ಸರ್ಕಾರವು ಕಾಲಕಾಲಕ್ಕೆ ನಿರ್ದಿಷ್ಟ ಪಡಿಸಿದಂಥ ಫೀಜುಗಳನ್ನು ಅರ್ಜಿದಾರನು ಸಂದಾಯ ಮಾಡಿದ ಮೇಲೆ ಲೈಸೆನ್ಸಿನ ಪ್ರತಿಯನ್ನು ನೀಡಬಹುದು.
(1) 89ನೇ ನಿಯಮದ ಮೇರೆಗೆ ಅರ್ಜಿಯನ್ನು ಸ್ವೀಕರಿಸಿದ ಮೇಲೆ, ಲೈಸೆನ್ಸನ್ನು ನೀಡುವ ಪ್ರಾಧಿಕಾರವು,-
(2) ಅರ್ಜಿಯು ಕ್ರಮಬದ್ಧವಾಗಿರುವಲ್ಲಿ, ಸಿನಿಮಾ ಪ್ರದರ್ಶನಗಳನ್ನು ಪ್ರದರ್ಶಿಸಲು ಉದ್ದೇಶಿಸಿದ ಅಥವಾ ಸಂದರ್ಭಾನುಸಾರ ಅವರ ಪ್ರಮಾಣಪತ್ರಕ್ಕಾಗಿ ಅಥವಾ ವರದಿಗಳಿಗಾಗಿ ಒಯ್ಯುವ ಪ್ರದೇಶದಲ್ಲಿ ಈ ಕೆಳಗೆ! ಅಧಿಕಾರವ್ಯಾಪ್ತಿ ಹೊಂದಿರುವ ಗೊತ್ತುಪಡಿಸಿದ ಪ್ರಾಧಿಕಾರಿಗಳಿಗೆ ಅಂತಹ ಅರ್ಜಿಯ ಪ್ರತಿಗಳನ್ನು ಅದನ್ನು ಸ್ವೀಕರಿಸಿದ ದಿನಾಂಕದಿಂದ ಏಳು ದಿನಗಳೊಳಗಾಗಿ ಕಳುಹಿಸತಕ್ಕದ್ದು.
(i) ಬೆಂಗಳೂರು ನಗರದ ಸಂದರ್ಭದಲ್ಲಿ ಪೊಲೀಸ್ ಆಯುಕ್ತರು;
(ii) ನಗರ ಪೊಲೀಸ್ ಆಯುಕ್ತರು;
(iii) ಜಿಲ್ಲೆಯ ಸಂದರ್ಭದಲ್ಲಿ ಪೊಲೀಸ್ ಸೂಪರಿಂಟೆಂಡೆಂಟ್;
(iv) ಜಿಲ್ಲಾ ಕಾರ್ಯನಿರ್ವಾಹಕ ಅಭಿಯಂತರರು, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ;
(v) ಜಿಲ್ಲಾ ವಿದ್ಯುಚ್ಛಕ್ತಿ ಪರಿಶೀಲಕನು.
(vi) ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು;
(vii) ಬೆಂಗಳೂರು ನಗರದ ಸಂದರ್ಭದಲ್ಲಿ ಬಿಬಿಎಂಪಿ ಯಲ್ಲಿನ ಆರೋಗ್ಯಾಧಿಕಾರಿಗಳು;
(viii) ಬೆಂಗಳೂರು ನಗರದ ಸಂದರ್ಭದಲ್ಲಿ ವಿದ್ಯುಚ್ಛಕ್ತಿ ಪರಿಶೀಲನಾಲಯದ ವಿದ್ಯುಚ್ಛಕ್ತಿ ಪರಿಶೀಲಕನು.
(ix) ಬೆಂಗಳೂರು ನಗರದ ಸಂದರ್ಭದಲ್ಲಿ ಮುಖ್ಯ ಅಗ್ನಿಶಾಮಕಾಧಿಕಾರಿ;
(x) ಜಿಲ್ಲಾ ಅಗ್ನಿ ಶಾಮಕಾಧಿಕಾರಿ;
(xi) ಆ ಪ್ರದೇಶಗಳಲ್ಲಿ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಸ್ಥಳೀಯ ಪ್ರಾಧಿಕಾರಿ.
(ಬಿ). ಅರ್ಜಿಯು ಕ್ರಮಬದ್ಧವಾಗಿ ಇರದಿದ್ದರೇ, ಅರ್ಜಿಯನ್ನು ಸಲ್ಲಿಸಿದ ಹದಿನೈದು ದಿನಗಳ ಅವಧಿಯೊಳಗೆ ಅದನ್ನು ಹಿಂದಿರುಗಿಸಬಹುದು. ಇಲ್ಲದಿದ್ದರೆ, ಅರ್ಜಿಯನ್ನು ಅಂಗೀಕರಿಸಲಾಗಿದೆಯೆಂದು ಭಾವಿಸತಕ್ಕದ್ದು.
