(1) 89ನೇ ನಿಯಮದ ಮೇರೆಗೆ ಅರ್ಜಿಯನ್ನು ಸ್ವೀಕರಿಸಿದ ಮೇಲೆ, ಲೈಸೆನ್ಸನ್ನು ನೀಡುವ ಪ್ರಾಧಿಕಾರವು,-
(2) ಅರ್ಜಿಯು ಕ್ರಮಬದ್ಧವಾಗಿರುವಲ್ಲಿ, ಸಿನಿಮಾ ಪ್ರದರ್ಶನಗಳನ್ನು ಪ್ರದರ್ಶಿಸಲು ಉದ್ದೇಶಿಸಿದ ಅಥವಾ ಸಂದರ್ಭಾನುಸಾರ ಅವರ ಪ್ರಮಾಣಪತ್ರಕ್ಕಾಗಿ ಅಥವಾ ವರದಿಗಳಿಗಾಗಿ ಒಯ್ಯುವ ಪ್ರದೇಶದಲ್ಲಿ ಈ ಕೆಳಗೆ! ಅಧಿಕಾರವ್ಯಾಪ್ತಿ ಹೊಂದಿರುವ ಗೊತ್ತುಪಡಿಸಿದ ಪ್ರಾಧಿಕಾರಿಗಳಿಗೆ ಅಂತಹ ಅರ್ಜಿಯ ಪ್ರತಿಗಳನ್ನು ಅದನ್ನು ಸ್ವೀಕರಿಸಿದ ದಿನಾಂಕದಿಂದ ಏಳು ದಿನಗಳೊಳಗಾಗಿ ಕಳುಹಿಸತಕ್ಕದ್ದು.
(i) ಬೆಂಗಳೂರು ನಗರದ ಸಂದರ್ಭದಲ್ಲಿ ಪೊಲೀಸ್ ಆಯುಕ್ತರು;
(ii) ನಗರ ಪೊಲೀಸ್ ಆಯುಕ್ತರು;
(iii) ಜಿಲ್ಲೆಯ ಸಂದರ್ಭದಲ್ಲಿ ಪೊಲೀಸ್ ಸೂಪರಿಂಟೆಂಡೆಂಟ್;
(iv) ಜಿಲ್ಲಾ ಕಾರ್ಯನಿರ್ವಾಹಕ ಅಭಿಯಂತರರು, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ;
(v) ಜಿಲ್ಲಾ ವಿದ್ಯುಚ್ಛಕ್ತಿ ಪರಿಶೀಲಕನು.
(vi) ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು;
(vii) ಬೆಂಗಳೂರು ನಗರದ ಸಂದರ್ಭದಲ್ಲಿ ಬಿಬಿಎಂಪಿ ಯಲ್ಲಿನ ಆರೋಗ್ಯಾಧಿಕಾರಿಗಳು;
(viii) ಬೆಂಗಳೂರು ನಗರದ ಸಂದರ್ಭದಲ್ಲಿ ವಿದ್ಯುಚ್ಛಕ್ತಿ ಪರಿಶೀಲನಾಲಯದ ವಿದ್ಯುಚ್ಛಕ್ತಿ ಪರಿಶೀಲಕನು.
(ix) ಬೆಂಗಳೂರು ನಗರದ ಸಂದರ್ಭದಲ್ಲಿ ಮುಖ್ಯ ಅಗ್ನಿಶಾಮಕಾಧಿಕಾರಿ;
(x) ಜಿಲ್ಲಾ ಅಗ್ನಿ ಶಾಮಕಾಧಿಕಾರಿ;
(xi) ಆ ಪ್ರದೇಶಗಳಲ್ಲಿ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಸ್ಥಳೀಯ ಪ್ರಾಧಿಕಾರಿ.
(ಬಿ). ಅರ್ಜಿಯು ಕ್ರಮಬದ್ಧವಾಗಿ ಇರದಿದ್ದರೇ, ಅರ್ಜಿಯನ್ನು ಸಲ್ಲಿಸಿದ ಹದಿನೈದು ದಿನಗಳ ಅವಧಿಯೊಳಗೆ ಅದನ್ನು ಹಿಂದಿರುಗಿಸಬಹುದು. ಇಲ್ಲದಿದ್ದರೆ, ಅರ್ಜಿಯನ್ನು ಅಂಗೀಕರಿಸಲಾಗಿದೆಯೆಂದು ಭಾವಿಸತಕ್ಕದ್ದು.
