ಲೈಸೆನ್ಸ್ದಾರನು ಅಥವಾ ಆತನ ವ್ಯವಸ್ಥಾಪಕನು ಸಿನಿಮಾ ಥಿಯೇಟರು ಅಥವಾ HO Bs’, ಆವರಣಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಂಡುಬರಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು ಮತ್ತು ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಆವರಣದಲ್ಲಿ ಉಗುಳುವುದು ಮತ್ತು ಇತರ ರೀತಿಗಳ ಮಾಲಿನ್ಯವನ್ನು ತಡೆಗಟ್ಟಲಾಗಿದೆಯೇ ಎಂಬುದನ್ನು ಸುನಿಶ್ಚಿತಪಡಿಸಿಕೊಳ್ಳತಕ್ಕದ್ದು.