Section 24ಖಾಯಂ ಸಿನಿಮಾ ಕಟ್ಟಡ ಅಥವಾ ಮಲ್ಟಿಪ್ಲೆಕ್ಸ್ನ ನಿರ್ಮಾಣ ಮಾಡಲು ನಿರಾಕ್ಷೇಪಣಾ ಪ್ರಮಾಣಪತ್ರಕ್ಕಾಗಿ ಅರ್ಜಿ
(1) ಖಾಯಂ ಸಿನಿಮಾ ಕಟ್ಟಡ ಅಥವಾ ಮಲ್ಟಿಷ್ಣೆಕ್ಸ್ನ್ನು ನಿರ್ಮಿಸಲು ಅಥವಾ ಅಸ್ತಿತ್ವದಲ್ಲಿರುವ ಕಟ್ಟಡವನ್ನು ಖಾಯಂ ಸಿನಿಮಾ ಕಟ್ಟಡ ಅಥವಾ DO SKIT ಪರಿವರ್ತಿಸಲು ಉದ್ದೇಶಿಸುವ ವ್ಯಕ್ತಿಯು, ಮೊದಲು ಲೈಸೆನ್ಸ್ ನೀಡುವ ಪ್ರಾಧಿಕಾರಿಗೆ ನಮೂನೆ-'ಎ > ನಲ್ಲಿ ಅರ್ಜಿಯನ್ನು ಸಲ್ಲಿಸತಕ್ಕದ್ದು. ಅರ್ಜಿದಾರನು, ಸಂದರ್ಭಾನುಸಾರ ಉದ್ದೇಶಿತ ನಿವೇಶನ ಅಥವಾ ಪರಿವರ್ತಿಸಬೇಕಾದ ಕಟ್ಟಡದ ಮೇಲೆ ಸಾರ್ವಜನಿಕ ಮುಖ್ಯ ರಸ್ತೆಯಿಂದ ಸ್ಪಷ್ಟವಾಗಿ ಅದನ್ನು ನೋಡುವ ಹಾಗೆ ಅಂತಹ ಜಾಗದಲ್ಲಿ ಫಲಕದ ಮೇಲೆ, ಈ ಬಗ್ಗೆ ನಮೂನೆ-ಬಿ ನಲ್ಲಿ ನೋಟೀಸನ್ನು ಸಹ ಹಾಕತಕ್ಕದ್ದು. ಅಂತಹ ನೋಟೀಸು ಕನ್ನಡ ಮತ್ತು ಇಂಗ್ಲಿಷಿನಲ್ಲಿ ಇರತಕ್ಕದ್ದು. ಲೈಸೆನ್ಸ್ ನೀಡುವ ಪ್ರಾಧಿಕಾರಿಯು ಅರ್ಜಿದಾರನಿಗೆ ಲೈಸೆನ್ಸನ್ನು ನಿರ್ಣಯಿಸುವವರೆಗೂ ಅರ್ಜಿಯನ್ನು ಸೂಚನಾ ಫಲಕದ ಮೇಲೆ ಆ ನೋಟೀಸನ್ನು ಪ್ರದರ್ಶಿಸತಕ್ಕದ್ದು. ಆ ಫಲಕವು ಗಾತ್ರದಲ್ಲಿ ಕನಿಷ್ಟ ಪಕ್ಷ 1.25 ಮೀ x 1.00 ಮೀ ಅಳತೆಯದ್ದಾಗಿರತಕ್ಕದ್ದು ಮತ್ತು ನೋಟೀಸು ದಪ್ಪವಾಗಿ ಮತ್ತು ಸ್ಪಷ್ಟವಾಗಿ ಸ್ಫುಟವಾಗಿ ಅಕ್ಷರಗಳಲ್ಲಿರತಕ್ಕದ್ದು.
(2) ಅರ್ಜಿಯು ಈ ಮುಂದಿನವುಗಳೊಂದಿಗೆ ಲಗತ್ತಿಸಿರತಕ್ಕದ್ದು,-
(i) ಟ್ರೆಸಿಂಗ್ ಚಲನಚಿತ್ರದ ಮೇಲೆ ಮುದ್ರಿತ ಒಂದು ಮೂಲ ನಕ್ಷೆಯೊಂದಿಗೆ ಆರು ಪ್ರತಿಗಳಲ್ಲಿ ಅಳತೆಗೆ ಸರಿಯಾಗಿ ಬರೆದ ಪಟ್ಟಣ ನಕ್ಷೆಯ ಉದ್ಭೃತ ಭಾಗ ಮತ್ತು ಡಿಜಿಟಲ್ ನಮೂನೆಯಲ್ಲಿ ಇರಬೇಕು ಮತ್ತು ಉದ್ದೇಶಿತ ನಿವೇಶನದಿಂದ ಚಲನಚಿತ್ರಗಳನ್ನು ಚಾಲನೆ ಮಾಡಿಕೊಂಡು ಬರುವ ಸಂದರ್ಭದಲ್ಲಿ 500 ಮೀಟರುಗಳು ಮತ್ತು 1000 ಮೀಟರುಗಳ ದೂರದವರೆಗೆ ಇರುವಂಥ ಸುತ್ತಮುತ್ತಲ ರಸ್ತೆಗಳು ಮತ್ತು ಕಟ್ಟಡಗಳನ್ನು ಸ್ಪಷ್ಟವಾಗಿ ಸೂಚಿಸುವ ಅದೇ ನಕ್ಷೆಯ ಆರು ಪ್ರಿಂಟುಗಳು ಅಥವಾ ಪ್ರತಿಗಳನ್ನು ಒದಗಿಸತಕ್ಕದ್ದು, ಸದರಿ ನಿವೇಶನದಿಂದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳು, ದೇವಾಲಯಗಳು ಅಥವಾ ಸಾರ್ವಜನಿಕರಿಗೆ ಮಹತ್ವವೆನಿಸುವ ಇತರೆ ಸ್ಥಳಗಳ ದೂರವನ್ನು ಸಹ ತೋರಿಸತಕ್ಕದ್ದು.
(ii) ಟ್ರಿಸಿಂಗ್ ಚಲನಚಿತ್ರದ ಮೇಲೆ ಮೂಲ ಮುದ್ರಿತ ಪ್ರತಿಯಲ್ಲಿ ನಿವೇಶನ ಯೋಜನೆ ಯಾವುದೇ ಅದಕ್ಕೆ ಸೇರಿಕೊಂಡ ಕಟ್ಟಡಗಳು, ಉಪಗೃಹಗಳು ಮತ್ತು ಇತರ ರಚನೆಗಳು, ಒಳದಾರಿಗಳು, ರಸ್ತೆಗಳು, ಮಾರ್ಗಗಳು, ಬಾವಿಗಳು, ತೊಟ್ಟಿಗಳು, ನೀರೆತ್ತುವ ಕೊಳಾಯಿಗಳು, ಯಾವುದಾದರೂ ಇದ್ದರೆ ಅವುಗಳು, ಚರಂಡಿಗಳು, ನೀರಿನ ಚರಂಡಿ ಮತ್ತು ಪ್ರಮುಖ ಅನಿಲ ವಿತರಣಾ ವ್ಯವಸ್ಥೆಗಳು, ಭೂಮಿಯ ಒಳಗಿರುವ ಕೇಬಲ್ಲುಗಳು, ಮೇಲಿರುವ ಅತೀವ ಮತ್ತು ಹೆಚ್ಚಿನ ಅತೀವ ವೋಲ್ಟೇಜ್ ಲೈನ್ಗಳು, ಟೆಲಿಗ್ರಾಫ್ ಮತ್ತು ದೂರವಾಣಿ ಲೈನುಗಳು, ನದಿಗಳು ಅಥವಾ ನಾಲೆಗಳ ಅತೀವ ಪ್ರವಾಹ ಗುರುತುಗಳು, ಪಕ್ಕದ ಜಲಾಶಯದ ಗರಿಷ್ಠ ನೀರಿನ ಮಟ್ಟ, ಕೆರೆಗಳು ಪಕ್ಕದ ಬಾವಿಗಳ ನೀರಿನ ಮಟ್ಟ, ನಿವೇಶನದೊಳಗೆ ಮಳೆಗಾಲದಲ್ಲಿ ಉಂಟಾಗುವ ಕಾರಣಗಳು ಯಾವುವಾದರೂ ಇದ್ದರೆ ಅವುಗಳು, ಸ್ಥಳಾವಕಾಶ ಕಲ್ಪಿಸಬೇಕಾದ ಆಸನಗಳ ಸಂಖ್ಯೆಯೊಂದಿಗೆ ಚದರ ಮೀಟರುಗಳಲ್ಲಿ ಮುಕ್ತ ಪ್ರದೇಶಗಳು ಮತ್ತು ನಿವೇಶನ ಹಾಗೂ ಉದ್ದೇಶ ಕಟ್ಟಡದ ಅಳತೆಯನ್ನು ತೋರಿಸುವುದು ಚಿತ್ರಮಂದಿರ ಅಥವಾ ಮಲ್ಟಿಪ್ಲೆಕ್ಸ್ ಮತ್ತು ಅದರ ಆವರಣಗಳ ಬ್ಲಾಕ್ ಮಟ್ಟಗಳನ್ನು ತೋರಿಸುವ ಬ್ಲಾಕ್ ಮಟ್ಟದಲ್ಲಿ ಅದರಲ್ಲಿ ತೋರಿಸುವ 1:500ಕ್ಕಿಂತ ಕಡಿಮೆಯಲ್ಲದ ಅಳತೆಗೆ ಸರಿಯಾಗಿ ತೆಗೆದು ಆರು ಪ್ರತಿಗಳು ಸಹ ಲಗತ್ತಿಸತಕ್ಕದ್ದು.
