(1) (i) ಸಿನಿಮಾ ಅಥವಾ ಮಲ್ಟಿಷ್ಣೆಕ್ಸ್ಗೆ ಲೈಸೆನ್ಸ್ನ ಮರು ಮಂಜೂರಾತಿಗಾಗಿ ಪ್ರತಿಯೊಂದು ಅರ್ಜಿಯನ್ನು, ಲೈಸೆನ್ಸ್ ಮುಕ್ತಾಯವಾಗುವುದಕ್ಕೆ ಒಂದು ತಿಂಗಳ ಮುಂಚಿತವಾಗಿ ಲೈಸೆನ್ಸ್ ನೀಡುವ ಪ್ರಾಧಿಕಾರಿಗೆ ಸಲ್ಲಿಸತಕ್ಕದ್ದು. ಅಂತಹ ಅರ್ಜಿಯು,-
(i) 35ನೇ ನಿಯಮದ (1ನೇ, (1)ನೇ, (11)ನೇ ಮತ್ತು (1)ನೇ ಖಂಡಗಳಲ್ಲಿ ಉಲ್ಲೇಖಿಸಿದ ಪ್ರಮಾಣಪತ್ರಗಳು ಮತ್ತು (॥)ನೇ ಖಂಡಗಳಲ್ಲಿ ಉಲ್ಲೇಖಿಸಿದ ಘೋಷಣೆ;
(1) 87ನೇ ನಿಯಮದಲ್ಲಿ ನಿರ್ದಿಷ್ಟಪಡಿಸಿದ ದರಗಳಲ್ಲಿ ಫೀಜುಗಳನ್ನು ಸಂದಾಯ ಮಾಡಿದ ಬಗ್ಗೆ ಸಾಕ್ಷ್ಯ ವಾಗಿರುವ ಖಜಾನೆ ಚಲನ್ ಅನ್ನು;
(iii) ಸಿನಿಮಾ ಕಟ್ಟಡದ ಸಂಬಂಧದಲ್ಲಿ ಬಾಡಿಗೆಯನ್ನು ತಹಲ್ವರೆಗೆ ಸಂದಾಯ ಮಾಡಿರುವ ಮತ್ತು ಅಂತಹ ಕಟ್ಟಡ ಇರುವ ಅಂತಹ ಭೂಮಿಯನ್ನು ರಾಜ್ಯ ಸರ್ಕಾರ ಅಥವಾ ಯಾವುದೇ ಸ್ಥಳೀಯ ಪ್ರಾಧಿಕಾರದಿಂದ ಗುತ್ತಿಗೆಯ ಮೇಲೆ ಪಡೆದಿರುವ ಸಂದರ್ಭದಲ್ಲಿ ಸಕ್ಷಮ ಪ್ರಾಧಿಕಾರವು ನೀಡಿದ ಪ್ರಮಾಣಪತ್ರ - ಇವುಗಳೊಂದಿಗೆ ಲಗತ್ತಾಗಿರತಕ್ಕದ್ದು.