(2) ಮೇಲೆ ನಿರ್ದಿಷ್ಟಪಡಿಸಲಾದ ಪ್ರಾಧಿಕಾರಿಗಳು (1)ನೇ ಉಪನಿಯಮದ ಮೇರೆಗೆ ಅರ್ಜಿಗಳನ್ನು ಸ್ವೀಕರಿಸಿದ ತರುವಾಯ ಮತ್ತು ಸಂದರ್ಭಾನುಸಾರ ಪ್ರಮಾಣಪತ್ರ ಅಥವಾ ವರದಿಯನ್ನು ಕಳುಹಿಸುವ ಮುಂಚಿತವಾಗಿ, ಪ್ರಸ್ತಾವಿತ ಸಿನಿಮಾಗಳ ಪ್ರದರ್ಶನದ ಸಂಬಂಧದಲ್ಲಿ,-
(1) . ಲೈಸೆನ್ಸ್ ಕೋರಿರುವ ಸ್ಥಳದಲ್ಲಿ ಸಿನಿಮಾಗಳ ಪ್ರದರ್ಶನವು ಅಗತ್ಯವಾಗಿದೆಯೇ;
(ii) ಸಿನಿಮಾಗಳ ಪ್ರದರ್ಶನವು, ಸಾರ್ವಜನಿಕ ಸಂರಕ್ಷಣೆ, ಕಾನೂನು ಮತ್ತು ಸುವ್ಯವಸ್ಥೆ, ಸಾರ್ವಜನಿಕ ಶಾಂತಿ ಮತ್ತು ಘನತೆಗೆ ಅಪಾಯವುಂಟು ಮಾಡಿಲ್ಲ;
(iii) ಸಿನಿಮಾಗಳ ಪ್ರದರ್ಶನಕ್ಕಾಗಿ ಕಟ್ಟಡ ಮತ್ತು ವಿದ್ಯುಚ್ಛಕ್ತಿ ಸ್ಥಾಪನೆಗಳು, ಸಾಕಷ್ಟು ಮತ್ತು ಸುಸ್ಥಿತಿಯಲ್ಲಿವೆಯೇ;
(iv) ನೈರ್ಮಲ್ಯ, ವಾಯಸಂಚಾರ ಮತ್ತು ದೀಪದ ಬಗ್ಗೆ ಸಾಕಷ್ಟು ವ್ಯವಸ್ಥೆಗಳನ್ನು ಮಾಡಲಾಗಿದೆಯೇ;
(v) ಅಗ್ನಿ ನಂದಿಸುವ ಉಪಕರಣಗಳನ್ನು ಅಳವಡಿಸಲು ಅವಶ್ಯಕ ಮುಂಜಾಗರೂಕತೆಯನ್ನು ಮಾಡಲಾಗಿದೆಯೇ ಮತ್ತು ಅವುಗಳಿಗಾಗಿ ವ್ಯವಸ್ಥೆಗೊಳಿಸಲಾಗಿದೆಯೇ;
(vi) ಸಿನಿಮೋಟೋಗ್ರಫಿ ಅಧಿನಿಯಮ ಮತ್ತು ನಿಯಮಗಳ ಜಾರಿಯಲ್ಲಿರುವ ಉಪಬಂಧಗಳನ್ನು ಪಾಲಿಸಲಾಗಿದೆ; ಮತ್ತು (॥) ಲೆ ಸೆನ್ಸನ್ನು ಮಂಜೂರು ಮಾಡುವುದಕ್ಕೆ ಯಾವುದೇ ಆಕ್ಷೇಪಣೆ ಇಲ್ಲವೆಂಬುದನ್ನು - ತಾವಾಗಿಯೇ ಮನದಟ್ಟು ಮಾಡಿಕೊಳ್ಳತಕ್ಕದ್ದು.
(viii) ಪ್ರಾಧಿಕಾರಗಳು, (1)ನೇ ಉಪನಿಯಮದ ಮೇರೆಗೆ ಅರ್ಜಿಯ ಪ್ರತಿಗಳನ್ನು ಸ್ವೀಕರಿಸಿದ ದಿನಾಂಕದಿಂದ ಹದಿನೈದು ದಿನಗಳೊಳಗಾಗಿ ಲೈಸೆನ್ಸು ನೀಡುವ ಪ್ರಾಧಿಕಾರಿಗೆ ಪ್ರಮಾಣಪತ್ರಗಳು ಅಥವಾ ವರದಿಗಳನ್ನು ಕಳುಹಿಸತಕ್ಕದ್ದು, ಅಂತಹ ಪ್ರಮಾಣಪತ್ರ ಅಥವಾ ವರದಿಯನ್ನು, ಈ ಹಿಂದೆ ಹೇಳಿದ ಅವಧಿಯೊಳಗೆ ಲೈಸೆನ್ಸ್ ನೀಡುವ. ಪ್ರಾಧಿಕಾರಿಯು. ಸ್ವೀಕರಿಸದಿದ್ದರೆ, . ಲೈಸೆನ್ಸು. ಮಂಜೂರು. ಮಾಡಲು. ಯಾವುದೇ ಆಕ್ಷೇಪಣೆಗಳಿಲ್ಲವೆಂಬುದಾಗಿ ಪೂರ್ವಭಾವನೆ ಮಾಡತಕ್ಕದ್ದು.
(3) (2)ನೇ ಉಪನಿಯಮದ ಮೇರೆಗೆ ನೀಡಲಾದ ಪ್ರಮಾಣಪತ್ರವು, ಅದನ್ನು ಕೊಟ್ಟ ದಿನಾಂಕದಿಂದ ಮೂರು ತಿಂಗಳ ಅವಧಿಯವರೆಗೆ ಸಿಂಧುವಾಗಿರತಕ್ಕದ್ದು.
(4) ಲೈಸೆನ್ಸ್ ನೀಡುವ ಪ್ರಾಧಿಕಾರಿಯು, ಈ ಮುಂದಿನ ವಿಷಯಗಳಿಗೆ ಸಂಬಂಧಪಟ್ಟಂತೆ, ಎಂದರೆ,-
(i) ಸಾಮಾನ್ಯವಾಗಿ ಸಾರ್ವಜನಿಕರ ಹಿತಾಸಕ್ತಿಯಿಂದ;
(ii) ಅರ್ಜಿದಾರನ ಸ್ಥಿತಿಗತಿ, ಈ ಮೊದಲಿನ ಮತ್ತು ಹಿಂದಿನ ಅನುಭವದಿಂದ ಸಿನಿಮಾಗಳ ಪ್ರದರ್ಶನಕ್ಕಾಗಿ ಲೈಸೆನ್ಸನ್ನು ಮಂಜೂರು ಮಾಡುವುದಕ್ಕಾಗಲೀ ಅಥವಾ ನಿರಾಕರಿಸುವುದಕ್ಕಾಗಲಿ - ತೀರ್ಮಾನ ತೆಗೆದುಕೊಳ್ಳತಕ್ಕದ್ದು.
(5) ಲೈಸೆನ್ಸ್ಗಾಗಿ ಅರ್ಜಿಯನ್ನು ಸ್ವೀಕರಿಸಿದ ತರುವಾಯ, ಲೈಸೆನ್ಸ್ ನೀಡುವ ಪ್ರಾಧಿಕಾರಿಯು, ಸಂಬಂಧಪಟ್ಟ ಇಲಾಖೆಗಳಿಗೆ ಅವುಗಳನ್ನು ಕೂಡಲೇ ಕಳುಹಿಸತಕ್ಕದ್ದು. ಲೈಸೆನ್ಸ್ ನೀಡುವ ಪ್ರಾಧಿಕಾರಿಗೆ ಹದಿನೈದು ದಿನಗಳು ಮೀರದಂಥ ಅವಧಿಯೊಳಗಾಗಿ ಸಾಧ್ಯವಾಗಬಹುದಾದಷ್ಟು ಬೇಗನೆ ಅವರ ಅಭಿಪ್ರಾಯ ಅಥವಾ ಸ್ಪಷ್ಟೀಕರಣವನ್ನು ನೀಡತಕ್ಕದ್ದು. ಲೈಸೆನ್ಸ್ ನೀಡುವ ಪ್ರಾಧಿಕಾರಿಯು ಸದರಿ ಇಲಾಖೆಗಳೊಂದಿಗೆ ಆ ಬಗ್ಗೆ ಸಮಾಲೋಚನೆ ನಡೆಸತಕ್ಕದ್ದು ಮತ್ತು ಅರ್ಜಿಯ ದಿನಾಂಕದಿಂದ ಮೂವತ್ತು ದಿನಗಳೊಳಗೆ ನಿರಾಷೇಕ್ಷಣಾ ಪ್ರಮಾಣಪತ್ರದ ಮಂಜೂರಾತಿಗಾಗಿ ಅರ್ಜಿಯನ್ನು ಪರಿಗಣಿಸತಕ್ಕದ್ದು ಅಥವಾ ಮೂವತ್ತು ದಿನಗಳು ಗೊತ್ತುಪಡಿಸಲಾದ ಅವಧಿಯೊಳಗೆ, ಲಿಖಿತದಲ್ಲಿ ದಾಖಲು ಮಾಡಬೇಕಾದ ಕಾರಣಗಳಿಗಾಗಿ ಅಂತಹ ಲೈಸೆನ್ಸನ್ನು ನೀಡಲು ನಿರಾಕರಿಸತಕ್ಕದ್ದು.