(iii) ನಿರಾಕ್ಷೇಪಣಾ ಪ್ರಮಾಣಪತ್ರದ ಮಂಜೂರಾತಿಗಾಗಿ ಸರ್ಕಾರವು. ಕಾಲಕಾಲಕ್ಕೆ ಅಧಿಸೂಚಿಸಿದಂತೆ ಫೀಜುಗಳನ್ನು ಜಮೆ ಮಾಡಿರುವುದಕ್ಕೆ ಖಜಾನೆ ಚಲನ್.
2. ಲೈಸೆನ್ಸ್ ನೀಡುವ ಪ್ರಾಧಿಕಾರಿಯು ಆಕ್ಷೇಪಗಳನ್ನು ಆಹ್ವಾನಿಸುವುದು.- (1) ಲೈಸೆನ್ಸ್ ನೀಡುವ ಪ್ರಾಧಿಕಾರಿಯು, 24ನೇ ನಿಯಮದ ಮೇರೆಗೆ ಅರ್ಜಿಯನ್ನು ಸ್ವೀಕರಿಸಿದ ಮೇಲೆ, ಸದರಿ ಪ್ರದೇಶದಲ್ಲಿ ವ್ಯಾಪಕ ಪ್ರಸಾರವುಳ್ಳ ಎರಡು ಸ್ಥಳೀಯ ವಾರ್ತಾ ಪತ್ರಿಕೆಗಳಲ್ಲಿ ಒಂದು ಕನ್ನಡ ಮತ್ತು ಒಂದು ಇಂಗ್ಲೀಷ್ ಭಾಷೆಯಲ್ಲಿ ಆಕ್ಷೇಪಣೆಗಳನ್ನು ಆಹ್ವಾನಿಸಿ ಪ್ರಕಟಿಸುವ ಮೂಲಕ ಅಂತಹ ಉದ್ದೇಶವನ್ನು ಸಾರ್ವಜನಿಕರಿಗೆ. ಅರ್ಜಿದಾರನ ಖರ್ಚಿನಲ್ಲಿ ಅಧಿಸೂಚಿಸತಕ್ಕದ್ದು, ಅಂತಹ ನೋಟೀಸು. 'ಸಿ' ನಮೂನೆಯಲ್ಲಿರತಕ್ಕದ್ದು ಮತ್ತು ಆಕ್ಷೇಪಣೆಗಳನ್ನು ಆ ಅವಧಿಯೊಳಗೆ ಲೈಸೆನ್ಸ್ ನೀಡುವ ಪ್ರಾಧಿಕಾರಿಗೆ ಕಳುಹಿಸತಕ್ಕದ್ದು. ಆ ಅಂತಹ ಪ್ರಕಟಣೆಯ ದಿನಾಂಕದಿಂದ ಹದಿನೈದು ದಿನಗಳಾಗಿರತಕ್ಕದ್ದು. ಲೈಸೆನ್ಸ್ ನೀಡುವ ಪ್ರಾಧಿಕಾರಿಯು, ಖಾಯಂ ಸಿನಿಮಾ ಕಟ್ಟಡ ಮತ್ತು ಮಲ್ಟಿಪ್ಲೆಕ್ಸ್ ಸ್ಥಳಕ್ಕೆ ಉದ್ದೇಶಿತ ನಿವೇಶನದ ಸೂಕ್ತತೆ ಅಥವಾ ಅನ್ಯಥಾ ಅದಕ್ಕೆ ಸಂಬಂಧಿಸಿದಂತೆ ಅವರ ಅಭಿಪ್ರಾಯವನ್ನು ಪಡೆಯುವ ಉದ್ದೇಶಕ್ಕಾಗಿ ನಗರ ಪಾಲಿಕೆಯ ಪಟ್ಟಣ ಯೋಜನಾಧಿಕಾರಿ/ ನಗರಾಭಿವೃದ್ಧಿ ಪ್ರಾಧಿಕಾರಿ/ ಯೋಜನಾ ಪ್ರಾಧಿಕಾರಿ/ ಸಂದರ್ಭಾನುಸಾರ ಜಿಲ್ಲೆಯ ಪಟ್ಟಣ ಮತ್ತು ನಗರ ಯೋಜನೆಯ ಸಹಾಯಕ ನಿರ್ದೇಶಕರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲಾ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ/ ನಗರ ಪೊಲೀಸ್ ಆಯುಕ್ತರು/ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ/ ಜಿಲ್ಲೆ ಅಥವಾ ಆ ಪ್ರದೇಶದ ವಿದ್ಯುತ್ ಪರಿಶೀಲಕರಿಗೆ ಅರ್ಜಿದಾರನು ಒದಗಿಸಿದ ಅದರ ಲಗತ್ತುಗಳು ಅಥವಾ ದಸ್ತಾವೇಜುಗಳೊಂದಿಗೆ ಏಕಕಾಲದಲ್ಲಿ ಅರ್ಜಿಯ ಪ್ರತಿಗಳನ್ನು ಕಳುಹಿಸತಕ್ಕದ್ದು.
(2) ಲೈಸೆನ್ಸ್ ನೀಡುವ ಪ್ರಾಧಿಕಾರಿಯು, ಆದಷ್ಟು ಬೇಗನೆ ಮತ್ತು ಯಾವುದೇ ಸಂದರ್ಭದಲ್ಲಿ (1)ನೇ ಉಪ-ನಿಯಮದಲ್ಲಿ ನಿರ್ದಿಷ್ಟಪಡಿಸಲಾದ ಅವಧಿಯು ಮುಕ್ತಾಯಗೊಂಡ ತರುವಾಯ ಮೂವತ್ತು ದಿವಸಗಳನ್ನು ಮೀರದ ಅವಧಿಯೊಳಗಾಗಿ ಖಾಯಂ ಸಿನಿಮಾ ಕಟ್ಟಡ ಅಥವಾ ಮಲ್ಟಿಷ್ಣೆಕ್ಸ್ ಸ್ಥಾಪನೆಗಾಗಿ ಉದ್ದೇಶಿತ ನಿವೇಶನದ ಸೂಕ್ತತೆಯ ಬಗ್ಗೆ ಅಥವಾ ಅನ್ಯಥಾ ತೀರ್ಮಾನವನ್ನು ಕೈಗೊಳ್ಳತಕ್ಕದ್ದು. (1)ನೇ ಉಪ-ನಿಯಮದಲ್ಲಿ ನಮೂದಿಸಿದ ವಿವಿಧ ಪ್ರಾಧಿಕಾರಗಳು ಆದಷ್ಟು ಬೇಗ ಮತ್ತು ಯಾವುದೇ ಪ್ರಕರಣದಲ್ಲಿ (1)ನೇ ಉಪ-ನಿಯಮದಲ್ಲಿ ನಮೂದಿಸಲಾದ ಅವಧಿಯು ಮುಕ್ತಾಯಗೊಂಡ ತರುವಾಯ ಮೂವತ್ತು ದಿನಗಳ ಅವಧಿಯೊಳಗಾಗಿ ಅವರ ಅಭಿಪ್ರಾಯಗಳನ್ನು ಲೈಸೆನ್ಸ್ ನೀಡುವ ಪ್ರಾಧಿಕಾರಿಗೆ ತಿಳಿಸತಕ್ಕದ್ದು, ಗೊತ್ತುಪಡಿಸಿದ ಅವಧಿಯ ಒಳಗಾಗಿ ನಿರ್ದಿಷ್ಟಪಡಿಸಿದ ಪ್ರಾಧಿಕಾರಿಗಳು. ಅವರ ಅಭಿಪ್ರಾಯಗಳನ್ನು ಒದಗಿಸದೆ ಇದ್ದರೆ, ಲೈಸೆನ್ಸ್. ನೀಡುವ ಪ್ರಾಧಿಕಾರಿಯು, ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಕೊಡಲು ಆಕ್ಷೇಪಣೆ ಇಲ್ಲವೆಂದು ಭಾವಿಸತಕ್ಕದ್ದು.
