(1) ಯಾವುದೇ ಸಿನಿಮಾದ ಸಂಬಂಧದಲ್ಲಿ ಈ ಮುಂದಿನವುಗಳ ಹೊರತು ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಮಂಜೂರು ಮಾಡತಕ್ಕದಲ್ಲ.
(ಎ) ಸಿನಿಮಾ ನಿವೇಶನವು ಕನಿಷ್ಠ ಪ್ರದೇಶವಾಗಿರುವ ಹೊರತು,-
(i) ಉದ್ದೇಶಿತ ಸಿನಿಮಾ ಕಟ್ಟಡದಲ್ಲಿ ಉದ್ದೇಶಿಸಿದ ಆಸನಗಳ ಒಟ್ಟು ಸಂಖ್ಯೆಯು ನಾಲ್ಕು ನೂರು ಅಥವಾ ಅದಕ್ಕಿಂತ ಕಡಿಮೆ ಇದ್ದರೆ, ರಸ್ತೆಗೆ ಹೊಂದಿಕೊಂಡಿರುವ ಒಂದು ಪಕ್ಕವು 18 ಮೀಟರುಗಳಿಗಿಂತ ಕಡಿಮೆಯಿಲ್ಲದಂತೆ ಒಂಭತ್ತು ನೂರು ಚದರ ಮೀಟರಗಳಷ್ಟು ಇದ್ದರೆ ;
(ii) ಉದ್ದೇಶಿತ ಸಿನಿಮಾ ಕಟ್ಟಡದಲ್ಲಿ ಆಸನಗಳ ಒಟ್ಟು ಸಂಖ್ಯೆ ಆರುನೂರು ಅಥವಾ ಅದಕ್ಕಿಂತ ಕಡಿಮೆ ಇದ್ದರೆ, ರಸ್ತೆಗೆ ಹೊಂದಿಕೊಂಡಿದ್ದ ಒಂದು ಪಕ್ಕವು 18 ಮೀಟರುಗಳಿಗಿಂತ ಕಡಿಮೆ ಇಲ್ಲದ ಒಂದು ಸಾವಿರದ ಮೂನ್ನೂರ ಐವತ್ತು ಚದರ ಮೀಟರುಗಳಿದ್ದರೆ;
(ii) ಉದ್ದೇಶಿತ ಸಿನಿಮಾ ಕಟ್ಟಡಗಳಲ್ಲಿ ಆಸನಗಳ ಒಟ್ಟು ಸಂಖ್ಯೆಯು ಎಂಟುನೂರು ಅಥವಾ ಅದಕ್ಕಿಂತ ಕಡಿಮೆ ಇದ್ದು ಥಿಯೇಟರುಗಳ ಬಾಲ್ಕನಿ ವ್ಯವಸ್ಥೆ ಇಲ್ಲದಿರುವ ಸಂದರ್ಭದಲ್ಲಿ ರಸ್ತೆಗೆ ಹೊಂದಿಕೊಂಡಿರುವ ಒಂದು ಪಕ್ಕವು ಮೂವತ್ತು ಮೀಟರುಗಳಿಗಿಂತ ಕಡಿಮೆಯಿಲ್ಲದಿದ್ದು ಒಂದು ಸಾವಿರದ ಎಂಟು ನೂರು ಚದರ ಮೀಟರುಗಳು ಇದ್ದರೆ;
(iv) ಉದ್ದೇಶಿತ ಸಿನಿಮಾ ಕಟ್ಟಡದಲ್ಲಿ ಆಸನಗಳ ಒಟ್ಟು ಸಂಖ್ಯೆಯು ಒಂದು ಸಾವಿರ ಅಥವಾ ಅದಕ್ಕೂ ಕಡಿಮೆ ಇದ್ದು, ಬಾಲ್ಕನಿ ಆಸನಗಳ ವ್ಯವಸ್ಥೆ ಇಲ್ಲದಿದ್ದ ಥಿಯೇಟರ್ನ ಸಂದರ್ಭಗಳಲ್ಲಿ, ರಸ್ತೆಗೆ ಹೊಂದಿಕೊಂಡಿರುವ ಒಂದು ಪಕ್ಕವು ಎರಡು ಸಾವಿರದ ಎರಡು ನೂರು ಚದರ ಮೀಟದ್ಗಳು ಐವತ್ತು ಚದರ ಮೀಟರುಗಳಿಗಿಂತ ಕಡಿಮೆಯಿಲ್ಲದ ಸಂದರ್ಭದಲ್ಲಿ;
(v) ಉದ್ದೇಶಿತ ಸಿನಿಮಾ ಕಟ್ಟಡದಲ್ಲಿ ಆಸನಗಳ ಒಟ್ಟು ಸಂಖ್ಯೆಯು ಒಂದು ಸಾವಿರ ಅಥವಾ ಅದಕ್ಕೂ ಕಡಿಮೆ ಇದ್ದು, ಬಾಲ್ಕನಿ ಆಸನಗಳ ವ್ಯವಸ್ಥೆ ಇಲ್ಲದಿದ್ದ ಥಿಯೇಟರ್ನ ಸಂದರ್ಭದಲ್ಲಿ ರಸ್ತೆಗೆ ಹೊಂದಿಕೊಂಡಿರುವ ಒಂದು ಪಕ್ಕವು ಇಪ್ಪತ್ತು ಮೀಟದ್ಗಳಿಗಿಂತ ಕಡಿಮೆಯಿಲ್ಲದಿದ್ದು, ಒಂದು ಸಾವಿರದ ಐದುನೂರು ಚದರ ಮೀಟರುಗಳಿದ್ದರೆ;
