(1) ಡ್ರೈವ್ ಇನ್ ಸಿನಿಮಾವು, ಅಂತಹ ಸಿನಿಮಾ ಹೊಂದಿಕೊಂಡಿರುವ ನಿವೇಶನದ ಮೇಲೆ ಸಾರ್ವಜನಿಕ ಮುಖ್ಯ ರಸ್ತೆಗೆ ಅದು ಅಭಿಮುಖವಾಗಿರತಕ್ಕದ್ದು ಮತ್ತು ಅಂತಹ ಮುಂಭಾಗದಲ್ಲಿ, ಮೋಟಾರು ಕಾರುಗಳಿಗಾಗಿ ಪ್ರವೇಶ ಮತ್ತು ನಿರ್ಗಮನಕ್ಕಾಗಿ ಸೂಕ್ತ ವ್ಯವಸ್ಥೆ ಇರತಕ್ಕದ್ದು. ಪ್ರವೇಶ ದ್ವಾರದಲ್ಲಿ ಆ ಆವರಣವನ್ನು ಪ್ರವೇಶಿಸಲು ಕಾಯುತ್ತಿರುವ ಮೋಟಾರು ಕಾರುಗಳಿಗೆ ಸಾಕಷ್ಟು ಜಾಗವನ್ನು ಒದಗಿಸತಕ್ಕದ್ದು. ಡ್ರೈವ್- ಇನ್ ಸಿನಿಮಾಗಳಲ್ಲಿ ಮೋಟಾರು ಕಾರುಗಳ ಒಟ್ಟು ಸಂಖ್ಯೆಯ ಕನಿಷ್ಠ ಪಕ್ಷ 1/5ರಷ್ಟು ಹಿಡಿಯಲು ಸಾಕಷ್ಟು ಸ್ಥಳ ಇರತಕ್ಕದ್ದು ಮತ್ತು ಆ ಪ್ರದೇಶದೊಳಕ್ಕೆ ಅಂತಹ ಕಾರುಗಳ ಪ್ರವೇಶಕ್ಕಾಗಿ ಟಿಕೇಟು ಬೂತ್ಗಳೊಂದಿಗೆ ಕನಿಷ್ಠ ಪಕ್ಷ ಎರಡು ಪ್ರತ್ಯೇಕವಾದ ಹೋಗುವ ದಾರಿಗಳನ್ನು ಒದಗಿಸತಕ್ಕದ್ದು. 600ಕ್ಕಿಂತ ಹೆಚ್ಚಿನ ಮೋಟಾರು ಕಾರುಗಳಿಗೆ ಸ್ಥಳಾವಕಾಶ ಮಾಡಿಕೊಡಲು ಸಿನಿಮಾವನ್ನು ನಿರ್ಮಿಸಿರುವಲ್ಲಿ ಮೋಟಾರು ಕಾರುಗಳ ನಿರ್ಗಮನಕ್ಕಾಗಿ ಕನಿಷ್ಠ ಎರಡು ಗೇಟುಗಳನ್ನು ಒದಗಿಸತಕ್ಕದ್ದು. ಪ್ರವೇಶ ಮತ್ತು ನಿರ್ಗಮನದ ಪ್ರತಿಯೊಂದು ಗೇಟಿನ ಅಗಲವು ನಾಲ್ಕು ಮೀಟರುಗಳಿಗಿಂತ ಕಡಿಮೆ ಇರತಕ್ಕದ್ದಲ್ಲ.
(2) ಡ್ರೈವ್-ಇನ್ ಸಿನಿಮಾದ ಸರಹದ್ದುಗಳಲ್ಲಿ ಕಾಂಪೌಂಡಿನೊಳಗೆ ಗೋಡೆಗೆ ಲಗತ್ತಾಗಿ ಭೂಮಿಯ ಮಟ್ಟದ ಮೇಲೆ ಎರಡು ಮೀಟರುಗಳಿಗಿಂತ ಕಡಿಮೆ ಇಲ್ಲದ ಎತ್ತರವನ್ನು ಹೊಂದಿದ ಅಗ್ನಿ ಪ್ರತಿರೋಧಕ ಸಾಮಗ್ರಿಯ ಕಾಂಪೌಂಡ್ ಗೋಡೆಯನ್ನು ರಚಿಸತಕ್ಕದ್ದು ಅಥವಾ ಇಡೀ ಕಾಂಪೌಂಡಿನ ಸುತ್ತ ಮುಳ್ಳು ತಂತಿ ಬೇಲಿ ಮತ್ತು ಕಂಬಿಯ ಬೇಲಿಯು ಇರತಕ್ಕದ್ದು.