(2) (1)ನೇ ಉಪ-ನಿಯಮದ ಮೇರೆಗೆ ಪ್ರಮಾಣಪತ್ರವನ್ನು ನೀಡುವುದಕ್ಕಾಗಿ ಸಂದಾಯ ಮಾಡಲಾದ ಫೀಜಗಳ ಖಜಾನೆ ಚಲನ್ ಹಾಗೂ ಸರ್ಕಾರವು ಕಾಲಕಾಲಕ್ಕೆ ನಿರ್ದಿಷ್ಟಪಡಿಸಿದ ಫೀಜುಗಳೊಂದಿಗೆ ಲಗತ್ತು ಮಾಡಿ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಅರ್ಜಿಯ ಪ್ರತಿಯನ್ನು ಕಳುಹಿಸತಕ್ಕದ್ದು. ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು ಸಿನಿಮಾ ಅಥವಾ ಮಲ್ಟಿಪ್ಲೆಕ್ಸ್ ಕಟ್ಟಡವಾಗಲಿ ಈ ನಿಯಮಗಳ ಅಗತ್ಯತೆಗಳನ್ನು ಪೂರೈಸಿರುವವೆಂಬ ಬಗ್ಗೆ ಪರಿಶೀಲಿಸತಕ್ಕದ್ದು ಮತ್ತು ಲೈಸೆನ್ಸ್ ನೀಡುವ ಪ್ರಾಧಿಕಾರಕ್ಕೆ ವರದಿ ಮಾಡತಕ್ಕದ್ದು. ಸಿನಿಮಾ ಅಥವಾ ಮಲ್ಪಿಪ್ಲೆಕ್ಸ್ ಕಟ್ಟಡವು ಈ ನಿಯಮಗಳ ಅಗತ್ಯತೆಗಳನ್ನು ಪೂರೈಸಿರುವವೆಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನದಟ್ಟಾದರೆ, ಆತನು ಅರ್ಜಿಯನ್ನು ಸ್ವೀಕರಿಸಿದ ತರುವಾಯ 15 ದಿನಗಳೊಳಗೆ ಪ್ರಮಾಣಪತ್ರವನ್ನು ನೀಡತಕ್ಕದ್ದು. ಆದಾಗ್ಯೂ, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು, ಅದರಲ್ಲಿ ಯಾವುದೇ ನ್ಯೂನತೆಯನ್ನು ಕಂಡುಹಿಡಿದರೆ, ಆತನು ಲೈಸೆನ್ಸ್ ನೀಡುವ ಪ್ರಾಧಿಕಾರಿಗೆ ಅದನ್ನು ಲಿಖಿತದಲ್ಲಿ ವರದಿ ಮಾಡತಕ್ಕದ್ದು. ಆ ತರುವಾಯ ಕೂಡಲೇ ಅವುಗಳನ್ನು ಸರಿಪಡಿಸುವುದಕ್ಕಾಗಿ ಮಾಲೀಕನಿಗೆ ಲಿಖಿತದಲ್ಲಿ ನೋಟೀಸನ್ನು ನೀಡತಕ್ಕದ್ದು ಮತ್ತು ಯಾವ ಕಾಲದೊಳಗೆ ಅಂತಹ ಸರಿಪಡಿಸುವಿಕೆಯನ್ನು ಕಾರ್ಯಗತಗೊಳಿಸತಕ್ಕದ್ದೋ ಆ ಕಾಲದೊಳಗೆ ಸೂಕ್ತ ಕಾಲವನ್ನು ನಿರ್ದಿಷ್ಟಪಡಿಸತಕ್ಕದ್ದು. ನಿರ್ದಿಷ್ಟಪಡಿಸಿದ ಅವಧಿಯೊಳಗೆ ಅಂತಹ ನೋಟೀಸಿನ ನಿಬಂಧನೆಗಳನ್ನು ಪಾಲಿಸಲು ಲೈಸೆನ್ಸ್ದಾರನು ತಪ್ಪಿದ ತರುವಾಯ, ಲೈಸೆನ್ಸನ್ನು ನೀಡುವ ಪ್ರಾಧಿಕಾರಿಯು, ಲೈಸೆನ್ಸ್ದಾರನು ಅಂತಹ ಸರಿಪಡಿಸುವಿಕೆಗಳನ್ನು ಮಾಡುವವರೆಗೆ, ಸಂದರ್ಭಾನುಸಾರ ಅಸ್ತಿತ್ವದಲ್ಲಿರುವ ಲೈಸೆನ್ಸ್ನ್ನು ತಡೆಹಿಡಿಯತಕ್ಕದ್ದು ಅಥವಾ ರದ್ದುಪಡಿಸತಕ್ಕದ್ದು ಅಥವಾ ಮರುಮಂಜೂರಾತಿ ಮಾಡತಕ್ಕದ್ದಲ್ಲ:
ಪರಂತು, ಯಾವುದೇ ಸಿನಿಮಾ ಥಿಯೇಟರ್ ಅಥವಾ ಮಲ್ಟಿಪ್ಲೆಕ್ಸ್ ಈ ನಿಯಮಗಳ ಅಗತ್ಯತೆಗಳನ್ನು ಪೂರೈಸದೇ ಇರುವ ಸಂದರ್ಭದಲ್ಲಿ, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು ಐದು ವರ್ಷಗಳವರೆಗೆ ಪ್ರಮಾಣಪತ್ರವನ್ನು ನೀಡುವ ಅರ್ಜಿಯನ್ನು ತಿರಸ್ಕರಿಸಬಹುದು ಅಥವಾ ಲಿಖಿತದಲ್ಲಿ ದಾಖಲುಮಾಡಬೇಕಾದ ಕಾರಣಗಳಿಗಾಗಿ ಪ್ರಮಾಣಪತ್ರದ ಆ ಅವಧಿಯನ್ನು ಕಡಿಮೆ ಮಾಡಬಹುದು ಮತ್ತು ಅರ್ಜಿದಾರನಿಗೆ ತನ್ನ ಅಹವಾಲನ್ನು ಹೇಳಿಕೊಳ್ಳಲು ಅವಕಾಶ ಕೊಟ್ಟ ತರುವಾಯ, ಇದಕ್ಕಾಗಿನ ಕಾರಣಗಳನ್ನು ಲೈಸೆನ್ಸ್ ನೀಡುವ ಪ್ರಾಧಿಕಾರಿಗೆ ತಿಳಿಸತಕ್ಕದ್ದು.
(3) (1)ನೇ ಉಪನಿಯಮದ ಮೇರೆಗೆ ಪ್ರಮಾಣಪತ್ರವನ್ನು ನೀಡುವುದಕ್ಕಾಗಿ ಸಂದಾಯ ಮಾಡಲಾದ ಫೀಜಗಳ ಖಜಾನೆ ಚಲನ್ ಹಾಗೂ ಸರ್ಕಾರವು ಕಾಲಕಾಲಕ್ಕೆ ನಿರ್ದಿಷ್ಟಪಡಿಸಿದ ಫೀಜುಗಳೊಂದಿಗೆ ಲಗತ್ತು ಮಾಡಿ ವಿದ್ಯುಚ್ಛಕ್ತಿ ಪರಿಶೀಲ್ಶಕನಿಗೆ ಅರ್ಜಿಯ ಪ್ರತಿಯನ್ನು ಕಳುಹಿಸತಕ್ಕದ್ದು. ವಿದ್ಯುಚ್ಛಕ್ತಿ ಪರಿಶೀಲಕನು ವಿದ್ಯುತ್ ಅನುಷ್ಠಾಪನೆಗಳ ಸ್ಥಾಪನೆಗಳ ಬಗ್ಗೆ ಈ ನಿಯಮಗಳ ಅಗತ್ಯತೆಗಳನ್ನು ಪೂರೈಸಿರುವವೆಂಬ ಬಗ್ಗೆ ಪರಿಶೀಲಿಸತಕ್ಕದ್ದು ಮತ್ತು ಲೈಸೆನ್ಸ್ ನೀಡುವ ಪ್ರಾಧಿಕಾರಕ್ಕೆ ವರದಿಮಾಡತಕ್ಕದ್ದು. ವಿದ್ಯುತ್ ಅನುಷ್ಠಾಪನೆಯ ಬಗ್ಗೆ ಈ ನಿಯಮಗಳ ಅಗತ್ಯತೆಗಳನ್ನು ಪೂರೈಸಿರುವವೆಂದು ವಿದ್ಯುಚ್ಛಕ್ತಿ ಪರಿಶೀಲಕನಿಗೆ ಮನದಟ್ಟಾದರೆ, ಆತನು ಅರ್ಜಿಯನ್ನು ಸ್ವೀಕರಿಸಿದ ತರುವಾಯ 15 ದಿನಗಳೊಳಗೆ ಪ್ರಮಾಣಪತ್ರವನ್ನು ನೀಡತಕ್ಕದ್ದು. ಆದಾಗ್ಯೂ, ವಿದ್ಯುಚ್ಛಕ್ತಿ ಪರಿಶೀಲಕನು, ಅದರಲ್ಲಿ ಯಾವುದೇ ನ್ಯೂನತೆಯನ್ನು ಕಂಡುಹಿಡಿದರೆ, ಆತನು ಲೈಸೆನ್ಸ್ ನೀಡುವ ಪ್ರಾಧಿಕಾರಿಗೆ ಅದನ್ನು ಲಿಖಿತದಲ್ಲಿ ವರದಿ ಮಾಡತಕ್ಕದ್ದು. ಆ ತರುವಾಯ ಕೂಡಲೇ ಅವುಗಳನ್ನು ಸರಿಪಡಿಸುವುದಕ್ಕಾಗಿ ಮಾಲೀಕನಿಗೆ ಲಿಖಿತದಲ್ಲಿ ನೋಟೀಸನ್ನು ನೀಡತಕ್ಕದ್ದು ಮತ್ತು ಯಾವ ಕಾಲದೊಳಗೆ ಅಂತಹ ಸರಿಪಡಿಸುವಿಕೆಯನ್ನು ಕಾರ್ಯಗತಗೊಳಿಸತಕ್ಕದ್ದೋ ಆ ಕಾಲದೊಳಗೆ ಸೂಕ್ತ ಕಾಲವನ್ನು ನಿರ್ದಿಷ್ಟಪಡಿಸತಕ್ಕದ್ದು. ನಿರ್ದಿಷ್ಟಪಡಿಸಿದ ಅವಧಿಯೊಳಗೆ ಅಂತಹ ನೋಟೀಸಿನ ನಿಬಂಧನೆಗಳನ್ನು ಪಾಲಿಸಲು ಲೈಸೆನ್ಸ್ದಾರನು. ತಪ್ಪಿದ. ತರುವಾಯ, ಲೈಸೆನ್ಸನ್ನು . ನೀಡುವ ಪ್ರಾಧಿಕಾರಿಯು, ಲೈಸೆನ್ಸ್ದಾರನು. ಅಂತಹ ಸರಿಪಡಿಸುವಿಕೆಗಳನ್ನು ಮಾಡುವವರೆಗೆ, ಸಂದರ್ಭಾನುಸಾರ ಅಸ್ತಿತ್ವದಲ್ಲಿರುವ ಲೈಸೆನ್ಸ್ನ್ನು ತಡೆಹಿಡಿಯತಕ್ಕದ್ದು ಅಥವಾ ರದ್ದುಪಡಿಸತಕ್ಕದ್ದು ಅಥವಾ ಮರುಮಂಜೂರಾತಿ ಮಾಡತಕ್ಕದ್ದಲ್ಲ:
ಪರಂತು, ಯಾವುದೇ ಸಿನಿಮಾ ಥಿಯೇಟರ್ ಅಥವಾ ಮಲ್ಟಿಪ್ಲೆಕ್ಸ್ ಈ ನಿಯಮಗಳ ಅಗತ್ಯತೆಗಳನ್ನು ಪೂರೈಸದೇ ಇರುವ ಸಂದರ್ಭದಲ್ಲಿ, ವಿದ್ಯುಚ್ಛಕ್ತಿ ಪರಿಶೀಲಕನು ಐದು ವರ್ಷಗಳವರೆಗೆ ಪ್ರಮಾಣಪತ್ರವನ್ನು ನೀಡುವ ಅರ್ಜಿಯನ್ನು ತಿರಸ್ಕರಿಸಬಹುದು ಅಥವಾ ಲಿಖಿತದಲ್ಲಿ ದಾಖಲುಮಾಡಬೇಕಾದ ಕಾರಣಗಳಿಗಾಗಿ ಪ್ರಮಾಣಪತ್ರದ ಆ ಅವಧಿಯನ್ನು ಕಡಿಮೆ ಮಾಡಬಹುದು ಮತ್ತು ಅರ್ಜಿದಾರನಿಗೆ ತನ್ನ ಅಹವಾಲನ್ನು ಹೇಳಿಕೊಳ್ಳಲು ಅವಕಾಶ ಕೊಟ್ಟ ತರುವಾಯ, ಇದಕ್ಕಾಗಿನ ಕಾರಣಗಳನ್ನು ಲೈಸೆನ್ಸು ನೀಡುವ ಪ್ರಾಧಿಕಾರಿಗೆ ತಿಳಿಸತಕ್ಕದ್ದು.
