ನಮೂನೆ 3’ (90ನೇ ನಿಯಮವನ್ನು ನೋಡಿ)
ಕರ್ನಾಟಕ ಸಿನಿಮಾಗಳ (ನಿಯಂತ್ರಣ) ನಿಯಮಗಳು, 2014 ಇದರ ಮೇರೆಗೆ ಸಂಚಾರಿ ಸಿನಿಮಾಗಳಲ್ಲಿ ಪ್ರದರ್ಶನಕ್ಕಾಗಿನ ಲೈಸೆನ್ಸ್:
1 ಲೈಸೆನ್ಸ್ದಾರನ ಹೆಸರು ಮತ್ತು ವಿಳಾಸ
2 ಲೈಸೆನ್ಸ್ದಾರನು ಆ ಕಟ್ಟಡದ ಒಡೆಯನಾಗಿರದಿದ್ದರೆ, ಅದರ ಒಡೆಯನ ಹೆಸರು ಮತ್ತು ವಿಳಾಸ
- ಕಟ್ಟಡದ ಸ್ಥಳ
4 ಚದರ ಮೀ.ಗಳಲ್ಲಿ ಆ ಕಟ್ಟಡದ ಪ್ರದೇಶ
-
ಯಾವ ಸಾಮಗ್ರಿಗಳಿಂದ ಛಾವಣಿ, ಪಕ್ಕದ ಗೋಡೆಗಳು, ಗ್ಯಾಲರಿಗಳು ಮತ್ತು ಸ್ಟೇರ್ಶ್ಕೇಸುಗಳನ್ನು ಮಾಡಲಾಗಿದೆಯೋ ಆ ಸಾಮಗ್ರಿಗಳು
-
ಅಗ್ನಿಶಾಮಕ ಅಧಿಕಾರಿ ಅಥವಾ ವಿದ್ಯುಚ್ಛಕ್ತಿ ಪರಿಶೀಲಕ ಅಥವಾ ಈ ಬಗ್ಗೆ ಅವನಿಂದ ಅಧಿಕೃತನಾದ ಯಾರೇ ವ್ಯಕ್ತಿಯಿಂದ ಕೊನೆಯ ಪರಿಶೀಲನೆಯ ದಿನಾಂಕ
-
ಆರೋಗ್ಯಾಧಿಕಾರಿ ಅಥವಾ ಅವನಿಂದ ಈ ಬಗ್ಗೆ ಅಧಿಕೃತನಾದ ಯಾರೇ ವ್ಯಕ್ತಿಯಿಂದ ಕೊನೆಯ ಪರಿಶೀಲನೆ ದಿನಾಂಕ
-
ಪೊಲೀಸ್ ಪರಿಶೀಲಕನಿಂದ ಕೊನೆಯ ಪರಿಶೀಲನೆಯ ದಿನಾಂಕ
-
ಲೈಸೆನ್ಸ್ ನೀಡಿದುದರ ಬಗ್ಗೆ ವಿಶೇಷ ಷರತ್ತುಗಳು ಯಾವುದಾದರೂ ಇದ್ದರೆ ಅವುಗಳನ್ನು ತಿಳಿಸಿ
-
ಲೈಸೆನ್ಸ್ ಜಾರಿಯಲ್ಲಿರಬೇಕಾದಂಥ ಅವಧಿ
-
ಸಂದಾಯ ಮಾಡಿದ ಫೀಜು
-
ಸಭಾಂಗಣದ ಪ್ರತಿಯೊಂದು ಭಾಗದಲ್ಲಿ ಹೋಗಲು ಅನುಮತಿಸಿದ ವ್ಯಕ್ತಿಗಳ ಗರಿಷ್ಠ ಸಂಖ್ಯೆ ವ್ಯಕ್ತಿಗಳು ಮೊದಲ ದರ್ಜೆಯಲ್ಲಿ
(ಷರತ್ತುಗಳಿಗಾಗಿ ಹಿಂಬದಿ ನೋಡಿ) ಲೈಸೆನ್ಸಿನ ಷರತ್ತುಗಳು
