೆ ಪೂರ್ಣಗೊಳಿಸಿದ ನೆಲದಲ್ಲಿ ಹೂಳತಕ್ಕದ್ದು ಮತ್ತು ಯಾವುದೇ ಸಂದರ್ಭದಲ್ಲಿ ಕೇಬಲ್ಗಳ ಮೇಲಿನ ನಳಿಕೆಗಳಿಗೆ ನೆಲದ ಮೇಲ್ಮೈ ಮೇಲೆ ಅವಕಾಶ ಕೊಡತಕ್ಕದ್ದಲ್ಲ.
160. ನಿರ್ಗಮನ ಚಿಹ್ನೆ, ದಾರಿಗಳು, ಇತ್ಯಾದಿಗಳಿಗಾಗಿ ಸಹಾಯಕ ಸರಬರಾಜು.- (1) ಸಭಾಂಗಣದೊಳಗೆ ನಡುದಾರಿಗಳು ಮತ್ತು ದಾರಿಗಳಲ್ಲಿ ನೆಲದೀಪಗಳನ್ನು ಒದಗಿಸತಕ್ಕದ್ದು. ಅವುಗಳ ವೋಲ್ಟೇಜು ಇಪ್ಪತ್ನಾಲ್ಕು ವೋಲ್ಬುಗಳನ್ನು ಮೀರತಕ್ಕದ್ದಲ್ಲ.
(2) ಸಾರ್ವಜನಿಕರು ಸಿನಿಮಾ ಥಿಯೇಟರ್ನೊಳಗೆ ಇರುವ ಸಮಯದಲ್ಲಿ ಸ್ಟೇರ್ಕೇಸ್ಗಳಲ್ಲಿ, ಮೊಗಶಾಲೆಗಳಲ್ಲಿ, ದಾರಿಗಳಲ್ಲಿ ಮತ್ತು ಹೊರಕ್ಕೆ ಹೋಗುವ ದಾರಿಗಳಲ್ಲಿ ಎಲ್ಲಾ ದೀಪಗಳನ್ನು ಹೊತ್ತಿಸಿಟ್ಟಿರತಕ್ಕದ್ದು.
(3) ಸಾರ್ವಜನಿಕರು ಆವರಣದಲ್ಲಿರುವಾಗ ಆದ್ಯಂತವಾಗಿ ಆವರಣದಲ್ಲಿ ಸುಸ್ಥಿತಿಯಲ್ಲಿರುವ ಕನಿಷ್ಠ ಪಕ್ಷ ಆರು ಟಾರ್ಚುಗಳನ್ನು ಇಟ್ಟಿರತಕ್ಕದ್ದು ಮತ್ತು ಅದು ದ್ವಾರಪಾಲಕರಿಗೆ ಸುಲಭವಾಗಿ ಸಿಗುವ ಹಾಗೆ ಇಡೀ ಕಟ್ಟಡದಲೆಲ್ಲಾ ಹಂಚಿರತಕ್ಕದ್ದು.
(4) ಎಲ್ಲ ಹೊರಗೆ ಹೋಗುವ ದಾರಿಗಳಲ್ಲಿ ತುರ್ತು ದೀಪಗಳನ್ನು ಸಹ ಒದಗಿಸತಕ್ಕದ್ದು.
(5) ತುರ್ತು ಚಿಹ್ನೆಯ ಫಲಕಗಳನ್ನು (ಅಗ್ನಿ ಹೊತ್ತಿಕೊಂಡಾಗ ಹೊರಗೆ ಹೋಗುವ ದಾರಿ/ ಸ್ಟೇರ್ಕೇಸ್, ಸುರಕ್ಷತೆಯ ಜಾಗ, ಅಗ್ನಿಶಾಮಕ, ತುರ್ತುಅಲಾರಂ ಸ್ವಿಚ್ಚು ಇತ್ಯಾದಿ... ಪ್ರಕಾಶಮಾನವಾಗಿ ಮತ್ತು ಸ್ಪಷ್ಟವಾಗಿ ಕಾಣುವಂತೆ ಇಟ್ಟಿರತಕ್ಕದ್ದು.
161. ವೈರಿಂಗ್.- (1) ಇಡೀ ಸಿನಿಮಾ ಅಥವಾ ಮಲ್ಟಿಷ್ಣೆಕ್ಸ್ ಆವರಣಗಳ ವಿದ್ಯುತ್ ವೈರಿಂಗ್ನ್ನು ಲೋಹ ಅಥವಾ ಅನುಮೋದಿತ ಗಟ್ಟಿ ಪಾಲಿ ವೈನಲ್ ಕ್ಲೋರೈಡ್ನ IVS ಕೊಳವೆಗಳಲ್ಲಿ ಮಾಡತಕ್ಕದ್ದು.
(2) ಲೋಹದ ನಳಿಕೆ ಕೊಳವೆಗಳಿಗಾಗಿ ಬುಷ್ಗಳನ್ನು ಅವಶ್ಯವಿರುವಾಗಲೆಲ್ಲಾ ಉಪಯೋಗಿಸತಕ್ಕದ್ದು. ಎಲ್ಲಾ ಲೋಹದ ಕೊಳವೆಗಳನ್ನು ಸಮರ್ಥವಾಗಿ ಅರ್ತಿಂಗ್ ಕಲ್ಪಿಸತಕ್ಕದ್ದು ರಕ್ಷಾಸಂಪುಟಗಳು ಮತ್ತು ಇತರ ಜೋಡಣೆಗಳೊಂದಿಗೆ ಮುಂದುವರಿಸತಕ್ಕಂಥ ಉತ್ತಮ ಮತ್ತು ಖಾಯಂ ವಿದ್ಯುತ್ ಸಂಪರ್ಕ ಸುನಿಶ್ಚಿತಗೊಳಿಸುವ Ae, ಜಾಯಿಂಟುಗಳು ಅಥವಾ ಇತರೆ ಸಾಧನಗಳನ್ನು ಒದಗಿಸತಕ್ಕದ್ದು.
162. ಜೋಡಣೆಗಳು. (1) ಎಲ್ಲ ತೂಗು ಹಾಕಿದ ಜೋಡಣೆಗಳನ್ನು ಭದ್ರವಾಗಿ ಜೋಡಿಸತಕ್ಕದ್ದು.
(2) ಸಂಯೋಜಿತ ಅನಿಲ ಮತ್ತು ವಿದ್ಯುತ್ ಜೋಡಣೆಗಳನ್ನು ಉಪಯೋಗಿಸತಕ್ಕದ್ದಲ್ಲ.
(3) ಸಭಾಂಗಣದಲ್ಲಿ ಮತ್ತು ಸಿನಿಮಾ ಅಥವಾ ಮಲ್ಟಿಪ್ಲೆಕ್ಸ್ ಕಟ್ಟಡದ ಮುಂಭಾಗದಲ್ಲಿ ಯಾವುದೇ ವಿದ್ಯುತ್ ದೀಪದ ಲೋಲಕಗಳು ಅಥವಾ ಬ್ರ್ಯಾಕೆಟ್ಟುಗಳು ನೆಲದ ಮೇಲೆ ಜೋಡಣೆಗಳ ಅತಿ ಕೆಳಗಿನ ಮುಂಚಾಚಿರುವ ಭಾಗಕ್ಕೆ ಕನಿಷ್ಠ ಪಕ್ಷ ಎರಡೂವರೆ ಮೀಟರುಗಳಿರತಕ್ಕದ್ದು. ಯಾವುದೇ ವಿದ್ಯುತ್ ಜೋಡಣೆಗಳು ಅಥವಾ ಯಾವುದೇ ವಿವರಣೆಯ ಸಲಕರಣೆಗಳನ್ನು ಸುರಕ್ಷಾ ಪರದೆಯು ಸರಿಯಾಗಿ ಕೆಲಸ ಮಾಡುವುದಕ್ಕೆ ಯಾವುದೇ ಸಮಯದಲ್ಲಿ ಅಡ್ಡಿಯಾಗುವ ಹಾಗೆ ಜೋಡಿಸತಕ್ಕದ್ದಲ್ಲ ಅಥವಾ ಅಳವಡಿಸತಕ್ಕದ್ದಲ್ಲ.