(ಬಿ) (i) ಸಿನಿಮಾ ನಿವೇಶನವು, ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮದ ಮೇರೆಗೆ ಸಕ್ಷಮ ಪ್ರಾಧಿಕಾರದಿಂದ ಆ ಪ್ರದೇಶಕ್ಕೆ ಸಿದ್ಧಪಡಿಸಿದ ಪ್ರಮುಖ ಯೋಜನೆಯಲ್ಲಿ ಉದ್ದೇಶಿತ ಅನುಮತಿಸಬಹುದಾದ ಭೂಮಿಯ ಬಳಕೆಯ ಸಂದರ್ಭದಲ್ಲಿ;
ಪರಂತು, ಪ್ರಮುಖ ಯೋಜನೆಗಳನ್ನು ಅಸ್ತಿತ್ವದಲ್ಲಿರುವ ಪ್ರಧಾನ ವಾಣಿಜ್ಯ ಪ್ರದೇಶಗಳನ್ನು ಸಿದ್ಧಪಡಿಸದೆ ಇರುವಲ್ಲಿ ಪರಿಗಣನೆಗೆ ತೆಗೆದುಕೊಳ್ಳತಕ್ಕದ್ದು.
(1) ಮಹಾಯೋಜನೆಗಳಲ್ಲಿ ಸಿನಿಮಾ ಥಿಯೇಟರ್ಗೆ ಗ್ರಾಮೀಣ ಪ್ರದೇಶದ ಬೇರೆ ಸ್ಥಳದಲ್ಲಿ ಅನುಮೋದಿತವಾದರೆ ಅಥವಾ ಲೈಸನ್ಸ್ ಪ್ರಾಧಿಕಾರದಿಂದ ಮಲ್ಟಿಪ್ಲೆಕ್ಸ್ಗೆ ಅನುಮತಿ ನೀಡಬಹುದು. ರಸ್ತೆಯ ವಿಸ್ತೀರ್ಣಕ್ಕೆ ಸಂಬಂಧಿಸಿದಂತೆ ಪೂರೈಸಿದ ಷರತ್ತುಗಳಿದ್ದರೆ ಮತ್ತು ಚಲನಚಿತ್ರ ನಿಯಮಗಳ ಅಡಿಯಲ್ಲಿ ಷರತ್ತು ಹಾಕಲಾದ ಮತ್ತು ಕಾನೂನುಗಳಲ್ಲಿ ಅಗತ್ಯಪಡಿಸಲಾದಂತೆ ಸಕ್ಷಮ ಪ್ರಾಧಿಕಾರದಿಂದ ಭೂಮಿಯ ಬಳಕೆ ಮಾರ್ಪಾಟಾಗುವುದು / ಪರಿವರ್ತನೆಯಾಗುವುದು.
(ಸಿ) (1 ಅರೆಖಾಯಂ ಸಿನಿಮಾ ನಿವೇಶನ, ಸಾರ್ವಜನಿಕ ಮುಖ್ಯರಸ್ತೆಯ ಪಕ್ಕದಲ್ಲಿರುವ ಕನಿಷ್ಠ ರಸ್ತೆಯ ವಿಸ್ತಾರವನ್ನು ಒಳಗೊಂಡಂತೆ ನಗರ ಪ್ರದೇಶಗಳಲ್ಲಿ ಕಾಲುದಾರಿಯು ಹನ್ನೆರಡು ಮೀಟದ್ಗಳುಷ್ಟಿರತಕ್ಕದ್ದು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಾಲುದಾರಿಯನ್ನು ಒಳಗೊಂಡಂತೆ ಒಂಭತ್ತು ಮೀಟದ್ಗಳಷ್ಟು;
ಪರಂತು, ಲೈಸೆನ್ಸ್ ನೀಡುವ ಪ್ರಾಧಿಕಾರಿಯು. ಅನುಮತಿಯ ಷರತ್ತುಗಳು ಮತ್ತು ಪರಿಮಿತಿಗಳಿರಬಹುದು ಅಂತಹವಕ್ಕೆ ಸಂಬಂಧಿಸಿದಂತೆ ಆದೇಶವನ್ನು ಲಿಖಿತದಲ್ಲಿ ನೀಡುವುದು, ಸಿನಿಮಾವಿದ್ದರೆ ಅಥವಾ ಮಲ್ಟಿಫ್ಲೆಕ್ಸ್ ನಿವೇಶನವಿರುವ ಸಾರ್ವಜನಿಕ ಮುಖ್ಯರಸ್ತೆಯ ಪಕ್ಕದಿಂದ ಇತರೆ ರಾಷ್ಟ್ರೀಯ ಹೆದ್ದಾರಿ /ರಾಜ್ಯ ಹೆದ್ದಾರಿ /ಮುಖ್ಯ ಜಿಲ್ಲೆ ರಸ್ತೆಗಳ ಕನಿಷ್ಠ ವಿಸ್ತಾರದ ಕಾಲುದಾರಿಯನ್ನು ಒಳಗೊಂಡಂತೆ ರಸ್ತೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಒಂಭತ್ತು ಮೀಟದ್ಗಳಿರತಕ್ಕದ್ದು.