ಕರ್ನಾಟಕ ಸಿನಿಮಾ (ನಿಯಂತ್ರಣ) ಅಧಿನಿಯಮ, 1964ರ ಉಪಬಂಧಗಳು ಮತ್ತು ಅದರ ಮೇರೆಗೆ ರಚಿಸಿದ ನಿಯಮಗಳಿಗೊಳಪಟ್ಟು ಲೈಸೆನ್ಸ್ನ್ನು ಮಂಜೂರ್ಮಾಡಲಾಗಿದೆ. ಅದು ಈ ಕೆಳಕಂಡ ಷರತ್ತುಗಳಿಗೂ ಸಹ ಒಳಪಟ್ಟಿರುತ್ತದೆ:-
(1) ಸಾರ್ವಜನಿಕ ಸಾಂಕ್ರಾಮಿಕ ರೋಗಗಳು ಮತ್ತು ಅದೇ ರೀತಿಯ ಆರೋಗ್ಯಕ್ಕೆ ಸಂಬಂಧಿಸಿದ ಅಪಾಯಗಳ ಸಮಯ ಅಥವಾ ದುರ್ಫಟನೆಗಳ ಸಂದರ್ಭ ಯಾವುದಾದರೂ ಇದ್ದರೆ, ಸಾಮಾನ್ಯವಾಗಿ, ಲೈಸೆನ್ಸ್ ನೀಡುವ ಪ್ರಾಧಿಕಾರಿಯು, ಜಿಲ್ಲಾ ಆರೋಗ್ಯ ಅಧಿಕಾರಿ, ತಾಲ್ಲೂಕು ಆರೋಗ್ಯ ಅಧಿಕಾರಿ ಅಥವಾ ಪುರಸಭೆಯ ಆರೋಗ್ಯ ಅಧಿಕಾರಿಯ ಜೊತೆ ಸಮಾಲೋಚಿಸಿ ಹಾಗೆ ಸಲಹೆ ನೀಡುವುದಾದರೆ, ಅಧಿಸೂಚನೆಯ ಮೂಲಕ ನಿರ್ದೇಶಿಸಬಹುದು,-
(ಎ) ಅಗತ್ಯತೆ ಉದ್ಭವಿಸಿದರೆ, ಸಂಪೂರ್ಣವಾಗಿ ನಿಲ್ಲಿಸುವುದು;
(ಬಿ) 49ನೇ ನಿಯಮದಲ್ಲಿ ಒದಗಿಸಲಾದ ಸ್ಥಳಾವಕಾಶದ ಪ್ರಮಾಣವನ್ನು ಕಡಿಮೆಗೊಳಿಸುವುದು;
(ಪಿ) ಸೋಂಕು ಸ್ಥಳಗಳಿಗೆ, ನಿಯತಕಾಲಿಕವಾಗಿ ಸೋಂಕುನಾಶಕ ಒಳಗೊಂಡಿರುವುದನ್ನು ಸಿಂಪಡಿಸಬಹುದು ಮತ್ತು ರೋಗಕಾರಕ ಕ್ರಿಮಿಗಳನ್ನು ನಾಶಗೊಳಿಸಬಹುದು; ಮತ್ತು
(ಡಿ) ಅಂತಹ ನೋಟೀಸಿನಲ್ಲಿ ನಿರ್ದಿಷ್ಟಪಡಿಸಿರಬಹುದಾದಂತೆ ಉತ್ತಮ ವಾಯು ಸಂಚಾರಕ್ಕಾಗಿ ಅಂತಹ ಇತರೆ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಮತ್ತು ಲೈಸೆನ್ಸುದಾರನು ಯಾವುದೇ ಅಂತಹ ನಿರ್ದೇಶನಗಳನ್ನು ಕೂಡಲೇ ಪಾಲಿಸತಕ್ಕದ್ದು DHA ಹಾಗೆ ಮಾಡಲು ವಿಫಲನಾದ ಸಂದರ್ಭದಲ್ಲಿ, ಆತನಿಗೆ ಮಂಜೂರು ಮಾಡಿದ ಲೈಸೆನ್ಸುನ್ನು. ರದ್ದುಗೊಳಿಸಲು ಹೊಣೆಯಾಗತಕ್ಕದ್ದು.