(4) (i) ವಿದ್ಯುಚ್ಛಕ್ತಿ ಸ್ಥಾಪನೆಯನ್ನು, ಕರ್ನಾಟಕ ಸರ್ಕಾರದ ಲೈಸೆನ್ಸ್ ನೀಡುವ ಸಲಹಾ ಮತ್ತು ಪರೀಕ್ಷಾ ಮಂಡಲಿಯು ಕೊಟ್ಟ ವೈರ್ಮೆನ್ನರ ಅಥವಾ ಮೇಲ್ವಿಚಾರಕರ ಪರ್ಮಿಟ್ಟನ್ನು ಹೊಂದಿರುವ ಸರಿಯಾದ ಅರ್ಹತೆ ಪಡೆದ ವ್ಯಕ್ತಿಯ ಪ್ರಭಾರದಲ್ಲಿರತಕ್ಕದ್ದು ಅಥವಾ ಅದು ಲೈಸೆನ್ಸ್ ಪಡೆದ ವಿದ್ಯುಚ್ಛಕ್ತಿ ಕಾಂಟ್ರಾಕ್ಟರನ ಪ್ರಭಾರದಲ್ಲಿರತಕ್ಕದ್ದು, ಅವನ ಹೆಸರನ್ನು ಜಿಲ್ಲಾ ಅಥವಾ ಆ ಕ್ಷೇತ್ರದ ವಿದ್ಯುಚ್ಛಕ್ತಿ ಪರಿಶೀಲಿಕನಿಗೆ ತಿಳಿಸತಕ್ಕದ್ದು.
(ii) ಲೈಸೆನ್ಸು ಪಡೆದ ವಿದ್ಯುಚ್ಛಕ್ತಿ ಕಂಟ್ರಾಕ್ಟರನು, ಜಿಲ್ಲಾ ವಿದ್ಯುಚ್ಛಕ್ತಿ ಪರಿಶೀಲಿಕನಿಗೆ ವಾರ್ಷಿಕವಾಗಿ ಎಲ್ಲ ಸಕ್ರ್ಯೂಟುಗಳಿಗೆ ಮತ್ತು ವಿದ್ಯುತ್ ನಿರೋಧಕ ಅಳವಡಿಸಿದನ್ನು ಮತ್ತು ಎಲೆಕ್ಟ್ರಾನ್ ವ್ಯಾಲ್ಯೂಗಳನ್ನು ಒದಗಿಸತಕ್ಕದ್ದು.
(5) ವಿದ್ಯುತ್ ಶಾಕ್ನಿಂದ ನರಳುತ್ತಿರುವ ವ್ಯಕ್ತಿಗಳ ಚೇತರಿಕೆಗಾಗಿ ಇಂಗ್ಲಿಷ್, ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳೆರಡರಲ್ಲೂ ಸೂಚನೆಗಳನ್ನು ಎದ್ದು ಕಾಣುವ ಸ್ಥಳದಲ್ಲಿ ಅಂಟಿಸತಕ್ಕದ್ದು ಮತ್ತು ವೈರೈನ್ನರ ಉಪಯೋಗಕ್ಕಾಗಿ ಕನಿಷ್ಠ ಪಕ್ಷ ಸುಸ್ಥಿತಿಯಲ್ಲಿರುವ ಒಂದು ಜೊತೆ ರಬ್ಬರ್ ಕೈಚೀಲಗಳನ್ನು ಒದಗಿಸತಕ್ಕದ್ದು.
(6) ವಿದ್ಯುಚ್ಛಕ್ತಿ ಅಧಿನಿಯಮ, 2003 ಕೇಂದ್ರ ವಿದ್ಯುಚ್ಛಕ್ತಿ ಪ್ರಾಧಿಕಾರ (ಸುರಕ್ಷತೆ ಮತ್ತು ವಿದ್ಯುತ್ ಪೂರೈಕೆಗೆ ಸಂಬಂಧಪಟ್ಟ ಕ್ರಮಗಳು) ವಿನಿಯಮಗಳು, 2010 ಮತ್ತು ಅದರ ತರುವಾಯ ಐಎಸ್ಎಸ್ 3043/1987ರ ನಿಯಮಗಳು ಮತ್ತು ವಿನಿಯಮಗಳ ಮೇರೆಗೆ ಅರ್ತಿಂಗ್ ಕಲ್ಪಿಸುವುದನ್ನು ಸಮರ್ಥವಾಗಿ ಮತ್ತು ಪೂರ್ಣವಾಗಿ ಮಾಡತಕ್ಕದ್ದು ಮತ್ತು ಅದನ್ನು ಸರಿಯಾಗಿ ಇಟ್ಟುಕೊಂಡು ಬರತಕ್ಕದ್ದು. ಭೂ ವಿದ್ಯುತ್ ಧ್ರುವಗಳನ್ನು ತೆರೆದಿಡತಕ್ಕದ್ದು ಮತ್ತು ನಿಯತವಾಗಿ ನೀರು ಹಾಕುವುದು, ಪರಿಶೀಲನೆ ಮತ್ತು ಪರೀಕ್ಷೆಯನ್ನು ಅನುಗೊಳಿಸುವ ಹಾಗೆ ಐ.ಎಸ್. ಮಾನಕಗಳ ಪ್ರಕಾರ ಕಲ್ಲುಕಟ್ಟಡ ಆವೃತಗಳಲ್ಲಿ ಆವೃತಗೊಳಿಸತಕ್ಕದ್ದು.
163. ಜನರೇಟರ್ ಸರಬರಾಜಿನ ಉತ್ಪಾದಕತೆ ಪರ್ಯಾಯ ಮೂಲ. ಪ್ರಸ್ತುತ ವಿದ್ಯುತ್ ಸರಬರಾಜನ್ನು ಆವರಣದಲ್ಲಿನ ವಿಶೇಷ ಸ್ಥಾವರದಿಂದ ಪಡೆದಿರುವಲ್ಲಿ, ಅಂತಹ ಸ್ಥಾವರವನ್ನು ಎಲ್ಲಾ ಸಂದರ್ಭಗಳಲ್ಲಿ ಜಿಲ್ಲಾ ಅಥವಾ ಆ ಕ್ಷೇತ್ರದ ವಿದ್ಯುಚ್ಛಕ್ತಿ ಪರಿಶೀಲಕನು ಅನುಮೋದಿಸಿರಬೇಕು.
164. ವೈರಿಂಗ್ ಯೋಜನೆ.- ವಿದ್ಯುಚ್ಛಕ್ತಿ ಸ್ಥಾಪನೆಯ ಎಲ್ಲಾ ಸಕ್ರ್ಯೂಟ್ಗಳು ಮತ್ತು ಉಪ ಸಕ್ರ್ಯೂಟ್ಗಳ ವ್ಯವಸ್ಥೆಯನ್ನು ವಿತರಣಾ ಫಲಕಗಳ ಸ್ಥಾನವನ್ನು ಮತ್ತು ಕೇಬಲ್ಗಳ ಗಾತ್ರವನ್ನು ಸ್ಪಷ್ಟವಾಗಿ ಸೂಚಿಸುವ ಏಕರೇಖೆಯಲ್ಲಿ ಚೌಕಟ್ಟು ಹಾಕಿರುವ ವೈರಿಂಗ್ ರೇಖಾಚಿತ್ರವನ್ನು ಆವರಣದಲ್ಲಿ ಪ್ರದರ್ಶಿಸತಕ್ಕದ್ದು ಮತ್ತು ಅದನ್ನು ತಹಲ್ವರೆಗೆ ಇಡತಕ್ಕದ್ದು, ಅಂತಹ ರೇಖಾಚಿತ್ರವನ್ನು ವಿದ್ಯುಚ್ಛಕ್ತಿ ಇನ್ಸ್ಪೆಕ್ಟರನು ಕ್ರಮಬದ್ಧವಾಗಿ ಅನುಮೋದಿಸಿ ಡಿಜಿಟಲ್ ನಮೂನೆಯಲ್ಲಿ ಸಹ ನಿರ್ವಹಿಸತಕ್ಕದ್ದು.