(ಡಿ) ಕರ್ನಾಟಕ ಹೆದ್ದಾರಿ ನಿಯಮಗಳು, 1966 ರಲ್ಲಿ ಅಗತ್ಯಪಡಿಸಲಾದಂತೆ ಅರೆಖಾಯಂ ಸಿನಿಮಾ ಕಟ್ಟಡ ಮುಂಭಾಗ/ಮುಂದಿನ ಸಮುಚ್ಛಯ ಎಂಟು ಮೀಟದ್ಗಳಾಗಿರತಕ್ಕದ್ದು, ಅಂದರೆ ಯಾವುದು ಹೆಚ್ಚಿನದೋ ಅದು.
(ಇ) ಸಿನಿಮಾ ಸ್ಥಳದ ಪ್ರವೇಶ ಮತ್ತು ನಿರ್ಗಮನದ ರಸ್ತೆಗಳು ಸಾರ್ವಜನಿಕರ ಪ್ರವೇಶ ಮತ್ತು ನಿರ್ಗಮನದ ಕನಿಷ್ಠ ವಿಸ್ತಾರದ ಪ್ರತಿ ಆರು ಮೀಟದ್ಗಳಿಷ್ಠಿರತಕ್ಕದ್ದು.
(ಎಫ್) ಈ ನಿಯಮಗಳನ್ನು ಪ್ರಾರಂಭಿಸಿದ ದಿನಾಂಕದಿಂದ ಥಿಯೇಟದ್ಗಳು ಅಸ್ತಿತ್ವದಲ್ಲಿರುವುದು, ಸಿನಿಮಾದ ಸ್ಥಳದಲ್ಲಿ ಸೂಕ್ತವಾದ ನಿಲುಗಡೆ ಜಾಗವಿರುವುದು;
(i) ಹತ್ತು ಲಕ್ಷ ಮತ್ತು ಅದಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಸ್ಥಳಗಳಲ್ಲಿ ಕನಿಷ್ಟ ಇಪ್ಪತ್ತು ಕಾರುಗಳ ಜಾಗವನ್ನು ಒಳಗೊಂಡಿರುವಂತೆ, ಪ್ರತಿ ಐವತ್ತು ಆಸನಗಳಿರುವ ಜಾಗದಲ್ಲಿ ಒಂದು ಕಾರು ನಿಲುಗಡೆ ಜಾಗವಿರುವುದು;
(ii) ಒಂದು ಲಕ್ಷದಿಂದ ಹತ್ತು ಲಕ್ಷದ ನಡುವಿನ ಜನಸಂಖ್ಯೆ ಇರುವ ಸ್ಥಳಗಳಲ್ಲಿ ಕನಿಷ್ಠ ಹದಿನೈದು ಕಾರುಗಳ ಜಾಗವನ್ನು ಒಳಗೊಂಡಿರುವಂತೆ, ಪ್ರತಿ ಐವತ್ತು ಆಸನಗಳಿರುವ ಜಾಗದಲ್ಲಿ ಒಂದು ಕಾರು ನಿಲುಗಡೆ ಜಾಗವಿರುವುದು; ಮತ್ತು
(ii) . ಐವತ್ತು ಸಾವಿರ ಮತ್ತು ಒಂದು ಲಕ್ಷಗಳ ನಡುವಿನ ಜನಸಂಖ್ಯೆ ಇರುವ ಸ್ಥಳಗಳಲ್ಲಿ ಕನಿಷ್ಟ ಹತ್ತು ಕಾರುಗಳ ಜಾಗವನ್ನು ಒಳಗೊಂಡಿರುವಂತೆ, ಪ್ರತಿ ಐವತ್ತು ಆಸನಗಳಿರುವ ಜಾಗದಲ್ಲಿ ಒಂದು ಕಾರು ನಿಲುಗಡೆ ಜಾಗವಿರುವುದು;
(iv) ಐವತ್ತು ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಸ್ಥಳಗಳಲ್ಲಿ ಕನಿಷ್ಠ ಐದು. ಕಾರುಗಳ ಜಾಗವನ್ನು ಒಳಗೊಂಡಿರುವಂತೆ, ಪ್ರತಿ ಐವತ್ತು ಆಸನಗಳಿರುವ ಜಾಗದಲ್ಲಿ ಒಂದು ಕಾರು ನಿಲುಗಡೆ ಜಾಗವಿರುವುದು.