- ಲೈಸೆನ್ಸ್ದಾರನನ್ನು ಅಥವಾ ಆತನ ನೌಕರರನ್ನು ಅಥವಾ ಏಜೆಂಟರನ್ನು ಯಾವುದೇ ಇತರ ಕಾನೂನು ಅಥವಾ ಅದರ ಮೇರೆಗೆ ರಚಿಸಲಾದ ನಿಯಮ ಅಥವಾ ಉಪನಿಯಮದ ಮೂಲಕ ಅಗತ್ಯಪಡಿಸಿದ ಯಾವುದೇ ಇತರ ಲೈಸೆನ್ಸನ್ನು ತೆಗೆದುಕೊಳ್ಳುವುದರಿಂದ ಅಥವಾ ಅನ್ಯಥಾ ಅವುಗಳನ್ನು ಪಾಲಿಸುವುದರಿಂದ ಈ ಲೈಸೆನ್ಸ್ ವಿನಾಯಿತಿಗೊಳಿಸುವುದಿಲ್ಲ.
ತ3(ಎ) ಚಲನಚಿತ್ರ ಅಧಿನಿಯಮ, 1952ರ (1952ರ ಕೇಂದ್ರ ಅಧಿನಿಯಮ 37), 3ನೇ ಪ್ರಕರಣದ ಮೇರೆಗೆ ರಚಿಸಿದ ಪ್ರಾಧಿಕಾರಿಯು, ಸಾರ್ವಜನಿಕ ಪ್ರದರ್ಶನಕ್ಕಾಗಿ ಯೋಗ್ಯವಾಗಿದೆಯೆಂದು ಪ್ರಮಾಣೀಕರಿಸಿದಂಥ ಮತ್ತು ಅದನ್ನು ಪ್ರದರ್ಶಿಸಿದಾಗ ಆ
ಪ್ರಾಧಿಕಾರಿಯು ನಿಯಮಿಸಿದ ಗುರುತನ್ನು ಪ್ರದರ್ಶಿಸುವಂಥ ಮತ್ತು ಅದಕ್ಕೆ ಅಂತಹ ಗುರುತನ್ನು ಹಾಕಿದಾಗಿನಿಂದ ಯಾವುದೇ ರೀತಿಯಲ್ಲಿ ಅದನ್ನು ಬದಲಾಯಿಸಿರದ ಅಥವಾ ಅಕ್ರಮವಾಗಿ ತಿದ್ದಿಲ್ಲದಂಥ ಚಲನಚಿತ್ರವನ್ನು ಹೊರತುಪಡಿಸಿ ಯಾವುದೇ ಇತರ ಚಲನಚಿತ್ರವನ್ನು,
ಪರಂತು, ಈ ಷರತ್ತು ಮುಂಬೈ ಫಿಲ್ಮ್ ವಿಭಾಗವು ತಯಾರಿಸಿದ ನ್ಯೂಸ್ ರೀಲುಗಳ ಪ್ರದರ್ಶನಕ್ಕೆ ಅನ್ವಯಿಸತಕ್ಕದ್ದಲ್ಲ;
(ಬಿ) den, ಸೆನ್ಸಾರ್ ಮಂಡಲಿಯು ವಯಸ್ಕರಿಗೆ ಪರಿಮಿತಿಗೊಳಿಸಿದ, ಸಾರ್ವಜನಿಕ ಪ್ರದರ್ಶನಕ್ಕಾಗಿ ಯೋಗ್ಯವಾಗಿದೆಯೆಂದು ಪ್ರಮಾಣೀಕರಿಸಿದಂಥ ಯಾವುದೇ ಫಿಲ್ಮನ್ನು ವಯಸ್ಕನಲ್ಲದ ಯಾರೇ ವ್ಯಕ್ತಿಗೆ;
(ಸಿ). ಯಾವ ಫಿಲ್ಮಿನ ಪ್ರದರ್ಶನವನ್ನು ಅಧಿನಿಯಮದ 6ನೇ ಪ್ರಕರಣದ ಮೇರೆಗೆ ಅಮಾನತು ಗೊಳಿಸಲಾಗಿದೆಯೋ ಆ ಯಾವುದೇ ಫಿಲ್ಮನ್ನು
- ಲೈಸೆನ್ಸ್ದಾರನು ಪ್ರದರ್ಶಿಸತಕ್ಕದ್ದಲ್ಲ ಅಥವಾ ಪ್ರದರ್ಶಿಸಲು ಅನುಮತಿಸತಕ್ಕದ್ದಲ್ಲ.