165. ದೀಪ ವ್ಯವಸ್ಥೆಯ ಸಂವಾಹಕಗಳು..- (1) ದೀಪ ವ್ಯವಸ್ಥೆಯ ಸಂವಾಹಕಗಳನ್ನು ಪ್ರತಿಯೊಂದು ಸಿನಿಮಾ ಅಥವಾ ಮಲ್ಟಿಷ್ಣೆಕ್ಸ್ ಕಟ್ಟಡದಲ್ಲಿ ಸಂಬಂಧಪಟ್ಟ ಐ.ಎಸ್. ಮಾನಕಗಳಿಗೆ ಅನುಗುಣವಾಗಿ ಒದಗಿಸತಕ್ಕದ್ದು. rh
(2) ನಿಯಾನ್ ಚಿಹ್ನೆಗಳನ್ನು ಸ್ಥಾಪಿಸಿದ್ದರೆ ಅವುಗಳನ್ನು ಪ್ರಾರಂಭಿಸುವ ಮುಂಚೆ ವಿದ್ಯುಚ್ಛಕ್ತಿ ಇನ್ಸ್ಪೆಕ್ಟರನಿಂದ ಪರಿಶೀಲಿಸಿಕೊಳ್ಳತಕ್ಕದ್ದು.
166. ದೂರವಾಣಿ.- (1) ಪ್ರತಿಯೊಂದು ಸಿನಿಮಾ ಥಿಯೇಟರು ಅಥವಾ ಮಲ್ಟಿಷ್ಲೆಕ್ಸ್ಗೆ ಸುಲಭವಾಗಿ ಲಭ್ಯವಾಗಬಹುದಾದ ಸ್ಥಳದಲ್ಲಿ ದೂರವಾಣಿಯನ್ನು ಒದಗಿಸತಕ್ಕದ್ದು. ಅಗ್ನಿಶಾಮಕ, ಅಂಬುಲೆನ್ಸ್, ಪೊಲೀಸು, ಆಸ್ಪತ್ರೆ ಮೊದಲಾದವುಗಳನ್ನು ಒಳಗೊಂಡು ಎಲ್ಲ ತುರ್ತುಪರಿಸ್ಥಿತಿ ಸಂಪರ್ಕ ಸಂಖ್ಯೆಗಳನ್ನು ಎದ್ದುಕಾಣುವ ಜಾಗದಲ್ಲಿ ಪ್ರದರ್ಶಿಸತಕ್ಕದ್ದು. ಹತ್ತಿರದ ಅಗ್ನಿಶಾಮಕ ಠಾಣೆಯ ದೂರವಾಣಿ ಸಂಖ್ಯೆಯು ನಿಯಂತ್ರಣ ಕೊಠಡಿ ಸಂಖ್ಯೆ. 101 ರೊಂದಿಗೆ ಎದ್ದು ಕಾಣುವಂತಿರತಕ್ಕದ್ದು
(2) ಸಮಗ್ರ ದೂರವಾಣಿ ಸಂಪರ್ಕದ ಸ್ಥಾಪನೆ ಮತ್ತು ನಿರ್ವಹಣೆಯನ್ನು ಲೈಸೆನ್ಸ್ದಾರನು ತನ್ನ ಖರ್ಚಿನಲ್ಲಿ ನಿರ್ವಹಿಸತಕ್ಕದ್ದು.
167. ಅಗ್ನಿನಂದಿಸುವ ಸಲಕರಣೆ.- (1) ಪ್ರತಿಯೊಂದು ಸಿನಿಮಾ ಥಿಯೇಟರ್ ಅಥವಾ ಮಲ್ಟಿಪ್ಲೆಕ್ಸ್ ಕಟ್ಟಡಕ್ಕೆ ಈ ಕೆಳಕಂಡ ಅಗ್ನಿನಂದಿಸುವ ಉಪಕರಣಗಳನ್ನು ಒದಗಿಸತಕ್ಕದ್ದು, ಎಂದರೆ:-
(ಎ) ಪ್ರೊಜೆಕ್ಷನ್ ಕೊಠಡಿಯಲ್ಲಿ,
(i) ಒಂದು ದಪ್ಪ ಉಸ್ಣೆ ಕಂಬಳಿ;
(ii) ಎರಡು ಬಕೆಟ್ ನೀರು, ಪ್ರತಿಯೊಂದು ಒಂಬತ್ತು ಲೀಟರುಗಳ ಸಾಮರ್ಥ್ಯವುಳ್ಳದ್ದು;
(ii) ಪ್ರತಿಯೊಂದು ಎರಡು ಕಿಲೋಗ್ರಾಂ ಸಾಮರ್ಥ್ಯವುಳ್ಳ ಕಾರ್ಬನ್ ಡೈಆಕ್ಸೈಡ್ (ಇಂಗಾಲಾಮ್ಸ) ನಂದಿಗೆಗಳು ಅಥವಾ ಐದು ಕಿಲೋಗ್ರಾಂ ಸಾಮರ್ಥ್ಯವುಳ್ಳ ಒಂದು ಕಾರ್ಬನ್ ಡೈಆಕ್ಸೈಡ್ ನಂದಿಗೆ;
(ಬಿ) ಸಭಾಂಗಣ ಮತ್ತು ಬಾಲ್ಕನಿಯಲ್ಲಿ,-
(i) ಸಭಾಂಗಣದಲ್ಲಿ ಪ್ರತಿಯೊಂದು ಐದು ಕಿಲೋಗ್ರಾಂ ಸಾಮರ್ಥ್ಯವುಳ್ಳ ನಾಲ್ಕು ಎಬಿಸಿ ಪೌಡರ್ ನಂದಿಗೆಗಳು ಮತ್ತು ಬಾಲ್ಕನಿಯು ಇರುವಲ್ಲೆಲ್ಲಾ ಬಾಲ್ಕನಿಯಲ್ಲಿ ಎರಡು ಅಂತಹ ನಂದಿಗೆಗಳು;
(ii) ಸಭಾಂಗಣದಲ್ಲಿ ಉದ್ದದಲ್ಲಿ ಆರು. ಮೀಟರುಗಳಿಗಿಂತ ಕಡಿಮೆಯಿಲ್ಲದ ಬಗ್ಗಿಸಬಹುದಾದ ನೀರ್ಕೊಳವೆಗೆ ಲಗತ್ತಿಸಿದ ಎರಡು ನೀರಿನ ಪಂಪುಗಳು ಮತ್ತು ಬಾಲ್ಕನಿಯು ಇರುವಲ್ಲೆಲ್ಲಾ ಬಾಲ್ಕನಿಯಲ್ಲಿ ಒಂದು ನೀರಿನ ಪಂಪು. ಪ್ರತಿಯೊಂದು ನೀರಿನ ಪಂಪಿಗೆ ಯಾವಾಗಲೂ ನೀರು ತುಂಬಿಡಬೇಕಾದ ಪ್ರತಿಯೊಂದು ಹತ್ತು ಲೀಟರು ಸಾಮರ್ಥ್ಯದ ಸಮತಲವುಳ್ಳ ಎರಡು ಚಪ್ಪಟೆ ತಳ ಬಕೆಟುಗಳನ್ನು ಒದಗಿಸತಕ್ಕದ್ದು ಮತ್ತು ಅಗತ್ಯಪಡಿಸಲಾದಂತೆ ಇನ್ ಬಿಲ್ ಅಗ್ನಿ ನಂದಿಸುವ ಉಪಕರಣವನ್ನು ಒದಗಿಸತಕ್ಕದ್ದು;