(4) (1)ನೇ ಉಪ-ನಿಯಮದ ಮೇರೆಗೆ ಪ್ರಮಾಣಪತ್ರವನ್ನು ನೀಡುವುದಕ್ಕಾಗಿ ಸಂದಾಯ ಮಾಡಲಾದ ಫೀಜಗಳ ಖಜಾನೆ ಚಲನ್ ಹಾಗೂ ಸರ್ಕಾರವು ಕಾಲಕಾಲಕ್ಕೆ ನಿರ್ದಿಷ್ಟಪಡಿಸಿದ ಫೀಜುಗಳೊಂದಿಗೆ ಲಗತ್ತು ಮಾಡಿ ಜಿಲ್ಲಾ ಆರೋಗ್ಯಾಧಿಕಾರಿಗೆ ಅರ್ಜಿಯ ಪ್ರತಿಯನ್ನು ಕಳುಹಿಸತಕ್ಕದ್ದು. ಜಿಲ್ಲಾ ಆರೋಗ್ಯಾಧಿಕಾರಿಯು ಸಿನಿಮಾ ಅಥವಾ ಮಲ್ಟಿಪ್ಲೆಕ್ಸ್ ಕಟ್ಟಡವಾಗಲಿ ಮತ್ತು ಆವರಣಗಳಾಗಲಿ ಈ ನಿಯಮಗಳ ಅಗತ್ಯತೆಗಳನ್ನು ಪೂರೈಸಿರುವವೆಂಬ ಬಗ್ಗೆ ಪರಿಶೀಲಿಸತಕ್ಕದ್ದು ಮತ್ತು ಲೈಸೆನ್ಸು ನೀಡುವ ಪ್ರಾಧಿಕಾರಕ್ಕೆ ವರದಿಮಾಡತಕ್ಕದ್ದು.. ಸಿನಿಮಾ ಅಥವಾ ಮಲ್ಟಿಪ್ಲೆಕ್ಸ್ ಕಟ್ಟಡವು. ಈ ನಿಯಮಗಳ ಅಗತ್ಯತೆಗಳನ್ನು ಪೂರೈಸಿರುವವೆಂದು ಜಿಲ್ಲಾ ಆರೋಗ್ಯಾಧಿಕಾರಿಗೆ ಮನದಟ್ಟಾದರೆ, ಆತನು ಅರ್ಜಿಯನ್ನು ಸ್ವೀಕರಿಸಿದ ತರುವಾಯ 15 ದಿನಗಳೊಳಗೆ ಪ್ರಮಾಣಪತ್ರವನ್ನು ನೀಡತಕ್ಕದ್ದು. ಆದಾಗ್ಯೂ, ಜಿಲ್ಲಾ ಆರೋಗ್ಯಾಧಿಕಾರಿಯು, ಅದರಲ್ಲಿ ಯಾವುದೇ ನ್ಯೂನತೆಯನ್ನು ಕಂಡುಹಿಡಿದರೆ, ಆತನು ಲೈಸೆನ್ಸು ನೀಡುವ ಪ್ರಾಧಿಕಾರಿಗೆ ಅದನ್ನು ಲಿಖಿತದಲ್ಲಿ ವರದಿ ಮಾಡತಕ್ಕದ್ದು. ಆ ತರುವಾಯ ಕೂಡಲೇ ಅವುಗಳನ್ನು ಸರಿಪಡಿಸುವುದಕ್ಕಾಗಿ ಮಾಲೀಕನಿಗೆ ಲಿಖಿತದಲ್ಲಿ ನೋಟೀಸನ್ನು