(1) ಪ್ರತಿಯೊಂದು ಸಿನಿಮಾ ಥಿಯೇಟರ್ ಅಥವಾ ಮಲ್ಟಿಪ್ಲೆಕ್ಸ್ ಕಟ್ಟಡಕ್ಕೆ ಈ ಕೆಳಕಂಡ ಅಗ್ನಿನಂದಿಸುವ ಉಪಕರಣಗಳನ್ನು ಒದಗಿಸತಕ್ಕದ್ದು, ಎಂದರೆ:
(ಎ) ಪ್ರೊಜೆಕ್ಷನ್ ಕೊಠಡಿಯಲ್ಲಿ,-
(i) ಒಂದು ದಪ್ಪ ಉಣ್ಣೆ ಕಂಬಳಿ;
(ii) ಎರಡು ಬಕೆಟ್ ನೀರು, ಪ್ರತಿಯೊಂದು ಒಂಬತ್ತು ಲೀಟರುಗಳ ಸಾಮರ್ಥ್ಯವುಳ್ಳದ್ದು )
(ii) ಪ್ರತಿಯೊಂದು ಎರಡು ಕಿಲೋಗ್ರಾಂ ಸಾಮರ್ಥ್ಯವುಳ್ಳ ಕಾರ್ಬನ್ ಡೈಆಕ್ಸೈಡ್ (ಇಂಗಾಲಾಮ್ಸ) ನಂದಿಗೆಗಳು ಅಥವಾ ಐದು ಕಿಲೋಗ್ರಾಂ ಸಾಮರ್ಥ್ಯವುಳ್ಳ ಒಂದು ಕಾರ್ಬನ್ ಡೈಆಕ್ಸೈಡ್ ನಂದಿಗೆ;
(ಬಿ) ಸಭಾಂಗಣ ಮತ್ತು ಬಾಲ್ಕನಿಯಲ್ಲಿ,-
(i) ಸಭಾಂಗಣದಲ್ಲಿ ಪ್ರತಿಯೊಂದು ಐದು ಕಿಲೋಗ್ರಾಂ ಸಾಮರ್ಥ್ಯವುಳ್ಳ ನಾಲ್ಕು ಎಬಿಸಿ ಪೌಡರ್ ನಂದಿಗೆಗಳು ಮತ್ತು ಬಾಲ್ಕನಿಯು ಇರುವಲ್ಲೆಲ್ಲಾ ಬಾಲ್ಕನಿಯಲ್ಲಿ ಎರಡು ಅಂತಹ ನಂದಿಗೆಗಳು;
(ii) ಸಭಾಂಗಣದಲ್ಲಿ ಉದ್ದದಲ್ಲಿ ಆರು. ಮೀಟರುಗಳಿಗಿಂತ ಕಡಿಮೆಯಿಲ್ಲದ ಬಗ್ಗಿಸಬಹುದಾದ ನೀರ್ಕೊಳವೆಗೆ ಲಗತ್ತಿಸಿದ ಎರಡು ರಿಕಾಪು ಪಂಪುಗಳು ಮತ್ತು ಬಾಲ್ಕನಿಯು ಇರುವಲೆಲ್ಲಾ ಬಾಲ್ಕನಿಯಲ್ಲಿ ಒಂದು ರಿಕಾಪು ಪಂಪು. ಪ್ರತಿಯೊಂದು ರಿಕಾಪು ಪಂಪಿಗೆ ಯಾವಾಗಲೂ ನೀರು ತುಂಬಿಡಬೇಕಾದ ಪ್ರತಿಯೊಂದು ಹತ್ತು ಲೀಟರು ಸಾಮರ್ಥ್ಯದ ಸಮತಲವುಳ್ಳ ಎರಡು ಚಪ್ಪಟೆ. ತಳ ಬಕೆಟುಗಳನ್ನು ಒದಗಿಸತಕ್ಕದ್ದು ಮತ್ತು ಅಗತ್ಯಪಡಿಸಲಾದಂತೆ ಇನ್ ಬಿಲ್ಬ್ ಅಗ್ನಿ ನಂದಿಸುವ ಉಪಕರಣವನ್ನು ಒದಗಿಸತಕ್ಕದ್ದು;