ವಿವರಣೆ: ಈ ಷರತ್ತಿನ (ಬಿ) ಖಂಡದ ಉದ್ದೇಶಕ್ಕಾಗಿ, ಯಾರೇ ವ್ಯಕ್ತಿಯ ವಯಸ್ಸಿಗೆ ಸಂಬಂಧಿಸಿದಂತೆ ಯಾವುದೇ ಸಂದೇಹವಿದ್ದರೆ, ಆ ಪ್ರಶ್ನೆಗೆ ಸಂಬಂಧಿಸಿದಂತೆ ಸದ್ಭಾವನೆಯಿಂದ ವ್ಯವಸ್ಥಾಪಕನು ಕೊಟ್ಟ ತೀರ್ಮಾನವನ್ನು ಪ್ರಶ್ನಿಸತಕ್ಕದ್ದಲ್ಲ ಮತ್ತು ವಯಸ್ಕನೆಂದು ಕ್ಲೇಮು ಮಾಡುವ ಯಾರೇ ವ್ಯಕ್ತಿಯ ವಯಸ್ಸಿಗೆ ಸಂಬಂಧಿಸಿದಂತೆ ವ್ಯವಸ್ಥಾಪಕನಿಗೆ ಯುಕ್ತ ಸಂದೇಹವಿರುವಲ್ಲಿ, ವ್ಯವಸ್ಥಾಪಕನು ಫಿಲ್ಮಿನ ಪ್ರದರ್ಶನಕ್ಕೆ ಅವನಿಗೆ ಪ್ರವೇಶ ಕೊಡುವುದಕ್ಕೆ ಮುಂಚೆ. ಈ ಕೆಳಕಂಡ ನಮೂನೆಯಲ್ಲಿ ಅವನ ಟಿಕೆಟ್ನ ಪಕ್ಕಾಪ್ರತಿಯ ಹಿಂಬದಿಯಲ್ಲಿ ಘೋಷಣೆಯನ್ನು ಮಾಡಲು ಅಂತಹ ವ್ಯಕ್ತಿಯನ್ನು ಅಗತ್ಯಪಡಿಸತಕ್ಕದ್ದು ಮತ್ತು ತನಿಖೆಯನ್ನು ನಡೆಸಿದ ಮೇಲೆ, ಆ ಘೋಷಣೆಯು ಸುಳ್ಳಾಗಿರುವುದಾಗಿ ಕಂಡುಬಂದರೆ, ಭಾರತ ದಂಡ ಸಂಹಿತೆಯ 199ನೇ ಪ್ರಕರಣದ ಮೇರೆಗಿನ ಅಪರಾಧಕ್ಕಾಗಿ ಪ್ರಾಸಿಕ್ಯೂಷನ್ನಿಗೆ ಗುರಿಯಾಗಲು ಆತನು ಹೊಣೆಗಾರನಾಗಿರುವನೆಂದು ಆತನಿಗೆ ವಿವರಿಸತಕ್ಕದ್ದು.