(6) ಲೈಸೆನ್ಸು ನೀಡುವ ಪ್ರಾಧಿಕಾರಿಯು,-
(i) ಈ ನಿಯಮಗಳನ್ನು ಬಹುಮಟ್ಟಿಗೆ ಪಾಲಿಸಲಾಗಿದೆಯೆಂದು; ಮತ್ತು
(ii) ಸಿನಿಮಾ ವೀಕ್ಷಣೆಗಾಗಿ ಬರುವ ವ್ಯಕ್ತಿಗಳ ಸುರಕ್ಷತೆ, ಅನುಕೂಲತೆ ಮತ್ತು ಸೌಕರ್ಯದ ಮತ್ತು ಸಾರ್ವಜನಿಕ ಹಿತಾಸಕ್ತಿ ಮತ್ತು ಸ್ವಚ್ಛತೆಯ ಸಂಬಂಧದಲ್ಲಿ ಆ ಸ್ಥಳದಲ್ಲಿ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಎಂಬುದನ್ನು ಮನದಟ್ಟು ಮಾಡಿಕೊಂಡ ಹೊರತು - ಈ ನಿಯಮಗಳ ಮೇರೆಗೆ ಲೈಸೆನ್ಸನ್ನು ಮಂಜೂರು ಮಾಡತಕ್ಕದ್ದಲ್ಲ.
(7) ಅಧಿನಿಯಮ ಮತ್ತು ನಿಯಮಗಳ ಮೇರೆಗೆ ರಚಿತವಾದ ಉಪಬಂಧಗಳಿಗೊಳಪಟ್ಟು, (2)ನೇ ಉಪನಿಯಮದ ಮೇರೆಗೆ ಪ್ರಮಾಣಪತ್ರವನ್ನು ಸ್ವೀಕರಿಸಿದ ದಿನಾಂಕದಿಂದ ಹದಿನೈದು ದಿವಸಗಳೊಳಗೆ ಲೈಸೆನ್ಸ್ ನೀಡುವ ಪ್ರಾಧಿಕಾರಿಯು, ಅಂತಹ ನಿಬಂಧನೆಗಳು ಮತ್ತು ಷರತ್ತುಗಳ ಮೇಲೆ ಮತ್ತು ನಿರ್ಧರಿಸಿರಬಹುದಾದಂಥ ಪರಿಬಂಧಗಳಿಗೆ ಒಳಪಟ್ಟು ನಮೂನೆ-ಜಿ ಯಲ್ಲಿ ಅರ್ಜಿದಾರನಿಗೆ ಲೈಸೆನ್ಸನ್ನು ಮಂಜೂರು ಮಾಡಬಹುದು.
(8) ಲೈಸೆನ್ಸ್ ನೀಡುವ ಪ್ರಾಧಿಕಾರಿಯು ಯಾವುದೇ ಲೈಸೆನ್ಸನ್ನು ಮಂಜೂರು ಮಾಡಲು ನಿರಾಕರಿಸಿದಾಗ, ಅಂತಹ ನಿರಾಕರಣೆಗಾಗಿ ಕಾರಣಗಳನ್ನು ಅರ್ಜಿದಾರನಿಗೆ ಬರಹದಲ್ಲಿ ನೀಡುವ ಮೂಲಕ ಆದೇಶವನ್ನು ತಿಳಿಸುವುದರಿಂದ ಹಾಗೆ ಮಾಡತಕ್ಕದ್ದು.
(9) ಈ ನಿಯಮಗಳ ಮೇರೆಗೆ ಲೈಸೆನ್ಸನ್ನು ಮಂಜೂರು ಮಾಡಲಾದ ಲೈಸೆನ್ಸು, ಆ ಲೈಸೆನ್ಸನ್ನು ಕೊಟ್ಟ ದಿನಾಂಕದಿಂದ ಮೂರು ತಿಂಗಳುಗಳ ಅವಧಿಯವರೆಗೆ ಸಿಂಧುವಾಗಿರತಕ್ಕದ್ದು.
(1) ಸಂಚಾರಿ ಸಿನಿಮಾದಲ್ಲಿ ಚಲನಚಿತ್ರಗಳ ಪ್ರದರ್ಶನಕ್ಕಾಗಿ ಲೈಸೆನ್ಸನ್ನು ಮಂಜೂರು ಮಾಡುವುದಕ್ಕಾಗಿ ಪ್ರತಿಯೊಂದು ಅರ್ಜಿಯನ್ನು ನಮೂನೆ ‘a-1’ ರಲ್ಲಿ ಲೈಸೆನ್ಸ್ ನೀಡುವ ಪ್ರಾಧಿಕಾರಿಗಳಿಗೆ ಒಂಭತ್ತು ಸೆಟ್ಗಳಲ್ಲಿ ಸಲ್ಲಿಸತಕ್ಕದ್ದು.
(2) (1)ನೇ ಉಪನಿಯಮದ ಮೇರೆಗೆ ನಿಗದಿಪಡಿಸಲಾದ ಶುಲ್ಕವನ್ನು ಸಂದಾಯ ಮಾಡಿದ್ದಕ್ಕಾಗಿ ಖಜಾನೆ ಚಲನ್ದೊಂದಿಗೆ ಅರ್ಜಿಯನ್ನು ಲಗತ್ತಿಸತಕ್ಕದ್ದು.