(3) ಲೈಸೆನ್ಸ್ ನೀಡುವ ಪ್ರಾಧಿಕಾರಿಯು, ಖಾಯಂ ಸಿನಿಮಾ ಅಥವಾ ಮಲಿಷ್ಣೆಕ್ಸ್ ಸ್ಥಳಕ್ಕೆ ನಿವೇಶನದ ಸೂಕ್ತತೆಯ ಣ ಛಿ ಬಗ್ಗೆ ಅಥವಾ ಅನ್ಯಥಾ ಇದಕ್ಕೆ ಸಂಬಂಧಿಸಿದ ತೀರ್ಮಾನವನ್ನು ತೆಗೆದುಕೊಳ್ಳುವುದಕ್ಕೆ ಮುಂಚೆ (1)ನೇ ಉಪ-ನಿಯಮದಲ್ಲಿ ನಮೂದಿಸಲಾದ ವಿವಿಧ ಪ್ರಾಧಿಕಾರಿಗಳ ಅಭಿಪ್ರಾಯಗಳನ್ನು ಮತ್ತು (1)ನೇ ಉಪ-ನಿಯಮದ ಮೇರೆಗಿನ ಪ್ರಕಟಣೆಗೆ ಉತ್ತರವಾಗಿ ಸ್ವೀಕರಿಸಲಾದ ಆಕ್ಷೇಪಣೆಗಳು ಯಾವುದಾದರೂ ಇದ್ದರೆ, ಅವುಗಳನ್ನು ಪರಿಗಣನೆಗೆ ತೆಗೆದುಕೊಳ್ಳತಕ್ಕದ್ದು.
Section 26ನಿರಾಕ್ಷೇಪಣ ಪ್ರಮಾಣ ಪತ್ರವನ್ನು ನೀಡುವುದಕ್ಕಾಗಿ ಷರತ್ತುಗಳು
(1) ಯಾವುದೇ ಸಿನಿಮಾಕ್ಕೆ ಸಂಬಂಧಪಟ್ಟಂತೆ,-
(ಎ) ಸಿನಿಮಾ ನಿವೇಶನದ ಕನಿಷ್ಠ ಪ್ರದೇಶ,-
(1) ಉದ್ದೇಶಿತ ಸಿನಿಮಾ ಕಟ್ಟಡದೊಳಗಿನ ಆಸನಗಳ ಒಟ್ಟು ಸಂಖ್ಯೆಯು ನಾಲ್ಕು ನೂರು ಅಥವಾ ರಸ್ತೆಗೆ ಹೊಂದಿಕೊಂಡಂತೆ ಹದಿನೆಂಟು ಮೀಟರುಗಳಿಗಿಂತ ಕಡಿಮೆ ಇಲ್ಲದಂತೆ ಒಂದು ಒಂಭತ್ತು ನೂರು ಚದರ ಮೀಟರುಗಳಿಗಿಂತ ಕಡಿಮೆ ಇರುವ ಸಂದರ್ಭದಲ್ಲಿ;
(ii) ಉದ್ದೇಶಿತ ಸಿನಿಮಾ ಕಟ್ಟಡದೊಳಗಿನ ಆಸನಗಳ ಒಟ್ಟು ಸಂಖ್ಯೆಯು ಆರು ನೂರು ಅಥವಾ ರಸ್ತೆಗೆ ಹೊಂದಿಕೊಂಡಿರುವ ಒಂದು ಬದಿ ಹದಿನೆಂಟು ಮೀಟರುಗಳಿಗಿಂತ ಕಡಿಮೆ ಇಲ್ಲದಂತೆ, ಒಂದು ಸಾವಿರದ ಮುನ್ನೂರ ಐವತ್ತು ಚದರ ಮೀಟರುಗಳಿಗಿಂತ ಕಡಿಮೆ ಇರುವ ಸಂದರ್ಭದಲ್ಲಿ;
(iii) ಉದ್ದೇಶಿತ ಸಿನಿಮಾ ಕಟ್ಟಡದೊಳಗಿನ ಆಸನಗಳ ಒಟ್ಟು ಸಂಖ್ಯೆಯು ಎಂಟು ಸೂರು ಇದ್ದು ಅಥವಾ ಸಿನಿಮಾ ಮಂದಿರದಲ್ಲಿ ಬಾಲ್ಕನಿ ಆಸನದ ವ್ಯವಸ್ಥೆ ಇಲ್ಲದಿರುವಲ್ಲಿ, ರಸ್ತೆಗೆ ಹೊಂದಿಕೊಂಡಿರುವ ಒಂದು ಬದಿ ಮೂವತ್ತು ಮೀಟರುಗಳಿಗಿಂತ ಕಡಿಮೆಯಿಲ್ಲದ, ಒಂದು ಸಾವಿರದ ಎಂಟು ನೂರು ಚದರ ಮೀಟರುಗಳಿಗಿಂತ ಕಡಿಮೆ ಇರುವ ಸಂದರ್ಭದಲ್ಲಿ;
(iv) ಉದ್ದೇಶಿತ ಸಿನಿಮಾ ಕಟ್ಟಡದೊಳಗಿನ ಆಸನಗಳ ಒಟ್ಟು ಸಂಖ್ಯೆಯು ಎಂಟು ನೂರು ಇದ್ದು ಅಥವಾ ಸಿನಿಮಾ ಮಂದಿರದಲ್ಲಿ ಬಾಲ್ಕನಿ ಆಸನದ ವ್ಯವಸ್ಥೆ ಇಲ್ಲದಿರುವಲ್ಲಿ, ರಸ್ತೆಗೆ ಹೊಂದಿಕೊಂಡಿರುವ ಒಂದು ಬದಿ ಇಪ್ಪತ್ತು ಮೀಟರುಗಳಿಗಿಂತ ಕಡಿಮೆಯಿಲ್ಲದಿದ್ದು, ಒಂದು ಸಾವಿರದ ಎರಡು ನೂರು ಚದರ ಮೀಟರುಗಳು ಕಡಿಮೆ ಇರುವ ಸಂದರ್ಭದಲ್ಲಿ;
(v) ಉದ್ದೇಶಿತ ಸಿನಿಮಾ ಕಟ್ಟಡದೊಳಗಿನ ಆಸನಗಳ ಒಟ್ಟು ಸಂಖ್ಯೆಯು ಒಂದು ಸಾವಿರ ಇದ್ದು ಅಥವಾ ಸಿನಿಮಾ ಮಂದಿರದಲ್ಲಿ ಬಾಲ್ಕನಿ ಆಸನದ ವ್ಯವಸ್ಥೆ ಇದ್ದು, ರಸ್ತೆಗೆ ಹೊಂದಿಕೊಂಡಿರುವ ಒಂದು ಬದಿ ಮೂವತ್ತು ಮೀಟರುಗಳಿಗಿಂತ ಕಡಿಮೆಯಿಲ್ಲದಿದ್ದು, ಎರಡು ಸಾವಿರದ ಎರಡು ನೂರ ಐವತ್ತು ಚದರ ಮೀಟರುಗಳಿಗಿಂತ ಕಡಿಮೆ ಇರುವ ಸಂದರ್ಭದಲ್ಲಿ;
(vi) ಉದ್ದೇಶಿತ ಸಿನಿಮಾ ಕಟ್ಟಡದೊಳಗಿನ ಆಸನಗಳ ಒಟ್ಟು ಸಂಖ್ಯೆಯು ಒಂದು ಸಾವಿರ ಇದ್ದು ಅಥವಾ ಸಿನಿಮಾ ಮಂದಿರದಲ್ಲಿ ಬಾಲ್ಕನಿ ಆಸನದ ವ್ಯವಸ್ಥೆ ಇದ್ದು, ರಸ್ತೆಗೆ ಹೊಂದಿಕೊಂಡಿರುವ ಒಂದು ಬದಿ ಇಪ್ಪತ್ತು ಮೀಟರುಗಳಿಗಿಂತ ಕಡಿಮೆ ಇಲ್ಲದಿರುವ, ಒಂದು ಸಾವಿರದ ಐದು ನೂರು ಚದರ ಮೀಟರುಗಳಿಗಿಂತ ಕಡಿಮೆ ಇರುವ ಸಂದರ್ಭದಲ್ಲಿ;
(vii) ಉದ್ದೇಶಿತ ಸಿನಿಮಾ ಕಟ್ಟಡದೊಳಗಿನ ಆಸನಗಳ ಒಟ್ಟು ಸಂಖ್ಯೆಯು ಒಂದು ಸಾವಿರದ ಇನ್ನೂರು ಇದ್ದು ಅಥವಾ ಸಿನಿಮಾ ಮಂದಿರದಲ್ಲಿ ಬಾಲ್ಕನಿ ಆಸನದ ವ್ಯವಸ್ಥೆ ಇಲ್ಲದಿರುವಲ್ಲಿ, ರಸ್ತೆಗೆ ಹೊಂದಿಕೊಂಡಿರುವ ಒಂದು ಬದಿಯು ಮೂವತ್ತಾರು ಮೀಟರುಗಳಿಗಿಂತ ಕಡಿಮೆಯಿಲ್ಲದಿದ್ದು, ಎರಡು ಸಾವಿರದ ಏಳು ನೂರು ಚದರ ಮೀಟರುಗಳಿಗಿಂತ ಕಡಿಮೆ ಇರುವ ಸಂದರ್ಭದಲ್ಲಿ;