ಘೋಷಣೆ
ದರದರ ಾ ಇಲ್ಲಿ (ಪೂರ್ಣ ವಿಳಾಸ ತಿಳಿಸಿ) ವಾಸಿಸುವ ನಾನು. -------------- ಹದಿನೆಂಟು ವರ್ಷಗಳಿಗಿಂತ ಹೆಚ್ಚು ವಯಸ್ಸಿನವನಿದ್ದೇನೆಂದು ಈ ಮೂಲಕ ಶ್ರದ್ಧಾಪೂರ್ವಕವಾಗಿ ಘೋಷಿಸುತ್ತೇನೆ.
ಸಹಿ
-
ಲೈಸೆನ್ಸ್ದಾರನು, ಲೈಸೆನ್ಸ್ ಪಡೆದಿರುವ ಆವರಣಗಳ ಒಳಗಡೆಯಾಗಲಿ ಅಥವಾ ಹೊರಗೆ ಆಗಲಿ ಆಶ್ಲೀಲ ಅಥವಾ ಅಸಭ್ಯ ಜಾಹೀರಾತು ಮಾಡುವ ವಿಷಯ ಅಥವಾ ಸಚಿತ್ರ ನಿರೂಪಣೆಯನ್ನು ಅಥವಾ ಸಾರ್ವಜನಿಕ ನೀತಿಗಳ ದೃಷ್ಟಿಕೋನದಿಂದ ಆಕ್ಷೇಪಣೀಯವಾದಂಥ ಯಾವುದೇ ವಿಷಯ ಅಥವಾ ಜಾಹೀರಾತನ್ನು ಪ್ರದರ್ಶಿಸತಕ್ಕದ್ದಲ್ಲ ಅಥವಾ ಪ್ರದರ್ಶಿಸಲು ಅನುಮತಿಸತಕ್ಕದ್ದಲ್ಲ.
-
ಲೈಸೆನ್ಸ್ದಾರನ್ನು, ಲೈಂಗಿಕ ವಿಕಾರಗಳನ್ನು ಸರಿಪಡಿಸಲು ಅಥವಾ ಮಕ್ಕಳನ್ನು ಪಡೆಯುವುದರಲ್ಲಿ ಮಕ್ಕಳಿಲ್ಲದವರಿಗೆ ಸಹಾಯ ಮಾಡುವಂತೆ ತಾತ್ಪರ್ಯವಾಗುವ ಲೈಂಗಿಕ ರೋಗಗಳು ಮತ್ತು ಔಷಧಿಗಳಿಗೆ ಸಂಬಂಧಪಟ್ಟ ಜಾಹೀರಾತು ಸ್ಲೈಡುಗಳನ್ನು ಪ್ರದರ್ಶಿಸತಕ್ಕದ್ದಲ್ಲ.
-
ಲೈಸೆನ್ಸ್ದಾರನು ಕೇಂದ್ರ ಚಲನಚಿತ್ರ ಪರಿಶೀಲನಾ ಮಂಡಲಿ ಅಥವಾ ಕೇಂದ್ರ ಸರ್ಕಾರದ ಆದೇಶಗಳ ಮೇರೆಗೆ ಯಾವುದೇ ಚಲನಚಿತ್ರದಿಂದ ಕತ್ತರಿಸಲಾಗಿರುವಂಥ ದೃಶ್ಯ ಅಥವಾ ಛಾಯಾಚಿತ್ರಗಳನ್ನು ನಿರೂಪಿಸುವ ಅಥವಾ ತೋರಿಸುವ ಅಥವಾ ತೋರಿಸುವುದೆಂದು ತಾತ್ಪರ್ಯವಾಗುವಂಥ ಯಾವುದೇ ಛಾಯಾಚಿತ್ರ ಅಥವಾ ಭಿತ್ತಿಪತ್ರಗಳನ್ನು ಪ್ರದರ್ಶಿಸತಕ್ಕದ್ದಲ್ಲ ಅಥವಾ ಪ್ರದರ್ಶಿಸುವಂತೆ ಮಾಡತಕ್ಕದ್ದಲ್ಲ.