(3) (2)8e ಉಪನಿಯಮದ ಮೇರೆಗೆ ಲೈಸೆನ್ಸ್ನ್ನು ಮಂಜೂರು ಮಾಡುವುದಕ್ಕಾಗಿ ಫೀಜು ಸರ್ಕಾರವು ಕಾಲಕಾಲಕ್ಕೆ ನಿಗದಿಪಡಿಸಿದಂತಿರತಕ್ಕದ್ದು.
(4) ಲೈಸೆನ್ಸನ್ನು ನೀಡುವ ಪ್ರಾಧಿಕಾರವು ಅದರ ಅರ್ಜಿಯನ್ನು ಸ್ವೀಕರಿಸಿದ ತರುವಾಯ ಯಾವುದೇ ಜಾತ್ರೆ, ಮೇಳ ಅಥವಾ ಇತರ ಅದೇ ರೀತಿಯ ಸಂದರ್ಭಗಳಿಗೆ ಸಂಬಂಧಪಟ್ಟಂತೆ ಸಂಚಾರಿ ಸಿನಿಮಾಗಳನ್ನು ನಡೆಸುವ ಲೈಸೆನ್ಸನ್ನು, ಅದು ಮಂಜೂರು ಮಾಡಬಹುದು. ಅದು ಸೂಕ್ತವೆಂದು ಭಾವಿಸುವಂಥ ವಿಚಾರಣೆಯನ್ನು ನಡೆಸಿದ ತರುವಾಯ ನಿವೇಶನವು ಸಂಚಾರಿ ಸಿನಿಮಾಗೆ ಸೂಕ್ತವೆಂದು ಮತ್ತು 90ನೇ ನಿಯಮದ (2)ನೇ ಉಪ ನಿಯಮದ ಅಗತ್ಯತೆಗಳಿಗೆ ಅದು ಅನುರೂಪವಾಗಿರುವುದೆಂದು ತನಗೆ ಮನದಟ್ಟಾದರೆ, ಮೂರು ತಿಂಗಳು ಮೀರದ ಅವಧಿಯವರೆಗೆ ಜಾತ್ರೆ, ಮೇಳ ಅಥವಾ ಇತರ ಅದೇ ರೀತಿಯ ಸಂದರ್ಭಗಳ ಅವಧಿಗೆ ಸಂಚಾರಿ ಸಿನಿಮಾ ನಡೆಸುವುದಕ್ಕೆ ಲೈಸೆನ್ನನ್ನು ಮಂಜೂರು ಮಾಡಬಹುದು.
ಈ ನಿಯಮಗಳ ಮೇರೆಗೆ ಲೈಸೆನ್ಸ್ ಪಡೆದ ಯಾರೇ ವ್ಯಕ್ತಿಯು, ಚಲನಚಿತ್ರ ಅಧಿನಿಯಮ, 1952 (1952ರ ಕೇಂದ್ರ ಅಧಿನಿಯಮ, :006/1)ರ 3ನೇ ಪ್ರಕರಣದ ಮೇರೆಗೆ ನೇಮಕಗೊಂಡ ಪ್ರಾಧಿಕಾರಿಯು. ಸಾರ್ವಜನಿಕ ವೀಕ್ಷಣೆಗಾಗಿ ಯೋಗ್ಯವೆಂದು ಪ್ರಮಾಣೀಕರಿಸಿದಂಥ ಸಿನಿಮಾವನ್ನು ಹೊರತುಪಡಿಸಿ, ಆ ಪ್ರಾಧಿಕಾರಿಯು ಪ್ರದರ್ಶನ ಗೊತ್ತುಪಡಿಸಿದ ಗುರುತನ್ನು ಹೊಂದಿರುವ, ಯಾವುದೇ ಸಿನಿಮಾವನ್ನು ಪ್ರದರ್ಶಿಸಬೇಕೆಂದು ಪ್ರದರ್ಶಿಸತಕ್ಕದ್ದಲ್ಲ ಅಥವಾ ಅನುಮತಿಸತಕ್ಕದ್ದಲ್ಲ. 94. ಕಟ್ಟಡದ ಬಗ್ಗೆ ಷರತ್ತುಗಳು. (1) ಕಟ್ಟಡದ ಎಲ್ಲಾ ಕಡೆಗಳಲ್ಲಿ ಖಾಲಿ ಜಾಗವನ್ನು ಒದಗಿಸತಕ್ಕದ್ದು. ಅದರ ಯಾವುದೇ ಭಾಗವು ಅಗಲದಲ್ಲಿ ಹತ್ತು ಮೀಟರುಗಳಿಗಿಂತ ಕಡಿಮೆಯಿರತಕ್ಕದ್ದಲ್ಲ. (2) ಯಾವ ಮುಖ್ಯ ರಸ್ತೆಯಲ್ಲಿ ಅಂತಹ ಕಟ್ಟಡದ ನಿವೇಶನವು ಹೊಂದಿಕೊಂಡಿರುವುದೋ ಆ ಸಾರ್ವಜನಿಕ ಮುಖ್ಯ ರಸ್ತೆಯಲ್ಲಿ ಕಟ್ಟಡವು ರಸ್ತೆ ಮುಂಭಾಗವನ್ನು ಹೊಂದಿರತಕ್ಕದ್ದು.
(3) ಅಂತಹ ಮುಂಭಾಗದಲ್ಲಿ ಸಾರ್ವಜನಿಕರಿಗಾಗಿ ಪ್ರವೇಶ ಹಾಗೂ ನಿರ್ಗಮನದ ಸೂಕ್ತ ಸಾಧನಗಳು ಇರತಕ್ಕದ್ದು.
ಲೈಸೆನ್ಸ್ದಾರನು, 54ನೇ ನಿಯಮದಲ್ಲಿನ ಪ್ರಮಾಣಕ್ಕನುಸಾರವಾಗಿ ಪ್ರತಿಯೊಬ್ಬ ಪುರುಷ, ಮಹಿಳೆ ಮತ್ತು ಮಕ್ಕಳು, ತೃತೀಯ ಲಿಂಗ (ಮಂಗಳಮುಖಿ) ಮತ್ತು ವಿಕಲಚೇತನ ವ್ಯಕ್ತಿಗಳ ಪ್ರತ್ಯೇಕ ಉಪಯೋಗಕ್ಕಾಗಿ ಲೈಸೆನ್ಸ್ ನೀಡುವ ಪ್ರಾಧಿಕಾರಿಯು ನಿರ್ದಿಷ್ಟಪಡಿಸಬಹುದಾದಂಥ ನೈರ್ಮಲ್ಯ ಅನುಕೂಲತೆಗಳನ್ನು ಒದಗಿಸತಕ್ಕದ್ದು ಮತ್ತು ಅವುಗಳನ್ನು ಉತ್ತಮ ನೈರ್ಮಲ್ಯ ಸ್ಥಿತಿಯಲ್ಲಿ ಇಟ್ಟುಕೊಂಡು ಬರುವಂತೆ ಮಾಡತಕ್ಕದ್ದು.
