(1) ಖಾಯಂ ಸಿನಿಮಾ ಕಟ್ಟಡ ಅಥವಾ ಮಲ್ಟಿಷ್ಣೆಕ್ಸ್ನ್ನು ನಿರ್ಮಿಸಲು ಅಥವಾ ಅಸ್ತಿತ್ವದಲ್ಲಿರುವ ಕಟ್ಟಡವನ್ನು ಖಾಯಂ ಸಿನಿಮಾ ಕಟ್ಟಡ ಅಥವಾ DO SKIT ಪರಿವರ್ತಿಸಲು ಉದ್ದೇಶಿಸುವ ವ್ಯಕ್ತಿಯು, ಮೊದಲು ಲೈಸೆನ್ಸ್ ನೀಡುವ ಪ್ರಾಧಿಕಾರಿಗೆ ನಮೂನೆ-'ಎ > ನಲ್ಲಿ ಅರ್ಜಿಯನ್ನು ಸಲ್ಲಿಸತಕ್ಕದ್ದು. ಅರ್ಜಿದಾರನು, ಸಂದರ್ಭಾನುಸಾರ ಉದ್ದೇಶಿತ ನಿವೇಶನ ಅಥವಾ ಪರಿವರ್ತಿಸಬೇಕಾದ ಕಟ್ಟಡದ ಮೇಲೆ ಸಾರ್ವಜನಿಕ ಮುಖ್ಯ ರಸ್ತೆಯಿಂದ ಸ್ಪಷ್ಟವಾಗಿ ಅದನ್ನು ನೋಡುವ ಹಾಗೆ ಅಂತಹ ಜಾಗದಲ್ಲಿ ಫಲಕದ ಮೇಲೆ, ಈ ಬಗ್ಗೆ ನಮೂನೆ-ಬಿ ನಲ್ಲಿ ನೋಟೀಸನ್ನು ಸಹ ಹಾಕತಕ್ಕದ್ದು. ಅಂತಹ ನೋಟೀಸು ಕನ್ನಡ ಮತ್ತು ಇಂಗ್ಲಿಷಿನಲ್ಲಿ ಇರತಕ್ಕದ್ದು. ಲೈಸೆನ್ಸ್ ನೀಡುವ ಪ್ರಾಧಿಕಾರಿಯು ಅರ್ಜಿದಾರನಿಗೆ ಲೈಸೆನ್ಸನ್ನು ನಿರ್ಣಯಿಸುವವರೆಗೂ ಅರ್ಜಿಯನ್ನು ಸೂಚನಾ ಫಲಕದ ಮೇಲೆ ಆ ನೋಟೀಸನ್ನು ಪ್ರದರ್ಶಿಸತಕ್ಕದ್ದು. ಆ ಫಲಕವು ಗಾತ್ರದಲ್ಲಿ ಕನಿಷ್ಟ ಪಕ್ಷ 1.25 ಮೀ x 1.00 ಮೀ ಅಳತೆಯದ್ದಾಗಿರತಕ್ಕದ್ದು ಮತ್ತು ನೋಟೀಸು ದಪ್ಪವಾಗಿ ಮತ್ತು ಸ್ಪಷ್ಟವಾಗಿ ಸ್ಫುಟವಾಗಿ ಅಕ್ಷರಗಳಲ್ಲಿರತಕ್ಕದ್ದು.
(2) ಅರ್ಜಿಯು ಈ ಮುಂದಿನವುಗಳೊಂದಿಗೆ ಲಗತ್ತಿಸಿರತಕ್ಕದ್ದು,-
(i) ಟ್ರೆಸಿಂಗ್ ಚಲನಚಿತ್ರದ ಮೇಲೆ ಮುದ್ರಿತ ಒಂದು ಮೂಲ ನಕ್ಷೆಯೊಂದಿಗೆ ಆರು ಪ್ರತಿಗಳಲ್ಲಿ ಅಳತೆಗೆ ಸರಿಯಾಗಿ ಬರೆದ ಪಟ್ಟಣ ನಕ್ಷೆಯ ಉದ್ಭೃತ ಭಾಗ ಮತ್ತು ಡಿಜಿಟಲ್ ನಮೂನೆಯಲ್ಲಿ ಇರಬೇಕು ಮತ್ತು ಉದ್ದೇಶಿತ ನಿವೇಶನದಿಂದ ಚಲನಚಿತ್ರಗಳನ್ನು ಚಾಲನೆ ಮಾಡಿಕೊಂಡು ಬರುವ ಸಂದರ್ಭದಲ್ಲಿ 500 ಮೀಟರುಗಳು ಮತ್ತು 1000 ಮೀಟರುಗಳ ದೂರದವರೆಗೆ ಇರುವಂಥ ಸುತ್ತಮುತ್ತಲ ರಸ್ತೆಗಳು ಮತ್ತು ಕಟ್ಟಡಗಳನ್ನು ಸ್ಪಷ್ಟವಾಗಿ ಸೂಚಿಸುವ ಅದೇ ನಕ್ಷೆಯ ಆರು ಪ್ರಿಂಟುಗಳು ಅಥವಾ ಪ್ರತಿಗಳನ್ನು ಒದಗಿಸತಕ್ಕದ್ದು, ಸದರಿ ನಿವೇಶನದಿಂದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳು, ದೇವಾಲಯಗಳು ಅಥವಾ ಸಾರ್ವಜನಿಕರಿಗೆ ಮಹತ್ವವೆನಿಸುವ ಇತರೆ ಸ್ಥಳಗಳ ದೂರವನ್ನು ಸಹ ತೋರಿಸತಕ್ಕದ್ದು.