(6) ಲೈಸೆನ್ಸ್ದಾರನು, ಸಾರ್ವಜನಿಕರಿಗೆ ಆವರಣವನ್ನು ತೆಗೆದಿರಿಸಿರುವಾಗಲೆಲ್ಲಾ ಪ್ರತಿಯೊಂದು ಸಾರ್ವಜನಿಕ ಪ್ರವೇಶ ದ್ವಾರದಲ್ಲಿ ಕೋಷ್ಠಕದ ನಮೂನೆಯಲ್ಲಿ ಮತ್ತು ಸ್ಪಷ್ಟವಾದ, ದೊಡ್ಡದಾದ ಅಕ್ಷರಗಳಲ್ಲಿ ಮತ್ತು ಅಂಕಿಗಳಲ್ಲಿ:-
(i) ಟ್ರೇಲರುಗಳು ಮತ್ತು ಜಾಹೀರಾತು ಫಿಲ್ಮ್ಗಳನ್ನು ಹೊರತುಪಡಿಸಿ ಆ ದಿವಸ ತೋರಿಸಬೇಕಾದ ಪ್ರತಿಯೊಂದು ಫಿಲ್ಮಿನ ಶೀರ್ಷಿಕೆ/ಹೆಸರು ;
(ii) ಅಂತಹ ಪ್ರತಿಯೊಂದು ಫಿಲ್ಮು ಪ್ರಾರಂಭವಾಗುವ ಸರಿ ಸುಮಾರು ಕಾಲ ;
(iii) ಕೇಂದ್ರ ಚಲನಚಿತ್ರ ಪರಿಶೀಲನಾ ಮಂಡಲಿಯಿಂದ ಅಂತಹ ಪ್ರತಿಯೊಂದು ಫಿಲ್ಮ್ ‘a’ ಅಥವಾ "ಯು' ಪ್ರಮಾಣಪತ್ರವನ್ನು ಸ್ವೀಕರಿಸಿದೆಯೇ ಎಂಬುದನ್ನು ; ಮತ್ತು
(iv) 3 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಹೊರತುಪಡಿಸಿ, 18 ವರ್ಷಗಳಿಗಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳನ್ನು ಒಳಗೆ ಬಿಡಲಾಗುವುದೋ ಅಥವಾ ಇಲ್ಲವೋ ಎಂಬುದನ್ನು - ತೋರಿಸುವ ನೋಟಿಸನ್ನು ಎದ್ದು ಕಾಣುವ ಹಾಗೆ ಪ್ರದರ್ಶಿಸತಕ್ಕದ್ದು.
(7) ಕೇಂದ್ರ ಚಲನಚಿತ್ರ ಪರಿಶೀಲನಾ ಮಂಡಲಿಯಿಂದ ಫಿಲ್ಮಿಗೆ ಸಂಬಂಧಿಸಿದಂತೆ ಸ್ವೀಕರಿಸಿದ ಯಾವುದೇ ಪ್ರಮಾಣಪತ್ರದ ಸ್ವರೂಪವನ್ನು ಆವರಣಗಳಲ್ಲಿ ಪ್ರದರ್ಶಿಸಿದ ಫಿಲ್ಮಿನ ಯಾವುದೇ ಜಾಹೀರಾತಿನಲ್ಲಿ ‘On’ ಅಥವಾ "ಎ' ಎಂಬ ಅಕ್ಷರದ ಮೂಲಕ ಸ್ಪಷ್ಟವಾಗಿ ಸೂಚಿಸತಕ್ಕದ್ದು.