ದಹ್ಯ ಸಾಮಗ್ರಿಗಳಿಂದ ನಿರ್ಮಿಸಿದ ಪ್ರತಿಯೊಂದು ಕಟ್ಟಡದಲ್ಲಿ, ಪ್ರತಿಯೊಂದು ಭಾಗದಲ್ಲಿ ಕನಿಷ್ಠ ಪಕ್ಷ ಎರಡು ಮೀಟರು ಎತ್ತರ ಹಾಗೂ ಐದೂವರೆ ಮೀಟರುಗಳ ಅಗಲ ಕಿಟಕಿ ಇರತಕ್ಕದ್ದು. ಈ ಕಿಟಕಿಯನ್ನು ಸೀಳಿದ ಬಿದಿರಿನ ಚೌಕಟ್ಟಿನ ಮೇಲೆ ಜೋಡಿಸಿದ ಮತ್ತು ಒಳಗಡೆ ಟ್ವೈನ್ದಾರದಿಂದ ಬಲವಾಗಿ ಕಟ್ಟಿದ ಹಗ್ಗ(ತಟ್ಟಿ)ಗಳಿಂದ ಮುಚ್ಚಬಹುದು:
ಪರಂತು, ಲೈಸೆನ್ಸ್ ನೀಡುವ ಪ್ರಾಧಿಕಾರಿಯು ಕಟ್ಟಡವನ್ನು ಯಾವುದೇ ಸಾಮಗ್ರಿಗಳಿಂದ ಸಂಪೂರ್ಣವಾಗಿ ಅಥವಾ ಭಾಗಶಃವಾಗಿ ನಿರ್ಮಿಸಲಾಗಿದೆಯೆಂದು ಹಾಗೂ ಕಟ್ಟಡವು ಸಾರ್ವಜನಿಕರಿಗೆ ಅಪಾಯದ ಮೂಲವಾಗಿ ಹಾಗೆ ದಹ್ಯವಾಗುವುದೆಂದು ಅಥವಾ ಅನ್ಯಥಾ ಯಾವುದೇ ಇತರ ಹತ್ತಿರದಲ್ಲಿನ ಕಟ್ಟಡಕ್ಕೆ ಅಪಾಯಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟಿರುವಲ್ಲಿ ಲೈಸೆನ್ಸನ್ನು ಮಂಜೂರು ಮಾಡತಕ್ಕದ್ದಲ್ಲ.
97... ಸಭಾಂಗಣದಲ್ಲಿ ಸ್ಥಳಾವಕಾಶ. (1) ಸಿನಿಮಾಕ್ಕಾಗಿ, ಈ ನಿಯಮಗಳು ಪ್ರಾರಂಭವಾಗುವ ದಿನಾಂಕಕ್ಕೆ ಮುಂಚಿತವಾಗಿ ಸಂಚಾರಿ ಸಿನಿಮಾ ಇರುವಲ್ಲಿ, ಸಭಾಂಗಣದಲ್ಲಿ ಪ್ರತಿ ಹತ್ತು ಚದರ ಮೀಟರುಗಳಿಗೆ ಇಪ್ಪತ್ತು ವ್ಯಕ್ತಿಗಳಿಗಿಂತ ಹೆಚ್ಚು ವ್ಯಕ್ತಿಗಳಿಗೆ ಸ್ಥಳಾವಕಾಶ ಮಾಡಿಕೊಡಲು ಸಂಚಾರಿ ಸಿನಿಮಾ ಥಿಯೇಟರಿಗೆ, ಲೈಸೆನ್ಸು ನೀಡತಕ್ಕದ್ದಲ್ಲ:
ಪರಂತು, ಪ್ರವೇಶ ದ್ವಾರಗಳು, ನಡೆವೆಗಳು, ಅಂತಸ್ತುಗಳು ಮೊದಲಾದವುಗಳಿಂದ ಆಕ್ರಮಿತ ಪ್ರದೇಶಗಳಂಥವುಗಳನ್ನು ಹೊರತುಪಡಿಸಿ ಮಾಡಿದ ತರುವಾಯದ ಆಸನಕ್ಕಾಗಿ ಪ್ರತಿಯೊಬ್ಬ ವ್ಯಕ್ತಿಗೆ 0.5 ಚದರ ಮೀಟರುಗಳ ಸ್ಥಳಾವಕಾಶವನ್ನು ಒದಗಿಸಲಾಗಿರುವಲ್ಲಿ, ತದನುಸಾರವಾಗಿ, ಲೈಸೆನ್ಸು ನೀಡುವ ಪ್ರಾಧಿಕಾರಿಯು ಸಭಾಂಗಣದಲ್ಲಿ ಪ್ರವೇಶಿಸಬೇಕಾದ ವ್ಯಕ್ತಿಗಳ ಸಂಖ್ಯೆಯನ್ನು ನಿರ್ದಿಷ್ಟಪಡಿಸತಕ್ಕದ್ದು.
(2) ಈ ನಿಯಮಗಳ ಪ್ರಾರಂಭದ ದಿನಾಂಕದಂದು ಮತ್ತು ನಂತರ ಉದ್ದೇಶಿತ ಸಂಚಾರಿ ಸಿನಿಮಾಕ್ಕಾಗಿ ಸಭಾಂಗಣದಲ್ಲಿ ಪ್ರತಿ ಹನ್ನೆರಡು ಚದರ ಮೀಟದ್ಗಳಿಗೆ ಇಪ್ಪತ್ತು ವ್ಯಕ್ತಿಗಳಿಗಿಂತ ಹೆಚ್ಚು ವ್ಯಕ್ತಿಗಳಿಗೆ ಸ್ಥಳಾವಾಕಾಶ ಮಾಡಿಕೊಡಲು ಸಿನಿಮಾ ಥಿಯೇಟರು ಅಥವಾ ಮಲ್ಟಿಷ್ಣೆಕ್ಸ್ಗೆ ಲೈಸೆನ್ಸನ್ನು ನೀಡತಕ್ಕದ್ದಲ್ಲ:
ಪರಂತು, ಪ್ರವೇಶ ದ್ವಾರಗಳು, ನಡೆವೆಗಳು, ಅಂತಸ್ತುಗಳು ಮೊದಲಾದವುಗಳಿಂದ ಆಕ್ರಮಿತ ಪ್ರದೇಶಗಳಂಥವುಗಳನ್ನು ಹೊರತುಪಡಿಸಿ ಮಾಡಿದ ತರುವಾಯದ ಆಸನಕ್ಕಾಗಿ ಪ್ರತಿಯೊಬ್ಬ ವ್ಯಕ್ತಿಗೆ 0.6 ಚದರ ಮೀಟರುಗಳ ಸ್ಥಳಾವಕಾಶವನ್ನು ಒದಗಿಸಲಾಗಿರುವಲ್ಲಿ, ತದನುಸಾರವಾಗಿ, ಲೈಸೆನ್ಸ್ ನೀಡುವ ಪ್ರಾಧಿಕಾರಿಯು ಸಭಾಂಗಣದಲ್ಲಿ ಪ್ರವೇಶಿಸಬೇಕಾದ ವ್ಯಕ್ತಿಗಳ ಸಂಖ್ಯೆಯನ್ನು ನಿರ್ದಿಷ್ಟಪಡಿಸತಕ್ಕದ್ದು.
