(1) ಲೈಸೆನ್ಸ್ದಾರನು-
(ಲೋಕೋಪಯೋಗಿ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಿಗೆ, (3)ನೇ ಉಪ-ನಿಯಮದ ಮೇರೆಗೆ ಸುರಕ್ಷತೆಯ ಬಗ್ಗೆ ಪ್ರಮಾಣಪತ್ರವನ್ನು ನೀಡಲು ಅವನು ಅದನ್ನು ಸಮರ್ಥಗೊಳಿಸಲು ಸಿನಿಮಾ ಅಥವಾ ಮಲ್ಟಿಪ್ಲೆಕ್ಸ್ ಮತ್ತು ಸಹಾಯಕ ಕಟ್ಟಡಗಳ ನಿರ್ಮಾಣವನ್ನು ಪ್ರಾರಂಭಿಸುವುದಕ್ಕೆ ಹದಿನೈದು ದಿನಗಳಿಗೆ ಮುಂಚೆ; ಮತ್ತು
(ii) ವಿದ್ಯುಚ್ಛಕ್ತಿ ಪರಿಶೀಲಕನಿಗೆ, (4)ನೇ ಉಪ-ನಿಯಮದ ಮೇರೆಗೆ ವಿದ್ಯುಚ್ಛಕ್ತಿ ಪ್ರಮಾಣಪತ್ರವನ್ನು ನೀಡಲು ಅವನು ಅದನ್ನು ಸಮರ್ಥಗೊಳಿಸಲು ವಿದ್ಯುಚ್ಛಕ್ತಿ ಸ್ಥಾಪನೆಗಾಗಿ ವೈರಿಂಗ್ನ್ನು ಪ್ರಾರಂಭಿಸುವುದಕ್ಕೆ ಹದಿನೈದು ದಿವಸಗಳ ಮುಂಚೆ, - ಅಂತಹ ನೋಟೀಸನ್ನು (8)ನೇ ಉಪನಿಯಮದ ಮೇರೆಗೆ ನಿರ್ದಿಷ್ಟಪಡಿಸಿದ ಶುಲ್ಕಗಳನ್ನು ಸಂದಾಯ ಮಾಡಲು ಖಜಾನೆ ಚಲನ್ ಮೂಲಕ ಲಗತ್ತಿಸತಕ್ಕದ್ದು.
(2) ಅನುಮೋದಿತ ನಕ್ಷೆಗೆ ಅನುಸಾರವಾಗಿ ಕಟ್ಟಡ ಮತ್ತು ವಿದ್ಯುಚ್ಛಕ್ತಿ ಸ್ಥಾಪನೆಯು ಪೂರ್ಣಗೊಂಡ ಮೇಲೆ, ಅರ್ಜಿದಾರನು ಅರ್ಜಿಯನ್ನು ಸಲ್ಲಿಸಿದ ತರುವಾಯ,-
(i) 43ರಿಂದ 56ನೇ ನಿಯಮಗಳಲ್ಲಿ ಒಳಗೊಂಡ ವಿಷಯಗಳಿಗೆ ಸಂಬಂಧಿಸಿದಂತೆ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರನಿಂದ ಪ್ರಮಾಣಪತ್ರವನ್ನು;
(ii) 3, 57 ರಿಂದ 73, 77(5) ಮತ್ತು 82ನೇ ನಿಯಮಗಳ ಮೂಲಕ ಒಳಗೊಂಡ ವಿಷಯಗಳಿಗೆ ಸಂಬಂಧಿಸಿದಂತೆ ವಿದ್ಯುಚ್ಛಕ್ತಿ ಪರಿಶೀಲಕನಿಂದ “ಇ-1”ರ ನಮೂನೆಯಲ್ಲಿ ಪ್ರಮಾಣಪತ್ರವನ್ನು;
(ii) «ನೇ ಅಧ್ಯಾಯದ ಮೇರೆಗೆ ಒಳಗೊಂಡ ವಿಷಯಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಗ್ನಿಶಾಮಕ ಅಧಿಕಾರಿಯಿಂದ “ಇ-2” ನಮೂನೆಯಲ್ಲಿ ಪ್ರಮಾಣಪತ್ರವನ್ನು ;
(iv) ಆರೋಗ್ಯ ಮತ್ತು ಆವರಣಗಳ ಸ್ವಚ್ಛತೆಗೆ ಸಂಬಂಧಪಟ್ಟ ಉಪಬಂಧಗಳು ಒಳಗೊಳ್ಳುವ ವಿಷಯಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಿಂದ “a-3” ನಮೂನೆಯಲ್ಲಿ ಪ್ರಮಾಣಪತ್ರವನ್ನು - ಪಡೆಯತಕ್ಕದ್ದು.
