(1) ಇಡೀ ಸಿನಿಮಾ ಅಥವಾ ಮಲ್ಟಿಷ್ಣೆಕ್ಸ್ ಆವರಣಗಳ ವಿದ್ಯುತ್ ವೈರಿಂಗ್ನ್ನು ಲೋಹ ಅಥವಾ ಅನುಮೋದಿತ ಗಟ್ಟಿ ಪಾಲಿ ವಿನೈಲ್ ಕ್ಲೋರೈಡ್ನ ನಳಿಕೆ ಕೊಳವೆಗಳಲ್ಲಿ ಮಾಡತಕ್ಕದ್ದು.
(2) ಲೋಹದ ನಳಿಕೆ ಕೊಳವೆಗಳಿಗಾಗಿ ಬುಷ್ಗಳನ್ನು ಅವಶ್ಯವಿರುವಾಗಲೆಲ್ಲಾ ಉಪಯೋಗಿಸತಕ್ಕದ್ದು. ಎಲ್ಲಾ ಲೋಹದ ಕೊಳವೆಗಳನ್ನು ಸಮರ್ಥವಾಗಿ ಭೂಮಿಗೆ ಸಂಪರ್ಕಿಸತಕ್ಕದ್ದು ರಕ್ಷಾಸಂಪುಟಗಳು ಮತ್ತು ಇತರ ಜೋಡಣೆಗಳೊಂದಿಗೆ ಮುಂದುವರಿಸತಕ್ಕಂಥ ಉತ್ತಮ ಮತ್ತು ಖಾಯಂ ವಿದ್ಯುತ್ ಸಂಪರ್ಕ ಸುನಿಶ್ಚಿತಗೊಳಿಸುವ Aa, ಜಾಯಿಂಟುಗಳು ಮತ್ತು ಇತರೆ ಸಾಧನಗಳನ್ನು ಒದಗಿಸತಕ್ಕದ್ದು.
70. ಜೋಡಣೆಗಳು. (1) ಎಲ್ಲ ತೂಗು ಹಾಕಿದ ಜೋಡಣೆಗಳನ್ನು ಭದ್ರವಾಗಿ ಜೋಡಿಸತಕ್ಕದ್ದು.
(2) ಸಂಯೋಜಿತ ಅನಿಲ ಮತ್ತು ವಿದ್ಯುತ್ ಜೋಡಣೆಗಳನ್ನು ಉಪಯೋಗಿಸತಕ್ಕದ್ದಲ್ಲ.
(3) ಸಭಾಂಗಣದಲ್ಲಿ ಮತ್ತು ಸಿನಿಮಾ ಅಥವಾ ಮಲ್ಟಿಪ್ಲೆಕ್ಸ್ ಕಟ್ಟಡದ ಮುಂಭಾಗದಲ್ಲಿ ಯಾವುದೇ ವಿದ್ಯುತ್ ದೀಪದ ಲೋಲಕಗಳು ಅಥವಾ ಬ್ರ್ಯಾಕೆಟ್ಟುಗಳು ನೆಲದ ಮೇಲೆ ಜೋಡಣೆಗಳ ಅತಿ ಕೆಳಗಿನ ಮುಂಚಾಚಿರುವ ಭಾಗಕ್ಕೆ ಕನಿಷ್ಠ ಪಕ್ಷ ಎರಡೂವರೆ ಮೀಟರುಗಳಿರತಕ್ಕದ್ದು. ಯಾವುದೇ ವಿದ್ಯುತ್ ಜೋಡಣೆಗಳು ಅಥವಾ ಯಾವುದೇ ವಿವರಣೆಯ ಸಲಕರಣೆಗಳನ್ನು ಸುರಕ್ಷಾ ಪರದೆಯು ಸರಿಯಾಗಿ ಕೆಲಸ ಮಾಡುವುದಕ್ಕೆ ಯಾವುದೇ ಸಮಯದಲ್ಲಿ ಅಡ್ಡಿಯಾಗುವ ಹಾಗೆ ಜೋಡಿಸತಕ್ಕದ್ದಲ್ಲ ಅಥವಾ ಅಳವಡಿಸತಕ್ಕದ್ದಲ್ಲ.
(4) (i) ವಿದ್ಯುಚ್ಛಕ್ತಿ ಸ್ಥಾಪನೆಯನ್ನು, ಕರ್ನಾಟಕ ಸರ್ಕಾರದ ಲೈಸೆನ್ಸ್ ನೀಡುವ ಸಲಹಾ ಮತ್ತು ಪರೀಕ್ಷಾ ಮಂಡಲಿಯು ಕೊಟ್ಟ ವೈರ್ಮ್ಯಾನ್ ಅಥವಾ ಮೇಲ್ವಿಚಾರಕರ ಪರ್ಮಿಟ್ಟನ್ನು ಹೊಂದಿರುವ ಸರಿಯಾದ ಅರ್ಹತೆ ಪಡೆದ ವ್ಯಕ್ತಿಯ ಪ್ರಭಾರದಲ್ಲಿರತಕ್ಕದ್ದು ಅಥವಾ ಅದು ಲೈಸೆನ್ಸ್ ಪಡೆದ ವಿದ್ಯುಚ್ಛಕ್ತಿ ಕಾಂಟ್ರಾಕ್ಟರನ ಪ್ರಭಾರದಲ್ಲಿರತಕ್ಕದ್ದು, ಅವನ ಹೆಸರನ್ನು ಜಿಲ್ಲಾ ಅಥವಾ ಆ ಕ್ಷೇತ್ರದ ವಿದ್ಯುಚ್ಛಕ್ತಿ ಪರಿಶೀಲಿಕನಿಗೆ ತಿಳಿಸತಕ್ಕದ್ದು.