(ಜಿ) ಈ ನಿಯಮಗಳನ್ನು ಪ್ರಾರಂಭಿಸಿದ ದಿನಾಂಕದಿಂದ ಮತ್ತು ಆ ದಿನಾಂಕದಂದು ಉದ್ದೇಶಿತ ಥಿಯೇಟಕ್ಗಳಿಗಾಗಿ ಸಿನಿಮಾ,-
(i) ಹತ್ತು ಲಕ್ಷ ಮತ್ತು ಅದಕ್ಕಿಂತ ಮೇಲ್ಪಟ್ಟು ಜನಸಂಖ್ಯೆಯನ್ನು ಹೊಂದಿರುವ ಸ್ಥಳಗಳಲ್ಲಿ ಇಪ್ಪತ್ತು ಕಾರುಗಳಿಗಾಗಿ ಕನಿಷ್ಠ ಸ್ಥಳಾವಕಾಶಕ್ಕೆ ಒಳಪಟ್ಟು, ಮಲ್ಪಿಪ್ಲೆಕ್ಸ್ಗಳಲ್ಲಿ ಪ್ರತಿ ಇಪ್ಪತ್ತೈದು ಆಸನಗಳಿಗೆ ಒಂದು ಕಾರು ನಿಲ್ದಾಣದಂತೆ ಸ್ಥಳಾವಕಾಶ ಮತ್ತು ಸಿನಿಮಾ ಥಿಯೇಟರ್ನ ಪ್ರತಿ ಇಪ್ಪತ್ತೈದು ಆಸನಗಳಿಗೆ ಒಂದು ಕಾರು ನಿಲ್ದಾಣದಂತೆ;
(ii) ಒಂದರಿಂದ ಹತ್ತು ಲಕ್ಷ ಒಳಗಿನ ಜನಸಂಖ್ಯೆಯನ್ನು ಹೊಂದಿರುವ ಸ್ಥಳಗಳಲ್ಲಿ ಹದಿನೈದು ಕಾರುಗಳಿಗಾಗಿ ಕನಿಷ್ಠ ಸ್ಥಳಾವಕಾಶಕ್ಕೆ ಒಳಪಟ್ಟು ಮಲ್ಟಿಪ್ಲೆಕ್ಸ್ಗಳಲ್ಲಿ ಪ್ರತಿ ಇಪ್ಪತ್ತೈದು ಆಸನಗಳಿಗೆ ಒಂದು ಕಾರು ನಿಲ್ದಾಣದಂತೆ ಮತ್ತು ಸಿನಿಮಾ ಥಿಯೇಟದ್ಗಳಲ್ಲಿ ಪ್ರತಿ ಐವತ್ತು ಆಸನಗಳಿಗೆ ಒಂದು ಕಾರು ನಿಲ್ದಾಣದಂತೆ; ಮತ್ತು
(ii) . ಐವತ್ತು ಸಾವಿರ ಮತ್ತು ಒಂದು ಲಕ್ಷ ಒಳಗಿನ ಜನಸಂಖ್ಯೆಯನ್ನು ಹೊಂದಿರುವ ಸ್ಥಳಗಳಲ್ಲಿ ಹತ್ತು ಕಾರುಗಳಿಗಾಗಿ ಕನಿಷ್ಠ ಸ್ಥಳಾವಕಾಶಕ್ಕೆ ಒಳಪಟ್ಟು, ಮಲ್ಟಿಫ್ಲೆಕ್ಸ್ಗಳಿಗಾಗಿ ಪ್ರತಿ ಇಪ್ಪತ್ತೈದು ಆಸನಗಳಿಗೆ ಒಂದು ಕಾರು ನಿಲ್ದಾಣದಂತೆ ಮತ್ತು ಸಿನಿಮಾ ಥಿಯೇಟರುಗಳಿಗಾಗಿ ಪ್ರತಿ ಐವತ್ತು ಆಸನಗಳಿಗೆ ಒಂದು ಕಾರು ನಿಲ್ದಾಣದಂತೆ;
(iv) ಐವತ್ತು ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಜನಸಂಖ್ಯೆಯನ್ನು ಹೊಂದಿರುವ ಸ್ಥಳಗಳಲ್ಲಿ ಐದು ಕಾರುಗಳಿಗಾಗಿ ಕನಿಷ್ಠ ಸ್ಥಳಾವಕಾಶಕ್ಕೆ ಒಳಪಟ್ಟು, ಮಲ್ಟಿಷ್ಲೆಕ್ಸ್ಗಳಿಗಾಗಿ ಪ್ರತಿ ಇಪ್ಪತ್ತೈದು ಆಸನಗಳಿಗೆ ಒಂದು ಕಾರು 0] ನಿಲ್ದಾಣದಂತೆ;
- ಸೂಕ್ತವಾದ ನಿಲುಗಡೆಯ ಜಾಗವನ್ನು ಹೊಂದಿರುವುದು.