(ii) ಟ್ರಿಸಿಂಗ್ ಚಲನಚಿತ್ರದ ಮೇಲೆ ಮೂಲ ಮುದ್ರಿತ ಪ್ರತಿಯಲ್ಲಿ ನಿವೇಶನ ಯೋಜನೆ ಯಾವುದೇ ಅದಕ್ಕೆ ಸೇರಿಕೊಂಡ ಕಟ್ಟಡಗಳು, ಉಪಗೃಹಗಳು ಮತ್ತು ಇತರ ರಚನೆಗಳು, ಒಳದಾರಿಗಳು, ರಸ್ತೆಗಳು, ಮಾರ್ಗಗಳು, ಬಾವಿಗಳು, ತೊಟ್ಟಿಗಳು, ನೀರೆತ್ತುವ ಕೊಳಾಯಿಗಳು, ಯಾವುದಾದರೂ ಇದ್ದರೆ ಅವುಗಳು, ಚರಂಡಿಗಳು, ನೀರಿನ ಚರಂಡಿ ಮತ್ತು ಪ್ರಮುಖ ಅನಿಲ ವಿತರಣಾ ವ್ಯವಸ್ಥೆಗಳು, ಭೂಮಿಯ ಒಳಗಿರುವ ಕೇಬಲ್ಲುಗಳು, ಮೇಲಿರುವ ಅತೀವ ಮತ್ತು ಹೆಚ್ಚಿನ ಅತೀವ ವೋಲ್ಟೇಜ್ ಲೈನ್ಗಳು, ಟೆಲಿಗ್ರಾಫ್ ಮತ್ತು ದೂರವಾಣಿ ಲೈನುಗಳು, ನದಿಗಳು ಅಥವಾ ನಾಲೆಗಳ ಅತೀವ ಪ್ರವಾಹ ಗುರುತುಗಳು, ಪಕ್ಕದ ಜಲಾಶಯದ ಗರಿಷ್ಠ ನೀರಿನ ಮಟ್ಟ, ಕೆರೆಗಳು ಪಕ್ಕದ ಬಾವಿಗಳ ನೀರಿನ ಮಟ್ಟ, ನಿವೇಶನದೊಳಗೆ ಮಳೆಗಾಲದಲ್ಲಿ ಉಂಟಾಗುವ ಕಾರಣಗಳು ಯಾವುವಾದರೂ ಇದ್ದರೆ ಅವುಗಳು, ಸ್ಥಳಾವಕಾಶ ಕಲ್ಪಿಸಬೇಕಾದ ಆಸನಗಳ ಸಂಖ್ಯೆಯೊಂದಿಗೆ ಚದರ ಮೀಟರುಗಳಲ್ಲಿ ಮುಕ್ತ ಪ್ರದೇಶಗಳು ಮತ್ತು ನಿವೇಶನ ಹಾಗೂ ಉದ್ದೇಶ ಕಟ್ಟಡದ ಅಳತೆಯನ್ನು ತೋರಿಸುವುದು ಚಿತ್ರಮಂದಿರ ಅಥವಾ ಮಲ್ಟಿಪ್ಲೆಕ್ಸ್ ಮತ್ತು ಅದರ ಆವರಣಗಳ ಬ್ಲಾಕ್ ಮಟ್ಟಗಳನ್ನು ತೋರಿಸುವ ಬ್ಲಾಕ್ ಮಟ್ಟದಲ್ಲಿ ಅದರಲ್ಲಿ ತೋರಿಸುವ 1:500ಕ್ಕಿಂತ ಕಡಿಮೆಯಲ್ಲದ ಅಳತೆಗೆ ಸರಿಯಾಗಿ ತೆಗೆದು ಆರು ಪ್ರತಿಗಳು ಸಹ ಲಗತ್ತಿಸತಕ್ಕದ್ದು.
