ನಮೂನೆ “ಹೆಚ್'
[86 (1)ನೇ ನಿಯಮವನ್ನು ನೋಡಿ]
ಕರ್ನಾಟಕ ಸಿನಿಮಾಗಳ (ನಿಯಂತ್ರಣ) ನಿಯಮಗಳು, 20140 ಮೇರೆಗೆ ಪ್ರದರ್ಶನಕ್ಕಾಗಿ ತಾತ್ಕಾಲಿಕ ಪರವಾನಗಿ
(ಪೂರ್ಣ ಹೆಸರು ಮತ್ತು ವಿಳಾಸ) --------- ಅವರು, ಆತನ ಲೈಸೆನ್ಸ್ ನವೀಕರಣಕ್ಕಾಗಿ ಅರ್ಜಿಯನ್ನು ಸಲ್ಲಿಸಿರುವುದರಿಂದ ಮತ್ತು ಸದರಿ ಲೈಸೆನ್ಸ್ನ್ನು ಆತನ ಅರ್ಜಿಯು ವಿಲೆಯಾಗುವವರೆಗೆ ನನ್ನ ಕಛೇರಿಯಲ್ಲಿ ಇಟ್ಟುಕೊಳ್ಳಲಾಗಿರುವುದರಿಂದ, ಕರ್ನಾಟಕ ಸಿನಿಮಾಗಳ (ನಿಯಂತ್ರಣ) ನಿಯಮಗಳು, 2014ರ 86ನೇ ನಿಯಮದ ಉಪಬಂಧಗಳಿಗೊಳಪಟ್ಟು ಲೈಸೆನ್ಸ್ಗಾಗಿನ ಆತನ ಅರ್ಜಿಯು ವಿಲೆಯಾಗುವವರೆಗೆ ಕರ್ನಾಟಕ ಸಿನಿಮಾ (ನಿಯಂತ್ರಣ) ಅಧಿನಿಯಮ, 1964ರ ಮೇರೆಗೆ ---------- ನಲ್ಲಿ (ಇಲ್ಲಿ ಆವರಣದ ವಿವರಣೆಯನ್ನು ನಮೂದಿಸಿ) ಫಿಲ್ಮ್ಗಳನ್ನು ಪ್ರದರ್ಶಿಸಲು ತಾತ್ಕಾಲಿಕವಾಗಿ ಅನುಮತಿಯನ್ನು ಈ ಮೂಲಕ ಕೊಡಲಾಗಿದೆ.
— ಜಿಲ್ಲಾ ಮ್ಯಾಜಿಸ್ಟ್ರೇಟರು
ಲೈಸೆನ್ಸ್ ನೀಡುವ ಪ್ರಾಧಿಕಾರಿ
ತಾತ್ಕಾಲಿಕ ಪರವಾನಗಿ
(1) 85ನೇ ನಿಯಮದ ಮೇರೆಗೆ ಲೈಸೆನ್ಸ್ನ ಮರುಮಂಜೂರಾತಿಗಾಗಿ ಮಾಡಿಕೊಂಡ ಅರ್ಜಿಯ ಮೇಲೆ, ಲೈಸೆನ್ಸ್ ನೀಡುವ ಪ್ರಾಧಿಕಾರಿಯು, ಲೈಸೆನ್ಸ್ ಮುಕ್ತಾಯವಾಗುವ ದಿನಾಂಕಕ್ಕೆ ಮುಂಚೆ ಯಾವುದೇ ಕಾರಣಕ್ಕಾಗಿ ಆ ಲೈಸೆನ್ಸ್ನ್ನು ಮರು ಮಂಜೂರು ಮಾಡದಿದ್ದರೆ ಅಥವಾ ಆತನು ಮರು ಮಂಜೂರು ಮಾಡಲು ನಿರಾಕರಿಸಿದರೆ ಆತನು ‘Ges’ ನಮೂನೆಯಲ್ಲಿ ತಾತ್ಕಾಲಿಕ ಪರ್ಮಿಟ್ಟನ್ನು ಮಂಜೂರು ಮಾಡತಕ್ಕದ್ದು :
ಪರಂತು, ವಿದ್ಯುಚ್ಛಕ್ತಿ ಪರಿಶೀಲಕನ ಪ್ರಮಾಣಪತ್ರವು ಸಿಂಧುವಾಗಿರುವುದು ಮುಂದುವರಿದಿರಬೇಕು.
(2) ಅಂತಹ ತಾತ್ಕಾಲಿಕ ಪರವಾನಗಿ, ನವೀಕರಣ ಮಾಡಬೇಕೆಂದು ಕೋರಿರುವುದು ಲೈಸೆನ್ಸಿನ ಷರತ್ತುಗಳಿಗೆ ಒಳಪಟ್ಟಿರತಕ್ಕೆದ್ದು ಮತ್ತು ಅದು ಲೈಸೆನ್ಸ್ ನೀಡುವ ಪ್ರಾಧಿಕಾರಿಯು ಆ ಅರ್ಜಿಯನ್ನು ವಿಲೇ ಮಾಡುವವರೆಗೆ ಸಿಂಧುವಾಗಿರತಕ್ಕದ್ದು: ಆ
ಮತ್ತು, ಪರಂತು, ತಾತ್ಕಾಲಿಕ ಪರವಾನಗಿಯನ್ನು ಆ ಬಗ್ಗೆ ಯಾವುದೇ ಕಾಲದಲ್ಲಿ ತಗಾದೆ ಮಾಡಿದ ಮೇಲೆ ಲೈಸೆನ್ಸ್ ನೀಡುವ ಪ್ರಾಧಿಕಾರಿಗೆ ಒಪ್ಪಿಸತಕ್ಕದ್ದು.
(3) ತಾತ್ಕಾಲಿಕ ಪರವಾನಗಿಯ ಮಂಜೂರಾತಿಗಾಗಿ ಯಾವುದೇ ಫೀಜನ್ನು ವಿಧಿಸತಕ್ಕದ್ದಲ್ಲ.
(4) ಈ ತಾತ್ಕಾಲಿಕ ಪರವಾನಗಿಯನ್ನು, ಅದು ಸಿಂಧುತ್ವದಲ್ಲಿರುವ ಅವಧಿಯಲ್ಲಿ ಈ ನಿಯಮಗಳ ಉದ್ದೇಶಕ್ಕಾಗಿ ಲೈಸೆನ್ಸ್ ಆಗಿರುವುದಾಗಿ ಭಾವಿಸತಕ್ಕದ್ದು.