ಯಾರೇ ವ್ಯಕ್ತಿಯು ಆಟ ಅಥವಾ ಪ್ರದರ್ಶನ ಅಥವಾ ಆಟ ಅಥವಾ ಪ್ರದರ್ಶನದ ಮಧ್ಯಂತರ ಸಮಯದಲ್ಲಿ ಮತ್ತು ಯಾರೇ ಲೈಸೆನ್ಸ್ದಾರನು ಅಥವಾ ಆತನ ನಾಮನಿರ್ದೇಶಿತನು ಆಟ ಅಥವಾ ಪ್ರದರ್ಶನದ ಅವಧಿಯಲ್ಲಿ ಅಥವಾ ಆಟ ಅಥವಾ ಪ್ರದರ್ಶನದ ಮಧ್ಯಂತರ ಕಾಲದಲ್ಲಿ ಯಾರೇ ವ್ಯಕ್ತಿಗೆ,-
(1) ಸಭಾಂಗಣದಲ್ಲಿ ತಿರುಗಿಕೊಂಡು ವ್ಯಾಪಾರ ಮಾಡಲು; ಅಥವಾ
(2) ಸಭಾಂಗಣದಲ್ಲಿಯೇ ಪ್ರೇಕ್ಷಕ ವರ್ಗದ ಯಾರೇ ಸದಸ್ಯನಿಗೆ ಯಾವುದೇ ತಿಂಡಿ ತಿನಿಸು ಅಥವಾ ಪಾನೀಯಗಳನ್ನು ಮಾರಾಟ ಮಾಡಲು ಅಥವಾ ಸರಬರಾಜು ಮಾಡಲು; ಅಥವಾ
(3) ಸಭಾಂಗಣದಲ್ಲಿಯೇ ಪ್ರೇಕ್ಷಕ ವರ್ಗದ ಯಾರೇ ಸದಸ್ಯನಿಗೆ ಯಾವುದೇ ವಸ್ತುಗಳನ್ನು ಅಥವಾ ಪದಾರ್ಥವನ್ನು ಪ್ರತಿಫಲಕ್ಕಾಗಿಯೇ ಆಗಲಿ ಅಥವಾ ಅಗಿಲ್ಲದೆಯೇ ಆಗಲಿ ವಿತರಿಸಲು ಅಥವಾ ಮಾರಾಟ ಮಾಡಲು - ಅವಕಾಶ ಕೊಡತಕ್ಕದ್ದಲ್ಲ.