ತಾತ್ಕಾಲಿಕ ಸಿನಿಮಾ ಎಂದರೆ, ಸಂಚಾರಿ ಸಿನಿಮಾ, ಅರೆಖಾಯಂ ಸಿನಿಮಾ, ಡ್ರೈವ್- ಇನ್ ಸಿನಿಮಾ ಮತ್ತು ಖಾಯಂ ಸಿನಿಮಾಗಳನ್ನು ಹೊರತುಪಡಿಸಿದ ಸಿನಿಮಾ.
(1)
(ಎ) (20)ನೇ, (21)ನೇ ಮತ್ತು (29) ಉಪನಿಯಮವನ್ನು ಹೊರತುಪಡಿಸಿದ 2ನೇ ನಿಯಮದ;
(ಬಿ) 3ನೇ, 4ನೇ, 5ನೇ, 6ನೇ, 7ನೇ ನಿಯಮದಿಂದ 23ನೇ, 24ನೇ, 25ನೇ ನಿಯಮದವರೆಗಿನ;
(ಸಿ) 26ನೇ ನಿಯಮದ, (1)(ಎ)(1)(11)(111)(೪)(೪1), (ಬಿ), (ಸಿ), (ಡಿ), (ಇ), (ಎಫ್), (ಜಿ),(ಹೆಚ್), (ಜೆ), (ಕೆ), (2) (ಎ)(ಬಿ), (3), (4) (1192) (i), (ii) ಉಪ-ನಿಯಮಗಳ;
(ಡಿ) 27ನೇ, 28ನೇ, 30ನೇ, 31ನೇ, 32ನೇ ಮತ್ತು 33ನೇ ನಿಯಮಗಳ;
(ಇ) 34ನೇ (1) (i), (ನೇ ನಿಯಮ, (2)ನೇ ನಿಯಮಗಳ 44ನೇ, 45ನೇ, 47ನೇ 56ನೇ ನಿಯಮಗಳನ್ನು ಹೊರತುಪಡಿಸಿದ 43 ರಿಂದ 56ರವರೆಗಿನ ನಿಯಮಗಳು, 3ನೇ ನಿಯಮಗಳ 48ನೇ, 51(9)ನೇ, 57 ರಿಂದ 73ನೇ, 77(5)ನೇ, 82ನೇ ನಿಯಮಗಳ;
(ಎಫ್) 35ನೇ ನಿಯಮದ;
(ಜಿ) 36ನೇ, 37ನೇ, 112(18)ನೇ, 40ನೇ, 41ನೇ ನಿಯಮದ;
(ಹೆಚ್ 42ನೇ ನಿಯಮಗಳ (1)ನೇ, (2)ನೇ, (5)ನೇ, (7)ನೇ, (8)ನೇ, (10) ರಿಂದ (16)ನೇ ಉಪ-ನಿಯಮಗಳ;
(ಐ) 43ನೇ, 46ನೇ, 48ನೇ, 49ನೇ ನಿಯಮದಿಂದ 52ನೇ, 53ನೇ, 54ನೇ, 55ನೇ, 108ನೇ, 142ನೇ ನಿಯಮಗಳ;
(ಜೆ) 57ನೇ ನಿಯಮದಿಂದ 73ನೇ, 74 ರಿಂದ 76ನೇ, 77 ರಿಂದ 84ನೇ ಮತ್ತು 85 ರಿಂದ 87ನೇ ನಿಯಮಗಳ;
(1) ಲೈಸೆನ್ಸ್ಗಾಗಿ ಅರ್ಜಿಯನ್ನು ಸ್ವೀಕರಿಸಿದ ಮೇಲೆ, ಲೈಸೆನ್ಸ್ ನೀಡುವ ಪ್ರಾಧಿಕಾರಿಯು, ಕೂಡಲೇ ಸಂಬಂಧಪಟ್ಟ ಇಲಾಖೆಗಳಿಗೆ ಅದನ್ನು ಕಳುಹಿಸತಕ್ಕದ್ದು. ಸಂಬಂಧಪಟ್ಟ ಇಲಾಖೆಯವರು ತಮ್ಮ ಅಭಿಪ್ರಾಯ ಅಥವಾ ಸ್ಪಷ್ಟೀಕರಣವನ್ನು ಹದಿನೈದು ದಿನಗಳನ್ನು