(iii) ನಿರಾಕ್ಷೇಪಣಾ ಪ್ರಮಾಣಪತ್ರದ ಮಂಜೂರಾತಿಗಾಗಿ ಸರ್ಕಾರವು. ಕಾಲಕಾಲಕ್ಕೆ ಅಧಿಸೂಚಿಸಿದಂತೆ ಫೀಜುಗಳನ್ನು ಜಮೆ ಮಾಡಿರುವುದಕ್ಕೆ ಖಜಾನೆ ಚಲನ್. 2. ಲೈಸೆನ್ಸ್ ನೀಡುವ ಪ್ರಾಧಿಕಾರಿಯು ಆಕ್ಷೇಪಗಳನ್ನು ಆಹ್ವಾನಿಸುವುದು.- (1) ಲೈಸೆನ್ಸ್ ನೀಡುವ ಪ್ರಾಧಿಕಾರಿಯು, 24ನೇ ನಿಯಮದ ಮೇರೆಗೆ ಅರ್ಜಿಯನ್ನು ಸ್ವೀಕರಿಸಿದ ಮೇಲೆ, ಸದರಿ ಪ್ರದೇಶದಲ್ಲಿ ವ್ಯಾಪಕ ಪ್ರಸಾರವುಳ್ಳ ಎರಡು ಸ್ಥಳೀಯ ವಾರ್ತಾ ಪತ್ರಿಕೆಗಳಲ್ಲಿ ಒಂದು ಕನ್ನಡ ಮತ್ತು ಒಂದು ಇಂಗ್ಲೀಷ್ ಭಾಷೆಯಲ್ಲಿ ಆಕ್ಷೇಪಣೆಗಳನ್ನು ಆಹ್ವಾನಿಸಿ ಪ್ರಕಟಿಸುವ ಮೂಲಕ ಅಂತಹ ಉದ್ದೇಶವನ್ನು ಸಾರ್ವಜನಿಕರಿಗೆ. ಅರ್ಜಿದಾರನ ಖರ್ಚಿನಲ್ಲಿ ಅಧಿಸೂಚಿಸತಕ್ಕದ್ದು, ಅಂತಹ ನೋಟೀಸು. 'ಸಿ' ನಮೂನೆಯಲ್ಲಿರತಕ್ಕದ್ದು ಮತ್ತು ಆಕ್ಷೇಪಣೆಗಳನ್ನು ಆ ಅವಧಿಯೊಳಗೆ ಲೈಸೆನ್ಸ್ ನೀಡುವ ಪ್ರಾಧಿಕಾರಿಗೆ ಕಳುಹಿಸತಕ್ಕದ್ದು. ಆ ಅಂತಹ ಪ್ರಕಟಣೆಯ ದಿನಾಂಕದಿಂದ ಹದಿನೈದು ದಿನಗಳಾಗಿರತಕ್ಕದ್ದು. ಲೈಸೆನ್ಸ್ ನೀಡುವ ಪ್ರಾಧಿಕಾರಿಯು, ಖಾಯಂ ಸಿನಿಮಾ ಕಟ್ಟಡ ಮತ್ತು ಮಲ್ಟಿಪ್ಲೆಕ್ಸ್ ಸ್ಥಳಕ್ಕೆ ಉದ್ದೇಶಿತ ನಿವೇಶನದ ಸೂಕ್ತತೆ ಅಥವಾ ಅನ್ಯಥಾ ಅದಕ್ಕೆ ಸಂಬಂಧಿಸಿದಂತೆ ಅವರ ಅಭಿಪ್ರಾಯವನ್ನು ಪಡೆಯುವ ಉದ್ದೇಶಕ್ಕಾಗಿ ನಗರ ಪಾಲಿಕೆಯ ಪಟ್ಟಣ ಯೋಜನಾಧಿಕಾರಿ/ ನಗರಾಭಿವೃದ್ಧಿ ಪ್ರಾಧಿಕಾರಿ/ ಯೋಜನಾ ಪ್ರಾಧಿಕಾರಿ/ ಸಂದರ್ಭಾನುಸಾರ ಜಿಲ್ಲೆಯ ಪಟ್ಟಣ ಮತ್ತು ನಗರ ಯೋಜನೆಯ ಸಹಾಯಕ ನಿರ್ದೇಶಕರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲಾ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ/ ನಗರ ಪೊಲೀಸ್ ಆಯುಕ್ತರು/ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ/ ಜಿಲ್ಲೆ ಅಥವಾ ಆ ಪ್ರದೇಶದ ವಿದ್ಯುತ್ ಪರಿಶೀಲಕರಿಗೆ ಅರ್ಜಿದಾರನು