(ii) . ಪ್ರತಿಯೊಂದು ಎರಡು ಕಿಲೋಗ್ರಾಂ ಸಾಮರ್ಥ್ಯವುಳ್ಳ ಎರಡು ಕಾರ್ಬನ್ ಡೈಆಕ್ಸೈಡ್ ನಂದಿಗೆಗಳು ಮತ್ತು ಐದು ಕಿಲೋಗ್ರಾಂ ಸಾಮರ್ಥ್ಯವುಳ್ಳ ಒಂದು ಕಾರ್ಬನ್ ಡೈಆಕ್ಸೈಡ್ ನಂದಿಗೆ;
(iv) . ನೆಲ ಪ್ರದೇಶದ ಪ್ರತಿ ಒಂದು ನೂರು ಚದರ ಮೀಟರುಗಳು ಅಥವಾ ಅದರ ಭಾಗಕ್ಕಾಗಿ ನೀರು ತುಂಬಿದ ಹತ್ತು ಲೀಟರುಗಳ ಸಾಮರ್ಥ್ಯವುಳ್ಳ ಒಂದು ಅಗ್ನಿಶಾಮಕ ಬಕೆಟ್, ಸಭಾಂಗಣದಲ್ಲಿ ಕನಿಷ್ಠ ಪಕ್ಷ ಹನ್ನೆರಡು ಬಕೆಟುಗಳನ್ನು ಮತ್ತು ಬಾಲ್ಕನಿಯಲ್ಲಿ ಎರಡು ಬಕೆಟಗಳನ್ನು ಇಡತಕ್ಕದ್ದು;
(ಸಿ). ವಿದ್ಯುಚ್ಛಕ್ತಿ ಸ್ಥಾಪನೆಗಳ ಹತ್ತಿರ,-
(i) ಪ್ರತಿಯೊಂದು ಮುಖ್ಯ ಸ್ವಿಚ್ ಫಲಕದ ಹತ್ತಿರದಲ್ಲಿ ಐದು ಕಿಲೋಗ್ರಾಂ ಸಾಮರ್ಥ್ಯವುಳ್ಳ ಒಂದು ಎಬಿಸಿ ಪೌಡರ್ ಸಂದಿಗೆಗಳು;
(ii) ವಿದ್ಯುಚ್ಛಕ್ತಿ ಮೀಟರುಗಳು, ರೋಟರಿ ಕನ್ವರ್ಟರುಗಳು ಅಥವಾ ಯಾವುದೇ ಇತರ ವಿದ್ಯುಚ್ಛಕ್ತಿ ಯಂತ್ರ ಸಾಮಗ್ರಿ ಅಥವಾ ಸಲಕರಣೆಯನ್ನು ಸ್ಥಾಪಿಸಿರುವಾಗಲೆಲ್ಲಾ, ಐದು ಕಿಲೋಗ್ರಾಂ ಸಾಮರ್ಥ್ಯವುಳ್ಳ ಒಂದು ಎಬಿಸಿ ಪೌಡರ್ ನಂದಿಗೆಯನ್ನು ಒದಗಿಸತಕ್ಕದ್ದು.
(2) ಎಲ್ಲ ಅಗ್ನಿಶಾಮಕ ಉಪಕರಣಗಳನ್ನು ಉಪಯೋಗಕ್ಕೆ ಸಿದ್ಧವಾಗಿ ಲಭ್ಯವಾಗುವಂಥ ರೀತಿಯಲ್ಲಿ ಇಡತಕ್ಕದ್ದು. ಸಭಾಂಗಣದಲ್ಲಿನ ಅಗ್ನಿಶಾಮಕ ಉಪಕರಣಗಳ ಬಹುಭಾಗವನ್ನು 1.20 ಮೀಟರಿನ ಎತ್ತರದಲ್ಲಿ ಪರದೆಯ ಅಕ್ಕಪಕ್ಕದಲ್ಲಿ ಜೋಡಿಸತಕ್ಕದ್ದು.