(ಹೆಚ್) ಈ ನಿಯಮಗಳು ಪ್ರಾರಂಭವಾದ ದಿನಾಂಕದಂದು ಮತ್ತು ಆ ದಿನಾಂಕದಂದು ಉದ್ದೇಶಿತ ಅಸ್ತಿತ್ವದಲ್ಲಿರುವ ಅರೆಖಾಯಂ ಸಿನಿಮಾ ಸ್ಥಳದಲ್ಲಿ ಮತ್ತು ಈ ನಿಯಮಗಳು ಪ್ರಾರಂಭವಾದ ದಿನಾಂಕದಿಂದ ಮತ್ತು ಆ ದಿನಾಂಕದಂದು ಉದ್ದೇಶಿತ ಅರೆಖಾಯಂ ಸಿನಿಮಾ ಸ್ಥಳದಲ್ಲಿ;
(i) ಐವತ್ತು ಸೈಕಲ್ಲುಗಳ ಕನಿಷ್ಠ ಸ್ಥಳವಕಾಶಕ್ಕೆ ಒಳಪಟ್ಟು ಆ ಸೈಕಲ್ಗಳ ನಿಲುಗಡೆ ಒಳಗೊಂಡಂತೆ ಕಾರು ನಿಲುಗಡೆಯ ಸಂಖ್ಯೆಗೆ ಅಗತ್ಯಪಡಿಸಲಾದ ಶೇಕಡಾ ಇಪ್ಪತೈದರಷ್ಟು ನಿಲುಗಡೆಯನ್ನು ಎರಡು ಮತ್ತು ಮೂರು ಚಕ್ರಗಳ ವಾಹನಗಳಿಗೆ ನಿಲುಗಡೆಯನ್ನು ಹೆಚ್ಚುವರಿಯಾಗಿ.
(ii) ಅರೆಖಾಯಂ ವಾಹನ ನಿಲುಗಡೆ ಅಗತ್ಯತೆಯ ಸಂದರ್ಭಗಳಲ್ಲಿ ಮೇಲೆ ನಿರ್ದಿಷ್ಟಪಡಿಸಲಾದಂತೆ ಅಥವಾ ವಲಯಗಳಲ್ಲಿ ಅವರವರ ನಿಯಂತ್ರಣದಲ್ಲಿ ನಿರ್ದಿಷ್ಟಪಡಿಸಲಾದಂತೆ ನಿಗದಿಪಡಿಸತಕ್ಕದ್ದು. ಥಿಯೇಟರ್ ಭಾಗದ ವಾಹನ ನಿಲ್ದಾಣಕ್ಕಾಗಿ ಪೂರ್ಣ ಕಟ್ಟಡದ ಅಗತ್ಯತೆಯ ಒಟ್ಟು ನಿಲುಗಡೆಯನ್ನು ಪ್ರತ್ಯೇಕವಾಗಿ ಮೀಸಲಿರಿಸಲು - ಸೂಕ್ತವಾದ ನಿಲುಗಡೆಯ ಸ್ಥಳವನ್ನು ಹೊಂದಿರತಕ್ಕದ್ದು.
ಪರಂತು, ವಿಕಲಚೇತನರಿಗೆ ಸೂಕ್ತ ನಿಲುಗಡೆಯ ಏರ್ಪಾಟುಗಳನ್ನು ಮೀಸಲಿರಿಸತಕ್ಕದ್ದು.
(ಐ) ಸಂಚಾರದ ತೊಂದರೆಗಳು ಅಥವಾ ಸಮಸ್ಯೆಗಳು ಉಂಟು ಮಾಡುವ ಸಂಭವಿಲ್ಲದಿರುವ ಸ್ಥಳದಲ್ಲಿ ಅರೆಖಾಯಂ ಸಿನಿಮಾ ಸ್ಥಳಗಳಿರಬೇಕು.