(1) ಸಂಭವಿಸಬಹುದಾದಂಥ ಮತ್ತು ಲೈಸೆನ್ಸು ನೀಡುವ ಪ್ರಾಧಿಕಾರಿಯು ನಿರ್ದಿಷ್ಟಪಡಿಸಬಹುದಾದಂಥ ಅಗ್ನಿಯನ್ನು ತಡೆಗಟ್ಟುವುದಕ್ಕಾಗಿ ಮತ್ತು ನಂದಿಸುವುದಕ್ಕಾಗಿ ಸಾಕಷ್ಟು ವ್ಯವಸ್ಥೆಯನ್ನು ಮಾಡತಕ್ಕದ್ದು. ಆ ಪ್ರದೇಶದ ಪ್ರತಿ ಹತ್ತು ಚದರ ಮೀಟರುಗಳಿಗೆ ಐವತ್ತು ಲೀಟರುಗಳಿಗಿಂತ ಕಡಿಮೆಯಿಲ್ಲದಂತೆ ನೀರನ್ನು ಪೂರೈಸಲು, 74ನೇ ನಿಯಮದ (1)ನೇ ಉಪ ನಿಯಮದಲ್ಲಿ ವಿವರಿಸಿದಂಥಹುದೇ ಆದ ಬಕೆಟುಗಳಲ್ಲಿ ಸಿದ್ಧಪಡಿಸಿ ಅರ್ಧವನ್ನು ಆ ಕಟ್ಟಡದೊಳಗಡೆ ಮತ್ತು ಇನ್ನೊಂದು ಅರ್ಧವನ್ನು ಅದರ ಹೊರಗಡೆ ದಾಸ್ತಾನು ಮಾಡಿಟ್ಟಿರತಕ್ಕದ್ದು.
(2) ಅಗ್ನಿ ಪ್ರತಿಬಂಧ, ಅಗ್ನಿಶಾಮಕ ಮತ್ತು ಅಗ್ನಿ ನಂದಿಸುವ ಕ್ರಮಗಳನ್ನು, ಅರ್ಧವನ್ನು ಕಟ್ಟಡದೊಳಗಡೆ ಮತ್ತು ಇನ್ನೊಂದು ಅರ್ಧವನ್ನು ಅದರ ಹೊರಗಡೆ, 75ನೇ ನಿಯಮದ (1)ನೇ ಉಪ-ನಿಯಮದಲ್ಲಿ ಸೂಚಿಸಲಾದಂತೆ ಅಳವಡಿಸತಕ್ಕದ್ದು.
(1) ಸಂಚಾರಿ ಸಿನಿಮಾಗಾಗಿ ಯಾವುದೇ ಲೈಸೆನ್ಸನ್ನು, ಖಾಯಂ ಸಿನಿಮಾ ಅಥವಾ ಮಲ್ಪಿಪ್ಲೇಕ್ಸ್ನಿಂದ 1.6 ಕಿಲೋ ಮೀಟರುಗಳ ದೂರದೊಳಗೆ ಅಥವಾ ಇನ್ನೊಂದು ಸಂಚಾರಿ ಸಿನಿಮಾದಿಂದ 800 ಮೀಟರುಗಳ ದೂರದೊಳಗೆ ಇರುವ ನಿವೇಶನಕ್ಕೆ ಸಂಬಂಧಿಸಿದಂತೆ ಮಂಜೂರು ಮಾಡತಕ್ಕದ್ದಲ್ಲ:
ವಿವರಣೆ.- ಈ ನಿಯಮದ ಉದ್ದೇಶಗಳಿಗಾಗಿ ಎರಡು ಸಿನಿಮಾಗಳನ್ನು ಸಂಪರ್ಕಿಸುವ ಮತ್ತು ಸಾರ್ವಜನಿಕ ಸದಸ್ಯರುಗಳಿಂದ ಸಾಮಾನ್ಯವಾಗಿ ಉಪಯೋಗಿಸುವ ಅತಿ ಸಮೀಪದ ದಾರಿ, ಓಣಿ, ಬೀದಿ ಅಥವಾ ರಸ್ತೆಗುಂಟ “ದೂರ” ವನ್ನು ಪರಿಗಣಿಸತಕ್ಕದ್ದು.
(1) ಈ ನಿಯಮಗಳು ಪ್ರಾರಂಭವಾಗುವ ದಿನಾಂಕಕ್ಕೂ ಮುಂಚೆ ಅಸ್ತಿತ್ವದಲ್ಲಿರುವ ಸಂಚಾರಿ ಸಿನಿಮಾಗಳಿಗಾಗಿ, ಸಭಾಂಗಣದಲ್ಲಿ ಪ್ರತಿ ಹತ್ತು ಚದರ ಮೀಟರುಗಳಿಗೆ ಇಪ್ಪತ್ತು ವ್ಯಕ್ತಿಗಳಿಗಿಂತ ಹೆಚ್ಚು ವ್ಯಕ್ತಿಗಳಿಗೆ ಸ್ಥಳಾವಕಾಶ ಮಾಡಿಕೊಡಲು ಸಿನಿಮಾ ಥಿಯೇಟರು ಅಥವಾ ಮಲ್ಟಿಷ್ಲೆಕ್ಸ್ಗೆ ಲೈಸೆನ್ಸನ್ನು ನೀಡತಕ್ಕದ್ದಲ್ಲ:
ಪರಂತು, ಪ್ರವೇಶ ದ್ವಾರಗಳು, ನಡೆವೆಗಳು, ಅಂತಸ್ತುಗಳು. ಮೊದಲಾದವುಗಳಿಂದ ಆಕ್ರಮಿತ ಪ್ರದೇಶಗಳಂಥವುಗಳನ್ನು ಹೊರತುಪಡಿಸಿ ಮಾಡಿದ ತರುವಾಯದ ಆಸನಕ್ಕಾಗಿ ಪ್ರತಿಯೊಬ್ಬ ವ್ಯಕ್ತಿಗೆ 0.5 ಚದರ ಮೀಟರುಗಳ ಸ್ಥಳಾವಕಾಶವನ್ನು ಒದಗಿಸಲಾಗಿರುವಲ್ಲಿ, ತದನುಸಾರವಾಗಿ, ಲೈಸೆನ್ಸ್ . ನೀಡುವ ಪ್ರಾಧಿಕಾರಿಯು. ಸಭಾಂಗಣದಲ್ಲಿ ಪ್ರವೇಶಿಸಬೇಕಾದ ವ್ಯಕ್ತಿಗಳ ಸಂಖ್ಯೆಯನ್ನು ನಿರ್ದಿಷ್ಟಪಡಿಸತಕ್ಕದ್ದು.
