ಅನುಸೂಚಿ 2)’ (2(13)ನೇ ಮತ್ತು 45ನೇ ನಿಯಮ ನೋಡಿ) ಅಗ್ನಿಪ್ರತಿರೋಧಕ ಸಾಮಗ್ರಿಗಳು
-
ಸ್ವಯಂಚಾಲಿತವಾಗಿ ತಾವೇ ಉರಿಯದಿದ್ದರೆ ಕಟ್ಟಡದ ಯಾವುದೇ ಸಾಮಗ್ರಿ ಮತ್ತು ಯಾವುದೇ ಭಾಗಗಳನ್ನು ಪರಿಗಣಿಸಬಹುದು. ಬೆಂಕಿಯನ್ನು ಕಾಲು ಗಂಟೆಯವರೆಗೆ ನಿರೋಧಿಸಲು ಮತ್ತು ಈ ಅವಧಿಯಲ್ಲಿ ಬೆಂಕಿಯು ಹೋಗುವುದನ್ನು ಮತ್ತು ಹರಡುವುದನ್ನು ತಡೆಯಲು ಸಮರ್ಥವಾಗಿದ್ದರೆ, ಅಗ್ನಿನಿರೋಧಕಗಳೆಂದು ಪರಿಗಣಿಸಬಹುದು.
-
ಬೇರೆಯವುಗಳ ಜೊತೆಗೆ, ಈ ಕೆಳಕಂಡವುಗಳನ್ನು ಅಗ್ನಿ ಪ್ರತಿರೋಧಕಗಳೆಂದು ಪರಿಗಣಿಸಲಾಗಿದೆ. ಅವುಗಳು ಎಂದರೆ:-
(ಎ) ಗೋಡೆಗಳು, ಛಾವಣಿಗಳು, ತೊಲೆಗಳು, ಊರುಗಂಬಗಳು, ಸ್ತಂಭಗಳ ಮತ್ತು ಮರದ ಟ್ರಸ್ಸುಗಳು, ಅವು ಇಪ್ಪತ್ತೈದು ಮಿಲಿ ಮೀಟರುಗಳಷ್ಟು ದಪ್ಪದ ಸುಣ್ಣದ ಪ್ಲಾಸ್ಟರ್ ಅಥವಾ ಐದು ಮಿಲಿಮೀಟರಿನ ಸಿಮೆಂಟ್ ಆಸ್ಪೆಸ್ಟಾಸ್ ಶೀಟುಗಳಿಂದ ಆವೃತವಾಗಿದ್ದರೆ,
(ಬಿ) ಗ್ರಾನೈಟ್, ಇತರ ಕಲ್ಲು, ಕಬ್ಬಿಣ ಅಥವಾ ಮರದ ಸ್ಟೇರ್ಕೇಸ್ಗಳು, ಅವುಗಳ ತಳದ ಮೇಲ್ಮೈ ಕೆಳಗಿನಿಂದ ಇಪ್ಪತ್ತೈದು ಮಿಲಿ ಮೀಟರು ದಪ್ಪದ ಸುಣ್ಣದ ಪ್ಲಾಸ್ಟರಿನಿಂದ ಅಥವಾ ಮೆಟ್ಟಲುಗಳಿಂದ ಸ್ವಲ್ಪ ದೂರದಲ್ಲಿ ತಂತಿ ಜಾಲ ಅಥವಾ ಮರದ ರೀಪರುಗಳ ಮೇಲೆ ಆಶ್ರಯಿತವಾದ ಆಸ್ಪೆಸ್ಟಾಸ್ ಶೀಟುಗಳಿಂದ ಆವೃತವಾಗಿದ್ದರೆ,
(ಪಿ) ಇಪ್ಪತ್ತೈದು. ಮಿಲಿ. ಮೀಟರ್ ದಪ್ಪಕ್ಕೆ ಕಡಿಮೆಯಲ್ಲದ ಪಟ್ಟಿ ಹಾಕಿದ ಮರದ ಬಾಗಿಲುಗಳು, ಮರಕ್ಕೆ ತಿರುಗಣಿಯಿಂದ ಜೋಡಿಸಲಾದ ತೆಳು ಕಬ್ಬಿಣದ ಹಾಳೆ ಅಥವಾ ಸಾದಾ ಸಿಮೆಂಟ್ ಆಸ್ಪೆಸ್ಟಾಸ್ ಶೀಟುಗಳಿಂದ ಷಟರುಗಳು ಮತ್ತು ಚೌಕಟ್ಟುಗಳು ಎರಡೂ ಕಡೆಗಳಲ್ಲಿ, ಆವೃತವಾಗಿದ್ದರೆ, ಅವುಗಳು ತಮ್ಮಷ್ಟಕ್ಕೆ ತಾವೇ ಮುಚ್ಚಿಕೊಳ್ಳುವಂತೆ ವ್ಯವಸ್ಥೆ ಮಾಡಿದ್ದರೆ ಮತ್ತು ಚೌಕಟ್ಟಿನಲ್ಲಿನ ತಳೆದ ಆಳವು ಕನಿಷ್ಠಪಕ್ಷ ಇಪ್ಪತ್ತು ಮಿಲಿ ಮೀಟರ್ ಇದ್ದರೆ.
- ಮೇಲೆ ಹೇಳಿದ ಸಾಮಗ್ರಿಯನ್ನುಳಿದು ಬೇರೆ ಸಾಮಗ್ರಿಗಳನ್ನು ಲೈಸೆನ್ಸ್ ನೀಡುವ ಪ್ರಾಧಿಕಾರಿಯು ಅಗ್ನಿ ಪ್ರತಿರೋಧಕಗಳೆಂದು ಅಂಗೀಕರಿಸಬಹುದು. ಪರಂತು, ಅವುಗಳು ಮೇಲೆ ಕೊಟ್ಟಿರುವ ವಿವರಣೆಗೆ ಅನುರೂಪವಾಗಿರಬೇಕು.