(viii) ಉದ್ದೇಶಿತ ಸಿನಿಮಾ ಕಟ್ಟಡದೊಳಗಿನ ಆಸನಗಳ ಒಟ್ಟು ಸಂಖ್ಯೆಯು ಒಂದು ಸಾವಿರದ ಇನ್ನೂರು ಇದ್ದು ಅಥವಾ ಸಿನಿಮಾ ಮಂದಿರದಲ್ಲಿ ಬಾಲ್ಕನಿ ಆಸನದ ವ್ಯವಸ್ಥೆ ಇದ್ದು, ರಸ್ತೆಗೆ ಹೊಂದಿಕೊಂಡಿರುವ ಒಂದು ಬದಿ ಮೂವತ್ತು ಮೀಟರುಗಳಿಗಿಂತ ಕಡಿಮೆ ಇಲ್ಲದ, ಒಂದು ಸಾವಿರದ ಎಂಟು ನೂರು ಚದರ ಮೀಟರುಗಳಿಗಿಂತ ಕಡಿಮೆ ಇರುವ ಸಂದರ್ಭದಲ್ಲಿ;
(ಬಿ) (i) ಸಿನಿಮಾ ನಿವೇಶನವು, ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಅಧಿನಿಯಮದ ಮೇರೆಗೆ ಸಕ್ಷಮ ಪ್ರಾಧಿಕಾರದಿಂದ ಆ ಪ್ರದೇಶಕ್ಕಾಗಿ ಸಿದ್ಧಪಡಿಸಿದ ಮುಖ್ಯ ಯೋಜನೆಯಲ್ಲಿ ಮೀಸಲಿಟ್ಟ ಭೂಮಿ ಉಪಯೋಗದ ಸಂಬಂಧದಲ್ಲಿ ಅನುಮತಿಸಬಹುದಾದ ವಲಯಗಳಲ್ಲಿ ಇರುವ ಸಂದರ್ಭದಲ್ಲಿ:
ಪರಂತು, ಮುಖ್ಯ ಯೋಜನೆಗಳನ್ನು ಸಿದ್ಧಪಡಿಸದೆ ಇರುವಲ್ಲಿ, ಅಸ್ತಿತ್ವದಲ್ಲಿರುವ ಪ್ರಧಾನ ವಾಣಿಜ್ಯ ಪ್ರದೇಶಗಳನ್ನು ಪರಿಗಣನೆಗೆ ತೆಗೆದುಕೊಳ್ಳತಕ್ಕದ್ದು;
(ii) ಗ್ರಾಮೀಣ ಪ್ರದೇಶಗಳಲ್ಲಿ, ಸಿನಿಮಾ ನಿಯಮಗಳ ಮೇರೆಗೆ, ರಸ್ತೆಯ ಅಗಲ ಮತ್ತು ಗೊತ್ತುಪಡಿಸಲಾದ ಎಲ್ಲ ಇತರೆ ಷರತ್ತುಗಳಿಗೆ ಸಂಬಂಧಿಸಿದಂತೆ ಷರತ್ತುಗಳನ್ನು ಪೂರೈಸಿದ್ದರೆ ಮತ್ತು ಸಕ್ಷಮ ಪ್ರಾಧಿಕಾರಿಯು ಭೂಮಿಯ ಉಪಯೋಗದ ಪರಿವರ್ತನೆಗೆ. ಸಂಬಂಧಿಸಿದಂತೆ. ಕಾನೂನುಗಳನ್ನು. ಸಹ ಪೂರೈಸಿರುವಲ್ಲಿ, . ಲೈಸೆನ್ಸ್. ನೀಡುವ ಪ್ರಾಧಿಕಾರಿಯು ಅನುಮತಿಸಬಹುದಾದ ಖಾಯಂ ಸಿನಿಮಾ ಮಂದಿರ ಅಥವಾ ಮಲ್ಟಿಪ್ಲೆಕ್ಸ್ನ ಮುಖ್ಯ ಯೋಜನೆಗಳು ಇಲ್ಲದಿರುವ ಸಂದರ್ಭಗಳಲ್ಲಿ;
Chapter ಅಧ್ಯಾಯ IV (ಖಾಯಂ ಸಿನಿಮಾಗಳು Wgae Ho Da’, ಸ್ಥಳದ ಅನುಮೋದನೆ)
Section 28ಖಾಯಂ ಸಿನಿಮಾ ಅಥವಾ ಮಲ್ಟಿಪ್ಲೆಕ್ಸ್ ಸಂಬಂಧದಲ್ಲಿ ನಿರಾಕ್ಷೇಪಣಾ ಪ್ರಮಾಣಪತ್ರಕ್ಕಾಗಿ ಫೀಜು
ನಿರಾಕ್ಷೇಪಣಾ ಪ್ರಮಾಣಪತ್ರದ ಮಂಜೂರಾತಿಗಾಗಿ ಅರ್ಜಿಗೆ ಸಂಬಂಧಿಸಿದಂತೆ ಸಂದಾಯ ಮಾಡಬೇಕಾದ ಫೀಜು, ಸರ್ಕಾರವು ಕಾಲಕಾಲಕ್ಕೆ ನಿರ್ದಿಷ್ಟಪಡಿಸಿದಂತೆ ಇರತಕ್ಕದ್ದು.
Section 27ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡುವುದು
ಲೈಸೆನ್ಸ್ ನೀಡುವ ಪ್ರಾಧಿಕಾರಿಗೆ 5ನೇ ಪ್ರಕರಣಕ್ಕೆ ಮತ್ತು 6ನೇ ಪ್ರಕರಣದ ಮೇರೆಗೆ ಅವನು ಮಾಡಿದ ಆದೇಶಗಳು ಯಾವುವಾದರೂ ಇದ್ದರೆ, ಅವುಗಳಿಗೆ ಒಳಪಟ್ಟು, 26ನೇ ನಿಯಮದಲ್ಲಿ ನಿರ್ದಿಷ್ಟಪಡಿಸಲಾದ ಎಲ್ಲಾ ಷರತ್ತುಗಳನ್ನು ನಿವೇಶನವು ಪೂರೈಸುತ್ತದೆ ಎಂದು ಮನದಟ್ಟಾದರೆ, ಸಿನಿಮಾ ಅಥವಾ ಮಲ್ಟಿಪ್ಗಕ್ಟ್ ಕಟ್ಟಡದ ನಿರ್ಮಾಣಕ್ಕಾಗಿ ‘8’ ನಮೂನೆಯಲ್ಲಿ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಅರ್ಜಿದಾರನಿಗೆ ಕೊಡತಕ್ಕದ್ದು. ಆ ಪ್ರಮಾಣಪತ್ರವು ಸಂಕೀರ್ಣ ಅಥವಾ ಸಂದರ್ಭಾನುಸಾರ ಕಟ್ಟಡದ ನಿರ್ಮಾಣದ ಪ್ರಾರಂಭದ ದಿನಾಂಕದಿಂದ ಎರಡು ವರ್ಷಗಳ ಅವಧಿಗಾಗಿ ಸಿಂಧುವಾಗಿರತಕ್ಕದ್ದು, ಲೈಸೆನ್ಸ್ ನೀಡುವ ಪ್ರಾಧಿಕಾರಿಯು, ಈ ಪರವಾಗಿ ಮಾಡಲಾದ ಅರ್ಜಿಯ ಮೇಲೆ, ಅರ್ಜಿದಾರನು ಆ ಸಂಕೀರ್ಣ ಅಥವಾ ಕಟ್ಟಡವನ್ನು ಸದರಿ ಎರಡು ವರ್ಷಗಳ ಅವಧಿಯೊಳಗೆ ಸಿಂಧುವಾದ ಕಾರಣಗಳಿಗಾಗಿ ಪೂರ್ಣಗೊಳಿಸಲು ಅಗಲಿಲ್ಲವೆಂದು ಮನದಟ್ಟಾದರೆ, ಅಂತಹ ಪ್ರಮಾಣಪತ್ರದ ಸಿಂಧುತ್ವವನ್ನು ಒಂದು ವರ್ಷವನ್ನು ಮೀರದ ಅವಧಿಗಾಗಿ, ಆದಾಗ್ಯೂ ಮೂರು ವರ್ಷಗಳು ಮೀರದ ಒಟ್ಟು ಅವಧಿಗಾಗಿ ವಿಸ್ತರಿಸಬಹುದು.