(2) ಈ ನಿಯಮಗಳನ್ನು ಪ್ರಾರಂಭಿಸಲಾದ ದಿನಾಂಕದಂದು ಮತ್ತು ನಂತರ ಉದ್ದೇಶಿತ ಸಂಚಾರಿ ಸಿನಿಮಾಕ್ಕಾಗಿ, ಸಭಾಂಗಣದಲ್ಲಿ ಪ್ರತಿ ಹನ್ನೆರಡು ಚದರ ಮೀಟಗ್ಗಳಿಗೆ ಇಪ್ಪತ್ತು ವ್ಯಕ್ತಿಗಳಿಗಿಂತ ಹೆಚ್ಚು ವ್ಯಕ್ತಿಗಳ ಸ್ಥಳಾವಾಕಾಶಕ್ಕೆ ಸಿನಿಮಾ ಥಿಯೇಟರು ಅಥವಾ ಮಲ್ಟಿಷ್ಣೆಕ್ಸ್ಗೆ ಲೈಸೆನ್ಸನ್ನು ನೀಡತಕ್ಕದ್ದಲ್ಲ:
ಪರಂತು, ಪ್ರವೇಶ ದ್ವಾರಗಳು, ನಡವೆಗಳು, ಅಂತಸ್ತುಗಳು. ಮೊದಲಾದವುಗಳಿಂದ ಆಕ್ರಮಿತ ಪ್ರದೇಶಗಳಂಥವುಗಳನ್ನು ಹೊರತುಪಡಿಸಿ ಮಾಡಿದ ತರುವಾಯದ ಆಸನಕ್ಕಾಗಿ ಪ್ರತಿಯೊಬ್ಬ ವ್ಯಕ್ತಿಗೆ 0.6 ಚದರ ಮೀಟರುಗಳ ಸ್ಥಳಾವಕಾಶವನ್ನು ಒದಗಿಸಲಾಗಿರುವಲ್ಲಿ, ತದನುಸಾರವಾಗಿ, ಲೈಸೆನ್ಸು ನೀಡುವ ಪ್ರಾಧಿಕಾರಿಯ ಸಭಾಂಗಣಕ್ಕೆ ಪ್ರವೇಶಿಸಬೇಕಾದ ವ್ಯಕ್ತಿಗಳ ಸಂಖ್ಯೆಯನ್ನು ನಿರ್ದಿಷ್ಟಪಡಿಸತಕ್ಕದ್ದು.
(1) ಕಟ್ಟಡದ ಸೂರುಗಳು, ಕನಿಷ್ಠ ಪಕ್ಷ ಎರಡೂವರೆ ಮೀಟರುಗಳಷ್ಟು ಎತ್ತರವಾಗಿರತಕ್ಕದ್ದು.
(2) ದ್ವಾರಗಳ ಗಾತ್ರವು, ಅಗಲದಲ್ಲಿ ಎರಡು ಮೀಟರುಗಳು ಮತ್ತು ಎತ್ತರದಲ್ಲಿ ಎರಡೂವರೆ ಮೀಟರುಗಳಿಗಿಂತ ಕಡಿಮೆಯಿರತಕ್ಕದ್ದಲ್ಲ.
(3) ಸಾಮಾನ್ಯವಾಗಿ ಉಪಯೋಗದಲ್ಲಿಲ್ಲದ ದ್ವಾರ ಅಥವಾ ಕಿಟಕಿಗಳನ್ನು ಕಟ್ಟಡದ ಒಳಗಡೆಯಿಂದ ಕೊಂಚ ಒತ್ತುವುದರ ಮೂಲಕ ಸುಲಭವಾಗಿ ತೆಗೆಯಬಹುದಾದಂಥ ಚಾಪೆ, ಪರದೆಗಳು ಅಥವಾ ಅಂತಹವೇ ಸಾಮಗ್ರಿಗಳಿಂದ ಮಾಡಬಹುದು.
(4) ಯಾವುದೇ ವಿವರಣೆಯ ಯಾವುದೇ ಅಡ್ಡ ಕಂಬಿಯನ್ನು ಯಾವುದೇ ಬಾಗಿಲಿನ ಒಳಗೆ ಅಥವಾ ಹೊರಗೆ ಹಾಕತಕ್ಕದ್ದಲ್ಲ.
(5) ಯಾವುದೇ ಹೊಸ್ತಿಲು ಮೆಟ್ಟಿಲು ಕಟ್ಟಡದ ನೆಲದ ಮಟ್ಟಕ್ಕಿಂತ ಮೇಲೆ ಇರತಕ್ಕದ್ದಲ್ಲ.
(6) ಕಟ್ಟಡದ ಒಳಗಡೆ ಸುತ್ತ ಅಗಲ ಒಂದು ಕಾಲು ಮೀಟರುಗಳಿಗಿಂತ ಕಡಿಮೆ ಇಲ್ಲದ ನಡುದಾರಿಗಳು ಅಥವಾ ದಾರಿಗಳು ಇರತಕ್ಕದ್ದು ಮತ್ತು ಅಂತಹ ನಡುದಾರಿಗಳನ್ನು ಖಾಲಿ ಇಟ್ಟಿರತಕ್ಕದ್ದು.
(7) ಕಟ್ಟಡದ ನಾಲ್ಕು ಮೀಟರುಗಳ ಒಳಗೇ ಯಾವುದೇ ಹೊರ ಬೇಲಿಗೆ ಅವಕಾಶವಿರತಕ್ಕದ್ದಲ್ಲ.