(8) ಲೈಸೆನ್ಸ್ ನೀಡುವ ಪ್ರಾಧಿಕಾರಿ ಮತ್ತು ಈ ಬಗ್ಗೆ ಆತನು ಅಧಿಕೃತಗೊಳಿಸಿದ ಯಾರೇ ಅಧೀನ ಅಧಿಕಾರಿ ಮತ್ತು ಲೈಸೆನ್ಸ್ ಪಡೆದ ಆವರಣದಲ್ಲಿ ಯಾವುದೇ ಮನೋರಂಜನೆಯ ಕಾಲದಲ್ಲಿ ವ್ಯವಸ್ಥೆಯನ್ನು ಕಾಪಾಡಲು ಪ್ರತಿನಿಯೋಜನೆಗೊಂಡ ಯಾರೇ ಪೊಲೀಸ್ ಅಧಿಕಾರಿಯು ಲೈಸೆನ್ಸಿನ ಷರತ್ತುಗಳನ್ನು ಪಾಲಿಸಲಾಗಿದೆಯೋ ಎಂಬುದನ್ನು ನೋಡುವುದಕ್ಕಾಗಿ ಸದರಿ ಆವರಣಗಳಿಗೆ ಎಲ್ಲ ಕಾಲಗಳಲ್ಲಿ ಮುಕ್ತ ಪ್ರವೇಶಾವಕಾಶವನ್ನು ಹೊಂದಿರತಕ್ಕದ್ದು.
(9) ಚಲನಚಿತ್ರ ಪ್ರದರ್ಶನಕ್ಕೆ ಲಗತ್ತಾದ ಜಾಗದಲ್ಲಿ ಯಾವುದೇ ಬಿರುಸು ಬಾಣಗಳನ್ನು ಅಥವಾ ಯಾವುದೇ ಹೊರಗಿನ ಧ್ವನಿವರ್ಧಕಗಳನ್ನು ಉಪಯೋಗಿಸತಕ್ಕದ್ದಲ್ಲ.
(10) ಲೈಸೆನ್ಸ್ದಾರನು, ಲೈಸೆನ್ಸ್ ನೀಡುವ ಪ್ರಾಧಿಕಾರಿಯ ಅನುಮತಿಯಿಲ್ಲದೆ, ಲೈಸೆನ್ಸ್ನ್ನು ಅಥವಾ ಲೈಸೆನ್ಸ್ ಪಡೆದ ಆವರಣವನ್ನು ಹಸ್ತಾಂತರಿಸತಕ್ಕದ್ದಲ್ಲ, ಒಳಬಾಡಿಗೆಗೆ ಕೊಡತಕ್ಕದ್ದಲ್ಲ ಅಥವಾ ಅನ್ಯಥಾ ವರ್ಗಾವಣೆ ಮಾಡತಕ್ಕದ್ದಲ್ಲ ಅಥವಾ ಲೈಸೆನ್ಸ್ದಾರನು ಹಿಂದೆ ಹೇಳಿದಂತೆ ಅನುಮತಿಯಿಲ್ಲದೆ, ಲೈಸೆನ್ಸ್ ಚಾಲ್ತಿಯಲ್ಲಿರುವ ಅವಧಿಯಲ್ಲಿ ಲೈಸೆನ್ಸ್ ಪಡೆದ ಆವರಣದಲ್ಲಿ ಚಲನಚಿತ್ರವನ್ನು ಪ್ರದರ್ಶಿಸಲು ಯಾರೇ ಇತರ ವ್ಯಕ್ತಿಗಳಿಗೆ ಅವಕಾಶ ಕೊಡತಕ್ಕದ್ದಲ್ಲ.
(11) ಲೈಸೆನ್ಸ್ದಾರನು ಲೈಸೆನ್ಸ್ ನೀಡುವ ಪ್ರಾಧಿಕಾರಿಯ ಅನುಮತಿಯಿಲ್ಲದೆ ಯಾರೇ ವ್ಯಕ್ತಿ, ಸಂಘ ಅಥವಾ ಸಂಸ್ಥೆಯ ಸಹಾಯಾರ್ಥವಾಗಿ ಲೈಸೆನ್ಸ್ ಪಡೆದ ಆವರಣದಲ್ಲಿ ಯಾವುದೇ ಫಿಲ್ಮ್ನ್ನು ಪ್ರದರ್ಶಿಸತಕ್ಕದ್ದಲ್ಲ.