(ii) ಲೈಸೆನ್ಸು ಪಡೆದ ವಿದ್ಯುಚ್ಛಕ್ತಿ ಕಂಟ್ರಾಕ್ಟರನು, ಜಿಲ್ಲಾ ವಿದ್ಯುಚ್ಛಕ್ತಿ ಪರಿಶೀಲಿಕನಿಗೆ ವಾರ್ಷಿಕವಾಗಿ ay ಸಕ್ರೂಟುಗಳಿಗೆ ಮತ್ತು ವಿದ್ಯುತ್ ನಿರೋಧಕ ಅಳವಡಿಸಿದನ್ನು ಮತ್ತು ಎಲೆಕ್ಟ್ರಾನ್ ವ್ಯಾಲ್ಯೂಗಳನ್ನು ಒದಗಿಸತಕ್ಕದ್ದು.
(5) ವಿದ್ಯುತ್ ಶಾಕ್ನಿಂದ ನರಳುತ್ತಿರುವ ವ್ಯಕ್ತಿಗಳ ಚೇತರಿಕೆಗಾಗಿ ಇಂಗ್ಲಿಷ್, ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳೆರಡರಲ್ಲೂ ಸೂಚನೆಗಳನ್ನು ಎದ್ದು ಕಾಣುವ ಸ್ಥಳದಲ್ಲಿ ಅಂಟಿಸತಕ್ಕದ್ದು ಮತ್ತು ವೈರ್ಮ್ಯಾನ್ ಉಪಯೋಗಕ್ಕಾಗಿ ಕನಿಷ್ಠ ಪಕ್ಷ ಸುಸ್ಥಿತಿಯಲ್ಲಿರುವ ಒಂದು ಜೊತೆ ರಬ್ಬರ್ ಕೈಚೇಲಗಳನ್ನು ಒದಗಿಸತಕ್ಕದ್ದು.
(6) ವಿದ್ಯುಚ್ಛಕ್ತಿ ಅಧಿನಿಯಮ, 2003 ಕೇಂದ್ರ ವಿದ್ಯುಚ್ಛಕ್ತಿ ಪ್ರಾಧಿಕಾರ (ಸುರಕ್ಷತೆ ಮತ್ತು ವಿದ್ಯುತ್ ಪೂರೈಕೆಗೆ ಸಂಬಂಧಪಟ್ಟ ಕ್ರಮಗಳು) ವಿನಿಯಮಗಳು, 2010 ಮತ್ತು ಅದರ ತರುವಾಯ ಐಎಸ್ಎಸ್ 3043/1987ರ ನಿಯಮಗಳು ಮತ್ತು ವಿನಿಯಮಗಳ ಮೇರೆಗೆ ಭೂಸಂಪರ್ಕವನ್ನು ಸಮರ್ಥವಾಗಿ ಮತ್ತು ಪೂರ್ಣವಾಗಿ ಮಾಡತಕ್ಕದ್ದು ಮತ್ತು ಅದನ್ನು ಸರಿಯಾಗಿ ಇಟ್ಟುಕೊಂಡು ಬರತಕ್ಕದ್ದು. ಭೂ ವಿದ್ಯುತ್ ಧ್ರುವಗಳನ್ನು ತೆರೆದಿಡತಕ್ಕದ್ದು ಮತ್ತು ನಿಯತವಾಗಿ ನೀರು ಹಾಕುವುದು, ಪರಿಶೀಲನೆ ಮತ್ತು ಪರೀಕ್ಷೆಯನ್ನು ಅನುಗೊಳಿಸುವ ಹಾಗೆ ಐ.ಎಸ್. ಮಾನಕಗಳ ಪ್ರಕಾರ ಕಲ್ಲುಕಟ್ಟಡ ಆವೃತಗಳಲ್ಲಿ ಆವೃತಗೊಳಿಸತಕ್ಕದ್ದು.
71... ಜನರೇಟರ್ ಸರಬರಾಜಿನ ಉತ್ಪಾದಕತೆ ಪರ್ಯಾಯ ಮೂಲ. ಪ್ರಸ್ತುತ ವಿದ್ಯುತ್ ಸರಬರಾಜನ್ನು ಆವರಣದಲ್ಲಿನ ವಿಶೇಷ ಸ್ಥಾವರದಿಂದ ಪಡೆದಿರುವಲ್ಲಿ, ಅಂತಹ ಸ್ಥಾವರವನ್ನು ಎಲ್ಲಾ ಸಂದರ್ಭಗಳಲ್ಲಿ ಜಿಲ್ಲಾ ಅಥವಾ ಆ ಕ್ಷೇತ್ರದ ವಿದ್ಯುಚ್ಛಕ್ತಿ ಪರಿಶೀಲಕನು ಅನುಮೋದಿಸಿರಬೇಕು.