(ಜೆ) ಅರೆಖಾಯಂ ಸಿನಿಮಾ ಸ್ಥಳವು,-
(ಎ) ಐವತ್ತು ಮೀಟದ್ಗಳಿಂದ
(i) ಯಾವುದೇ ಅಸ್ತಿತ್ವದಲ್ಲಿರುವ ಪೆಟ್ರೋಲ್ ಬಂಕ್ ಅಥವಾ ಪೆಟ್ರೋಲ್ ಬಂಕ್ಗಾಗಿ ಲೈಸೆನ್ಸ್ ಪಡೆದಿರುವ ಸ್ಥಳ ಮತ್ತು ಅಗ್ನಿ ಸಂಭಾವ್ಯ ಇತರ ಸ್ಥಳಗಳಿಂದ; ಅಥವಾ
(ii) ಉಪಯೋಗದಲ್ಲಿರುವ ಯಾವುದೇ ಸಮುದಾಯ ಆರಾಧನೆಯ ಸ್ಥಳ, ಸ್ಮಶಾನ ಭೂಮಿ, ಸಮಾದಿ ಭೂಮಿ ಅಥವಾ ಗೋರಿ ಸ್ಥಳಗಳಿಂದ; ಅಥವಾ
(ii) . ಯಾವುದೇ ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆ ಅಥವಾ ಅಂತಹ ಶೈಕ್ಷಣಿಕ ಸಂಸ್ಥೆಗಳಿಗೆ ಹೊಂದಿಕೊಂಡಿರುವ ಯಾವುದೇ ವಸತಿ ಸಂಸ್ಥೆಯಿಂದ; ಅಥವಾ
(iv) ಯಾವುದೇ ಸಾರ್ವಜನಿಕ ಆಸ್ಪತ್ರೆ ಅಥವಾ ಖಾಸಗಿ ನರ್ಸಿಂಗ್ ಹೋಂನಿಂದ; ಅಥವಾ
(v) ಯಾವುದೇ ಮಾನ್ಯತೆ ಪಡೆದ ಅನಾಥಾಲಯದಿಂದ; ಅಥವಾ
(vi) ಯಾವುದೇ ಜನನಿಬಿಡ ಪ್ರದೇಶ ಅಥವಾ ವ್ಯಾಪಾರ ಉದ್ದೇಶಗಳಿಂದ ವಿಶಿಷ್ಟವಾದ ವಸತಿ ಉದ್ದೇಶಗಳಿಗಾಗಿ ಸಾಮಾನ್ಯವಾಗಿ ಉಪಯೋಗಿಸಿದ ಪ್ರದೇಶದಿಂದ - ಐವತ್ತು ಮೀಟುರುಗಳಿಗಿಂತ ಕಡಿಮೆಯಿಲ್ಲದ ದೂರದಲ್ಲಿರತಕ್ಕದ್ದು:
ಪರಂತು, ಲೈಸೆನ್ಸ್ ನೀಡುವ ಪ್ರಾಧಿಕಾರಿಯು ಪ್ರಸ್ತಾವನೆಯು ಧ್ವನಿನಿರೋಧಕ ಸಿನಿಮಾ ಕಟ್ಟಡವನ್ನು ನಿರ್ಮಿಸುವುದಕ್ಕೆ ಆಗಿದ್ದರೆ, ಅದರ ವಿವೇಚಾನುಸಾರ, ಸಾರ್ವಜನಿಕ ಹಿತಾಸಕ್ತಿ, ಉದ್ದೇಶಿತ ನಿವೇಶನವನ್ನು ಪರಿಶೀಲಿಸಿದ ತರುವಾಯ ಬರಹದಲ್ಲಿ ದಾಖಲ್ಮಾಡಬೇಕಾದ ಕಾರಣಗಳಿಗಾಗಿ, ಆ ಸ್ಥಳದ ಸೂಕ್ತತೆಯನ್ನು ಪರ್ಯಾಲೋಚಿಸಿ ಪ್ರತಿಯೊಂದು ಪ್ರಕರಣದಲ್ಲಿ ವಿಧಿಸಲು ಅವಶ್ಯವೆಂದು ಪರ್ಯಾಲೋಚಿಸಬಹುದಾದಂಥ ಷರತ್ತುಗಳಿಗೊಳಪಟ್ಟು (i) ರಿಂದ (iv) ರವರೆಗಿನ ಬಾಬುಗಳಲ್ಲಿ ನಿರ್ದಿಷ್ಟಪಡಿಸಿದ ಎಲ್ಲಾ ಅಥವಾ ಯಾವುದೇ ಷರತ್ತುಗಳನ್ನು ಸಡಿಲಗೊಳಿಸಬಹುದು:
ಮತ್ತೂ ಪರಂತು, ಪ್ರತಿಯೊಂದು ಪ್ರಕರಣದ ಸಂಗತಿಗಳು ಮತ್ತು ಸಂದರ್ಭಗಳನ್ನು ಪರ್ಯಾಲೋಚಿಸಿ ಬೇರೆ-ಬೇರೆ ಷರತ್ತುಗಳನ್ನು ಬೇರೆ ಬೇರೆ ಪ್ರಕರಣಗಳಲ್ಲಿ ವಿಧಿಸಬಹುದು.
