ಈ ಅಧ್ಯಾಯದ ಉದ್ದೇಶಗಳಿಗಾಗಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(1) ‘war’ ಎಂದರೆ ಯಾವ ರಂಧ್ರಗಳ ಮೂಲಕ ಕೊಳವೆಗಳು ಮತ್ತು ಕೇಬಲ್ಲುಗಳನ್ನು ಹಾಯಿಸಲಾಗಿದೆಯೋ ಆ ರಂಧ್ರಗಳಲ್ಲಿ ಅಂತಹ ರಂಧ್ರಗಳನ್ನು ಯುಕ್ತವಾಗಿ ಹೊಗೆ ನಿರೋಧಕಗೊಳಿಸುವ ದೃಷ್ಟಿಯಿಂದ ಸೇರಿಸಲಾದ ಪ್ಯಾಕಿಂಗ್.
(2) ಈ ಅಧ್ಯಾಯದಲ್ಲಿ ನಿರ್ದಿಷ್ಟವಾಗಿ ಈ ನಿಯಮಗಳಲ್ಲಿ ಪರಿಭಾಷಿಸಿಲ್ಲದ ಯಾವುದೇ ಪದವು, ವಿದ್ಯುಚ್ಛಕ್ತಿ ಅಧಿನಿಯಮ, 2003 ಮತ್ತು ಕೇಂದ್ರೀಯ ವಿದ್ಯುಚ್ಛಕ್ತಿ ಪ್ರಾಧಿಕಾರ (ಸುರಕ್ಷತೆ ಮತ್ತು ವಿದ್ಯುತ್ ಸರಬರಾಜಿಗೆ ಸಂಬಂಧಪಟ್ಟ ಕ್ರಮಗಳು) ವಿನಿಯಮಗಳು, 2010 ಮತ್ತು ಅದರ ಮೇರೆಗೆ ಮಾಡಲಾದ ನಿಯಮಗಳು ಮತ್ತು ವಿನಿಯಮಗಳಲ್ಲಿ ಪರಿಭಾಷಿಸಿದಂಥ ಅದೇ ಅರ್ಥ ಮತ್ತು ಪದಾವಳಿಗಳನ್ನು ಹೊಂದಿರತಕ್ಕದ್ದು.