(3) ಪ್ರವೇಶ ಹಾಗೂ ನಿರ್ಗಮನದ ಪ್ರದೇಶಗಳನ್ನು ಸಾಕಷ್ಟು ಪ್ರಕಾಶಮಾನವಾದ ದೀಪಗಳ ಮೂಲಕ ಬೆಳಗಿಸತಕ್ಕದ್ದು.
(4) ಪರದೆಯ ಇಡೀ ಗೆರೆಗೆ ಸಂಬಂಧಿಸಿದಂತೆ ವೀಕ್ಷಕರ ಪ್ರದೇಶದ ಪಾರ್ಶ್ವದಲ್ಲಿಯ ಪರಿಮಿತಿಯು 350ರ ಕೋನಕ್ಕೆ ಸೀಮಿತವಾಗಿರತಕ್ಕದ್ದು.
(5) ಪರದೆಗೆ ಅಭಿಮುಖವಾಗಿರುವ ಮೋಟಾರು ಕಾರುಗಳ ಸಾಲುಗಳನ್ನು ಕೇಂದ್ರ ರೇಖೆಯ ಮೇಲೆ ಪರದೆಯ ಹಿಂಭಾಗದಲ್ಲಿ 0.6ಫಿ ಪರದೆಯ ಅಗಲದ ದೂರದಲ್ಲಿ ಅದರ ಕೇಂದ್ರವನ್ನು ಹೊಂದಿರುವ ವೃತ್ತ ಪರಿಧಿಯ ರೂಪದಲ್ಲಿ ವ್ಯವಸ್ಥೆ ಮಾಡತಕ್ಕದ್ದು.
(6) ಪರದೆಗೆ ಅಭಿಮುಖವಾಗಿರುವ ಸಾಲಿನಲ್ಲಿ ಮೋಟಾರು ವಾಹನಗಳಿಗೆ ಸ್ಥಳಾವಕಾಶವನ್ನು ಒದಗಿಸಿರುವ ಬಂದು ಹೋಗುವ ದಾರಿಯ ಆಗಲವು 10 ಮೀಟದ್ಗಳಿಗಿಂತ ಕಡಿಮೆ ಇರತಕ್ಕದ್ದಲ್ಲ.
(7) ಪರದೆ ಹಾಗೂ ವಾಹನಗಳ ಮುಂದಿನ ಸಾಲಿನ ನಡುವಣ ಅಂತರವು ಪರದೆಯ ಮೇಲಿನ ಚಿತ್ರದ ಅಗಲದ 1.5ರಷ್ಟಕ್ಕಿಂತ ಕಡಿಮೆ ಇರತಕ್ಕದ್ದಲ್ಲ.
(8) ವೀಕ್ಷಕರ ಪ್ರದೇಶದ ಎರಡೂ ಬದಿಯಲ್ಲಿ 10 ಮೀಟರುಗಳಿಗಿಂತ ಕಡಿಮೆ ಇಲ್ಲದ ಅಗಲದ ತಡೆ ಇಲ್ಲದ ದಾರಿಯನ್ನು ಒದಗಿಸತಕ್ಕದ್ದು.
(9) ಮೋಟಾರು ಕಾರುಗಳ ಎಲ್ಲಾ ಸಾಲುಗಳಲ್ಲಿ, ಮೋಟಾರು ಕಾರುಗಳ ಮುಂಭಾಗವು ಹಿಂದುಗಡೆಯಿಂದ ಪರದೆಯ ಪೂರ್ಣ ನೋಟವು ಕಾಣುವುದನ್ನು ಸುನಿಶ್ಚಿತಗೊಳಿಸಲು ಹಿಂಭಾಗಕ್ಕಿಂತ ಹೆಚ್ಚು ಎತ್ತರದಲ್ಲಿ ಇರತಕ್ಕದ್ದು.