(೪) ಮಲ್ಟಿಪ್ಲೆಕ್ಸ್ ಕಾಂಪ್ಲೆಕ್ಸ್ನ ಸಂದರ್ಭದಲ್ಲಿ, ಲೈಸೆನ್ಸ್ದಾರನು ಥಿಯೇಟರಿನ ಭಾಗವನ್ನು ಒಳಗೊಂಡು ಸಂಪೂರ್ಣ ಕಟ್ಟಡಕ್ಕಾಗಿ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯಿಂದ ಪ್ರತ್ಯೇಕ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆಯತಕ್ಕದ್ದು.
(3) ಲೋಕೋಪಯೋಗಿ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರನಿಗೆ ಸಿನಿಮಾ ಅಥವಾ ಮಲ್ಟಿಪ್ಲೆಕ್ಸ್ ಕಟ್ಟಡದ ನಿರ್ಮಾಣ ಸಾಮರ್ಥ್ಯದ ಬಗ್ಗೆ ಮನದಟ್ಟಾದರೆ, ಆತನು, (2)(ಎ)ನೇ ಉಪ ನಿಯಮದ ಮೇರೆಗೆ ಪರಿಣಾಮಕಾರಿಯಾಗಿ ಅರ್ಜಿಯನ್ನು ಸ್ವೀಕರಿಸಿದ ತರುವಾಯ ಹದಿನೈದು ದಿನಗಳೊಳಗಾಗಿ ಪ್ರಮಾಣಪತ್ರವನ್ನು ಕೊಡತಕ್ಕದ್ದು, ಅಂತಹ ಪ್ರಮಾಣಪತ್ರವು ಐದು ವರ್ಷಗಳ ಅವಧಿಯವರೆಗೆ ಸಿಂಧುವಾಗಿರತಕ್ಕದ್ದು. ಯಾವುದೇ ಸಿನಿಮಾ ಥಿಯೇಟರು ಅಥವಾ ಮಲ್ಟಿಷ್ಣೆಕ್ಸ್, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರ ಅಗತ್ಯತೆಗಳನ್ನು. ಪೂರೈಸದಿದ್ದ ಸಂದರ್ಭದಲ್ಲಿ, ಐದು. ವರ್ಷಗಳವರೆಗೆ ಪ್ರಮಾಣಪತ್ರವನ್ನು ನೀಡುವ ಅರ್ಜಿಯನ್ನು ತಿರಸ್ಕರಿಸತಕ್ಕದ್ದು, ಅಥವಾ ಲಿಖಿತದಲ್ಲಿ ದಾಖಲು ಮಾಡಬೇಕಾದ ಕಾರಣಗಳಿಗಾಗಿ ಪ್ರಮಾಣಪತ್ರದ ಅವಧಿಯನ್ನು ಕಡಿಮೆ ಮಾಡಬಹುದು ಮತ್ತು ಅರ್ಜಿದಾರನು ತನ್ನ ಅಹವಾಲನ್ನು ಮತ್ತು ಕಾರಣಗಳನ್ನು ಹೇಳಿಕೊಳ್ಳಲು ಅವಕಾಶವನ್ನು ಕೊಟ್ಟ ತರುವಾಯ, ಲೈಸೆನ್ಸು ನೀಡುವ ಪ್ರಾಧಿಕಾರಿಗೆ ತಿಳಿಸತಕ್ಕದ್ದು.