ಮೀರದ ಅವಧಿಯೊಳಗಾಗಿ ಸಾಧ್ಯವಾಗಬಹುದಾದಷ್ಟು ಬೇಗನೆ ಲೈಸೆನ್ಸ್ ನೀಡುವ ಪ್ರಾಧಿಕಾರಿಗೆ ನೀಡತಕ್ಕದ್ದು. ಲೈಸೆನ್ಸು ನೀಡುವ ಪ್ರಾಧಿಕಾರಿಯು, ಸದರಿ ಇಲಾಖೆಗಳೊಂದಿಗೆ ಸಮಾಲೋಚಿಸಿ ಅದನ್ನು ಆದೇಶಿಕೆ ಮಾಡತಕ್ಕದ್ದು ಮತ್ತು ಅರ್ಜಿಯ ದಿನಾಂಕದಿಂದ ಮೂವತ್ತು ದಿನಗಳ ಒಳಗಾಗಿ ನಿರಾಕ್ಷೇಪಣ ಪ್ರಮಾಣಪತ್ರವನ್ನು ಮಂಜೂರು ಮಾಡಲು ಅರ್ಜಿಯನ್ನು ಪರಿಗಣಿಸತಕ್ಕದ್ದು ಅಥವಾ ಮೂವತ್ತು ದಿನಗಳ ಗೊತ್ತುಪಡಿಸಲಾದ ಕಾಲದೊಳಗೆ ಲಿಖಿತದಲ್ಲಿ ದಾಖಲು ಮಾಡಬೇಕಾದ ಕಾರಣಗಳಿಗಾಗಿ ಅಂತಹ ಲೈಸೆನ್ಸನ್ನು ನೀಡಲು ನಿರಾಕರಿಸತಕ್ಕದ್ದು.
(2) ತಾತ್ಕಾಲಿಕ ಸಿನಿಮಾಗಾಗಿ ಲೈಸೆನ್ಸಿನ ಕಾಲಾವಧಿ. (1) ತಾತ್ಕಾಲಿಕ ಸಿನಿಮಾ ಲೈಸೆನ್ಸನ್ನು ಆ ಕಾಲದಿಂದ ಎರಡು ವರ್ಷಗಳ ಅವಧಿಯವರೆಗೆ ಮಂಜೂರು ಮಾಡಬಹುದು. ಪರಂತು, ತಾತ್ಕಾಲಿಕ ಸಿನಿಮಾ ಲೈಸೆನ್ಸನ್ನು 31.12.2020ರ ತರುವಾಯ ಮಂಜೂರು ಮಾಡತಕ್ಕದ್ದಲ್ಲ.
ಪರಂತು, ಕರ್ನಾಟಕ ಸಿನಿಮಾಗಳ (ನಿಯಂತ್ರಣ) ನಿಯಮಗಳು, 2014ರ ಪ್ರಾರಂಭದ ಮುಂಚಿತವಾಗಿ ಮಂಜೂರು ಮಾಡಲಾದ ತಾತ್ಕಾಲಿಕ ಸಿನಿಮಾ ಲೈಸೆನ್ಸನ್ನು ಕಟ್ಟಡದ ಉನ್ನತೀಕರಣ ಅಥವಾ ಹೊಸ ಕಟ್ಟಡದ ನಿರ್ಮಾಣವನ್ನು ಒಳಗೊಂಡು. ಅರೆಖಾಯಂ ಸಿನಿಮಾಗೆ. ಪರಿವರ್ತಿಸತಕ್ಕದ್ದು.. ಪರಿವರ್ತನೆಯನ್ನು . 34.12.2020ರ ಮುಂಚಿತವಾಗಿ ಪೂರ್ಣಗೊಳಿಸತಕ್ಕದ್ದು.
(2) ಲೈಸೆನ್ಸ್ ನೀಡುವ ಪ್ರಾಧಿಕಾರಿಯು ಎಲ್ಲ ಅಂತಹ ತಾತ್ಮಾಲಿಕ ಸಿನಿಮಾ ಥಿಯೇಟರುಗಳನ್ನು ಪ್ರತಿ ಆರು ತಿಂಗಳಲ್ಲಿ ಪ್ರಗತಿಯನ್ನು ಪರಿಶೀಲಿಸತಕ್ಕದ್ದು ಮತ್ತು ಪರೀಕ್ಷಿಸತಕ್ಕದ್ದು ಮತ್ತು ಈ ಸಂಬಂಧದಲ್ಲಿ ಲೈಸೆನ್ಸುದಾರನು ಪ್ರಗತಿ ಮಾಡಿದನ್ನು ಅಥವಾ ಮಾಡದ್ದನ್ನು ಪರಿಶೀಲಿಸಲು ಲೈಸೆನ್ಸುದಾರನಿಗೆ ನೋಟೀಸು ನೀಡತಕ್ಕದ್ದು.