(iii) ಪ್ರತಿಯೊಂದು ಎರಡು ಕಿಲೋಗ್ರಾಂ ಸಾಮರ್ಥ್ಯವುಳ್ಳ ಎರಡು ಕಾರ್ಬನ್ ಡೈಆಕ್ಸೈಡ್ ನಂದಿಗೆಗಳು ಮತ್ತು ಐದು ಕಿಲೋಗ್ರಾಂ ಸಾಮರ್ಥ್ಯವುಳ್ಳ ಒಂದು ಕಾರ್ಬನ್ ಡೈಆಕ್ಸೈಡ್ ನಂದಿಗೆ;
(iv) ನೆಲ ಪ್ರದೇಶದ ಪ್ರತಿ ಒಂದು ನೂರು ಚದರ ಮೀಟರುಗಳು ಅಥವಾ ಅದರ ಭಾಗಕ್ಕಾಗಿ ನೀರು ತುಂಬಿದ ಹತ್ತು ಲೀಟರುಗಳ ಸಾಮರ್ಥ್ಯವುಳ್ಳ ಒಂದು ಅಗ್ನಿಶಾಮಕ ಬಕೆಟ್, ಸಭಾಂಗಣದಲ್ಲಿ ಕನಿಷ್ಠ ಪಕ್ಷ ಹನ್ನೆರಡು ಬಕೆಟುಗಳನ್ನು ಮತ್ತು ಬಾಲ್ಕನಿಯಲ್ಲಿ ಎರಡು ಬಕೆಟಗಳನ್ನು ಇಡತಕ್ಕದ್ದು;
(ಸಿ). ವಿದ್ಯುಚ್ಛಕ್ತಿ ಸ್ಥಾಪನೆಗಳ ಹತ್ತಿರ,-
(i) ಪ್ರತಿಯೊಂದು ಮುಖ್ಯ ಸ್ವಿಚ್ ಫಲಕದ ಹತ್ತಿರದಲ್ಲಿ ಐದು ಕಿಲೋಗ್ರಾಂ ಸಾಮರ್ಥ್ಯವುಳ್ಳ ಒಂದು ಎಬಿಸಿ ಪೌಡರ್ ಸಂದಿಗೆಗಳು;
(ii) ವಿದ್ಯುಚ್ಛಕ್ತಿ ಮೀಟರುಗಳು, ರೋಟರಿ ಕನ್ವರ್ಟರುಗಳು ಅಥವಾ ಯಾವುದೇ ಇತರ ವಿದ್ಯುಚ್ಛಕ್ತಿ ಯಂತ್ರ ಸಾಮಗ್ರಿ ಅಥವಾ ಸಲಕರಣೆಯನ್ನು ಸ್ಥಾಪಿಸಿರುವಾಗಲೆಲ್ಲಾ, ಐದು ಕಿಲೋಗ್ರಾಂ ಸಾಮರ್ಥ್ಯವುಳ್ಳ ಒಂದು ಎಬಿಸಿ ಪೌಡರ್ ನಂದಿಗೆಯನ್ನು ಒದಗಿಸತಕ್ಕದ್ದು.
(2) ಎಲ್ಲ ಅಗ್ನಿಶಾಮಕ ಉಪಕರಣಗಳನ್ನು ಉಪಯೋಗಕ್ಕೆ ಸಿದ್ಧವಾಗಿ ಲಭ್ಯವಾಗುವಂಥ ರೀತಿಯಲ್ಲಿ ಇಡತಕ್ಕದ್ದು. ಸಭಾಂಗಣದಲ್ಲಿನ ಅಗ್ನಿಶಾಮಕ ಉಪಕರಣಗಳ ಬಹುಭಾಗವನ್ನು 1.20 ಮೀಟರಿನ ಎತ್ತರದಲ್ಲಿ ಪರದೆಯ ಅಕ್ಕಪಕ್ಕದಲ್ಲಿ ಜೋಡಿಸತಕ್ಕದ್ದು.
(3) ಅಗ್ನಿಶಾಮಕ ಬಕೆಟುಗಳು ದುಂಡನೆಯ ತಳವನ್ನು, ಪ್ರತಿಯೊಂದು ಒಂಭತ್ತು ಲೀಟರುಗಳ ಸಾಮರ್ಥ್ಯವನ್ನು ಹೊಂದಿರತಕ್ಕದ್ದು. ಅವುಗಳಿಗೆ ಸ್ವಚ್ಚ ಒಣ ಮರಳನ್ನು ತುಂಬಿ ಇಂಗ್ಲೀಷ್, ಹಿಂದಿ ಮತ್ತು ಕನ್ನಡದಲ್ಲಿ ದೊಡ್ಡ ಬಿಳಿಯ ಅಕ್ಷರಗಳಲ್ಲಿ “Fire” ಎಂಬ ಪದವನ್ನು ಕೆಂಪು ಬಣ್ಣದಲ್ಲಿ ಬರೆದಿರತಕ್ಕದ್ದು.
(4) ಸಾಗಿಸಲು ಸುಲಭವಾದ ಎಲ್ಲ ನಂದಿಗೆಗಳನ್ನು ನಿಯತಕಾಲಿಕವಾಗಿ ನಿರ್ವಹಿಸತಕ್ಕದ್ದು ಮತ್ತು ಅಗ್ನಿಶಾಮಕ ಅಧಿಕಾರ ವ್ಯಾಪ್ತಿಯಲ್ಲಿ ಅಥವಾ ಸರ್ಕಾರವು ಈ ಬಗ್ಗೆ ಅಧಿಕೃತಗೊಳಿಸಿದ ಎಂಜಿನಿಯರಿಂಗ್ ಫರ್ಮ್ ಹೈಡ್ರಾಲಿಕ್ ಒತ್ತಡದ ಮೂಲಕ ಒಳಪಡಿಸತಕ್ಕದ್ದು. ಇಪ್ಪತ್ತು ಕಿಲೋಗ್ರಾಂ/ ಎರಡು ಚದರ ಸೆಂಟೀ ಮೀಟರ್ ಒತ್ತಡವನ್ನು ಒಂದು ನಿಮಿಷ ತಡೆದುಕೊಳ್ಳಬಲ್ಲದು ಎಂದು ತೋರಿಸಲು ಮತ್ತು ಅಂತಹ ಪರೀಕ್ಷೆಯ ಪ್ರಮಾಣಪತ್ರವನ್ನು ಲೈಸೆನ್ಸ್ ನೀಡುವ ಪ್ರಾಧಿಕಾರಿಗೆ ಒಪ್ಪಿಸತಕ್ಕದ್ದು, ಆ ತರುವಾಯ ವಾರ್ಷಿಕವಾಗಿ ಅಂತಹವೇ ಪರೀಕ್ಷೆಗಳನ್ನು ಪುನರಾವರ್ತಿಸತಕ್ಕದ್ದು.