(2) ಮೇಲೆ ನಿರ್ದಿಷ್ಟಪಡಿಸಲಾದ ಪ್ರಾಧಿಕಾರಿಗಳು (1)ನೇ ಉಪನಿಯಮದ ಮೇರೆಗೆ ಅರ್ಜಿಗಳನ್ನು ಸ್ವೀಕರಿಸಿದ ತರುವಾಯ ಮತ್ತು ಸಂದರ್ಭಾನುಸಾರ ಪ್ರಮಾಣಪತ್ರ ಅಥವಾ ವರದಿಯನ್ನು ಕಳುಹಿಸುವ ಮುಂಚಿತವಾಗಿ, ಪ್ರಸ್ತಾವಿತ ಸಿನಿಮಾಗಳ ಪ್ರದರ್ಶನದ ಸಂಬಂಧದಲ್ಲಿ,-
(1) . ಲೈಸೆನ್ಸ್ ಕೋರಿರುವ ಸ್ಥಳದಲ್ಲಿ ಸಿನಿಮಾಗಳ ಪ್ರದರ್ಶನವು ಅಗತ್ಯವಾಗಿದೆಯೇ;
(ii) ಸಿನಿಮಾಗಳ ಪ್ರದರ್ಶನವು, ಸಾರ್ವಜನಿಕ ಸಂರಕ್ಷಣೆ, ಕಾನೂನು ಮತ್ತು ಸುವ್ಯವಸ್ಥೆ, ಸಾರ್ವಜನಿಕ ಶಾಂತಿ ಮತ್ತು ಘನತೆಗೆ ಅಪಾಯವುಂಟು ಮಾಡಿಲ್ಲ;
(iii) ಸಿನಿಮಾಗಳ ಪ್ರದರ್ಶನಕ್ಕಾಗಿ ಕಟ್ಟಡ ಮತ್ತು ವಿದ್ಯುಚ್ಛಕ್ತಿ ಸ್ಥಾಪನೆಗಳು, ಸಾಕಷ್ಟು ಮತ್ತು ಸುಸ್ಥಿತಿಯಲ್ಲಿವೆಯೇ;
(iv) ನೈರ್ಮಲ್ಯ, ವಾಯಸಂಚಾರ ಮತ್ತು ದೀಪದ ಬಗ್ಗೆ ಸಾಕಷ್ಟು ವ್ಯವಸ್ಥೆಗಳನ್ನು ಮಾಡಲಾಗಿದೆಯೇ;
(v) ಅಗ್ನಿ ನಂದಿಸುವ ಉಪಕರಣಗಳನ್ನು ಅಳವಡಿಸಲು ಅವಶ್ಯಕ ಮುಂಜಾಗರೂಕತೆಯನ್ನು ಮಾಡಲಾಗಿದೆಯೇ ಮತ್ತು ಅವುಗಳಿಗಾಗಿ ವ್ಯವಸ್ಥೆಗೊಳಿಸಲಾಗಿದೆಯೇ;
(vi) ಸಿನಿಮೋಟೋಗ್ರಫಿ ಅಧಿನಿಯಮ ಮತ್ತು ನಿಯಮಗಳ ಜಾರಿಯಲ್ಲಿರುವ ಉಪಬಂಧಗಳನ್ನು ಪಾಲಿಸಲಾಗಿದೆ; ಮತ್ತು (॥) ಲೆ ಸೆನ್ಸನ್ನು ಮಂಜೂರು ಮಾಡುವುದಕ್ಕೆ ಯಾವುದೇ ಆಕ್ಷೇಪಣೆ ಇಲ್ಲವೆಂಬುದನ್ನು - ತಾವಾಗಿಯೇ ಮನದಟ್ಟು ಮಾಡಿಕೊಳ್ಳತಕ್ಕದ್ದು.