(2) ಅರ್ಜಿದಾರನು ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆದ ದಿನಾಂಕದಿಂದ ಹನ್ನೆರಡು ತಿಂಗಳೊಳಗೆ ಪ್ರೇಕ್ಷಣೆಯ ಸಿನಿಮಾಗಳನ್ನು ಒಳಗೊಂಡು ಆ ಕಟ್ಟಡದ ನಿರ್ಮಾಣವನ್ನು ಪ್ರಾರಂಭಿಸತಕ್ಕದ್ದು. ಲೈಸೆನ್ಸ್ ನೀಡುವ ಪ್ರಾಧಿಕಾರಿಯು ಈ ಬಗ್ಗೆ ಅವನಿಗೆ ಸಲ್ಲಿಸಿದ ಅರ್ಜಿಯ ಮೇಲೆ, ಅರ್ಜಿದಾರನು ಸದರಿ ಅವಧಿಯೊಳಗಾಗಿ ಆ ಕಟ್ಟಡದ ನಿರ್ಮಾಣವನ್ನು ಸಿಂಧುವಾದ ಕಾರಣಗಳಿಗಾಗಿ ಪ್ರಾರಂಭಿಸಲು ಆಗಲಿಲ್ಲವೆಂದು ಅವನಿಗೆ ಮನದಟ್ಟಾದರೆ, ಆ ಅವಧಿಯನ್ನು, ಒಂದು ವರ್ಷಕ್ಕೆ ಮೀರದ ಮತ್ತಷ್ಟು ಅವಧಿಗೆ ವಿಸ್ತರಿಸಬಹುದು. ಕಟ್ಟಡದ ನಿರ್ಮಾಣವನ್ನು ಆ ಒಂದು ವರ್ಷದ ಸದರಿ ಆ ಅವಧಿಯೊಳಗೆ ಪ್ರಾರಂಭಿಸದಿದ್ದರೆ ಅಥವಾ ಒಂದು ವರ್ಷ ವಿಸ್ತರಿಸಲಾದ ಅವಧಿ ಯಾವುದಾದರೂ ಇದ್ದರೆ, ನಿರಾಕ್ಷೇಪಣಾ ಪ್ರಮಾಣಪತ್ರವು ಸದರಿ ಅವಧಿ ಮುಕ್ತಾಯವಾದ ಮೇಲೆ ಕೊನೆಗೊಳ್ಳತಕ್ಕದ್ದು.
(3) ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಸ್ವೀಕರಿಸಿದ ತರುವಾಯ ಲೈಸೆನ್ಸ್ ನೀಡುವ ಪ್ರಾಧಿಕಾರಿಯು ಕೂಡಲೆ ಸಂಬಂಧಪಟ್ಟ ಇಲಾಖೆಗಳಿಗೆ ಅದನ್ನು ಕಳುಹಿಸತಕ್ಕದ್ದು, ಲೈಸೆನ್ಸ್ ನೀಡುವ ಪ್ರಾಧಿಕಾರಿಗೆ ಮೂವತ್ತು ದಿನಗಳ ಮೀರದ ಅವಧಿಯೊಳಗೆ ಸಾಧ್ಯವಾಗಬಹುದಾದಷ್ಟು ಬೇಗನೆ ಅವರ ಅಭಿಪ್ರಾಯವನ್ನು ಅಥವಾ ಸ್ಪಷ್ಟತೆಯನ್ನು ಕೊಡತಕದ್ದು. ಲೈಸೆನ್ಸ್ ನೀಡುವ ಪ್ರಾಧಿಕಾರಿಯು ಸದರಿ ಇಲಾಖೆಗಳೊಂದಿಗೆ ಸಮಾಲೋಚಿಸಲು ಅದನ್ನು ಕಳುಹಿಸತಕ್ಕದ್ದು ಮತ್ತು ಅರ್ಜಿಯನ್ನು ಸಲ್ಲಿಸಿದ ದಿನಾಂಕದಿಂದ ನಲವತ್ತೈದು ದಿನಗಳೊಳಗೆ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ಮಂಜೂರು ಮಾಡಲು ಅರ್ಜಿಯನ್ನು ಪರಿಗಣಿಸತಕ್ಕದ್ದು ಅಥವಾ ನಲವತ್ತೈದು ದಿನಗಳ ಗೊತ್ತುಪಡಿಸಿದ ಸಮಯದೊಳಗೆ ಲಿಖಿತದಲ್ಲಿ ದಾಖಲು ಮಾಡಬೇಕಾದ ಕಾರಣಗಳಿಗಾಗಿ ಅಂತಹ ಲೈಸೆನ್ಸ್ನ್ನು ನೀಡಲು ನಿರಾಕರಿಸತಕ್ಕದ್ದು.
(ಸಿ) ಸಿನಿಮಾ ಅಥವಾ ಮಲ್ಟಿಷ್ಣೆಕ್ಸ್ ನಿವೇಶನವು ಕಾಲುದಾರಿಯನ್ನು ಒಳಗೊಂಡು ರಸ್ತೆಯ ಗರಿಷ್ಟ ಅಗಲವು ಸಾರ್ವಜನಿಕ ರಸ್ತೆಯ ಬದಿಯಿಂದ ರಸ್ತೆಯ ನಗರ ಪ್ರದೇಶಗಳಲ್ಲಿ 12 ಮೀಟರುಗಳು ಇರತಕ್ಕದ್ದು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಾಲುದಾರಿಯನ್ನು ಒಳಗೊಂಡು 9 ಮೀಟರುಗಳು ಇರತಕ್ಕದ್ದು;
ಪರಂತು, ಸಿನಿಮಾ ಅಥವಾ ಮಲ್ಟಿಪ್ಲೆಕ್ಸ್ ರಾಷ್ಟ್ರೀಯ ಹೆದ್ದಾರಿ/ ರಾಜ್ಯ ಹೆದ್ದಾರಿ/ ಪ್ರಮುಖ ರಸ್ತೆಗಳನ್ನು ಹೊರತುಪಡಿಸಿ, ಸಾರ್ವಜನಿಕ ರಸ್ತೆಯ ಬದಿ ಇದ್ದರೆ, ಲೈಸೆನ್ಸ್ ನೀಡುವ ಪ್ರಾಧಿಕಾರಿಯು ಲಿಖಿತದಲ್ಲಿ ಆದೇಶದ ಮೂಲಕ ಅಂತಹ ಷರತ್ತುಗಳು ಮತ್ತು ನಿಬಂಧನೆಗಳಿಗೆ ಒಳಪಟ್ಟು ಅನುಮತಿಸಬಹುದು, ಕಾಲುದಾರಿಯು ಒಳಗೊಂಡು ರಸ್ತೆಯ ಕನಿಷ್ಠ ಅಗಲವು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಒಂಭತ್ತು ಮೀಟರುಗಳಿರತಕ್ಕದ್ದು.
(ಡಿ) ಸಿನಿಮಾ ಅಥವಾ ಮಲ್ಟಿಪ್ಲೆಕ್ಸ್ ಕಟ್ಟಡವು, 8 ಮೀಟರುಗಳ ಮುಂಭಾಗದ ಸೆಟ್ಬ್ಯಾಕ್ನ್ನು, ಯಾವುದು ಹೆಚ್ಚಾಗಿರುವುದೋ ಅಷ್ಟನ್ನು ಅಥವಾ ಕರ್ನಾಟಕ ಹೆದ್ದಾರಿ ನಿಯಮಗಳು, 1966ರಲ್ಲಿ ಇರುವಂತೆ ಹೊಂದಿರತಕ್ಕಂತೆ ಇರುವ ಹೊರತು;
(ಇ) ಸಿನಿಮಾ ನಿವೇಶನವು, ಪ್ರತಿ ಆರು ಮೀಟರುಗಳ ಕನಿಷ್ಠ ಅಗಲವನ್ನು ಹೊಂದಿರತಕ್ಕಂಥ ಸಾರ್ವಜನಿಕ ರಸ್ತೆಗಳ ಮೇಲೆ ಸಾರ್ವಜನಿಕರಿಗೆ ಸೂಕ್ತ ಪ್ರವೇಶ ಮತ್ತು ನಿರ್ಗಮನ ಸಾಧನಗಳನ್ನು ಹೊಂದಿರುವ ಹೊರತು;
(ಎಫ್) ಸಿನಿಮಾ ನಿವೇಶನವು, ಈ ನಿಯಮಗಳು ಪ್ರಾರಂಭವಾದಂದು ಇದ್ದಂತೆ ಇರುವ ಚಿತ್ರಮಂದಿರಕ್ಕಾಗಿ,-
(i) ಹತ್ತು ಲಕ್ಷ ಮತ್ತು ಅದಕ್ಕೂ ಮೇಲ್ಪಟ್ಟ ಜನಸಂಖ್ಯೆಯನ್ನು ಹೊಂದಿರುವ ಸ್ಥಳಗಳಲ್ಲಿ ಇಪ್ಪತ್ತು ಕಾರುಗಳಿಗಾಗಿ ಕನಿಷ್ಠ ಸ್ಥಳಾವಕಾಶಕ್ಕೆ ಒಳಪಟ್ಟು, ಪ್ರತಿ ಐವತ್ತು ಆಸನಗಳಿಗೆ ಒಂದು ಕಾರು ನಿಲ್ದಾಣದಂತೆ;
