ಅನುಸೂಚಿ -ಎ (2(12)ನೇ ನಿಯಮವನ್ನು ನೋಡಿ) ಅಗ್ನಿನಿರೋಧಕ ಸಾಮಗ್ರಿಗಳು
- (ಎ) ಮಣ್ಣು, ಗಾರೆ ಅಥವಾ ಸಿಮೆಂಟ್ನಲ್ಲಿನ ಸುಟ್ಟ ಇಟ್ಟಿಗೆ ಅಥವಾ ಸೈಜುಗಲ್ಲುಗಳ ಅಥವಾ ಅವುಗಳಿಗೆ ಸಮಾನವಾದ ಸಾಮಗ್ರಿಗಳ ಅಥವಾ ಕನಿಷ್ಠಪಕ್ಷ ಮೂರು ನೂರ ಐವತ್ತು ಮಿಲಿ. ಮೀಟರಿನ ಮತ್ತು ನಾಲ್ಕು ನೂರು ಮಿಲಿ ಮೀಟರುಗಳಷ್ಟು ದಪ್ಪವಿರುವ ಕ್ರಮವಾಗಿ ರೀ-ಇನ್ಫೋಸ್ಟ್ಸ್ (ಬಲವರ್ಧಿತ) ಅಲ್ಲದ ಕನಿಷ್ಠ ಮೂರು ನೂರು ಮಿಲಿ ಮೀಟರುಗಳಷ್ಟು ದಪ್ಪದ ಸಿಮೆಂಟು ಕಾಂಕ್ರೀಟ್ ಮತ್ತು ಕನಿಷ್ಠ ಒಂದು ನೂರಾ ಐವತ್ತು ಮಿಲಿ ಮೀಟರುಗಳಷ್ಟು ದಪ್ಪ ರೀ-ಇನ್ಫೋಸ್ಟ್ ಗೋಡೆಗಳು.
(ಬಿ) ರೀ-ಇನ್ಫೋಸ್ಟ್ಸ್ ಕಾಂಕ್ರೀಟಿನ ಛಾವಣಿ ಅಥವಾ ಇಟ್ಟಿಗೆ ಗೋಡೆ ಮತ್ತು ಜಾಕ್ ಕಮಾನು ಛಾವಣಿಗಳ ಸಹಿತವಾದ ಪ್ರಿಕಾಸ್ಟ್ ತೊಲೆಗಳ ರೀ ಇನ್ಫೋಸ್ಟ್ಸ್ ಇಟ್ಟಿಗೆ ಕಾಂಕ್ರೀಟ್ ಛಾವಣಿಗಳು, ಸುಟ್ಟ ಸ್ಲ್ಯಾ ಬ್ ಛಾವಣಿಗಳು ಅಗ್ನಿನಿರೋಧಕಗಳಲ್ಲ;
(ಸಿ) ರೀ-ಇನ್ಪೋಸ್ಟ್ಸ್ ಸಿಮೆಂಟ್ ಕಾಂಕ್ರೀಟ್ ಕಬ್ಬಿಣದ ಗರ್ಡರ್ಗಳ, ತೊಲೆಗಳು ಮತ್ತು ಸಂಯೋಜಕಗಳು, ಅವುಗಳನ್ನು (ಎ) ಉಪ-ಪ್ಯಾರಾದಲ್ಲಿ ವಿವರಿಸಿದಂತೆ ಆವರಣದಲ್ಲಿ ಇರಿಸಿದ್ದರೆ ಮಾತ್ರ ಅವುಗಳು ಅಗ್ನಿ ನಿರೋಧಕಗಳಾಗಿರುತ್ತವೆ;
(ಡಿ) ಮಣ್ಣು, ಸುಣ್ಣ ಅಥವಾ ಸಿಮೆಂಟು ಗಾರೆಯಲ್ಲಿ ಕಂಬಗಳನ್ನು ಇಟ್ಟಿಗೆ ಅಥವಾ ಸೈಜ್ ಕಲ್ಲಿನಿಂದ ಅಥವಾ ಇತರ ಕಲ್ಲಿನಿಂದ ಕಟ್ಟಿದ ಊರುಗಂಬಗಳು ಮತ್ತು ಸ್ತಂಭಗಳು. ರೀ-ಇನ್ಫೋಸ್ಟ್ಸ್ ಅಥವಾ ರೀ-ಇನ್ಫೋಸ್ಟ್ಸ್ ಅಲ್ಲದ ಸಿಮೆಂಟ್ ಕಾಂಕ್ರೀಟಿನ ಊರುಗಂಬಗಳು ಮತ್ತು ಸ್ತಂಭಗಳು, ಆದರೆ ಗ್ರಾನೈಟ್ ಅಮೃತಶಿಲೆ, ಸುಣ್ಣದ ಕಲ್ಲು ಸ್ತಂಭಗಳು ಅಗ್ನಿನಿರೋಧಕವಲ್ಲ;