ಒದಗಿಸಿದ ಅದರ ಲಗತ್ತುಗಳು ಅಥವಾ ದಸ್ತಾವೇಜುಗಳೊಂದಿಗೆ ಏಕಕಾಲದಲ್ಲಿ ಅರ್ಜಿಯ ಪ್ರತಿಗಳನ್ನು ಕಳುಹಿಸತಕ್ಕದ್ದು. (2) ಲೈಸೆನ್ಸ್ ನೀಡುವ ಪ್ರಾಧಿಕಾರಿಯು, ಆದಷ್ಟು ಬೇಗನೆ ಮತ್ತು ಯಾವುದೇ ಸಂದರ್ಭದಲ್ಲಿ (1)ನೇ ಉಪ-ನಿಯಮದಲ್ಲಿ ನಿರ್ದಿಷ್ಟಪಡಿಸಲಾದ ಅವಧಿಯು ಮುಕ್ತಾಯಗೊಂಡ ತರುವಾಯ ಮೂವತ್ತು ದಿವಸಗಳನ್ನು ಮೀರದ ಅವಧಿಯೊಳಗಾಗಿ ಖಾಯಂ ಸಿನಿಮಾ ಕಟ್ಟಡ ಅಥವಾ ಮಲ್ಟಿಷ್ಣೆಕ್ಸ್ ಸ್ಥಾಪನೆಗಾಗಿ ಉದ್ದೇಶಿತ ನಿವೇಶನದ ಸೂಕ್ತತೆಯ ಬಗ್ಗೆ ಅಥವಾ ಅನ್ಯಥಾ ತೀರ್ಮಾನವನ್ನು ಕೈಗೊಳ್ಳತಕ್ಕದ್ದು. (1)ನೇ ಉಪ-ನಿಯಮದಲ್ಲಿ ನಮೂದಿಸಿದ ವಿವಿಧ ಪ್ರಾಧಿಕಾರಗಳು ಆದಷ್ಟು ಬೇಗ ಮತ್ತು ಯಾವುದೇ ಪ್ರಕರಣದಲ್ಲಿ (1)ನೇ ಉಪ-ನಿಯಮದಲ್ಲಿ ನಮೂದಿಸಲಾದ ಅವಧಿಯು ಮುಕ್ತಾಯಗೊಂಡ ತರುವಾಯ ಮೂವತ್ತು ದಿನಗಳ ಅವಧಿಯೊಳಗಾಗಿ ಅವರ ಅಭಿಪ್ರಾಯಗಳನ್ನು ಲೈಸೆನ್ಸ್ ನೀಡುವ ಪ್ರಾಧಿಕಾರಿಗೆ ತಿಳಿಸತಕ್ಕದ್ದು, ಗೊತ್ತುಪಡಿಸಿದ ಅವಧಿಯ ಒಳಗಾಗಿ ನಿರ್ದಿಷ್ಟಪಡಿಸಿದ ಪ್ರಾಧಿಕಾರಿಗಳು. ಅವರ ಅಭಿಪ್ರಾಯಗಳನ್ನು ಒದಗಿಸದೆ ಇದ್ದರೆ, ಲೈಸೆನ್ಸ್. ನೀಡುವ ಪ್ರಾಧಿಕಾರಿಯು, ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಕೊಡಲು ಆಕ್ಷೇಪಣೆ ಇಲ್ಲವೆಂದು ಭಾವಿಸತಕ್ಕದ್ದು.
(3) ಲೈಸೆನ್ಸ್ ನೀಡುವ ಪ್ರಾಧಿಕಾರಿಯು, ಖಾಯಂ ಸಿನಿಮಾ ಅಥವಾ ಮಲಿಷ್ಣೆಕ್ಸ್ ಸ್ಥಳಕ್ಕೆ ನಿವೇಶನದ ಸೂಕ್ತತೆಯ ಣ ಛಿ ಬಗ್ಗೆ ಅಥವಾ ಅನ್ಯಥಾ ಇದಕ್ಕೆ ಸಂಬಂಧಿಸಿದ ತೀರ್ಮಾನವನ್ನು ತೆಗೆದುಕೊಳ್ಳುವುದಕ್ಕೆ ಮುಂಚೆ (1)ನೇ ಉಪ-ನಿಯಮದಲ್ಲಿ ನಮೂದಿಸಲಾದ ವಿವಿಧ ಪ್ರಾಧಿಕಾರಿಗಳ ಅಭಿಪ್ರಾಯಗಳನ್ನು ಮತ್ತು (1)ನೇ ಉಪ-ನಿಯಮದ ಮೇರೆಗಿನ ಪ್ರಕಟಣೆಗೆ ಉತ್ತರವಾಗಿ ಸ್ವೀಕರಿಸಲಾದ ಆಕ್ಷೇಪಣೆಗಳು ಯಾವುದಾದರೂ ಇದ್ದರೆ, ಅವುಗಳನ್ನು ಪರಿಗಣನೆಗೆ ತೆಗೆದುಕೊಳ್ಳತಕ್ಕದ್ದು.