(ii) ಒಂದರಿಂದ ಹತ್ತು ಲಕ್ಷದ ಒಳಗಿನ ಜನಸಂಖ್ಯೆ ಹೊಂದಿರುವ ಸ್ಥಳಗಳಲ್ಲಿ ಹದಿನೈದು ಕಾರುಗಳಿಗಾಗಿ ಕನಿಷ್ಠ ಸ್ಥಳಾವಕಾಶಕ್ಕೆ ಒಳಪಟ್ಟು ಪ್ರತಿ ಐವತ್ತು ಆಸನಗಳಿಗೆ ಒಂದು ಕಾರು ನಿಲ್ದಾಣದಂತೆ;
(ii) ಐವತ್ತು ಸಾವಿರ ಮತ್ತು ಒಂದು ಲಕ್ಷದ ಒಳಗಿನ ಜನ ಸಂಖ್ಯೆಯನ್ನು ಹೊಂದಿರುವ ಸ್ಥಳಗಳಲ್ಲಿ ಹತ್ತು ಕಾರುಗಳಿಗಾಗಿ ಕನಿಷ್ಠ ಸ್ಥಳಾವಕಾಶಕ್ಕೆ ಒಳಪಟ್ಟು, ಪ್ರತಿ ಐವತ್ತು ಆಸನಗಳಿಗೆ ಒಂದು ಕಾರು ನಿಲ್ದಾಣದಂತೆ;
(iv) ಐವತ್ತು ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಸ್ಥಳಗಳಲ್ಲಿ ಐದು ಕಾರುಗಳಿಗಾಗಿ ಕನಿಷ್ಠ ಸ್ಥಳಾವಕಾಶಕ್ಕೆ ಒಳಪಟ್ಟು ಪ್ರತಿ ಐವತ್ತು ಆಸನಗಳಿಗೆ ಒಂದು ಕಾರು ನಿಲ್ದಾಣದಂತೆ;
- ಸೂಕ್ತ ನಿಲ್ದಾಣ ಸ್ಥಳಾವಕಾಶ ಹೊಂದಿರುವ ಹೊರತು; ಮತ್ತು (ಜಿ). ಸಿನಿಮಾ ನಿವೇಶನವು, ಈ ನಿಯಮಗಳ ಪ್ರಾರಂಭದ ದಿನಾಂಕದಂದು ಮತ್ತು ದಿನಾಂಕದಿಂದ ಪ್ರಸ್ತಾವಿತ ಥಿಯೇಟರುಗಳಿಗಾಗಿ,-
(i) ಹತ್ತು ಲಕ್ಷ ಮತ್ತು ಅದಕ್ಕೂ ಮೇಲ್ಪಟ್ಟ ಜನಸಂಖ್ಯೆಯನ್ನು ಹೊಂದಿರುವ ಸ್ಥಳಗಳಲ್ಲಿ ಇಪ್ಪತ್ತು ಕಾರುಗಳಿಗಾಗಿ ಕನಿಷ್ಠ ಸ್ಥಳಾವಕಾಶಕ್ಕೆ ಒಳಪಟ್ಟು, ಖಾಯಂ ಸಿನಿಮಾ ಥಿಯೇಟರುಗಳಿಗಾಗಿ ಪ್ರತಿ ಇಪ್ಪತ್ತೈದು ಆಸನಗಳಿಗೆ ಒಂದು ಕಾರು ನಿಲ್ದಾಣದಂತೆ ಮತ್ತು ಮಲ್ಟಿಷ್ಣೆಕ್ಸ್ಗಳಿಗಾಗಿ ಪ್ರತಿ ಇಪ್ಪತ್ತೈದು ಆಸನಗಳಿಗೆ ಒಂದು ಕಾರು ನಿಲ್ದಾಣದಂತೆ;
(ii) ಒಂದರಿಂದ ಹತ್ತು ಲಕ್ಷದ ಒಳಗಿನ ಜನಸಂಖ್ಯೆ ಹೊಂದಿರುವ ಸ್ಥಳಗಳಲ್ಲಿ ಹದಿನೈದು ಕಾರುಗಳಿಗಾಗಿ ಕನಿಷ್ಠ ಸ್ಥಳಾವಕಾಶಕ್ಕೆ ಒಳಪಟ್ಟು, ಖಾಯಂ ಸಿನಿಮಾ ಥಿಯೇಟರುಗಳಿಗಾಗಿ ಪ್ರತಿ ಐವತ್ತು ಆಸನಗಳಿಗೆ ಒಂದು ಕಾರು ನಿಲ್ದಾಣದಂತೆ ಮತ್ತು ಮಲ್ಟಿಷ್ಣೆಕ್ಸ್ಗಳಿಗಾಗಿ ಪ್ರತಿ ಇಪ್ಪತ್ತೈದು ಆಸನಗಳಿಗೆ ಒಂದು ಕಾರು ನಿಲ್ದಾಣದಂತೆ;
(ii) . ಐವತ್ತು ಸಾವಿರ ಮತ್ತು ಒಂದು ಲಕ್ಷದ ಒಳಗಿನ ಜನ ಸಂಖ್ಯೆಯನ್ನು ಹೊಂದಿರುವ ಸ್ಥಳಗಳಲ್ಲಿ ಹತ್ತು ಕಾರುಗಳಿಗಾಗಿ ಕನಿಷ್ಠ ಸ್ಥಳಾವಕಾಶಕ್ಕೆ ಒಳಪಟ್ಟು, ಸಿನಿಮಾ ಥಿಯೇಟರುಗಳಿಗಾಗಿ ಪ್ರತಿ ಐವತ್ತು ಆಸನಗಳಿಗೆ ಒಂದು ಕಾರು ನಿಲ್ದಾಣದಂತೆ ಮತ್ತು ಮಲ್ಟಿಷ್ಣೆಕ್ಸ್ಗಳಿಗಾಗಿ ಪ್ರತಿ ಇಪ್ಪತ್ತೈದು ಆಸನಗಳಿಗೆ ಒಂದು ಕಾರು ನಿಲ್ದಾಣದಂತೆ;
(iv) ಐವತ್ತು ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಸ್ಥಳಗಳಲ್ಲಿ ಐದು ಕಾರುಗಳಿಗಾಗಿ ಕನಿಷ್ಠ ಸ್ಥಳಾವಕಾಶಕ್ಕೆ ಒಳಪಟ್ಟು, ಸಿನಿಮಾ ಥಿಯೇಟರುಗಳಿಗಾಗಿ ಪ್ರತಿ ಐವತ್ತು ಆಸನಗಳಿಗೆ ಒಂದು ಕಾರು ನಿಲ್ದಾಣದಂತೆ ಮತ್ತು ಮಲ್ಟಿಷ್ಣೆಕ್ಸ್ಗಳಿಗಾಗಿ ಪ್ರತಿ ಇಪ್ಪತ್ತೈದು ಆಸನಗಳಿಗೆ ಒಂದು ಕಾರು ನಿಲ್ದಾಣದಂತೆ;
- ಸೂಕ್ತ ನಿಲ್ದಾಣ ಸ್ಥಳಾವಕಾಶವನ್ನು ಹೊಂದಿರುವ ಹೊರತು;
(ಹೆಚ್ . ಈ ನಿಯಮಗಳ ಪ್ರಾರಂಭದ ದಿನಾಂಕದಂದು ಇರುವ ಸಿನಿಮಾ ನಿವೇಶನವು ಮತ್ತು ೮ ೧ ನಿಯಮಗಳ ಪ್ರಾರಂಭದ ದಿನಾಂಕದಂದು ಮತ್ತು ದಿನಾಂಕದಿಂದ ಪ್ರಸ್ತಾವಿತ ಸಿನಿಮಾ ನಿವೇಶನ ಮ ನಿಲ್ದಾಣದ ಸ್ಥಳಾವಕಾಶವನ್ನು ಹೊಂದಿರಬೇಕು,-
(i) ಕಾರು ನಿಲ್ದಾಣಕ್ಕೆ ಅಗತ್ಯಪಡಿಸಿದ ಸಂಖ್ಯೆಯ ಶೇಕಡಾ ಇಪ್ಪತ್ತೈದರಷ್ಟು ಹೆಚ್ಚುವರಿಯಾಗಿ ಎರಡು ಮತ್ತು ಮೂರು ಚಕ್ರಗಳ ವಾಹನಗಳಿಗಾಗಿ, ಐವತ್ತು ಸೈಕಲುಗಳ ಕನಿಷ್ಠತೆಗೊಳಪಟ್ಟು ಸೈಕಲು ನಿಲ್ದಾಣಕ್ಕೆಂದು ಒಳಗೊಂಡು ಸ್ಥಳಾವಕಾಶವನ್ನು ಒದಗಿಸತಕ್ಕದ್ದು;
(ii) DO SSS ಸಂದರ್ಭದಲ್ಲಿ, ವಾಹನ ನಿಲ್ದಾಣ ಅಗತ್ಯತೆಯು, ಮೇಲೆ ನಿರ್ದಿಷ್ಟಪಡಿಸಿದಂತಿರತಕ್ಕದ್ದು ಅಥವಾ ಯಾವುದು ಹೆಚ್ಚು ಸ್ಥಳವೋ ಆ ಸಂಬಂಧಪಟ್ಟ ವಲಯ ನಿಯಂತ್ರಣಗಳಲ್ಲಿ ಒದಗಿಸಿದಂತಿರತಕ್ಕದ್ದು. ಅಂತಹ ಸಂದರ್ಭಗಳಲ್ಲಿ, ಥಿಯೇಟರಿನ ಭಾಗದ ವಾಹನ ನಿಲ್ದಾಣವನ್ನು, ಸಂಪೂರ್ಣ ಕಟ್ಟಡದ ಒಟ್ಟು ನಿಲ್ದಾಣ ಅಗತ್ಯತೆಯಲ್ಲಿ ಪ್ರತ್ಯೇಕವಾಗಿ ಮೀಸಲಿಡತಕ್ಕದ್ದು.