(5) ಸಿನಿಮಾ ಕಟ್ಟಡ ಅಥವಾ ಮಲ್ಟಿಪ್ಲೆಕ್ಸ್ನ ಸಿನಿಮಾ ಆಪರೇಟರನ್ನು ಒಳಗೊಂಡು ಸೇವಕರು ಮತ್ತು ಸಿಬ್ಬಂದಿಗೆ ಮೂರು ದಿನಗಳಿಗಿಂತ ಕಡಿಮೆಯಿಲ್ಲದ ಅವಧಿಯವರೆಗೆ ಪ್ರತಿಯೊಬ್ಬರಿಗೂ ರಾಜ್ಯದಲ್ಲಿರುವ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿಯಲ್ಲಿನ ಆವರಣಗಳಲ್ಲಿ ಇಟ್ಟುಕೊಂಡು ಬಂದಿರುವ ಎಲ್ಲ ಅಗ್ನಿಶಾಮಕ ಸಾಧನ ಸಾಮಗ್ರಿಯ ಉಪಯೋಗದಲ್ಲಿ ತರಬೇತಿ ಕೊಡತಕ್ಕದ್ದು.
(6). ಲೈಸೆನ್ಸ್ದಾರನು,-
(i) ತಯಾರಿಕೆದಾರರ ತಪಶೀಲುಗಳ ಮೇರೆಗೆ ಮತ್ತು ಜಿಲ್ಲಾ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಅಗ್ನಿಶಾಮಕ ಅಧಿಕಾರಿಯ ನಿರ್ದೇಶನಗಳ ಮೇರೆಗೆ ಲೈಸೆನ್ಸು ಪಡೆದ ಆವರಣಗಳಲ್ಲಿ ಒದಗಿಸಿದ ಸುಲಭವಾಗಿ ಸಾಗಿಸಬಹುದಾದ ಅಗ್ನಿ ನಂದಿಗೆಯನ್ನು ನಿಯತಕಾಲಿಕವಾಗಿ ನಿರ್ವಹಿಸಿಕೊಂಡುಬರತಕ್ಕದ್ದು ಮತ್ತು ಅದನ್ನು ಪುನಃ ತುಂಬತಕ್ಕದ್ದು ಮತ್ತು ಹಾಗೆ ಮಾಡಿರುವುದರ ಬಗ್ಗೆ ಕಾಗದದ ಚೀಟಿಯ ಮೇಲೆ ದಿನಾಂಕವನ್ನು ದಾಖಲ್ಮಾಡತಕ್ಕದ್ದು ಮತ್ತು ಅದನ್ನು ಅಂತಹ ಕಂಟೈನರ್ ಹೊರಗಡೆ ಅಂಟಿಸತಕ್ಕದ್ದು;
(ii) ಲೈಸೆನ್ಸ್ ಪಡೆದ ಆವರಣದಲ್ಲಿ ಒದಗಿಸಿದ ಸುಲಭವಾಗಿ ಸಾಗಿಸಬಹುದಾದ ಪ್ರತಿಯೊಂದು ಅಗ್ನಿ ನಂದಿಗೆಯನ್ನು ಪ್ರತಿ ಒಂದು ವರ್ಷಕ್ಕೊಮ್ಮೆ ಅಥವಾ ತಯಾರಿಕೆದಾರನು ನಿರ್ದೇಶಿಸಿದಂತೆ ಮತ್ತು ಜಿಲ್ಲಾ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಗ್ನಿಶಾಮಕ ಅಧಿಕಾರಿಯ ನಿರ್ದೇಶನಗಳಂತೆ ವಿಸರ್ಜಿಸತಕ್ಕದ್ದು, ಮತ್ತು ಅದನ್ನು ಪುನಃ ತುಂಬತಕ್ಕದ್ದು ಮತ್ತು ಅಂತಹ ಪುನಃ ತುಂಬಿದ ದಿನಾಂಕವನ್ನು ಸುಲಭವಾಗಿ ಸಾಗಿಸಬಹುದಾದ ಆಗ್ನಿ ನಂದಿಗೆೆಯ ಕಂಟೈನರ್ನ ಹೊರಮೈ ಮೇಲೆ ಸೂಕ್ತ ಜಾಗದಲ್ಲಿ ದಾಖಲ್ಮಾಡತಕ್ಕದ್ದು.
168. ಅಗ್ನಿಯ ಬಗ್ಗೆ ಮುನ್ನೆಚ್ಚರಿಕೆ.- (1) ಬಾಗಿಲುಗಳು ಮತ್ತು ದಾರಿಗಳನ್ನು ಮುಚ್ಚುವ ಎಲ್ಲ ಪರದೆಗಳನ್ನು, ನೆಲದ ಮೇಲೆ ಎಳದಾಡದ ಹಾಗೆ ತೂಗು ಹಾಕತಕ್ಕದ್ದು ಮತ್ತು ಅದರ ಕೆಳತುದಿಯು ನೆಲದ ಮಟ್ಟದ ಮೇಲೆ ಕನಿಷ್ಠ ಪಕ್ಷ ಹತ್ತು ಸೆಂಟೀ ಮೀಟರ್ ಮೇಲೆ ಇರತಕ್ಕದ್ದು, ಪರದೆಗಳು ಅಗ್ನಿ ವಿಲಂಬಕ ನಿವಾರಣೋಪಾಯಗಳೂೊಂದಿಗೆ ಇರತಕ್ಕದ್ದು.
(2) ಯಾರೇ ಅನಧಿಕೃತ ವ್ಯಕ್ತಿಗೆ ಪ್ರೊಜೆಕ್ಷನ್ ಕೊಠಡಿಯನ್ನು ಪ್ರವೇಶಿಸಲು ಅವಕಾಶ ಕೊಡತಕ್ಕದ್ದಲ್ಲ.
(3) ಇಡೀ ಸಿನಿಮಾ ಥಿಯೇಟರಿನ ಆವರಣಗಳಲ್ಲಿ ಧೂಮಪಾನ, ಆಲ್ಕೋಹಾಲ್ (ಮದ್ಯ) ಬಳಕೆ, ತಂಬಾಕು ಅಥವಾ ಯಾವುದೇ ನಿಷೇದಿತ ವಸ್ತುವಿಗೆ ಇಡೀ ಸಿನಿಮಾ ಥಿಯಟೇರ್ ಆವರಣದಲ್ಲಿ ಅವಕಾಶ ಕೊಡತಕ್ಕದ್ದಲ್ಲ.
(4) ಪ್ರೊಜೆಕ್ಷನ್ ಕೊಠಡಿಯೊಳಕ್ಕೆ ಯಾವುದೇ ದಹ್ಯ ವಸ್ತುವನ್ನು ತೆಗೆದುಕೊಂಡು ಹೋಗತಕ್ಕದ್ದಲ್ಲ ಅಥವಾ ಅದರಲ್ಲಿ ಉಳಿಯಲು ಅವಕಾಶ ಕೊಡತಕ್ಕದ್ದಲ್ಲ.
(5) ಚಲನಚಿತ್ರ ಪ್ರೊಜೆಕ್ಟರುಗಳಿಗೆ ದೃಢವಾದ ರಚನೆಯ ಎರಡು ಲೋಹದ ಫಿಲ್ಮಂ ಪೆಟ್ಟಿಗೆಗಳೊಂದಿಗೆ ಜೋಡಿಸತಕ್ಕದ್ದು, ಅದಕ್ಕೆ ಮತ್ತು ಅದರಿಂದ ಫಿಲ್ಮಂ ಹೋಗುವಂತೆ ಮತ್ತು ಬರುವಂತೆ ಮಾಡತಕ್ಕದ್ದು:
ಪರಂತು, ಡಿಜಿಟಲ್ ಪ್ರೊಜೆಕ್ಟರ್, ಡಿಜಿಟಲ್ ಶಬ್ದ ವ್ಯವಸ್ಥೆಯಂಥ ಮುಂದುವರೆದ ತಂತ್ರಜ್ಞಾನದಲ್ಲಿ ಸಿನಿಮಾ ಥಿಯೇಟರು ಅಥವಾ ಮಲ್ಟಿಪ್ಲೆಕ್ಸ್ ಇರುವ ಸಂದರ್ಭದಲ್ಲಿ, ಈ ಸಂಬಂಧ ಅಗತ್ಯ ಉಪಕರಣವನ್ನು ಬಳಸತಕ್ಕದ್ದು.