(ಬಿ) ಯಾವುದೇ ಸಂರಕ್ಷಿತ ಸ್ಮಾರಕ, ರಕ್ಷಣಾ ಸ್ಥಾವರಗಳು, ರಾಷ್ಟ್ರೀಯ ಉದ್ಯಾನವನಗಳು, ವಸ್ತು ಸಂಗ್ರಹಾಲಯಗಳು ಮತ್ತು ಪ್ರಧಾನ ಟೆಲಿಫೋನ್ ಅಥವಾ ಟೆಲಿಗ್ರಾಫ್ ಅಥವಾ ವೈರ್ಲೆಸ್ ಅಥವಾ ದೂರ ಸಂಪರ್ಕ ಸ್ಥಾವರಗಳು ಇರುವಂಥ ಕಟ್ಟಡಗಳಿಂದ ಒಂದು ನೂರು ಮೀಟರುಗಳಿಗಿಂತ ದೂರದಲ್ಲಿರಬೇಕು;
(2) (ಎ) ಹತ್ತು ಸಾವಿರ ಅಥವಾ ಅದಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಸ್ಥಳಗಳಲ್ಲಿ ಅನುಮತಿಸಬೇಕಾದ ಸಿನಿಮಾಗಳ ಸಂಖ್ಯೆಯನ್ನು.
(i) ಅದು ಮಹಾನಗರ ಪ್ರದೇಶವಾಗಿದ್ದರೆ, ಪ್ರತಿ ಇಪ್ಪತ್ತು ಸಾವಿರ ಜನಸಂಖ್ಯೆ ಅಥವಾ ಹತ್ತು ಸಾವಿರವನ್ನು ಮೀರುವ ಅದರ ಭಾಗಕ್ಕಾಗಿ ಒಂದು ಸಿನಿಮಾದ ಆಧಾರದ ಮೇಲೆ; ಮತ್ತು
(1) ಇತರ ಸ್ಥಳಗಳಲ್ಲಿ, ಪ್ರತಿ ಹತ್ತು ಸಾವಿರ ಜನಸಂಖ್ಯೆ ಅಥವಾ ಐದು ಸಾವಿರವನ್ನು ಮೀರುವ ಅದರ ಭಾಗಕ್ಕೆ ಒಂದು ಸಿನಿಮಾದ ಆಧಾರದ ಮೇಲೆ -. ನಿರ್ಧರಿಸತಕ್ಕದ್ದು.
(ಬಿ) ಐದು ಲಕ್ಷ ಮತ್ತು ಅದಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಪ್ರತಿಯೊಂದು ಪಟ್ಟಣಗಳು ಮತ್ತು ಇತರೆ ನಗರಗಳಿಂದ ನಾಲ್ಕು ನೂರು ಮೀಟರುಗಳ ದೂರದೊಳಗೆ ಸಿನಿಮಾವನ್ನು ಸ್ಥಾಪಿಸಲು ಅನುಮತಿ ನೀಡತಕ್ಕದಲ್ಲ.
(3) (2) ಉಪನಿಯಮದಲ್ಲಿರುವುದಾವುದು, ಸಿನಿಮಾ ಸ್ಥಳವು. ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರದ ಒಡೆತನದಲ್ಲಿದ್ದರೆ, ಮಹಾನಗರ ಪ್ರದೇಶದಲ್ಲಿ ಸಿನಿಮಾಗಳ ಸ್ಥಾಪನೆಗಾಗಿ ಅನ್ವಯವಾಗತಕ್ಕದಲ್ಲ.