(3) ಈ ನಿಯಮದ ಉಪಬಂಧಗಳನ್ನು ಪೂರೈಸಿಲ್ಲದಿರತಕ್ಕ ಯಾವುದೇ ತಾತ್ಕಾಲಿಕ ಸಿನಿಮಾ ಥಿಯೇಟರಿನ ಲೈಸೆನ್ಸನ್ನು 01.01.2021 ರಂದು ಇದ್ದಂತೆ ರದ್ದುಗೊಳಿಸಲಾಗಿದೆಯೆಂದು ಭಾವಿಸತಕ್ಕದ್ದು ಮತ್ತು ಲೈಸೆನ್ಸ್ ನೀಡುವ ಪ್ರಾಧಿಕಾರಿಯು ತದನುಸಾರವಾಗಿ ಕ್ರಮ ತೆಗೆದುಕೊಳ್ಳತಕ್ಕದ್ದು.
(1) ತಾತ್ಕಾಲಿಕ ಸಿನಿಮಾ ಕಟ್ಟಡವನ್ನು, ಇಟ್ಟಿ ಗೆಗಳು, ಸಿಮೆಂಟು, ಅರಣ್ಯ ಕಟ್ಟಿ] n, ಹಗುರ ಮೇಲ್ಭಾವಣಿ ಶೀಟುಗಳು (ಗಟ್ಟಿ ಡಾಂಬರಿನ ಶೀಟುಗಳು) ಮೊದಲಾದವುಗಳಿಂದ ನಿರ್ಮಿಸತಕ್ಕದ್ದು ಮತ್ತು ಎಲ್ಲ ನಾಲ್ಕು ಕಡೆಗಳಲ್ಲಿನ ಗೋಡೆಗಳ ಎತ್ತರವು, ಸಭಾಂಗಣದ ಗೋಡೆಗಳ ಮತ್ತು ಎಲ್ಲ ಕಡೆಗಳಲ್ಲಿ ಕನಿಷ್ಠ 5 ಮೀಟರುಗಳು ಇರುವ ಕಾಂಪೌಂಡಿನ ಗೋಡೆಗಳ ನಡುವಿನ ಅಂತರದಲ್ಲಿ ಕನಿಷ್ಠ 2.5 ಮೀಟರುಗಳನ್ನು ಹೊಂದಿರತಕ್ಕದ್ದು.
(2) ಪ್ರಸ್ತುತ ಸಿನಿಮಾ ನಿವೇಶನದಿಂದ ಹತ್ತು ಕಿಲೋಮೀಟರುಗಳ ವ್ಯಾಸಾರ್ಧದಲ್ಲಿ ಅದೇ ಗ್ರಾಮ/ಪಟ್ಟಣದಲ್ಲಿ ಯಾವುದೇ ಇತರ ಹತ್ತಿರದ ನಿವೇಶನಕ್ಕೆ ಪ್ರಸ್ತುತ ಸಿನಿಮಾ ನಿವೇಶನದ ಸ್ಥಳವನ್ನು ಬದಲಾವಣೆ ಮಾಡಲು ಹೊಸ ನಿರಾಕ್ಷೇಪಣಾ ಪ್ರಮಾಣಪತ್ರವು ಅಗತ್ಯವಾಗಿರತಕ್ಕದ್ದಲ್ಲ. ಆದಾಗ್ಯೂ, ಲೈಸೆನ್ಸ್. ನೀಡುವ ಪ್ರಾಧಿಕಾರಿಯು, ಅಂತಹ ಬದಲಾವಣೆಯು, ಸಾರ್ವಜನಿಕರಿಗೆ. ಅನಾನುಕೂಲವಾಗುವುದೆಂದು. ಅಥವಾ ಅನಾನುಕೂಲವಾಗುವ ಸಂಭವವಿರುವುದೆಂದು. ಆತನು ಅಭಿಪ್ರಾಯಪಟ್ಟಿರುವಲ್ಲಿ, ಅಂತಹ ಸಿನಿಮಾ ನಿವೇಶನದ ಸ್ಥಳವನ್ನು ಬದಲಾವಣೆ ಮಾಡಲು ಅನುಮತಿ ನೀಡತಕ್ಕದ್ದಲ್ಲ.