(viii) ಪ್ರಾಧಿಕಾರಗಳು, (1)ನೇ ಉಪನಿಯಮದ ಮೇರೆಗೆ ಅರ್ಜಿಯ ಪ್ರತಿಗಳನ್ನು ಸ್ವೀಕರಿಸಿದ ದಿನಾಂಕದಿಂದ ಹದಿನೈದು ದಿನಗಳೊಳಗಾಗಿ ಲೈಸೆನ್ಸು ನೀಡುವ ಪ್ರಾಧಿಕಾರಿಗೆ ಪ್ರಮಾಣಪತ್ರಗಳು ಅಥವಾ ವರದಿಗಳನ್ನು ಕಳುಹಿಸತಕ್ಕದ್ದು, ಅಂತಹ ಪ್ರಮಾಣಪತ್ರ ಅಥವಾ ವರದಿಯನ್ನು, ಈ ಹಿಂದೆ ಹೇಳಿದ ಅವಧಿಯೊಳಗೆ ಲೈಸೆನ್ಸ್ ನೀಡುವ. ಪ್ರಾಧಿಕಾರಿಯು. ಸ್ವೀಕರಿಸದಿದ್ದರೆ, . ಲೈಸೆನ್ಸು. ಮಂಜೂರು. ಮಾಡಲು. ಯಾವುದೇ ಆಕ್ಷೇಪಣೆಗಳಿಲ್ಲವೆಂಬುದಾಗಿ ಪೂರ್ವಭಾವನೆ ಮಾಡತಕ್ಕದ್ದು.
(3) (2)ನೇ ಉಪನಿಯಮದ ಮೇರೆಗೆ ನೀಡಲಾದ ಪ್ರಮಾಣಪತ್ರವು, ಅದನ್ನು ಕೊಟ್ಟ ದಿನಾಂಕದಿಂದ ಮೂರು ತಿಂಗಳ ಅವಧಿಯವರೆಗೆ ಸಿಂಧುವಾಗಿರತಕ್ಕದ್ದು.
(4) ಲೈಸೆನ್ಸ್ ನೀಡುವ ಪ್ರಾಧಿಕಾರಿಯು, ಈ ಮುಂದಿನ ವಿಷಯಗಳಿಗೆ ಸಂಬಂಧಪಟ್ಟಂತೆ, ಎಂದರೆ,-
(i) ಸಾಮಾನ್ಯವಾಗಿ ಸಾರ್ವಜನಿಕರ ಹಿತಾಸಕ್ತಿಯಿಂದ;
(ii) ಅರ್ಜಿದಾರನ ಸ್ಥಿತಿಗತಿ, ಈ ಮೊದಲಿನ ಮತ್ತು ಹಿಂದಿನ ಅನುಭವದಿಂದ ಸಿನಿಮಾಗಳ ಪ್ರದರ್ಶನಕ್ಕಾಗಿ ಲೈಸೆನ್ಸನ್ನು ಮಂಜೂರು ಮಾಡುವುದಕ್ಕಾಗಲೀ ಅಥವಾ ನಿರಾಕರಿಸುವುದಕ್ಕಾಗಲಿ - ತೀರ್ಮಾನ ತೆಗೆದುಕೊಳ್ಳತಕ್ಕದ್ದು.
(5) ಲೈಸೆನ್ಸ್ಗಾಗಿ ಅರ್ಜಿಯನ್ನು ಸ್ವೀಕರಿಸಿದ ತರುವಾಯ, ಲೈಸೆನ್ಸ್ ನೀಡುವ ಪ್ರಾಧಿಕಾರಿಯು, ಸಂಬಂಧಪಟ್ಟ ಇಲಾಖೆಗಳಿಗೆ ಅವುಗಳನ್ನು ಕೂಡಲೇ ಕಳುಹಿಸತಕ್ಕದ್ದು. ಲೈಸೆನ್ಸ್ ನೀಡುವ ಪ್ರಾಧಿಕಾರಿಗೆ ಹದಿನೈದು ದಿನಗಳು ಮೀರದಂಥ ಅವಧಿಯೊಳಗಾಗಿ ಸಾಧ್ಯವಾಗಬಹುದಾದಷ್ಟು ಬೇಗನೆ ಅವರ ಅಭಿಪ್ರಾಯ ಅಥವಾ ಸ್ಪಷ್ಟೀಕರಣವನ್ನು ನೀಡತಕ್ಕದ್ದು. ಲೈಸೆನ್ಸ್ ನೀಡುವ ಪ್ರಾಧಿಕಾರಿಯು ಸದರಿ ಇಲಾಖೆಗಳೊಂದಿಗೆ ಆ ಬಗ್ಗೆ ಸಮಾಲೋಚನೆ ನಡೆಸತಕ್ಕದ್ದು ಮತ್ತು ಅರ್ಜಿಯ ದಿನಾಂಕದಿಂದ ಮೂವತ್ತು ದಿನಗಳೊಳಗೆ ನಿರಾಷೇಕ್ಷಣಾ ಪ್ರಮಾಣಪತ್ರದ ಮಂಜೂರಾತಿಗಾಗಿ ಅರ್ಜಿಯನ್ನು ಪರಿಗಣಿಸತಕ್ಕದ್ದು ಅಥವಾ ಮೂವತ್ತು ದಿನಗಳು ಗೊತ್ತುಪಡಿಸಲಾದ ಅವಧಿಯೊಳಗೆ, ಲಿಖಿತದಲ್ಲಿ ದಾಖಲು ಮಾಡಬೇಕಾದ ಕಾರಣಗಳಿಗಾಗಿ ಅಂತಹ ಲೈಸೆನ್ಸನ್ನು ನೀಡಲು ನಿರಾಕರಿಸತಕ್ಕದ್ದು.