ಪರಂತು, ವಿಕಲಚೇತನ ವ್ಯಕ್ತಿಗಳಿಗಾಗಿ ಸೂಕ್ತ ನಿಲ್ದಾಣ ಏರ್ಪಾಟುಗಳನ್ನು ಮಾಡತಕ್ಕದ್ದು.
(ಐ) ಸಿನಿಮಾ ಅಥವಾ ಮಲ್ಟಿಪ್ಲೆಕ್ಸ್ ಕಟ್ಟಡದ ಮತ್ತು ಆವರಣ ಗೋಡೆಯ ಒಳಪರಿಮಿತಿಗಳ ನಡುವಣ ಮತ್ತು ಅದೇ ಆವರಣದಲ್ಲಿನ ಸಿನಿಮಾ ಕಟ್ಟಡ ಮತ್ತು ಎಲ್ಲ ಇತರ ಕಟ್ಟಡಗಳ ನಡುವಣ ಸ್ಪಷ್ಟ ದೂರವು ಪ್ರವೇಶ ದ್ವಾರದ ಕಡೆ ಎಂಟು ಮೀಟರುಗಳಿಗಿಂತ ಮತ್ತು ಇನ್ನೊಂದು ಕಡೆ ನಾಲ್ಕೂವರೆ ಮೀಟರುಗಳಿಗಿಂತ ಕಡಿಮೆಯಿಲ್ಲದಷ್ಟು ಇರುವ ಹೊರತು:
ಪರಂತು, ಇದು ಅಸ್ತಿತ್ವದಲ್ಲಿರುವ ಯಾವುದೇ ಸಿನಿಮಾ ಥಿಯೇಟರುಗಳಿಗೆ ಮತ್ತು ಕರ್ನಾಟಕ ಸಿನಿಮಾ (ನಿಯಂತ್ರಣ) ನಿಯಮಗಳು, 2014 ಜಾರಿಗೆ ಬರುವುದಕ್ಕೆ ಮುಂಚೆ ನಿರಾಕ್ಷೇಪಣ ಪ್ರಮಾಣಪತ್ರ ನೀಡಲಾದಂಥ ಸಿನಿಮಾ ಆವರಣಗಳಿಗೆ ಅನ್ವಯವಾಗತಕ್ಕದ್ದಲ್ಲ;
ಮತ್ತೂ ಪರಂತು, ಮಲ್ಟಿಪ್ಲೆಕ್ಸ್ ಕಟ್ಟಡದ ಸಂದರ್ಭದಲ್ಲಿ, ದೂರವು, ಈ ನಿಯಮಗಳಲ್ಲಿ ನಿರ್ದಿಷ್ಟಪಡಿಸಿದಂತೆ ಇರತಕ್ಕದ್ದು ಅಥವಾ ಸಂಬಂಧಪಟ್ಟ ವಲಯ ನಿಯಂತ್ರಣಗಳಲ್ಲಿ ಯಾವುದು ಹೆಚ್ಚೋ ಅದರಂತೆ ಇರತಕ್ಕದ್ದು.
(ಜೆ) ಸಿನಿಮಾ ಅಥವಾ ಮಲ್ಟಿಪ್ಲೆಕ್ಸ್ ನಿವೇಶನವು, ಸಂಚಾರದ ತೊಂದರೆಗಳು ಅಥವಾ ಸಮಸ್ಯೆಗಳು ಉಂಟು ಮಾಡುವ ಸಂಭವವಿಲ್ಲದಿರುವ ಸ್ಥಳದಲ್ಲಿ ಇರುವ ಹೊರತು;
(ಕೆ) ಸಿನಿಮಾ ಅಥವಾ ಮಲ್ಟಿಪ್ಲೆಕ್ಸ್ ನಿವೇಶನವು,-
(ಎ) (i) ಯಾವುದೇ ಅಸ್ತಿತ್ವದಲ್ಲಿರುವ ಪೆಟ್ರೋಲ್ ಬಂಕ್ ಅಥವಾ ಪೆಟ್ರೋಲ್ ಬಂಕ್ಗೆ ಲೈಸೆನ್ಸ್ ಪಡೆದಿರುವ ಸ್ಥಳ ಮತ್ತು ಆಗ್ನಿ ಸಂಭಾವ್ಯ ಇತರ ಸ್ಥಳಗಳು; ಅಥವಾ
(ii) ಉಪಯೋಗದಲ್ಲಿರುವ ಸಮುದಾಯ ಆರಾಧನೆಯ ಯಾವುದೇ ಸ್ಥಳ, ಸುಡುಗಾಡು, ಸಮಾಧಿ ಭೂಮಿ ಅಥವಾ ಗೋರಿ ಸ್ಥಳ; ಅಥವಾ
(iii) ಯಾವುದೇ ಮನ್ನಣೆ ಪಡೆದ ಶೈಕ್ಷಣಿಕ ಸಂಸ್ಥೆ ಅಥವಾ ಅಂತಹ ಶೈಕ್ಷಣಿಕ ಸಂಸ್ಥೆಗಳಿಗೆ ಹೊಂದಿಕೊಂಡಿರುವ ಯಾವುದೇ ವಸತಿ ಸಂಸ್ಥೆಯಿಂದ; ಅಥವಾ
(iv) ಯಾವುದೇ ಸಾರ್ವಜನಿಕ ಅಸ್ಪತ್ರೆ ಅಥವಾ ಖಾಸಗಿ ನರ್ಸಿಂಗ್ ಹೋಂನಿಂದ;
(v) ಯಾವುದೇ ಮನ್ನಣೆ ಪಡೆದ ಅನಾಥಾಲಯದಿಂದ; ಅಥವಾ
(vi) ಯಾವುದೇ ಜನನಿಬಿಡ ವಸತಿ ಪ್ರದೇಶ ಅಥವಾ ವ್ಯಾಪಾರ ಉದ್ದೇಶಗಳಿಂದ ಭಿನ್ನವಾದ ನಿವಾಸದ ಉದ್ದೇಶಗಳಿಗಾಗಿ ಸಾಮಾನ್ಯವಾಗಿ ಉಪಯೋಗಿಸಿದ ಪ್ರದೇಶದಿಂದ - ಐವತ್ತು ಮೀಟರುಗಳಿಗಿಂತ ಕಡಿಮೆಯಿಲ್ಲದ ದೂರದಲ್ಲಿರತಕ್ಕ ಹೊರತು; ಮತ್ತು
ಪರಂತು, ಲೈಸೆನ್ಸ್ ನೀಡುವ ಪ್ರಾಧಿಕಾರಿಯು, ಪ್ರಸ್ತಾವನೆಯು ಧ್ವನಿನಿರೋಧಕ ಸಿನಿಮಾ ಕಟ್ಟಡವನ್ನು ನಿರ್ಮಿಸುವುದಕ್ಕೆ ಆಗಿದ್ದರೆ, ಆತನ ವಿವೇಚನಾನುಸಾರ, ಸಾರ್ವಜನಿಕ ಹಿತಾಸಕ್ತಿಯಲ್ಲಿ ಉದ್ದೇಶಿತ ನಿವೇಶನವನ್ನು ಪರಿಶೀಲಿಸಿದ ತರುವಾಯ ಬರಹದಲ್ಲಿ ದಾಖಲು ಮಾಡಬೇಕಾದ ಕಾರಣಗಳಿಗಾಗಿ, ಆ ಸ್ಥಳದ ಸೂಕ್ತತೆಯನ್ನು ಪರ್ಯಾಲೋಚಿಸಿ. ಪ್ರತಿಯೊಂದು. ಪ್ರಕರಣದಲ್ಲಿ ವಿಧಿಸಲು ಆತನು ಅವಶ್ಯವೆಂದು ಪರ್ಯಾಲೋಚಿಸಬಹುದಾದಂಥ ಷರತ್ತುಗಳಿಗೊಳಪಟ್ಟು ಮೇಲೆ ನಿರ್ದಿಷ್ಟಪಡಿಸಿದ ಎಲ್ಲಾ ಅಥವಾ ಯಾವುದೇ ಷರತ್ತು ಗಳನ್ನು ಸಡಿಲಗೊಳಿಸಬಹುದು;
ಮತ್ತೂ ಪರಂತು, ಪ್ರತಿಯೊಂದು ಪ್ರಕರಣದ ಸಂಗತಿಗಳು ಮತ್ತು ಸಂದರ್ಭಗಳನ್ನು ಪರ್ಯಾಲೋಚಿಸಿ ಬೇರೆ ಬೇರೆ ಪ್ರಕರಣಗಳಲ್ಲಿ ಬೇರೆ ಬೇರೆ ಹೆಚ್ಚುವರಿ ಷರತ್ತುಗಳನ್ನು ವಿಧಿಸಬಹುದು;
(ಬಿ) ಯಾವುದೇ ಸಂರಕ್ಷಿತ ಸ್ಮಾರಕ, ರಕ್ಷಣಾ ಸ್ಥಾವರಗಳು, ರಾಷ್ಟ್ರೀಯ ಉದ್ಯಾನವನಗಳು, ವಸ್ತು ಸಂಗ್ರಹಾಲಯಗಳು ಮತ್ತು ಪ್ರಧಾನ ಟೆಲಿಫೋನ್ ಅಥವಾ ಟೆಲಿಗ್ರಾಫ್ ಅಥವಾ ವೈರ್ಲೆಸ್ ಅಥವಾ ದೂರ ಸಂಪರ್ಕ ಸ್ಥಾವರಗಳು ಇರುವಂಥ ಕಟ್ಟಡಗಳಿಂದ ಒಂದು ನೂರು ಮೀಟರುಗಳಿಗಿಂತ ಕಡಿಮೆಯಿಲ್ಲದ ದೂರ ಇದ್ದ ಹೊರತು;