ನೀಡತಕ್ಕದ್ದು ಮತ್ತು ಯಾವ ಕಾಲದೊಳಗೆ ಅಂತಹ ಸರಿಪಡಿಸುವಿಕೆಯನ್ನು ಕಾರ್ಯಗತಗೊಳಿಸತಕ್ಕದ್ದೋ ಆ ಕಾಲದೊಳಗೆ ಸೂಕ್ತ ಕಾಲವನ್ನು ನಿರ್ದಿಷ್ಟಪಡಿಸತಕ್ಕದ್ದು. ನಿರ್ದಿಷ್ಟಪಡಿಸಿದ ಅವಧಿಯೊಳಗೆ ಅಂತಹ ನೋಟೀಸಿನ ನಿಬಂಧನೆಗಳನ್ನು ಪಾಲಿಸಲು ಲೈಸೆನ್ಸ್ದಾರನು ತಪ್ಪಿದ ತರುವಾಯ, ಲೈಸೆನ್ಸನ್ನು ನೀಡುವ ಪ್ರಾಧಿಕಾರಿಯು, ಲೈಸೆನ್ಸ್ದಾರನು ಅಂತಹ ಸರಿಪಡಿಸುವಿಕೆಗಳನ್ನು ಮಾಡುವವರೆಗೆ, ಸಂದರ್ಭಾನುಸಾರ ಅಸ್ತಿತ್ವದಲ್ಲಿರುವ ಲೈಸೆನ್ಸ್ನ್ನು ತಡೆಹಿಡಿಯತಕ್ಕದ್ದು ಅಥವಾ ರದ್ದುಪಡಿಸತಕ್ಕದ್ದು ಅಥವಾ ಮರುಮಂಜೂರಾತಿ ಮಾಡತಕ್ಕದ್ದಲ್ಲ.
ಪರಂತು, ಯಾವುದೇ ಸಿನಿಮಾ ಥಿಯೇಟರ್ ಅಥವಾ ಮಲ್ಟಿಪ್ಲೆಕ್ಸ್ ಈ ನಿಯಮಗಳ ಅಗತ್ಯತೆಗಳನ್ನು ಪೂರೈಸದೇ ಇರುವ ಸಂದರ್ಭದಲ್ಲಿ, ಜಿಲ್ಲಾ ಆರೋಗ್ಯಾಧಿಕಾರಿಯು ಐದು. ವರ್ಷಗಳವರೆಗೆ ಪ್ರಮಾಣಪತ್ರವನ್ನು ನೀಡುವ ಅರ್ಜಿಯನ್ನು ತಿರಸ್ಕರಿಸಬಹುದು ಅಥವಾ ಲಿಖಿತದಲ್ಲಿ ದಾಖಲುಮಾಡಬೇಕಾದ ಕಾರಣಗಳಿಗಾಗಿ ಪ್ರಮಾಣಪತ್ರದ ಆ ಅವಧಿಯನ್ನು ಕಡಿಮೆ ಮಾಡಬಹುದು ಮತ್ತು ಅರ್ಜಿದಾರನಿಗೆ ತನ್ನ ಅಹವಾಲನ್ನು ಹೇಳಿಕೊಳ್ಳಲು ಅವಕಾಶ ಕೊಟ್ಟ ತರುವಾಯ, ಇದಕ್ಕಾಗಿನ ಕಾರಣಗಳನ್ನು ಲೈಸೆನ್ಸು ನೀಡುವ ಪ್ರಾಧಿಕಾರಿಗೆ ತಿಳಿಸತಕ್ಕದ್ದು.