(ಇ) ರೀ-ಇನ್ಫೋಸ್ಟ್ಸ್ ಸಿಮೆಂಟ್ ಕಾಂಕ್ರೀಟಿನ ಛಾವಣಿಯ ನಿರ್ಮಿತಿಗಳು ಅಥವಾ ರೀ-ಇನ್ಪೋಸ್ಟ್ಸ್ ಮಾಡಿದ ಇಟ್ಟಿಗೆ ಕಾಂಕ್ರೀಟ್ ಛಾವಣಿಗಳು ಮತ್ತು ಉಕ್ಕಿನ ಟ್ರಸ್ಸುಗಳು ಛಾವಣಿ ನಿರ್ಮಿತಿ ಅಥವಾ ಟ್ರಸ್ಸುಗಳನ್ನು ಒಳಗೊಂಡಿರುವ ಮೇಲ್ಪಟ್ಟವು ಅಗ್ನಿ ನಿರೋಧಕ ಗೋಡೆಗಳು, ಛಾವಣಿಗಳು ಮತ್ತು ನೆಲದಿಂದ ಆವೃತ್ತವಾಗಿದ್ದರೆ ಮತ್ತು ಅದನ್ನು ದಹ್ಯ ಸಾಮಗ್ರಿ ದಾಸ್ತಾನಿಗಾಗಿ ಉಪಯೋಗಿಸದಿದ್ದರೆ, ಉಕ್ಕಿನ ಸಾಮಗ್ರಿಗಳನ್ನು ಆವೃತಗೊಳಿಸಿದ್ದರೆ ಮಾತ್ರ ಅಗ್ನಿ ನಿರೋಧಕವಾಗಿರುತ್ತವೆ;
(ಎಫ್) ಬಾಗಿಲುಗಳು, ಅವು ಸ್ವಯಂಚಾಲಿತವಾಗಿ ಮುಚ್ಚಿಕೊಳ್ಳುವ ಹಾಗಿದ್ದರೆ ಪರೀಕ್ಷಿಸಿದಾಗ ಅವು ಕನಿಷ್ಠ ಅರ್ಧ ಗಂಟೆಯವರೆಗೆ ಒಂದು ಸಾವಿರ ಡಿಗ್ರಿ ಸೆಂಟಿಗ್ರೇಡ್ ಉಷ್ಣತೆಯನ್ನು ತಡೆದುಕೊಳ್ಳಲು ಸಮರ್ಥವಾಗಿದ್ದರೆ ಮತ್ತು ಇಪ್ಪತ್ತು ಮಿಲಿ ಮೀಟರುಗಳ ಆಳಕ್ಕಿಂತ ಕಡಿಮೆಯಿರದ Bech, ಹಿಡಿಯುವುದಕ್ಕಾಗಿನ ಕೂರುಗಾಲುವೆ. ಸಹಿತವಾದ ಅಗ್ನಿ ನಿರೋಧಕ ಸಾಮಗ್ರಿಯಿಂದ ಬಾಗಿಲಿನ ಚೌಕಟ್ಟು ಇರುವುದಾದರೆ, ಆ ಬಾಗಿಲುಗಳು;
(ಜಿ) ಖಾಯಂ ಆಗಿ ಕೂಡಿಸಿದ ಶಟರ್ಗಳಿರುವ ಗಾಜು ಹವಣಿಸಿದ ಕಿಟಕಿಗಳನ್ನು ಪರೀಕ್ಷಿಸಿದಾಗ ಅವು ಅರ್ಧ ಗಂಟೆಯವರೆಗೆ ಒಡೆಯದೆ ಒಂದು ಸಾವಿರ ಡಿಗ್ರಿ ಸೆಂಟಿಗ್ರೇಡ್ ಉಷ್ಣತೆಯನ್ನು ತಡೆದುಕೊಳ್ಳುವಂತಿದ್ದರೆ, ಅಗ್ನಿ ನಿರೋಧಕವೆಂದು ಪರಿಗಣಿಸಬಹುದು;
(ಹೆಚ್) SAW ಮೂವತ್ತೈದು ಮಿಲಿ ಮೀಟರುಗಳಷ್ಟು ದಪ್ಪವುಳ್ಳ ಕಾಂಕ್ರೀಟಿನಿಂದ ಅಥವಾ ಸುಟ್ಟ ಇಟ್ಟಿಗೆಗಳಿಂದ ಉಕ್ಕಿನ ವಿಭಾಗದ ಪ್ರತಿಯೊಂದು ಭಾಗವು ಆವೃತಗೊಳ್ಳುವಂಥ ರೀತಿಯಲ್ಲಿ ಸಿಮೆಂಟ್ ಕಾಂಕ್ರೀಟ್ನಿಂದ ಸಿಮೆಂಟ್ ಗಾರೆಯಲ್ಲಿ ಇಟ್ಟಿಗೆಯೊಂದಿಗೆ ಎಲ್ಲಾ ಕಡೆಗಳಲ್ಲಿ ಉಕ್ಕು ವಿಭಾಗಗಳಲ್ಲಿ ಮತ್ತು ಅದರ ಸುತ್ತಮುತ್ತ ತುಂಬಿರುವುದನ್ನು ಒಳಗೊಂಡಿರುವ ಉಕ್ಕು ರಚನೆಯ ಅಗ್ನಿನಿರೋಧಕ ಆವರಣ;
(ಐ) . ಜಾಕ್ರಚ್ ಸೀಲಿಂಗ್ಗಳಲ್ಲಿ ಮತ್ತು ಉಕ್ಕಿನಿಂದ ಮಾಡಿದ ಚೌಕಟ್ಟಿನಲ್ಲಿ ide ವಿಭಾಗಗಳ ಪ್ಲಾಂಜ್ಗಳು, ಇಟ್ಟಿಗೆ ಅಥವಾ ಕಾಂಕ್ರೀಟಿನ ಪಾನ್ಲಿಂಗ್ದೊಂದಿಗೆ ರಚನೆಗಳು, ಅಗ್ನಿ ನಿರೋಧಕವಾಗುವುದಕ್ಕೆ ಯಾವುದೇ ಆವರಣ ಹಾಕುವ ಅಗತ್ಯವಿರುವುದಿಲ್ಲ.