(1) ಸಿನಿಮಾ ನಿವೇಶನವು ಎತ್ತರದ ಸ್ಥಳದಲ್ಲಿರತಕ್ಕದ್ದು ಅಥವಾ ಸೂಕ್ತ ಚರಂಡಿ ವ್ಯವಸ್ಥೆಗಳನ್ನು ಹೊಂದಿದ್ದು ತೇವರಹಿತವಾಗಿದ್ದ ಹೊರತು;
(2) (ಎ) ಹತ್ತು ಸಾವಿರ ಅಥವಾ ಅದಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಸ್ಥಳಗಳಲ್ಲಿ, ಅನುಮತಿಸಬೇಕಾದ ಸಿನಿಮಾಗಳ ಸಂಖ್ಯೆಯನ್ನು,-
(i) ಅದು ಮಹಾನಗರ ಪ್ರದೇಶವಾಗಿದ್ದರೆ, ಪ್ರತಿ ಇಪ್ಪತ್ತು ಸಾವಿರ ಜನಸಂಖ್ಯೆ ಅಥವಾ ಹತ್ತು ಸಾವಿರವನ್ನು ಮೀರುವ ಅದರ ಭಾಗಕ್ಕಾಗಿ ಒಂದು ಸಿನಿಮಾದ ಆಧಾರದ ಮೇಲೆ; ಮತ್ತು
(ii) ಇತರ ಸ್ಥಳಗಳಲ್ಲಿ, ಪ್ರತಿ ಹತ್ತು ಸಾವಿರ ಜನಸಂಖ್ಯೆ ಅಥವಾ ಐದು ಸಾವಿರವನ್ನು ಮೀರುವ ಅದರ ಭಾಗಕ್ಕೆ ಒಂದು ಸಿನಿಮಾದ ಆಧಾರದ ಮೇಲೆ, - ನಿರ್ಧರಿಸತಕ್ಕದ್ದು;
(ಬಿ). ಐದು ಲಕ್ಷ ಮತ್ತು ಅದಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಪಟ್ಟಣಗಳು ಮತ್ತು ನಗರಗಳಲ್ಲಿ ಒಂದರಿಂದ ಒಂದಕ್ಕೆ ನಾಲ್ಕು ನೂರು ಮೀಟರುಗಳ ದೂರದೊಳಗೆ ಸಿನಿಮಾವನ್ನು ಸ್ಥಾಪಿಸಲು ಅನುಮತಿಸತಕ್ಕದ್ದಲ್ಲ.
(3) (2)ನೇ ಉಪ-ನಿಯಮದಲ್ಲಿರುವುದಾವುದೂ, ಸಿನಿಮಾ ಕಟ್ಟಡವು, ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರದ ಒಡತನದಲ್ಲಿದ್ದರೆ, ಮಹಾನಗರ ಪ್ರದೇಶದಲ್ಲಿ ಸಿನಿಮಾಗಳ ಸ್ಥಾಪನೆಗಾಗಿ ಅನ್ವಯವಾಗತಕ್ಕದ್ದಲ್ಲ.
(4) ಮಹಾನಗರ ಪ್ರದೇಶದಲ್ಲಿನ ಪ್ರತಿಯೊಂದು ವಾರ್ಡು 7ನೇ ಪ್ರಕರಣದ ಉದ್ದೇಶಕ್ಕಾಗಿ ಒಂದು ಪ್ರದೇಶವಾಗಿರತಕ್ಕದ್ದು. ಲೈಸೆನ್ಸ್ ನೀಡುವ ಪ್ರಾಧಿಕಾರಿಯು 6ನೇ ಪ್ರಕರಣದ ಉಪಬಂಧಗಳು ಮತ್ತು (2)ನೇ ಉಪನಿಯಮದ ಉಪಬಂಧಗಳನ್ನು ಗಮನದಲ್ಲಿರಿಸಿ, BBO (2)ನೇ ಉಪನಿಯಮದ ಉದ್ದೇಶಕ್ಕಾಗಿ ಅಂತಹ ಪ್ರತಿಯೊಂದು ವಾರ್ಡು ಸ್ಥಳವಾಗಿದಿದ್ದರೆ ಹೇಗೋ ಹಾಗೆ, ಅಂತಹ ಪ್ರತಿಯೊಂದು ವಾರ್ಡಿನಲ್ಲಿ ಸದರಿ ಅಧಿನಿಯಮದ ಮೇರೆಗೆ ಲೈಸನ್ಸ್ ನೀಡಬಹುದಾದ ಸ್ಥಳಗಳ ಸಂಖ್ಯೆಯನ್ನು ಪರಿಮಿತಿಗೊಳಿಸಬಹುದು;
ಪರಂತು, ಅಂತಹ ಎಲ್ಲಾ ವಾರ್ಡುಗಳಿಗೆ ಸಂಬಂಧಿಸಿದಂತೆ ಹಾಗೆ ನಿರ್ಧರಿಸಿದ ಸ್ಥಳಗಳ ಒಟ್ಟು ಸಂಖ್ಯೆಯು ಮಹಾನಗರ ಪ್ರದೇಶವನ್ನು ಒಟ್ಟಾರೆ ತೆಗೆದುಕೊಂಡು ಅದಕ್ಕೆ ಸಂಬಂಧಿಸಿದಂತೆ (2)ನೇ ಉಪ-ನಿಯಮದ ಮೇರೆಗೆ ಅನುಮತಿಸಬಹುದಾದ ಸಂಖ್ಯೆಯನ್ನು ಮೀರತಕ್ಕದ್ದಲ್ಲ;
ವಿವರಣೆ.- (2) (3) ಮತ್ತು (4)ನೇ ಉಪ-ನಿಯಮಗಳ ಉದ್ದೇಶಕ್ಕಾಗಿ,-
(1) “ದೂರ” ವನ್ನು. ಎರಡು. ಸಿನಿಮಾಗಳನ್ನು. ಕೂಡಿಸುವ ಮತ್ತು ಸಾರ್ವಜನಿಕರು. ಸಾಮಾನ್ಯವಾಗಿ ಉಪಯೋಗಿಸುವ ಅತಿ ಸಮೀಪದ ದಾರಿ, ಗಲ್ಲಿ, ಬೀದಿ ಅಥವಾ ರಸ್ತೆ ಉದ್ದವನ್ನು ಲೆಕ್ಕ ಹಾಕತಕ್ಕದ್ದು;
(2) “ಮಹಾನಗರ ಪ್ರದೇಶ” ಎಂದರೆ, ದಂಡ ಪ್ರಕ್ರಿಯಾ ಸಂಹಿತೆ, 1973ರ (1974ರ ಕೇಂದ್ರ ಅಧಿನಿಯಮ ಸಂಖ್ಯೆ:2) 8ನೇ ಪ್ರಕರಣದ ಮೇರೆಗೆ ಮಹಾನಗರ ಪ್ರದೇಶವೆಂದು ಘೋಷಿಸಲಾದ ನಗರ ಅಥವಾ ಪಟ್ಟಣ;
(3) “ಸ್ಥಳ” ಎಂದರೆ, ಹತ್ತು ಸಾವಿರ ಮತ್ತು ಅದಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಪಟ್ಟಣಗಳು ಮತ್ತು ನಗರಗಳ ಸಂದರ್ಭದಲ್ಲಿ ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರದ ಅಧಿಕಾರ ವ್ಯಾಪ್ತಿಯೊಳಗೆ ಬರುವ ಪ್ರದೇಶ ಮತ್ತು ಇತರ ಸಂದರ್ಭಗಳಲ್ಲಿ ಸಿನಿಮಾವನ್ನು ಸ್ಥಾಪಿಸಲು ಉದ್ದೇಶಿಸಿದಂಥ ಸ್ಥಳೀಯ ಪ್ರಾಧಿಕಾರದ ಕೇಂದ್ರದಿಂದ ಐದು ಕಿಲೋ ಮೀಟರುಗಳ ವ್ಯಾಸದೊಳಗಿನ ಪ್ರದೇಶ.