(10) ಪರದೆಯ ಮೇಲೆ ಬಿಟ್ಟ ಚಿತ್ರದ ಗಾತ್ರವು ಈ ಕೆಳಗೆ ನಿರ್ದಿಷ್ಟಪಡಿಸಿದಂತೆ ಇರತಕ್ಕದ್ದು, ಎಂದರೆ:-
- 200ರಿಂದ 400 ಮೋಟಾರು ಕಾರುಗಳಿಗಾಗಿ ಎತ್ತರ 11 ಮೀಟರುಗಳು ಅಗಲ 25 ಮೀಟರುಗಳು ಭೂಮಿಯ ಮೇಲೆ ತಳ 6 ಮೀಟರುಗಳು 2. 401ರಿಂದ 600 ಮೋಟಾರು ಕಾರುಗಳಿಗಾಗಿ ಎತ್ತರ 13 ಮೀಟರುಗಳು ಅಗಲ 30 ಮೀಟರುಗಳು ಭೂಮಿಯ ಮೇಲೆ ತಳ 7 ಮೀಟರುಗಳು 3. 601ರಿಂದ 1000 ಮೋಟಾರು ಕಾರುಗಳಿಗಾಗಿ. ಎತ್ತರ 19 ಮೀಟರುಗಳು ಅಗಲ 43 ಮೀಟರುಗಳು ಭೂಮಿಯ ಮೇಲೆ ತಳ 8 ಮೀಟರುಗಳು
(11) = ಪರದೆಯು, ಸೂರ್ಯನು ಮುಳುಗುವುದರಿಂದ ಅಥವಾ ಮುಸ್ಸಂಜೆಯ ava ಅದರ ಮೇಲೆ ಬೀಳದ ಹಾಗೆ ಇರತಕ್ಕದ್ದು. ಅದನ್ನು ಕಾಂಕ್ರೀಟು ಸಾಮಗ್ರಿ ಅಥವಾ ಉಕ್ಕಿನ ಚೌಕಟ್ಟಿನಿಂದ ನಿರ್ಮಿಸಿರತಕ್ಕದ್ದು.
(12) ಗಂಟೆಗೆ 160 ಕಿಲೋ ಮೀಟರುಗಳಷ್ಟು ವೇಗದ ಗಾಳಿಯನ್ನು ಅಥವಾ ಪ್ರತಿ ಚದರ ಮೀಟರಿಗೆ 120 ಕಿಲೋ ಗ್ರಾಂಗಳ ಒತ್ತಡವನ್ನು ತಡೆದುಕೊಳ್ಳುವ ಹಾಗೆ ಪರದೆಯನ್ನು ನಿರ್ಮಿಸಬೇಕು. ಪರದೆಯು ಸ್ವಲ್ಪ ಮುಂದಕ್ಕೆ ಬಾಗಿರತಕ್ಕದ್ದು. ಗರಿಷ್ಠ ಬಾಗುವಿಕೆಯು ಲಂಬ ಅಕ್ಷದೊಂದಿಗೆ 8 ಡಿಗ್ರಿಗಳಷ್ಟಿರತಕ್ಕದ್ದು.
(13) ಪರದೆ ಅಥವಾ ಅದರ ಭಾಗವು ರಸ್ತೆಯ ಬದಿಯಿಂದ ಕಾಣಿಸತಕ್ಕದ್ದಲ್ಲ.
(14) ಪರದೆಯ ತುತ್ತ ತುದಿಯಲ್ಲಿ ಕೆಂಪು ಎಚ್ಚರಿಕೆ ಮಿತಿಗಳನ್ನು ಏರಿಸಿರತಕ್ಕದ್ದು ಮತ್ತು ಅದರ ಮೇಲೆ ವೀಕ್ಷಕರ ಪ್ರದೇಶಕ್ಕೆ ಬೆಳಕು ನೀಡಲು ಪ್ರವಾಹ ದೀಪಗಳನ್ನು ಏರಿಸತಕ್ಕದ್ದು.
