ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಸ್ವೀಕರಿಸಿದ ಮೇಲೆ, ಅರ್ಜಿದಾರನು, ಅನುಮೋದಿತ ನಿವೇಶನದ ಮೇಲೆ ನಿರ್ಮಿಸಬೇಕಾದ ಕಟ್ಟಡದ ನಕ್ಷೆಯ ಅನುಮೋದನೆಗಾಗಿ ಅರ್ಜಿಯನ್ನು ಲೈಸೆನ್ಸ್ ನೀಡುವ ಪ್ರಾಧಿಕಾರಿಗೆ ಸಲ್ಲಿಸತಕ್ಕದ್ದು, ಅಂತಹ ಅರ್ಜಿಯೊಂದಿಗೆ,-
(i) 27ನೇ ನಿಯಮದ ಮೇರೆಗೆ ಕೊಟ್ಟ ನಿರಾಕ್ಷೇಪಣಾ ಪ್ರಮಾಣಪತ್ರದ ಒಂದು ಪ್ರತಿ;
(ii). ಅನುಮೋದಿತ ನಿವೇಶನ ನಕ್ಷೆಯ ಒಂದು ಪ್ರತಿ;
(iii) ಫಿಲ್ಮಂ ಅನುಲೇಖನಗಳ ಮೇಲೆ ಮುದ್ರಿತ ಮೂಲದಲ್ಲಿನ ನಾಲ್ಕು ಪ್ರತಿಗಳ ಉನ್ನತಿ ನಕ್ಷೆ ಮತ್ತು ವಿಭಾಗಗಳ ಮತ್ತು ಆ ಆವರಣದ ಮತ್ತು ಅದರ ಮೇಲಿನ ನಿರ್ಮಿತಿಗಳ ಮತ್ತು ಕಟ್ಟಡಗಳ ಯಾವುದೇ ಮಾನಕ ಅಳತೆಯ ಅನುರೇಖನಗಳಿಂದ ತೆಗೆದುಕೊಂಡ ಪ್ರಿಂಟುಗಳ ಮೇಲೆ 1:100 ಕಡಿಮೆಯಲ್ಲದ ಪ್ರಮಾಣಕ್ಕೆ ಅದರ ಮೇಲೆ ಸರಿಯಾಗಿ ಬರೆದ ಮತ್ತು ಸ್ವಷ್ಟವಾಗಿ ತೋರಿಸುವ ನಾಲ್ಕು ಪ್ರಿಂಟುಗಳೊಂದಿಗೆ ಡಿಜಿಟಲ್ ನಮೂನೆಯಲ್ಲಿರುವ ಪೂರ್ಣಗೊಂಡ ನಕ್ಷೆ,
(ಎ) ಮಿಲಿ ಮೀಟರುಗಳಲ್ಲಿ ಎಲ್ಲ ಉದ್ದಗಲಗಳು ಮತ್ತು ವಿಭಿನ್ನ ಬಣ್ಣಗಳಲ್ಲಿ ವಿಭಿನ್ನ ಸಾಮಗ್ರಿಗಳನ್ನು ಸೂಚಿಸುವ ನಿರ್ಮಾಣ ಸಾಮಗ್ರಿಗಳು ಮತ್ತು ಗೋಡೆಗಳು, ತೊಲೆಗಳು, ಸ್ಕಾಟಲಿಂಗ್ಗಳು ಮತ್ತು ಟ್ರಸ್ಸುಗಳ ಉದ್ದಗಲಗಳು, ಆಳವನ್ನು ಅಂಕಿಗಳಲ್ಲಿ ಕೊಡುವ;
(Q) ಎಲ್ಲಾ ಸ್ಟೇರ್ಕೇಸ್ಗಳ ಅಗಲ ಮತ್ತು ಮೆಟ್ಟಿಲುಗಳನ್ನು ಹತ್ತುವ ಪ್ರತಿಯೊಂದು ಮೆಟ್ಟಲುಗಳ ಸಂಖ್ಯೆ ಮತ್ತು ಮೇಲ್ತಳದೊಂದಿಗೆ ಪ್ರತಿಯೊಂದು ಸಾಲಿನಲ್ಲಿ ಮೆಟ್ಟಲುಗಳ ಸಂಖ್ಯೆ, ಮೊಗಸಾಲೆಗಳ ಸ್ವಷ್ಟವಾದ ಅಗಲ, ದಾರಿಗಳ, ಹಜಾರಗಳು ಮತ್ತು ನಡುದಾರಿಗಳ ಸ್ಪಷ್ಟವಾದ ವಿಸ್ತಾರವಾದ ನಡೆದಾಡುವ ಮೆಟ್ಟಿಲುಗಳು ಹಾಗೂ ಎಲ್ಲಾ ಗ್ಯಾಲರಿಗಳ, ಅಂತಸ್ತುಗಳ, ಬಾಲ್ಕನಿಗಳ ಮತ್ತು ವೇದಿಕೆಗಳ ಎತ್ತರ ಮತ್ತು ನಿರ್ಮಾಣ; ಮತ್ತು ಸ್ಟೇರ್ಕೇಸ್ಗಳ ಅಗ್ನಿನಿರೋಧಕ ಸಮಯವು ಒಂದು ಗಂಟೆಯಾಗಿರತಕ್ಕದ್ದು, ಇವುಗಳಿಗೆ ಅನಿಲ ಕೊಳವೆಗಳ ಮಾರ್ಗ ಅಥವಾ ವಿದ್ಯುತ್ ಮಾರ್ಗಗಳನ್ನು ಕೂಡಿಸತಕ್ಕದ್ದಲ್ಲ. ಮೆಟ್ಟಿಲುಗಳಲ್ಲಿ ಜಾರದಿರುವ ಹಾಗೆ ಲೋಹದ ಕಾಪುಗಳನ್ನು ಅಳವಡಿಸತಕ್ಕದ್ದು, ಕೈಯಿಂದ ಹಿಡಿದುಕೊಳ್ಳುವ ಕಂಬಿಯನ್ನು ಒಂದು ಮೀಟರ್ ಎತ್ತರದಲ್ಲಿರಿಸತಕ್ಕದ್ದು.