(1) ಪ್ರೊಜೆಕ್ಷನ್ ಕೊಠಡಿಯನ್ನು ಅಗ್ನಿ ನಿರೋಧಕ ಸಾಮಗ್ರಿಯಿಂದ ನಿರ್ಮಿಸತಕ್ಕದ್ದು ಮತ್ತು ಅದು ಪ್ರೇಕ್ಷಣಾ ಮತ್ತು ವೀಕ್ಷಣಾ ಕಿಂಡಿಗಳ ಮೂಲಕವಲ್ಲದೆ ಸಭಾಂಗಣದೊಂದಿಗೆ ಯಾವುದೇ ರೀತಿಯ ಸಂಪರ್ಕವನ್ನು ಹೊಂದಿರತಕ್ಕದ್ದಲ್ಲ.
(2) ಪ್ರೊಜೆಕ್ಷನ್ ಕೊಠಡಿಯು, ಅತಿ ಸಣ್ಣ ಗಾತ್ರದ ಎರಡು ಮೀಟರುಗಳು ಮತ್ತು ಎರಡು ಮೀಟರುಗಳಿಗಿಂತ ಕಡಿಮೆಯಿಲ್ಲದಷ್ಟು ಪೂರ್ಣ ಎತ್ತರದ ಕನಿಷ್ಠ ಪಕ್ಷ ಆರು ಚದರ ಮೀಟರುಗಳಷ್ಟು ನೆಲ ಪ್ರದೇಶವನ್ನು ಹೊಂದಿರತಕ್ಕದ್ದು.
(3) ಪ್ರೊಜೆಕ್ಷನ್ ಕೊಠಡಿಯು, ಸಭಾಂಗಣದಿಂದ ಆಚೆ ಇರುವಂಥ ನಿವೇಶನದಲ್ಲಿನ ಖಾಲಿ ಜಾಗಕ್ಕೆ ನೇರ ಮತ್ತು ಸ್ವತಂತ್ರವಾಗಿ ಹೊರಕ್ಕೆ ಹೋಗುವ ದಾರಿಯನ್ನು ಹೊಂದಿರತಕ್ಕದ್ದು.
(4) ಸಭಾಂಗಣದ ಭಾಗವಾಗುವ ಪ್ರೊಜೆಕ್ಷನ್ ಕೊಠಡಿಯ ಗೋಡೆಗಳ ಹೊರ ಮೇಲ್ಮೈ ಮತ್ತು ಛಾವಣಿ ಮತ್ತು ಡೇರೆ ಅಥವಾ ಬೂತು ಜೋಪಡಿಯ ಯಾವುದೇ ಭಾಗದ ನಡುವೆ ಎರಡು ಮೀಟರುಗಳಿಗಿಂತ ಕಡಿಮೆಯಿಲ್ಲದ ಅಂತರವಿರತಕ್ಕದ್ದು.
(5) 48ನೇ ನಿಯಮದ (2)ನೇ ಉಪ-ನಿಯಮದ ಉಪಬಂಧಗಳು, ಯಥೋಚಿತ ವ್ಯತ್ಯಾಸಗಳೊಂದಿಗೆ ಸಂಚಾರಿ ಸಿನಿಮಾದ ಪ್ರೊಜೆಕ್ಷನ್ ಕೊಠಡಿಗೆ ಅನ್ವಯವಾಗತಕ್ಕದ್ದು:
ಪರಂತು, ಡಿಜಿಟಲ್ ಪ್ರೊಜೆಕ್ಟರ್ಗಳು, ಡಿಜಿಟಲ್ ಧ್ವನಿ ವ್ಯವಸ್ಥೆಯಂಥ ಮುಂದುವರೆದ ತಂತ್ರಜ್ಞಾನದೊಂದಿಗೆ ಇರುವ ಪ್ರಸ್ತುತ ಮತ್ತು ಪ್ರಸ್ತಾವಿತ ಸಂಚಾರಿ ಸಿನಿಮಾ ಅಥವಾ ಮಲ್ಪಿಪ್ಗೆಕ್ಸ್ಗಳ ಸಂದರ್ಭದಲ್ಲಿ ಪ್ರತ್ಯೇಕ ಪ್ರೊಜೆಕ್ಷನ್ ಕೊಠಡಿಯು ಕಡ್ಡಾಯವಾಗತಕ್ಕದ್ದಲ್ಲ.
(6) ವಿದ್ಯುಚ್ಛಕ್ತಿ ಪರಿವೀಕ್ಷಣಾಲಯ ಇಲಾಖೆಯಿಂದ ಸಾಂಪ್ರದಾಯಿಕ ಪ್ರೊಜೆಕ್ಟರುಗಳೊಂದಿಗೆ ಸಂಚಾರಿ ಸಿನಿಮಾದ ಹೆಸರಿನಲ್ಲಿ ಇಬ್ಬರು ಅಪರೇಟರುಗಳಿಗಾಗಿ ಸಮ್ಮತಿಯನ್ನು ಪಡೆಯತಕ್ಕದ್ದು.
ಅಗ್ನಿ ನಿರೋಧಕ ಸಾಮಗ್ರಿಗಳಿಂದ ರಚಿಸಿದ dev, ಸಾಮಗ್ರಿಗಳಿಗಾಗಿ ಪ್ರೊಜೆಕ್ಷನ್ ಕೊಠಡಿ ಮತ್ತು ಸಭಾಂಗಣದಿಂದ ಎಂಟು ಮೀಟರುಗಳಿಗಿಂತ ಕಡಿಮೆಯಿಲ್ಲದ ದೂರದಲ್ಲಿ ಸ್ವತಂತ್ರವಾದ ಉಗ್ರಾಣವಿರತಕ್ಕದ್ದು:
ಪರಂತು, ಡಿಜಿಟಲ್ ಪ್ರೊಜೆಕ್ಟರ್, ಡಿಜಿಟಲ್ ಸೌಂಡ್ ಸಿಸ್ಟಮ್ಗಳಂಥ ಮುಂದುವರೆದ ತಂತ್ರಜ್ಞಾನದೊಂದಿಗೆ ಇರುವ ಮತ್ತು ಪ್ರಸ್ತಾವಿತ ಸಂಚಾರಿ ಸಿನಿಮಾಗಳ ಸಂದರ್ಭದಲ್ಲಿ, ಉಗ್ರಾಣವು ಅನಾವಶ್ಯಕವಾಗಿರುವಲ್ಲಿ, ಈ ನಿಯಮಗಳು ಅನ್ವಯವಾಗತಕ್ಕದ್ದಲ್ಲ.