(5) (1)ನೇ ಉಪ-ನಿಯಮದ ಮೇರೆಗೆ ಪ್ರಮಾಣಪತ್ರವನ್ನು ನೀಡುವುದಕ್ಕಾಗಿ ಸಂದಾಯ ಮಾಡಲಾದ ಫೀಜಗಳ ಖಜಾನೆ ಚಲನ್ ಹಾಗೂ ಸರ್ಕಾರವು ಕಾಲಕಾಲಕ್ಕೆ ನಿರ್ದಿಷ್ಟಪಡಿಸಿದ ಫೀಜುಗಳೊಂದಿಗೆ ಲಗತ್ತು ಮಾಡಿ ಅಗ್ನಿಶಾಮಕ ಅಧಿಕಾರಿಗೆ ಅರ್ಜಿಯ ಪ್ರತಿಯನ್ನು ಕಳುಹಿಸತಕ್ಕದ್ದು. ಅಗ್ನಿಶಾಮಕ ಅಧಿಕಾರಿಯು ಸಿನಿಮಾ ಅಥವಾ ಮಲ್ಟಿಪ್ಲೆಕ್ಸ್ ಕಟ್ಟಡವಾಗಲಿ ಈ ನಿಯಮಗಳ ಅಗತ್ಯತೆಗಳನ್ನು ಪೂರೈಸಿರುವವೆಂಬ ಬಗ್ಗೆ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಅಧಿಕಾರಿ ಪರಿಶೀಲಿಸತಕ್ಕದ್ದು ಮತ್ತು ಲೈಸೆನ್ಸ್ ನೀಡುವ ಪ್ರಾಧಿಕಾರಕ್ಕೆ ವರದಿ ಮಾಡತಕ್ಕದ್ದು. ಸಿನಿಮಾ ಅಥವಾ ಮಲ್ಪಿಪ್ಲೆಕ್ಸ್ ಕಟ್ಟಡವು ಈ ನಿಯಮಗಳ ಅಗತ್ಯತೆಗಳನ್ನು ಪೂರೈಸಿರುವವೆಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿಗೆ ಮನದಟ್ಟಾದರೆ, ಆತನು ಅರ್ಜಿಯನ್ನು ಸ್ವೀಕರಿಸಿದ ತರುವಾಯ 15 ದಿನಗಳೊಳಗೆ ಪ್ರಮಾಣಪತ್ರವನ್ನು ನೀಡತಕ್ಕದ್ದು. ಆದಾಗ್ಯೂ, ಅಗ್ನಿಶಾಮಕ ಅಧಿಕಾರಿಯು, ಅದರಲ್ಲಿ ಯಾವುದೇ ನ್ಯೂನತೆಯನ್ನು ಕಂಡುಹಿಡಿದರೆ, ಆತನು ಲೈಸೆನ್ಸು ನೀಡುವ ಪ್ರಾಧಿಕಾರಿಗೆ ಅದನ್ನು ಲಿಖಿತದಲ್ಲಿ ವರದಿ ಮಾಡತಕ್ಕದ್ದು. ಆ ತರುವಾಯ ಕೂಡಲೇ ಅವುಗಳನ್ನು ಸರಿಪಡಿಸುವುದಕ್ಕಾಗಿ ಮಾಲೀಕನಿಗೆ ಲಿಖಿತದಲ್ಲಿ ನೋಟೀಸನ್ನು ನೀಡತಕ್ಕದ್ದು ಮತ್ತು ಯಾವ ಕಾಲದೊಳಗೆ ಅಂತಹ ಸರಿಪಡಿಸುವಿಕೆಯನ್ನು ಕಾರ್ಯಗತಗೊಳಿಸತಕ್ಕದ್ದೋ ಆ ಕಾಲದೊಳಗೆ ಸೂಕ್ತ ಕಾಲವನ್ನು ನಿರ್ದಿಷ್ಟಪಡಿಸತಕ್ಕದ್ದು. ನಿರ್ದಿಷ್ಟಪಡಿಸಿದ ಅವಧಿಯೊಳಗೆ ಅಂತಹ ನೋಟೀಸಿನ ನಿಬಂಧನೆಗಳನ್ನು ಪಾಲಿಸಲು ಲೈಸೆನ್ಸ್ದಾರನು ತಪ್ಪಿದ ತರುವಾಯ, ಲೈಸೆನ್ಸನ್ನು ಕೊಡುವ ಪ್ರಾಧಿಕಾರಿಯು, ಲೈಸೆನ್ಸ್ದಾರನು ಅಂತಹ ಸರಿಪಡಿಸುವಿಕೆಗಳನ್ನು ಮಾಡುವವರೆಗೆ, ಸಂದರ್ಭಾನುಸಾರ ಅಸ್ತಿತ್ವದಲ್ಲಿರುವ ಲೈಸೆನ್ಸ್ನ್ನು ತಡೆಹಿಡಿಯತಕ್ಕದ್ದು ಅಥವಾ ರದ್ದುಪಡಿಸತಕ್ಕದ್ದು ಅಥವಾ ಮರುಮಂಜೂರಾತಿ ಮಾಡತಕ್ಕದ್ದಲ್ಲ:
ಪರಂತು, ಯಾವುದೇ Adar ಅಥವಾ ಮಲ್ಟಿಪ್ಲೆಕ್ಸ್ ಈ ನಿಯಮಗಳ ಅಗತ್ಯತೆಗಳನ್ನು ಪೂರೈಸದೇ ಇರುವ ಸಂದರ್ಭದಲ್ಲಿ, ಅಗ್ನಿಶಾಮಕ ಅಧಿಕಾರಿಯು ಐದು ವರ್ಷಗಳವರೆಗೆ ಪ್ರಮಾಣಪತ್ರವನ್ನು ನೀಡುವ ಅರ್ಜಿಯನ್ನು ತಿರಸ್ಕರಿಸಬಹುದು ಅಥವಾ ಲಿಖಿತದಲ್ಲಿ ದಾಖಲುಮಾಡಬೇಕಾದ ಕಾರಣಗಳಿಗಾಗಿ ಪ್ರಮಾಣಪತ್ರದ ಆ ಅವಧಿಯನ್ನು ಕಡಿಮೆ ಮಾಡಬಹುದು ಮತ್ತು ಅರ್ಜಿದಾರನಿಗೆ ತನ್ನ ಅಹವಾಲನ್ನು ಹೇಳಿಕೊಳ್ಳಲು ಅವಕಾಶ ಕೊಟ್ಟ ತರುವಾಯ, ಇದಕ್ಕಾಗಿನ ಕಾರಣಗಳನ್ನು ಲೈಸೆನ್ಸು ನೀಡುವ ಪ್ರಾಧಿಕಾರಿಗೆ ತಿಳಿಸತಕ್ಕದ್ದು.
(6) (2)ನೇ ಉಪ ನಿಯಮದ ಮೇರೆಗೆ ವಿದ್ಯುಚ್ಛಕ್ತಿ ಪರಿಶೀಲಕನ ಪ್ರಮಾಣಪತ್ರ, (3)ನೇ ಉಪ ನಿಯಮದ ಮೇರೆಗೆ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರ ಪ್ರಮಾಣಪತ್ರ, (4)ನೇ ಉಪ ನಿಯಮದ ಮೇರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯ ಪ್ರಮಾಣಪತ್ರ, (5)ನೇ ಉಪ ನಿಯಮದ ಮೇರೆಗೆ ಅಗ್ನಿಶಾಮಕ ಅಧಿಕಾರಿಯ ಪ್ರಮಾಣಪತ್ರವನ್ನು ಸ್ವೀಕರಿಸಿದ ತರುವಾಯ, ಲೈಸೆನ್ಸ್ ನೀಡುವ ಪ್ರಾಧಿಕಾರಿಯು, ಎಲ್ಲ ನಿಯಮಗಳನ್ನು ಅನುಪಾಲನೆ. ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸತಕ್ಕದ್ದು. ಮತ್ತು. ಅದನ್ನು ತಾನು ಮನದಟ್ಟುಮಾಡಿಕೊಳ್ಳತಕ್ಕದ್ದು ಹಾಗೂ ಐದು ವರ್ಷಗಳ ಅವಧಿಯವರೆಗೆ ಸಿಂಧುವಾದ ಲೈಸೆನ್ಸನ್ನು ನೀಡತಕ್ಕದ್ದು ಅಥವಾ ಲಿಖಿತದಲ್ಲಿ ದಾಖಲು ಮಾಡಬೇಕಾದ ಕಾರಣಗಳಿಗಾಗಿ ಆ ಅವಧಿಯನ್ನು ಕಡಿಮೆಗೊಳಿಸತಕ್ಕದ್ದು.