(ಸಿ) ಎಲ್ಲಾ ಬಾಗಿಲುಗಳು, ಕಿಟಕಿಗಳು ಮತ್ತು ವಾಯುಸಂಚಾರಕಗಳ ನಿರ್ಮಾಣ ಮತ್ತು ಅವು ತೆರೆಯುವಂಥ ರೀತಿ ಮತ್ತು ವಾಯುಸಂಚಾರಗಳ ಉದ್ದೇಶಿತ ವ್ಯವಸ್ಥೆಯನ್ನು ತೋರಿಸುವ ಅವುಗಳ ಗಾತ್ರಗಳು;
(ಡಿ). ಉದ್ದೇಶಿತ ಆಸನಗಳ ವ್ಯವಸ್ಥೆ;
(ಇ) . ನೆಲಅಂತಸ್ತು ಮತ್ತು ಮೇಲೆ ಅಂತಸ್ತುಗಳಿಗೆ ಪ್ರತ್ಯೇಕವಾಗಿ ಚದರ ಮೀಟರುಗಳಲ್ಲಿ ಮತ್ತು ಗ್ಯಾಲರಿಗಳು ಅಥವಾ ಬಾಲ್ಕನಿಗಳಿಗೆ ಮೆಟ್ಟಿಲು ಸಾಲುಗಳಲ್ಲಿ ಪ್ರತಿ ಕಟ್ಟಡದ ಚಾಚುಭಾಗ ಪ್ರದೇಶ;
(ಎಫ್) ಸ್ಟೇರ್ಕೇಸ್ಗಳು;
(ಜಿ). ಶೌಚಗೃಹಗಳು ಮತ್ತು awd, ಮಾಡುವ ಸ್ಥಳಗಳು;
(ಹೆಚ್) ನಕ್ಷೆಗಳು ಮತ್ತು ವಿಭಾಗಗಳಲ್ಲಿನ ಕಟ್ಟಡದ ವಿವಿಧ ಭಾಗಗಳ ಮಟ್ಟಗಳು, ಮತ್ತು
(ಐ) ಪ್ರೊಜೆಕ್ಟರುಗಳು, ಪರದೆ, ಧ್ವನಿಪೆಟ್ಟಿಗೆ ಮತ್ತು ಇತರ ಸ್ಥಾವರಗಳು ಮತ್ತು ಸಾಧನ ಸಾಮಗ್ರಿ ವಿವರಗಳು ಮತ್ತು ಸ್ಥಾನಗಳು;
(iv) ಕಾಮಗಾರಿಗಳ ನಿರ್ದಿಷ್ಟವಾದ ವಿವರ ಪಟ್ಟಿಕೆಗಳನ್ನು ನಿರ್ವಹಿಸುವುದು, ನಿಯೋಜನೆಯಾದ ಸಾಕಷ್ಟು ಸಾಮಗ್ರಿಗಳು ಮತ್ತು ಲೆಕ್ಕಗಳೊಂದಿಗೆ ಅಳವಡಿಸಿಕೊಳ್ಳುವ ನಿರ್ಮಾಣದ ವಿಧಾನ, ಲೋಡ್ಗಳನ್ನು ತರಿಸುವುದಕ್ಕೆ ಸಂಬಂಧಪಟ್ಟಂತೆ ಅವುಗಳನ್ನು ತ್ರಿಪ್ರತಿಯಲ್ಲಿ ತೋರಿಸುವುದು ಮತ್ತು ಎಲ್ಲ ತಳಪಾಯಗಳು, ಕಂಬಗಳು, ಸ್ತಂಭಗಳು, ಊರುಗಂಬಗಳು, ಹಾಸುಮರಗಳು, ತೊಲೆಗಳು, ಹಾಸುಗಲ್ಲುಗಳು, ದೂಲಗಳು ಮತ್ತು ಟ್ರಸ್ಸುಗಳಲ್ಲಿ ಬರುವ ತೂಕಗಳಂಥ ಲೆಕ್ಕಗಳನ್ನು ಪದವಿ ಎಂಜಿನಿಯರ್ ಅಥವಾ ವಿನ್ಯಾಸ ಎಂಜಿನಿಯರ್ ಅಥವಾ ವಿನ್ಯಾಸ ವೃತ್ತಿಯ ಅರ್ಹ ವಾಸ್ತುಶಿಲ್ಪಿಯಿಂದ ಸರಿಯಾಗಿದೆ ಎಂಬುದನ್ನು ಪ್ರಮಾಣಿಕರಿಸುವುದು..