(4) (ಎ) ಮಹಾನಗರ ಪ್ರದೇಶದಲ್ಲಿನ ಪ್ರತಿಯೊಂದು ವಾರ್ಡ್ 6ನೇ ಪ್ರಕರಣದ ಉದ್ದೇಶಕ್ಕಾಗಿ ಒಂದು ಪ್ರದೇಶವಾಗಿರತಕ್ಕದ್ದು. ಲೈಸೆನ್ಸ್ ನೀಡುವ ಪ್ರಾಧಿಕಾರಿಯು 5ನೇ ಪ್ರಕರಣದ ಉಪಬಂಧಗಳು ಮತ್ತು (2)ನೇ ಉಪನಿಯಮದ ಉಪಬಂಧಗಳನ್ನು ಗಮನದಲ್ಲಿರಿಸಿ, BBO (2)ನೇ ಉಪ-ನಿಯಮದ ಉದ್ದೇಶಕ್ಕಾಗಿ ಅಂತಹ ಪ್ರತಿಯೊಂದು ವಾರ್ಡ್ ಸ್ಥಳವಾಗಿದಿದ್ದರೆ, ಹೇಗೋ ಹಾಗೆ, ಅಂತಹ ಪ್ರತಿಯೊಂದು ವಾರ್ಡಿನಲ್ಲಿ ಅಧನಿಯಮದ ಮೇರೆಗೆ ಲೈಸೆನ್ಸ್ ನೀಡಬಹುದಾದ ಸ್ಥಳಗಳ ಸಂಖ್ಯೆಯನ್ನು ಪರಿಮಿತಿಗೊಳಿಸಬಹುದು:
ಪರಂತು, ಅಂತಹ ಎಲ್ಲಾ ವಾರ್ಡುಗಳಿಗೆ ಸಂಬಂಧಿಸಿದಂತೆ ಹಾಗೆ ನಿರ್ಧರಿಸಿದ ಸ್ಥಳಗಳ ಒಟ್ಟು ಸಂಖ್ಯೆಯು ಮಹಾನಗರ ಪ್ರದೇಶವನ್ನು ಒಟ್ಟಾರೆ. ತೆಗೆದುಕೊಂಡು ಅದಕ್ಕೆ ಸಂಬಂಧಿಸಿದಂತೆ. (2)ನೇ ಉಪ ನಿಯಮದ ಮೇರೆಗೆ ಅನುಮತಿಸಬಹುದಾದ ಸಂಖ್ಯೆಯನ್ನು ಮೀರತಕ್ಕದ್ದಲ್ಲ.
(ಬಿ) 6ನೇ ಪ್ರಕರಣದ ಮೇರೆಗೆ ಆದೇಶವನ್ನು ಸರ್ಕಾರದ ಪೂರ್ವಾನುಮೋದನೆಯನ್ನು ಪಡೆದ ಹೊರತು ಮಾಡತಕ್ಕದ್ದಲ್ಲ.
ವಿವರಣೆ,- (1), (2)ನೇ, (3)ನೇ ಮತ್ತು (4)ನೇ ಉಪ-ನಿಯಮಗಳ ಉದ್ದೇಶಕ್ಕಾಗಿ.
(1) ‘Qed’ ವನ್ನು ಎರಡು ಸಿನಿಮಾ ಕಟ್ಟಡಗಳನ್ನು ಸಂಪರ್ಕಿಸುವ ಮತ್ತು ಸಾರ್ವಜನಿಕರು ಸಾಮಾನ್ಯವಾಗಿ ಉಪಯೋಗಿಸುವ ಅತಿ ಸಮೀಪದ ದಾರಿ, ಗಲ್ಲಿ, ಬೀದಿ ಅಥವಾ ರಸ್ತೆಗಳನ್ನು ಪರಿಶೀಲಿಸತಕ್ಕದ್ದು.
(2) "ಮಹಾನಗರ ಪ್ರದೇಶ' ಎಂದರೆ, ದಂಡ ಪ್ರಕ್ರಿಯಾ ಸಂಹಿತೆ, 1973ರ 8ನೇ ಪ್ರಕರಣದ ಮೇರೆಗೆ ಮಹಾನಗರ ಪ್ರದೇಶವೆಂದು ಘೋಷಿಸಲಾದ ನಗರ ಅಥವಾ ಪಟ್ಟಣ.
(3) ‘RY’ ಎಂದರೆ, ಹತ್ತು ಸಾವಿರ ಮತ್ತು ಅದಕ್ಕಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಪಟ್ಟಣಗಳ ಮತ್ತು ನಗರಗಳ ಸಂದರ್ಭದಲ್ಲಿ, ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರದ ಅಧಿಕಾರ ವ್ಯಾಪ್ತಿಯೊಳಗೆ ಬರುವ ಪ್ರದೇಶ ಮತ್ತು ಇತರ ಸಂದರ್ಭಗಳಲ್ಲಿ, ಸಿನಿಮಾವನ್ನು ಸ್ಥಾಪಿಸಲು ಉದ್ದೇಶಿಸಿದಂಥ ಸ್ಥಳೀಯ ಪ್ರಾಧಿಕಾರದ ಕೇಂದ್ರದಿಂದ ಐದು ಕಿಲೋ ಮೀಟರುಗಳ ವ್ಯಾಪ್ತಿಯೊಳಗಿನ ಪ್ರದೇಶ.
(2) (i) ಸಿನಿಮಾ ಕಟ್ಟಡ ಮತ್ತು ಕಾಂಪೌಂಡ್ ಗೋಡೆಯ ಒಳಗಿನ ಎಲ್ಲೆಗಳ ನಡುವಿನ ಸ್ಪಷ್ಟ ಅಂತರವು ಪ್ರವೇಶ ಕಡೆ 10 ಮೀಟರುಗಳಿಗಿಂತ ಮತ್ತು ಬೇರೆ ಕಡೆಗಳಲ್ಲಿ 5 ಮೀಟದ್ಗಳಿಗಿಂತ ಕಡಿಮೆಯಿಲ್ಲದಂತೆ ಇರಬೇಕು.