(15) ಮೋಟಾರು ಕಾರುಗಳ ಹೋಗುವ ದಾರಿಗಳು ಪರ್ಯಾಯವಾಗಿ 10 ಮೀಟರುಗಳ ಅಗಲ ಅಥವಾ 10 ಮೀಟರುಗಳು ಮತ್ತು 8 ಮೀಟರುಗಳು ಅಗಲವಾಗಿ ಏಕ ಪ್ರಕಾರವಾಗಿ ಇರತಕ್ಕದ್ದು. ಪರಂತು, ಮೊದಲಿನ 4 ಸಾಲುಗಳು 10 ಮೀಟರುಗಳ ಅಗಲದ ಹೋಗುವ ದಾರಿಗಳನ್ನು ಹೊಂದಿರತಕ್ಕದ್ದು.
(16) ಧ್ವನಿವರ್ಧಕ ಕಂಬಗಳನ್ನು ಒಂದು ಮೋಟಾರು ಕಾರಿನ ಎರಡೂ ಕಡೆಯಲ್ಲಿ ಇರುವ ಹಾಗೆ ಒದಗಿಸತಕ್ಕದ್ದು. ಒಂದು ಸಾಲಿನಲ್ಲಿ ಎರಡು ಕಂಬಗಳ ನಡುವಿನ ಅಂತರವು 6 ಮೀಟರುಗಳಿಗಿಂತ ಕಡಿಮೆ ಇರತಕ್ಕದ್ದಲ್ಲ... ಧ್ವನಿವರ್ಧಕಗಳಿಗಾಗಿನ ಕಂಬಗಳನ್ನು ಕಾಂಕ್ರೀಟಿನ ತಳದಲ್ಲಿ ಹೂಳತಕ್ಕದ್ದಲ್ಲ ಮತ್ತು ಅವುಗಳ ಸ್ಥಾನವನ್ನು ಸೂಚಿಸುವ ಹಾಗೆ ಅವುಗಳ ಮೇಲೆ ದೀಪವು ಇರತಕ್ಕದ್ದು. ದೀಪಗಳು ಕಂಬಗಳ ಪಕ್ಕದಲ್ಲಿ ಪರದೆಗೆ ವಿಮುಖವಾಗಿ ಇರತಕ್ಕದ್ದು. ಅದು ಆ ಸಾಲು ಮತ್ತು ಸ್ಥಳದ ಸಂಖ್ಯೆಯನ್ನು ಸಹ ಬೆಳಗಿಸತಕ್ಕದ್ದು:
ಪರಂತು, ಲೈಸೆನ್ಸ್ ನೀಡುವ ಪ್ರಾಧಿಕಾರಿಗೆ ಮನದಟ್ಟಾಗುವಂತೆ ಆ ಧ್ವನಿಯ ಸಂವಹನಕ್ಕಾಗಿ ಪರ್ಯಾಯ ವ್ಯವಸ್ಥೆಯನ್ನು ಮಾಡಿದ್ದರೆ ಪ್ರತಿಯೊಂದು ಮೋಟಾರು ಕಾರಿಗಾಗಿ ಧ್ವನಿವರ್ಧಕ ಸಹಿತ ಕಂಬವನ್ನು ಒದಗಿಸುವುದು ಅವಶ್ಯವಿರತಕ್ಕದ್ದಲ್ಲ:
ಮತ್ತು ಪರಂತು, ಯಾವುದೇ ಸಂದರ್ಭದಲ್ಲಿ ಒಂದೇ ಸಾಲಿನಲ್ಲಿ ಪಕ್ಕಪಕ್ಕದಲ್ಲಿ ನಿಂತಿರುವ ಯಾವುವೇ ಎರಡು ಮೋಟಾರು ಕಾರುಗಳ ನಡುವಣ ಅಂತರವು ಎರಡು ಮೀಟರುಗಳಿಗಿಂತ ಕಡಿಮೆ ಇರತಕ್ಕದ್ದಲ್ಲ.