(3) ಅಗ್ನಿಶಾಮಕ ಬಕೆಟುಗಳು ದುಂಡನೆಯ ತಳವನ್ನು, ಪ್ರತಿಯೊಂದು ಒಂಭತ್ತು ಲೀಟರುಗಳ ಸಾಮರ್ಥ್ಯವನ್ನು ಹೊಂದಿರತಕ್ಕದ್ದು. ಅವುಗಳಿಗೆ ಸ್ವಚ್ಚ ಒಣ ಮರಳನ್ನು ತುಂಬಿ ಇಂಗ್ಲೀಷ್, ಹಿಂದಿ ಮತ್ತು ಕನ್ನಡದಲ್ಲಿ ದೊಡ್ಡ ಬಿಳಿಯ ಅಕ್ಷರಗಳಲ್ಲಿ “ಈ!ಡೀ'' ಎಂಬ ಪದವನ್ನು ಕೆಂಪು ಬಣ್ಣದಲ್ಲಿ ಬರೆದಿರತಕ್ಕದ್ದು.
(4) ಸಾಗಿಸಲು ಸುಲಭವಾದ ಎಲ್ಲ ನಂದಿಗೆಗಳನ್ನು ನಿಯತಕಾಲಿಕವಾಗಿ ನಿರ್ವಹಿಸತಕ್ಕದ್ದು ಮತ್ತು ಅಗ್ನಿಶಾಮಕ ಅಧಿಕಾರ ವ್ಯಾಪ್ತಿಯಲ್ಲಿ ಅಥವಾ ಸರ್ಕಾರವು ಈ ಬಗ್ಗೆ ಅಧಿಕೃತಗೊಳಿಸಿದ ಎಂಜಿನಿಯರಿಂಗ್ ಫರ್ಮ್ ಹೈಡ್ರಾಲಿಕ್ ಒತ್ತಡದ ಮೂಲಕ ಒಳಪಡಿಸತಕ್ಕದ್ದು. ಇಪ್ಪತ್ತು ಕಿಲೋಗ್ರಾಂ/ ಎರಡು ಚದರ ಸೆಂಟೀ ಮೀಟರ್ ಒತ್ತಡವನ್ನು ಒಂದು ನಿಮಿಷ ತಡೆದುಕೊಳ್ಳಬಲ್ಲದು ಎಂದು ತೋರಿಸಲು ಮತ್ತು ಅಂತಹ ಪರೀಕ್ಷೆಯ ಪ್ರಮಾಣಪತ್ರವನ್ನು ಲೈಸೆನ್ಸ್ ನೀಡುವ ಪ್ರಾಧಿಕಾರಿಗೆ ಒಪ್ಪಿಸತಕ್ಕದ್ದು, ಆ ತರುವಾಯ ವಾರ್ಷಿಕವಾಗಿ ಅಂತಹವೇ ಪರೀಕ್ಷೆಗಳನ್ನು ಪುನರಾವರ್ತಿಸತಕ್ಕದ್ದು.