(12) ಯಾವುದೇ ಚಲನಚಿತ್ರ ಪ್ರದರ್ಶನವನ್ನು ಲೈಸೆನ್ಸ್ ನೀಡುವ ಪ್ರಾಧಿಕಾರಿಯು ನಿಗದಿಪಡಿಸ ಬಹುದಾದಂಥ, ರಾತ್ರಿ ಒಂದು ಗಂಟೆಗೆ ಮೀರದಂಥ ಕಾಲದ ತರುವಾಯ ಮುಂದುವರೆಸತಕ್ಕದ್ದಲ್ಲ.
(13) ಲೈಸೆನ್ಸ್ದಾರನು, ಅನುಮೋದಿತ ರಾಷ್ಟ್ರಗೀತೆಯನ್ನು ಲೈಸೆನ್ಸ್... ನೀಡುವ. ಪ್ರಾಧಿಕಾರಿಯು ಅಗತ್ಯಪಡಿಸಬಹುದಾದಂಥ ರೀತಿಯಲ್ಲಿ ಮತ್ತು ಅಂತಹ ಕಾಲದಲ್ಲಿ ಪ್ರದರ್ಶಿಸತಕ್ಕದ್ದು.
(14) ಪ್ರತಿಯೊಂದು. ತಿಂಗಳಿನ ಮೊದಲನೇ ದಿವಸದಂದಿನ ಮತ್ತು ಶಿಬಿರದ ತರುವಾಯ ಮೊದಲು ಪ್ರತಿ ಬದಲಾವಣೆಯಲ್ಲಿನ ವಿಳಾಸವನ್ನು ವಿದ್ಯುಚ್ಛಕ್ತಿ ಪರಿಶೀಲಕ ಅಥವಾ ಆ ಬಗ್ಗೆ ಅವನು ಅಧಿಕೃತಗೊಳಿಸಿದ ಇತರ ವ್ಯಕ್ತಿಗೆ ಮತ್ತು ಸಂಬಂಧಪಟ್ಟ ಜಿಲ್ಲಾ ಮ್ಯಾಜಿಸ್ಟ್ರೇಟನಿಗೆ ತಿಳಿಸತಕ್ಕದ್ದು.
(15)ಲೈಸೆನ್ಸ್ ಈ ಯಾವುದೇ ಷರತ್ತುಗಳ ಅಥವಾ ಹಿಂಬದಿಯಲ್ಲಿ ನಿರ್ದಿಷ್ಟಪಡಿಸಿದ ವಿಶೇಷ ಷರತ್ತುಗಳನ್ನು ಉಲ್ಲಂಥಘಿಸಿದ್ದಕ್ಕಾಗಿ (ಅಥವಾ ಮನೋರಂಜನೆಯನ್ನು ಪ್ರಸ್ತಾಪಿಸುವ ಅಥವಾ ನಿಯಂತ್ರಿಸುವ ಮತ್ತು ತೆರಿಗೆಗಳ ಸಂದಾಯವನ್ನು ನಿಯಮಿಸುವ ಕುರಿತಾಗಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಉಲ್ಲಂಘನೆಗಾಗಿ) ರದ್ದಿಯಾತಿ ಮತ್ತು ಅಮಾನತ್ತಿಗೆ ಒಳಪಟ್ಟಿರತಕ್ಕದ್ದು.
ದಿನಾಂಕ 20ರ ದಿವಸದಂದು.
ಎರ ಜಿಲ್ಲಾ ಮ್ಯಾಜಿಸ್ಟ್ರೇಟರು
ಲೈಸೆನ್ಸ್ ನೀಡುವ ಪ್ರಾಧಿಕಾರಿ