(17) (i) ಪ್ರೊಜೆಕ್ಷನ್ ಕೊಠಡಿಯು, ಆವರಣದ ಕೇಂದ್ರದಲ್ಲಿ ಆವೃತ ಕಟ್ಟಡದಲ್ಲಿ ಇರತಕ್ಕದ್ದು ಅಂತಹ ಪ್ರೊಜೆಕ್ಷನ್ ಕೊಠಡಿಯು ಸಾರ್ವಜನಿಕ ಶೌಚಗೃಹ, ಕ್ಯಾಂಟಿನ್, ಅಡುಗೆ ಮನೆ, ಅಂಗಡಿಗಳ ಒಂದು ಭಾಗ ಮತ್ತು ಅಂತಹವೇ ಸೌಕರ್ಯಗಳಿಗೆ ಸ್ಥಳಾವಕಾಶವನ್ನು ಒದಗಿಸುವ ರಚನೆಯ ಭಾಗವಾಗಿರಬಹುದು. ಈ ರಚನೆಗಳಿಂದ ಬೆಳಕು ಚಿತ್ರವನ್ನು ಬಿಡುವುದರ ಮೇಲೆ ಬೀಳದಂತೆ ಅಥವಾ ಅದನ್ನು ಸರಿಯಾಗಿ ನೋಡುವುದನ್ನು ಅಡ್ಡಿಪಡಿಸದಂತೆ ಸಾಕಷ್ಟು ಎಚ್ಚರಿಕೆಯನ್ನು ವಹಿಸತಕ್ಕದ್ದು. ಪ್ರೊಜೆಕ್ಷನ್ ಕೊಠಡಿಯ ಹಿಂಭಾಗದಲ್ಲಿ ಸಹ ಕಾರು ಹೋಗುವ ದಾರಿಗಳನ್ನು ಒದಗಿಸಿರುವಲ್ಲಿ ಆ ಪ್ರದೇಶವನ್ನು ಪರದೆಯ ಸರಿಯಾದ ದೃಶ್ಯವನ್ನು ಪಡೆಯುವ ಹಾಗೆ ಎತ್ತರಿಸಿರತಕ್ಕದ್ದು.
(ii) ಇಬ್ಬರು ಆಪರೇಟರುಗಳು, ಸಾಂಪ್ರದಾಯಿಕ ಪ್ರೊಜೆಕ್ಟರುಗಳೊಂದಿಗೆ ಡ್ರೈವ್-ಇನ್ ಸಿನಿಮಾದ ಹೆಸರಿನಲ್ಲಿ ಸಮ್ಮತಿಯನ್ನು ಪಡೆಯತಕ್ಕದ್ದು ಮತ್ತು ಪ್ರತಿ ಪರದೆಗಾಗಿ ಒಬ್ಬ ಆಪರೇಟರನು, ವಿದ್ಯುತ್ ಪರಿವೀಕ್ಷಣಾಲಯ ಇಲಾಖೆಯಿಂದ ಡಿಜಿಟಲ್ ಪ್ರೊಜೆಕ್ಷನ್ ವ್ಯವಸ್ಥೆಯಂಥ ಮುಂದುವರೆದ ತಂತ್ರಜ್ಞಾನದೊಂದಿಗೆ ಡ್ರೈವ್-ಇನ್ ಸಿನಿಮಾಗಳ ಹೆಸರಿನಲ್ಲಿ ಸಮ್ಮತಿಯನ್ನು ಪಡೆಯತಕ್ಕದ್ದು.
(18) ಡ್ರೈವ್-ಇನ್ ಸಿನಿಮಾ ಲೈಸೆನ್ಸಿಗಾಗಿ ಫೀಜುಗಳು, ಸರ್ಕಾರವು ಕಾಲಕಾಲಕ್ಕೆ ನಿರ್ದಿಷ್ಟಪಡಿಸಿದಂತಿರತಕ್ಕದ್ದು.