(4)(2)ನೇ ಉಪ-ನಿಯಮದ ಮೇರೆಗೆ ಅರ್ಜಿಗಳನ್ನು ಸ್ವೀಕರಿಸಿದ ತರುವಾಯ, ಹದಿನೈದು ದಿನಗಳೊಳಗಾಗಿ ವಿದ್ಯುಚ್ಛಕ್ತಿ ಪರಿಶೀಲಕನಿಗೆ ವಿದ್ಯುಚ್ಛಕ್ತಿ ಸ್ಥಾಪನೆಗಳು ಮತ್ತು ಸಾಧನ ಸಾಮಗ್ರಿಗಳ ಸೂಕ್ತತೆಯ ಬಗ್ಗೆ ಅವನಿಗೆ ಮನದಟ್ಟಾದರೆ, ‘a’ ನಮೂನೆಯಲ್ಲಿ ಪ್ರಮಾಣಪತ್ರವನ್ನು ನೀಡತಕ್ಕದ್ದು ಮತ್ತು ಅದನ್ನು ಕೊಟ್ಟ ದಿನಾಂಕದಿಂದ ಐದು ವರ್ಷಗಳ ಅವಧಿಯವರೆಗೆ ಅದು ಸಿಂಧುವಾಗಿರತಕ್ಕದ್ದು. ಸಿನಿಮಾ ಥಿಯೇಟರು ಮತ್ತು ಮಲ್ಟಿಪ್ಲೆಕ್ಸ್ ಅಗತ್ಯತೆಗಳನ್ನು ಪೂರೈಸದಿದ್ದ ಸಂದರ್ಭದಲ್ಲಿ, ವಿದ್ಯುಚ್ಛಕ್ತಿ ಪರಿಶೀಲಕನು ಐದು ವರ್ಷಗಳವರೆಗೆ ಪ್ರಮಾಣಪತ್ರವನ್ನು ನೀಡುವ ಅರ್ಜಿಯನ್ನು ತಿರಸ್ಕರಿಸತಕ್ಕದ್ದು ಅಥವಾ ಲಿಖಿತದಲ್ಲಿ ದಾಖಲು ಮಾಡಬೇಕಾದ ಕಾರಣಗಳಿಗಾಗಿ ಅಂತಹ ಪ್ರಮಾಣಪತ್ರದ ಅವಧಿಯನ್ನು ಕಡಿಮೆ ಮಾಡಬಹುದು ಮತ್ತು ಅರ್ಜಿದಾರನಿಗೆ ತನ್ನ ಅಹವಾಲನ್ನು ಮತ್ತು ಕಾರಣಗಳನ್ನು ಹೇಳಿಕೊಳ್ಳಲು ಅವಕಾಶವನ್ನು ಕೊಟ್ಟ ತರುವಾಯ, ಲೈಸೆನ್ಸು ನೀಡುವ ಪ್ರಾಧಿಕಾರಿಗೆ ತಿಳಿಸತಕ್ಕದ್ದು.