(6) ಫಿಲ್ಮು ಪೆಟ್ಟಿಗೆಗಳಿಗೆ, ಪೆಟ್ಟಿಗೆಯ ಒಳಕ್ಕೆ ಜ್ವಾಲೆ ಹೋಗುವುದನ್ನು ತಡೆಗಟ್ಟುವ ಹಾಗೆ ರಚಿಸಿದ ಫಿಲ್ಮ್ ಕಂಡಿಯೊಂದಿಗೆ ಜೋಡಿಸತಕ್ಕದ್ದು.
(7) ಫಿಲ್ಮುಗಳನ್ನು, ಚಲನಚಿತ್ರ ಸುರುಳಿಯ ಪಕ್ಕ ಪಟ್ಟಿಗಳ ಅಂಚುಗಳಾಚೆ ಸುತ್ತಿದ ಫಿಲ್ಮು ಯಾವುದೇ ಸಮಯದಲ್ಲಿ ಹೋಗದ ಅಥವಾ ಮುಂಚಾಚದ ರೀತಿಯಲ್ಲಿ ಅಂತಹ ಚಲನಚಿತ್ರ ಸುರಳಿಗಳ ಮೇಲೆ ಒಂದು ಸುತ್ತು ಸುತ್ತತಕ್ಕದ್ದು, ಫಿಲ್ಮುಗಳ ರಿವೈಂಡಿಂಗನ್ನು ರಿವೈಂಡಿಂಗ್ ರೂಮು ಅಥವಾ ಆವರಣದಲ್ಲಿ ಮಾತ್ರ ನಡೆಸತಕ್ಕದ್ದು:
ಪರಂತು, ಡಿಜಿಟಲ್ ಪ್ರೊಜೆಕ್ಟರ್, ಡಿಜಿಟಲ್ ಶಬ್ದ ವ್ಯವಸ್ಥೆಯಂಥ ಮುಂದುವರೆದ ತಂತ್ರಜ್ಞಾನದಲ್ಲಿ ಸಂದರ್ಭದಲ್ಲಿ, ರಿವೈಂಡಿಂಗ್ ರೂಮು ಕಡ್ಡಾಯವಾಗತಕ್ಕದ್ದಲ್ಲ.
(8) ಮುಚ್ಚಿದ ಲೋಹ ಪೆಟ್ಟಿಗೆಗಳನ್ನು ದಾಸ್ತಾನು ಮಾಡುವುದಕ್ಕಾಗಿ ತುಂಬದ ಪೆಟ್ಟಿಗೆಯನ್ನು ಒದಗಿಸತಕ್ಕದ್ದು, ಫಿಲ್ಮುಗಳನ್ನು ಪ್ರತ್ಯೇಕ ದಾಸ್ತಾನು ಕೊಠಡಿಯಲ್ಲಿ ದಾಸ್ತಾನು ಮಾಡತಕ್ಕದ್ದು ಮತ್ತು ಪ್ರೊಜೆಕ್ಷನ್ ಕೊಠಡಿಯಲ್ಲಿ ದಾಸ್ತಾನು ಮಾಡತಕ್ಕದ್ದಲ್ಲ.
(9) ಸಿನಿಮಾ ಥಿಯೇಟರು ಅಥವಾ ಮಲ್ಟಿಷ್ಣೆಕ್ಸ್ನಲ್ಲಿ ಜಮಖಾನೆಗಳನ್ನು ಹಾಸಿದ್ದರೆ, ಅವುಗಳು ಅಗ್ನಿ ನಿರೋಧಕ ಸಾಮಗ್ರಿಯದಾಗಿರತಕ್ಕದ್ದು ಮತ್ತು ಅವುಗಳ ಅಂಚುಗಳು ಸುತ್ತಿಕೊಳ್ಳದಂತೆ ಅಥವಾ ಮಡಚಿಕೊಳ್ಳದಂತೆ ನೆಲಕ್ಕೆ ಭದ್ರವಾಗಿ ಜೋಡಿಸತಕ್ಕದ್ದು. ಚಾಪೆಗಳನ್ನು ಉಪಯೋಗಿಸಿದರೆ, ಅವುಗಳು ಅಗ್ನಿ ನಿರೋಧಕ ಸಾಮಗ್ರಿಯದ್ದಾಗಿರತಕ್ಕದ್ದು ಮತ್ತು ಅವುಗಳನ್ನು ಚಾಪೆಯ ಗಾತ್ರವನ್ನು ಮೀರದ ಮತ್ತು ಚಾಪೆಯ ದಷ್ಟಕ್ಕಿಂತ ಆಳವಲ್ಲದ ತಗ್ಗಿನಲ್ಲಿ ನೆಲದೊಳಕ್ಕೆ ಬಿಡತಕ್ಕದ್ದು,
(10) . ವಿದ್ಯುತ್ ಸ್ವಿಚ್ಚುಗಳನ್ನು ಟಿಕೆಟ್ ಬೂತುಗಳಲ್ಲಿ ಸ್ಥಾಪಿಸಿದ್ದರೆ, ಅವುಗಳನ್ನು ಸರಿಯಾಗಿ ಮುಚ್ಚುವುದರ ಮೂಲಕ ಸಾರ್ವಜನಿಕರಿಗೆ ನಿಲುಕದಂತೆ ಮಾಡತಕ್ಕದ್ದು.
169. ಸ್ವಚ್ಛತೆಯ ನಿರ್ವಹಣೆ ಇತ್ಯಾದಿ.- ಲೈಸೆನ್ಸ್ದಾರನು,-
(1) ಕಟ್ಟಡದಲ್ಲಿನ ay ಕಿಟಕಿಗಳು. ಮತ್ತು... ವಾಯುಸಂಚಾರದ ಇತರ ಸಾಧನಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡಿರುವಂತೆ;
(2) ಅಂತಹ ಕಟ್ಟಡ ಅಥವಾ ಸ್ಥಳದ ಪ್ರತಿಯೊಂದು ಭಾಗವನ್ನು ಸರಿಯಾದ ನೈರ್ಮಲ್ಯ ಸ್ಥಿತಿಗಳಲ್ಲಿ ಇಟ್ಟುಕೊಂಡಿರುವಂತೆ;
(3) ಕಟ್ಟಡದ ಗೋಡೆಗಳಿಗೆ ಕನಿಷ್ಠ ಪಕ್ಷ ಪ್ರತಿ ಆರು ತಿಂಗಳಿಗೊಂದು ಸಲ ಸುಣ್ಣ ಬಳಿಸುವಂತೆ ಅಥವಾ ಪ್ರತಿ ಎರಡು ವರ್ಷಗಳಿಗೊಂದು ಸಲ ಬಣ್ಣ ಬಳಿಸುವಂತೆ ಅಥವಾ ಲೈಸೆನ್ಸ್ ನೀಡುವ ಪ್ರಾಧಿಕಾರಿಯು ಅಥವಾ ಇತರ ಸಕ್ಷಮ ಪೌರ ಅಥವಾ ಆರೋಗ್ಯ ಪ್ರಾಧಿಕಾರಿಯು ಹಾಗೆ ಅಗತ್ಯಪಡಿಸಿದರೆ ಮೇಲಿಂದ ಮೇಲೆ ಬಣ್ಣ ಬಳಿಸುವಂತೆ;
(4) ಆವರಣವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವಂತೆ ಮತ್ತು ಪ್ರತಿಯೊಂದು ಪ್ರದರ್ಶನದ ತರುವಾಯ ತೆಗೆದುಹಾಕಬೇಕಾದ ಎಲ್ಲ ಬೇಡದ ವಸ್ತುಗಳನ್ನು ಅಥವಾ ಲೈಸೆನ್ಸ್ ನೀಡುವ ಪ್ರಾಧಿಕಾರಿಯು ಅಥವಾ ಇತರ ಸಕ್ಷಮ ಪೌರ ಅಥವಾ ಆರೋಗ್ಯ ಪ್ರಾಧಿಕಾರಿಯು ಹಾಗೆ ಅಗತ್ಯಪಡಿಸಿದರೆ ಮೇಲಿಂದ ಮೇಲೆ ಎಲ್ಲ ಅನಗತ್ಯ ವಸ್ತುಗಳನ್ನು ತೆಗೆದುಹಾಕುವಂತೆ; ಮತ್ತು
(5) ಫ್ಯಾನುಗಳು, ಗಾಜುಗಳು ಮತ್ತು ಷೇಡುಗಳು ಮುಂತಾದವುಗಳಂಥ ವಿದ್ಯುತ್ ಸಾಧನ ಸಾಮಗ್ರಿಗಳನ್ನು ನಿಯತ ಕಾಲಿಕವಾಗಿ ಸ್ವಚ್ಛಗೊಳಿಸುವಂತೆ ಮತ್ತು ಅಂದವಾದ ಸ್ಥಿತಿಯಲ್ಲಿಡುವಂತೆ - ಮಾಡತಕ್ಕದ್ದು.