(6) ಲೈಸೆನ್ಸು ನೀಡುವ ಪ್ರಾಧಿಕಾರಿಯು,-
(i) ಈ ನಿಯಮಗಳನ್ನು ಬಹುಮಟ್ಟಿಗೆ ಪಾಲಿಸಲಾಗಿದೆಯೆಂದು; ಮತ್ತು
(ii) ಸಿನಿಮಾ ವೀಕ್ಷಣೆಗಾಗಿ ಬರುವ ವ್ಯಕ್ತಿಗಳ ಸುರಕ್ಷತೆ, ಅನುಕೂಲತೆ ಮತ್ತು ಸೌಕರ್ಯದ ಮತ್ತು ಸಾರ್ವಜನಿಕ ಹಿತಾಸಕ್ತಿ ಮತ್ತು ಸ್ವಚ್ಛತೆಯ ಸಂಬಂಧದಲ್ಲಿ ಆ ಸ್ಥಳದಲ್ಲಿ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಎಂಬುದನ್ನು ಮನದಟ್ಟು ಮಾಡಿಕೊಂಡ ಹೊರತು - ಈ ನಿಯಮಗಳ ಮೇರೆಗೆ ಲೈಸೆನ್ಸನ್ನು ಮಂಜೂರು ಮಾಡತಕ್ಕದ್ದಲ್ಲ.
(7) ಅಧಿನಿಯಮ ಮತ್ತು ನಿಯಮಗಳ ಮೇರೆಗೆ ರಚಿತವಾದ ಉಪಬಂಧಗಳಿಗೊಳಪಟ್ಟು, (2)ನೇ ಉಪನಿಯಮದ ಮೇರೆಗೆ ಪ್ರಮಾಣಪತ್ರವನ್ನು ಸ್ವೀಕರಿಸಿದ ದಿನಾಂಕದಿಂದ ಹದಿನೈದು ದಿವಸಗಳೊಳಗೆ ಲೈಸೆನ್ಸ್ ನೀಡುವ ಪ್ರಾಧಿಕಾರಿಯು, ಅಂತಹ ನಿಬಂಧನೆಗಳು ಮತ್ತು ಷರತ್ತುಗಳ ಮೇಲೆ ಮತ್ತು ನಿರ್ಧರಿಸಿರಬಹುದಾದಂಥ ಪರಿಬಂಧಗಳಿಗೆ ಒಳಪಟ್ಟು ನಮೂನೆ-ಜಿ ಯಲ್ಲಿ ಅರ್ಜಿದಾರನಿಗೆ ಲೈಸೆನ್ಸನ್ನು ಮಂಜೂರು ಮಾಡಬಹುದು.
(8) ಲೈಸೆನ್ಸ್ ನೀಡುವ ಪ್ರಾಧಿಕಾರಿಯು ಯಾವುದೇ ಲೈಸೆನ್ಸನ್ನು ಮಂಜೂರು ಮಾಡಲು ನಿರಾಕರಿಸಿದಾಗ, ಅಂತಹ ನಿರಾಕರಣೆಗಾಗಿ ಕಾರಣಗಳನ್ನು ಅರ್ಜಿದಾರನಿಗೆ ಬರಹದಲ್ಲಿ ನೀಡುವ ಮೂಲಕ ಆದೇಶವನ್ನು ತಿಳಿಸುವುದರಿಂದ ಹಾಗೆ ಮಾಡತಕ್ಕದ್ದು.
(9) ಈ ನಿಯಮಗಳ ಮೇರೆಗೆ ಲೈಸೆನ್ಸನ್ನು ಮಂಜೂರು ಮಾಡಲಾದ ಲೈಸೆನ್ಸು, ಆ ಲೈಸೆನ್ಸನ್ನು ಕೊಟ್ಟ ದಿನಾಂಕದಿಂದ ಮೂರು ತಿಂಗಳುಗಳ ಅವಧಿಯವರೆಗೆ ಸಿಂಧುವಾಗಿರತಕ್ಕದ್ದು.