(5) ಸಿನಿಮಾ ಕಟ್ಟಡ ಅಥವಾ ಮಲ್ಟಿಪ್ಲೆಕ್ಸ್ನ ಸಿನಿಮಾ ಆಪರೇಟರನ್ನು ಒಳಗೊಂಡು ಸೇವಕರು ಮತ್ತು ಸಿಬ್ಬಂದಿಗೆ ಮೂರು ದಿನಗಳಿಗಿಂತ ಕಡಿಮೆಯಿಲ್ಲದ ಅವಧಿಯವರೆಗೆ ಪ್ರತಿಯೊಬ್ಬರಿಗೂ ರಾಜ್ಯದಲ್ಲಿರುವ ಅಗ್ವಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿಯಲ್ಲಿನ ಆವರಣಗಳಲ್ಲಿ ಇಟ್ಟುಕೊಂಡು ಬಂದಿರುವ ಎಲ್ಲ ಅಗ್ನಿಶಾಮಕ ಸಾಧನ ಸಾಮಗ್ರಿಯ ಉಪಯೋಗದಲ್ಲಿ ತರಬೇತಿ ಕೊಡತಕ್ಕದ್ದು.
(6). ಲೈಸೆನ್ಸ್ದಾರನು,-
(i) ತಯಾರಿಕೆದಾರರ ತಪಶೀಲುಗಳ ಮೇರೆಗೆ ಮತ್ತು ಜಿಲ್ಲಾ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಅಗ್ನಿಶಾಮಕ ಅಧಿಕಾರಿಯ ನಿರ್ದೇಶನಗಳ ಮೇರೆಗೆ ಲೈಸೆನ್ಸು ಪಡೆದ ಆವರಣಗಳಲ್ಲಿ ಒದಗಿಸಿದ ಸುಲಭವಾಗಿ ಸಾಗಿಸಬಹುದಾದ ಅಗ್ನಿ ನಂದಿಗೆಯನ್ನು ನಿಯತಕಾಲಿಕವಾಗಿ ನಿರ್ವಹಿಸಿಕೊಂಡು ಬರತಕ್ಕದ್ದು ಮತ್ತು ಅದನ್ನು ಪುನಃ ತುಂಬತಕ್ಕದ್ದು ಮತ್ತು ಹಾಗೆ ಮಾಡಿರುವುದರ ಬಗ್ಗೆ ಕಾಗದದ ಚೀಟಿಯ ಮೇಲೆ ದಿನಾಂಕವನ್ನು ದಾಖಲು ಮಾಡತಕ್ಕದ್ದು ಮತ್ತು ಅದನ್ನು ಅಂತಹ ಸಂಪುಟದ (ಕಂಟೈನರ್) ಹೊರಗಡೆ ಅಂಟಿಸತಕ್ಕದ್ದು;
(ii) ಲೈಸೆನ್ಸ್ ಪಡೆದ ಆವರಣದಲ್ಲಿ ಒದಗಿಸಿದ ಸುಲಭವಾಗಿ ಸಾಗಿಸಬಹುದಾದ ಪ್ರತಿಯೊಂದು ಅಗ್ನಿ ನಂದಿಗೆಯನ್ನು ಪ್ರತಿ ಒಂದು ವರ್ಷಕ್ಕೊಮ್ಮೆ ಅಥವಾ ತಯಾರಿಕೆದಾರನು ನಿರ್ದೇಶಿಸಿದಂತೆ ಮತ್ತು ಜಿಲ್ಲಾ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಗ್ನಿಶಾಮಕ ಅಧಿಕಾರಿಯ ನಿರ್ದೇಶನಗಳಂತೆ ವಿಸರ್ಜಿಸತಕ್ಕದ್ದು ಮತ್ತು ಅದನ್ನು ಪುನಃ ತುಂಬತಕ್ಕದ್ದು ಮತ್ತು ಅಂತಹ ಪುನಃ ತುಂಬಿದ ದಿನಾಂಕವನ್ನು ಸುಲಭವಾಗಿ ಸಾಗಿಸಬಹುದಾದ ಆಗ್ನಿ ನಂದಿಗೆ£ಯ ಕಂಟೈನರ್ದ ಹೊರಮೈ ಮೇಲೆ ಸೂಕ್ತ ಜಾಗದಲ್ಲಿ ದಾಖಲು ಮಾಡತಕ್ಕದ್ದು.