170. ಧೂಮಪಾನ ನಿಷೇಧ.- ಸಿನಿಮಾ ಥಿಯೇಟರು ಅಥವಾ ಮಲ್ಟಿಪ್ಲೆಕ್ಸ್ ಆವರಣದಲ್ಲಿ ಯಾರೇ ವ್ಯಕ್ತಿಯು ಧೂಮಪಾನ ಮಾಡತಕ್ಕದ್ದಲ್ಲ ಮತ್ತು ಸಿನಿಮಾ ಅಥವಾ ಮಲ್ಬಿಪ್ಗೆಕ್ಸ್ನ ಯಾರೇ ಲೈಸೆನ್ಸ್ಧಾರಕನು ಅಥವಾ ಆತನ ನಾಮನಿರ್ದೇಶಿತ ವ್ಯವಸ್ಥಾಪಕ ಅಥವಾ ವ್ಯವಸ್ಥಾಪಕರು ಇಡೀ ಸಿನಿಮಾ ಥಿಯೇಟರಿನ ಆವರಣದಲ್ಲಿ ಧೂಮಪಾನ ನಿಷೇದಿಸಿರುವುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.
171. ಸ್ವಚ್ಚತೆ ಮತ್ತು ನೈರ್ಮಲ್ಯವನ್ನು ಕಾಪಾಡುವುದು.- ಲೈಸೆನ್ಸ್ದಾರನು ಅಥವಾ ಆತನ ವ್ಯವಸ್ಥಾಪಕನು ಸಿನಿಮಾ ಥಿಯೇಟರು ಅಥವಾ HO Bs’, ಆವರಣಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಂಡುಬರಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು ಮತ್ತು ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಆವರಣದಲ್ಲಿ ಉಗುಳುವುದು ಮತ್ತು ಇತರ ರೀತಿಗಳ ಮಾಲಿನ್ಯವನ್ನು ತಡೆಗಟ್ಟಲಾಗಿದೆಯೇ ಎಂಬುದನ್ನು ಸುನಿಶ್ಚಿತಪಡಿಸಿಕೊಳ್ಳತಕ್ಕದ್ದು.
172. ತಿರುಗು ವ್ಯಾಪಾರದ ನಿಷೇಧ.- ಯಾರೇ ವ್ಯಕ್ತಿಯು ಆಟ ಅಥವಾ ಪ್ರದರ್ಶನ ಅಥವಾ ಆಟ ಅಥವಾ ಪ್ರದರ್ಶನದ ಮಧ್ಯಂತರ ಸಮಯದಲ್ಲಿ ಮತ್ತು ಯಾರೇ ಲೈಸೆನ್ಸ್ದಾರನು ಅಥವಾ ಆತನ ನಾಮನಿರ್ದೇಶಿತನು ಆಟ ಅಥವಾ ಪ್ರದರ್ಶನದ ಅವಧಿಯಲ್ಲಿ ಅಥವಾ ಪ್ರದರ್ಶನ (ಆಟ) ಅಥವಾ ಪ್ರದರ್ಶನದ ಮಧ್ಯಂತರ ಕಾಲದಲ್ಲಿ ಯಾರೇ ವ್ಯಕ್ತಿಗೆ,-
(1) ಸಭಾಂಗಣದಲ್ಲಿ ತಿರುಗಿಕೊಂಡು ವ್ಯಾಪಾರ ಮಾಡಲು; ಅಥವಾ
(2) ಸಭಾಂಗಣದಲ್ಲಿಯೇ ಪ್ರೇಕ್ಷಕ ವರ್ಗದ ಯಾರೇ ಸದಸ್ಯನಿಗೆ ಯಾವುದೇ ತಿಂಡಿ ತಿನಿಸು ಅಥವಾ ಪಾನೀಯಗಳನ್ನು ಮಾರಾಟ ಮಾಡಲು ಅಥವಾ ಸರಬರಾಜು ಮಾಡಲು; ಅಥವಾ
(3) ಸಭಾಂಗಣದಲ್ಲಿಯೇ ಪ್ರೇಕ್ಷಕ ವರ್ಗದ ಯಾರೇ ಸದಸ್ಯನಿಗೆ ಯಾವುದೇ ವಸ್ತುಗಳನ್ನು ಅಥವಾ ಪದಾರ್ಥವನ್ನು ಪ್ರತಿಫಲಕ್ಕಾಗಿಯೇ ಆಗಲಿ ಅಥವಾ ಅಗಿಲ್ಲದೆಯೇ ಆಗಲಿ ವಿತರಿಸಲು ಅಥವಾ ಮಾರಾಟ ಮಾಡಲು - ಅವಕಾಶ ಕೊಡತಕ್ಕದ್ದಲ್ಲ.
173. ಮಿತಿಮೀರಿದ ಜನಸಂದಣಿ ನಿಷೇಧ.- ಯಾರೇ ಸಿನಿಮಾ ಥಿಯೇಟರು. ಅಥವಾ HOY SHS ಲೈಸೆನ್ಸ್ದಾರನು ಸಭಾಂಗಣದ ಯಾವುದೇ ಭಾಗಕ್ಕೆ ಅಂತಹ ಭಾಗದಲ್ಲಿ ಆ ಸ್ಥಳಾವಕಾಶ ಒದಗಿಸಲು ಲೈಸೆನ್ಸ್ನಲ್ಲಿ ಅಧಿಕೃತಗೊಳಿಸಿದ ಗರಿಷ್ಠ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳನ್ನು ಸೇರಿಸತಕ್ಕದ್ದಲ್ಲ. ಈ ಗರಿಷ್ಠತೆಯು ಮೀರಿಲ್ಲವೆಂಬುದನ್ನು ನಿಶ್ಚಿತಪಡಿಸಿಕೊಳ್ಳುವುದಕ್ಕಾಗಿ ಮತ್ತು ಇನ್ನೂ ವಿಶೇಷವಾಗಿ ಯಾವುದೇ ಸಮಯದಲ್ಲಿ ಸಕ್ಷಮ ಪ್ರಾಧಿಕಾರಿಯು ಪರಿಶೀಲಿಸಲು ಸಾಧ್ಯವಾಗುವಂತೆ ಲೈಸೆನ್ಸ್ದಾರನು ಪ್ರತಿಗಳು ಮತ್ತು ಪಕ್ಕ ಪ್ರತಿಗಳ ಮೇಲೆ ಕ್ರಮ ಸಂಖ್ಯೆಗಳು ಮತ್ತು ಪ್ರದರ್ಶನದ ದಿನಾಂಕ ಮತ್ತು ಸಂಖ್ಯೆಯನ್ನು ಹೊಂದಿರುವ ಟಿಕೇಟುಗಳನ್ನು ಕೊಡತಕ್ಕದ್ದು. ಪ್ರತಿಯೊಂದು ಪ್ರದರ್ಶನದ ತರುವಾಯ, ಟಿಕೆಟ್ ಪುಸ್ತಕಗಳಲ್ಲಿ ಕೊಟ್ಟ ಕೊನೆಯ ಪಕ್ಕ ಪ್ರತಿಯ ಮೇಲೆ "ಮುಕ್ತಾಯವಾಗಿದೆ' ಎಂದು ಗುರುತು ಮಾಡತಕ್ಕದ್ದು.