(5) ಅಗ್ನಿಶಾಮಕ ಅಧಿಕಾರಿಗೆ, «ನೇ ಅಧ್ಯಾಯದಲ್ಲಿ ನಿರ್ದಿಷ್ಟಪಡಿಸಿದ ಅಗ್ನಿಶಾಮಕ ಉಪಕರಣಗಳು ಅಥವಾ ಇತರ ಸಾಧನ-ಸಾಮಗ್ರಿಗಳನ್ನು ಸಿನಿಮಾ ಅಥವಾ ಮಲ್ಟಿಪ್ಲೆಕ್ಸ್ ಕಟ್ಟಡಕ್ಕೆ ಒದಗಿಸಲಾಗಿದೆ ಎಂದು ಮನದಟ್ಟಾದರೆ, ಆತನು, ಅರ್ಜಿಯನ್ನು ಸ್ವೀಕರಿಸಿದ ತರುವಾಯ ಹದಿನೈದು ದಿನಗಳೊಳಗಾಗಿ “ಇ-2' ನಮೂನೆಯಲ್ಲಿ ಪ್ರಮಾಣಪತ್ರವನ್ನು ನೀಡತಕ್ಕದ್ದು ಮತ್ತು ಅದು ಐದು ವರ್ಷಗಳ ಅವಧಿಯವರೆಗೆ ಸಿಂಧುವಾಗಿರತಕ್ಕದ್ದು. ಸಿನಿಮಾ ಥಿಯೇಟರು ಮತ್ತು ಮಲ್ಟಿಪ್ಲೆಕ್ಸ್ಗೆ ಯಾವ ಅಗತ್ಯತೆಗಳನ್ನು ಪೂರೈಸದಿದ್ದ ಸಂದರ್ಭದಲ್ಲಿ, ಅಗ್ನಿಶಾಮಕ ಅಧಿಕಾರಿಯು, ಐದು ವರ್ಷಗಳವರೆಗೆ ಪ್ರಮಾಣಪತ್ರವನ್ನು ನೀಡುವ ಅರ್ಜಿಯನ್ನು ತಿರಸ್ಕರಿಸತಕ್ಕದ್ದು ಅಥವಾ ಲಿಖಿತದಲ್ಲಿ ದಾಖಲು ಮಾಡಬೇಕಾದ ಕಾರಣಗಳಿಗಾಗಿ ಮತ್ತು ಅರ್ಜಿದಾರನಿಗೆ ತನ್ನ ಅಹವಾಲನ್ನು ಹೇಳಿಕೊಳ್ಳಲು ಅವಕಾಶವನ್ನು ಕೊಟ್ಟ ತರುವಾಯ, ಅಂತಹ ಪ್ರಮಾಣಪತ್ರದ ಅವಧಿಯನ್ನು ಕಡಿಮೆ ಮಾಡಬಹುದು ಮತ್ತು ಕಾರಣಗಳನ್ನು ಲೈಸೆನ್ಸು ನೀಡುವ ಪ್ರಾಧಿಕಾರಿಗೆ ತಿಳಿಸತಕ್ಕದ್ದು. ಪ್ರತಿಯೊಂದು ಸಿನಿಮಾ ಥಿಯೇಟರು. ಅಥವಾ ಮಲ್ಟಿಷ್ಣೆಕ್ಸ್ಗಳಲ್ಲಿ ಅಗ್ನಿಶಾಮಕ ಉಪಕರಣಗಳ ಕಾರ್ಯಕ್ಷಮತೆ/ ಸೂಕ್ತತೆ/ ಕಾರ್ಯನಿರ್ವಹಣಾ ಸ್ಥಿತಿಯ ಬಗ್ಗೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿಯು ವರ್ಷವಾರು ತಪಾಸಣೆಗೊಳಪಡಿಸತಕ್ಕದ್ದು.
(6) ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ ನೈರ್ಮಲ್ಯ ಸೌಲಭ್ಯ, ಸಾರ್ವಜನಿಕ ಆರೋಗ್ಯ, ನೈರ್ಮಲ್ಯ ಮತ್ತು ಆವರಣಗಳ ಸ್ವಚ್ಛತೆಗಾಗಿ ಮಾಡಿದ ವ್ಯವಸ್ಥೆಗಳ ಬಗ್ಗೆ ಮನದಟ್ಟಾದರೆ, ಆತನು, ಅರ್ಜಿಯನ್ನು ಸ್ವೀಕರಿಸಿದ ತರುವಾಯ ಹದಿನೈದು ದಿನಗಳೊಳಗೆ “ಇ-3' ನಮೂನೆಯಲ್ಲಿ ಪ್ರಮಾಣಪತ್ರವನ್ನು ಕೊಡತಕ್ಕದ್ದು. ಸಿನಿಮಾ ಥಿಯೇಟರ್ ಅಥವಾ ಮಲ್ಟಿಪ್ಲೆಕ್ಸ್ನ ಸಂದರ್ಭದಲ್ಲಿ ಅದು ಐದು ವರ್ಷಗಳ ಅವಧಿಯವರೆಗೆ ಸಿಂಧುವಾಗಿರತಕ್ಕದ್ದು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯ ಅಗತ್ಯತೆಗಳನ್ನು ಪೂರೈಸಿಲ್ಲವೆಂದು ಮನದಟ್ಟಾದರೆ, ಆತನು, ಐದು ವರ್ಷಗಳವರೆಗೆ ಪ್ರಮಾಣಪತ್ರವನ್ನು ನೀಡುವ ಅರ್ಜಿಯನ್ನು ತಿರಸ್ಕರಿಸತಕ್ಕದ್ದು ಅಥವಾ ಲಿಖಿತದಲ್ಲಿ ದಾಖಲು ಮಾಡಬೇಕಾದ ಕಾರಣಗಳಿಗಾಗಿ ಮತ್ತು ಅರ್ಜಿದಾರನಿಗೆ ತನ್ನ ಅಹವಾಲನ್ನು ಹೇಳಿಕೊಳ್ಳಲು ಅವಕಾಶವನ್ನು ಕೊಟ್ಟ ತರುವಾಯ, ಅಂತಹ ಪ್ರಮಾಣಪತ್ರದ ಅವಧಿಯನ್ನು ಕಡಿಮೆ ಮಾಡಬಹುದು ಮತ್ತು ಕಾರಣಗಳನ್ನು ಲೈಸೆನ್ಸು ನೀಡುವ ಪ್ರಾಧಿಕಾರಿಗೆ ತಿಳಿಸತಕ್ಕದ್ದು.
(7) (3), (4), (5) ಮತ್ತು (6) ಉಪನಿಯಮಗಳ ಮೇರೆಗೆ ಪ್ರಮಾಣಪತ್ರವನ್ನು ನೀಡುವ ಉದ್ದೇಶಗಳಿಗಾಗಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು, ವಿದ್ಯುಚ್ಛಕ್ತಿ ಪರಿಶೀಲಕ, ಅಗ್ನಿಶಾಮಕ ಅಧಿಕಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಸಿನಿಮಾ ಅಥವಾ ಮಲ್ಟಿಪ್ಲೆಕ್ಸ್ ಕಟ್ಟಡವನ್ನು ಮತ್ತು ಆವರಣಗಳನ್ನು ಪ್ರವೇಶಿಸಬಹುದು ಮತ್ತು ಅದನ್ನು ಪರಿಶೀಲಿಸಬಹುದು ಮತ್ತು ಅವರ ಪರಿಶೀಲನೆಯ ವರದಿಗಳು ಲೈಸೆನ್ಸು ನೀಡುವ ಪ್ರಾಧಿಕಾರಿಗೆ ಸಲ್ಲಿಸಿದ ಆ ವರದಿಯ ಭಾಗವಾಗಿರತಕ್ಕದ್ದು.
(8) ಸಿನಿಮಾ ಥಿಯೇಟರ್ಗಳು ಮತ್ತು HOAs anv ಪ್ರಮಾಣಪತ್ರಗಳನ್ನು ಪರಿಶೀಲಿಸುವ ಮತ್ತು ನೀಡುವ ಸಂಬಂಧದಲ್ಲಿನ ಫೀಜುಗಳು, ಸರ್ಕಾರವು ಕಾಲಕಾಲಕ್ಕೆ ನಿರ್ದಿಷ್ಟಪಡಿಸಿದಂತೆ ಇರತಕ್ಕದ್ದು ಮತ್ತು ಹಾಗೆ ನಿರ್ದಿಷ್ಟಪಡಿಸಿದ ಲೆಕ್ಕ ಶೀರ್ಷಿಕೆಗೆ ಜಮೆ ಮಾಡತಕ್ಕದ್ದು.
(9) ಮೇಲಿನ ಅಧಿಕಾರಿಗಳು ನೀಡಿದ ಪ್ರಮಾಣಪತ್ರದ ಪ್ರತಿಯನ್ನು ಸರ್ಕಾರವು ನಿರ್ದಿಷ್ಟಪಡಿಸಿದ ಫೀಜುಗಳ ಸಂದಾಯದ ಮೇಲೆ ಪಡೆಯಬಹುದು.