174. ಸಿನಿಮಾ ಥಿಯೇಟರು ಅಥವಾ ಮಲ್ಪಿಪ್ಲೆಕ್ಸ್ನ ಅಪರೇಟರುಗಳ ಕರ್ತವ್ಯ ಇತ್ಯಾದಿ.- ಪ್ರೊಜೆಕ್ಟಿಂಗ್ ಸಲಕರಣೆ, ವಿದ್ಯುಚ್ಛಕ್ತಿ ಸ್ಥಾಪನೆಗಳು ಮತ್ತು ಸ್ಥಿರ ಯಂತ್ರ ಮತ್ತು ಎಂಜಿನ್ ಕೊಠಡಿಗಳು (ಯಾವುವಾದರೂ ಇದ್ದರೆ), ಅವುಗಳ ಪ್ರಭಾರದಲ್ಲಿರುವ ವ್ಯಕ್ತಿಗಳು ಪ್ರತಿಯೊಂದು ಪ್ರದರ್ಶನವು ಪ್ರಾರಂಭವಾಗುವುದಕ್ಕೆ ಮುಂಚೆ ಅವರ ಅನುಕ್ರಮ ಪ್ರಭಾರದಲ್ಲಿರುವ ಡಿಜಿಟಲ್ ವ್ಯವಸ್ಥೆಯಂಥ ಮುಂದುವರೆದ ತಂತ್ರಜ್ಞಾನವನ್ನು ಒಳಗೊಂಡು, ಸಲಕರಣೆಗಳು ಅಥವಾ ಸ್ಥಿರ ಯಂತ್ರವು ಕೆಲಸ ಮಾಡುವ ಸ್ಥಿತಿಯಲ್ಲಿದೆ ಎಂದು ಆತನು ಸ್ವತಃ ಮನದಟ್ಟು ಮಾಡಿಕೊಳ್ಳತಕ್ಕದ್ದು.
175. ಸಿನಿಮಾ Fao HOTS ಕಟ್ಟಡವನ್ನು ಯಾವುದೇ ಇತರೆ ಉದ್ದೇಶಕ್ಕಾಗಿ ಉಪಯೋಗಿಸತಕ್ಕದ್ದಲ್ಲ.- ಸಿನಿಮಾ ಅಥವಾ ಮಲ್ಟಿಪ್ಗೆಕ್ಸ್ನ ಕಟ್ಟಡವನ್ನು ಲೈಸೆನ್ಸ್ ನೀಡುವ ಪ್ರಾಧಿಕಾರಿಯ ಬರಹದಲ್ಲಿನ ಪೂರ್ವಾನುಮತಿಯ ಹೊರತು ಚಲನಚಿತ್ರ ಫಿಲ್ಮ್ಗಳ ಪ್ರದರ್ಶನಕ್ಕಾಗಿ ಅಲ್ಲದೆ ಯಾವುದೇ ಇತರ ಉದ್ದೇಶಕ್ಕಾಗಿ ಉಪಯೋಗಿಸತಕ್ಕದ್ದಲ್ಲ:
ಪರಂತು, ಸಿನಿಮಾ ಥಿಯೇಟರು ಮತ್ತು ಟಿಕೇಟು ನೀಡುವ ಕಿಂಡಿಗಳಿಗೆ ಲಗತ್ತಾದ ಪ್ರೊಜೆಕ್ಟರ್ ಕೊಠಡಿ, ಶೌಚಾಲಯಗಳು, ಪ್ರವೇಶದ್ವಾರ/ ಹೊರಗೆ ಹೋಗುವ ಮೊಗಸಾಲೆಗಳು/ ಕಾರಿಡಾರ್ಗಳು/ ಆಹಾರ ಅಂಗಡಿಗಳು/ ಕಾಫಿ ಅಂಗಡಿಗಳು/ ಉಪಾಹಾರ ಗೃಹಗಳಂಥ ಎಲ್ಲ ಪೂರಕ ಉಪಯೋಗಗಳಿಗಾಗಿನ ಪ್ರದೇಶಗಳನ್ನು ಒಳಗೊಂಡು ಸಿನಿಮಾ ಥಿಯೇಟರು ಮತ್ತು ಸಭಾಂಗಣದ ಉದ್ದೇಶಕ್ಕಾಗಿ ಬಳಸಿಕೊಳ್ಳಲಾದ ಖಾಯಂ ಕಟ್ಟಡದ ಭಾಗವಾಗಿರುವ HO SHED ಕಾಂಪ್ಲೆಕ್ಸ್ನ ಸಂದರ್ಭದಲ್ಲಿ, ಈ ನಿಯಮದ ಅನ್ವಯಕ್ಕಾಗಿ ಮಾತ್ರ ಪರಿಗಣಿಸತಕ್ಕದ್ದು.
176. ಸ್ಲಾಟ್ ಯಂತ್ರದ ನಿಷೇಧ.- ಯಾವುದೇ ಸ್ಲಾಟ್ ಅಥವಾ ಮನೋರಂಜನಾ ಯಂತ್ರವನ್ನು, ಲೈಸೆನ್ಸ್ ನೀಡುವ ಪ್ರಾಧಿಕಾರಿಯ ಲಿಖಿತದಲ್ಲಿ ಅನುಮತಿಯ ಹೊರತು ಸಿನಿಮಾ ಅಥವಾ ಮಲ್ಟಿಷ್ಲೆಕ್ಸ್ನಲ್ಲಿ ನಡೆಸತಕ್ಕದ್ದಲ್ಲ. ಸ್ಥಳೀಯ ಪ್ರಾಧಿಕಾರದೊಂದಿಗೆ ಸಮಾಲೋಚಿಸಿದ ತರುವಾಯ ಅದನ್ನು ನಿರ್ಧರಿಸತಕ್ಕದ್ದು:
ಪರಂತು, ಸಿಹಿ ತಿಂಡಿಗಳು, ಕಾಫಿ, ಟೀ, ತಿಂಡಿಗಳಂಥ ವಸ್ತುಗಳ ಮಾರಾಟಕ್ಕಾಗಿ ಮತ್ತು ಮಾದಕವಲ್ಲದ ಪಾನೀಯಗಳನ್ನು ಮಾರುವ ಯಂತ್ರಗಳಿಗಾಗಿ ಅಥವಾ ತೂಕದ ದಾಖಲಾತಿಗಾಗಿ ಅಥವಾ ಟಿಕೇಟುಗಳನ್ನು ಕೊಡುವುದಕ್ಕಾಗಿ ಅಂತಹ ಅನುಮತಿಯನ್ನು ಅಗತ್ಯಪಡಿಸತಕ್ಕದ್ದಲ್ಲ.