(1) ಅರ್ಜಿಯನ್ನು ಮತ್ತು 30ನೇ ನಿಯಮದಲ್ಲಿ ನಿರ್ದಿಷ್ಟಪಡಿಸಲಾದ ವಿವರಗಳನ್ನು ಸ್ವೀಕರಿಸಿದ ಮೇಲೆ, ಲೈಸೆನ್ಸ್ ನೀಡುವ ಪ್ರಾಧಿಕಾರಿಯು, ಕಟ್ಟಡದ ನಕ್ಷೆಗಳು ಈ ನಿಯಮಗಳ ಅಗತ್ಯತೆಗಳನ್ನು ಮನದಟ್ಟು ಮಾಡಿಕೊಂಡು ಮತ್ತು ಕಟ್ಟಲು ಉದ್ದೇಶಿಸಿದ ಕಟ್ಟಡವು ಸಿನಿಮಾಕ್ಕಾಗಿ ಸೂಕ್ತವಾಗಿದೆಯೇ ಎಂಬುದನ್ನು ಮನದಟ್ಟು ಮಾಡಿಕೊಂಡು ಪರಿಶೀಲಿಸಲು ನಗರ ಪಾಲಿಕೆಯ ಪಟ್ಟಣ ಯೋಜನಾ ಅಧಿಕಾರಿ/ ನಗರಾಭಿವೃದ್ಧಿ ಪ್ರಾಧಿಕಾರಿ/ ಯೋಜನಾ ಪ್ರಾಧಿಕಾರಿ/ ಪಟ್ಟಣ ಮತ್ತು ನಗರ ಯೋಜನಾ ಸಹಾಯಕ ನಿರ್ದೇಶಕರಿಗೆ ಅರ್ಜಿಗಳನ್ನು ಮತ್ತು ವಿವರಗಳನ್ನು ಏಕಕಾಲದಲ್ಲಿ ಕಳುಹಿಸತಕ್ಕದ್ದು ಮತ್ತು ಹದಿನೈದು ದಿನಗಳೊಳಗಾಗಿ ಲೈಸೆನ್ಸು ಪ್ರಾಧಿಕಾರಿಗೆ ಈ ಸಂಬಂಧದಲ್ಲಿನ ವರದಿಯನ್ನು ಸಲ್ಲಿಸತಕ್ಕದ್ದು.
(2)... (1)ನೇ ಉಪ ನಿಯಮದ ಮೇರೆಗೆ ವರದಿಯನ್ನು ಸ್ವೀಕರಿಸಿದ ಮೇಲೆ, ಲೈಸೆನ್ಸ್ ನೀಡುವ ಪ್ರಾಧಿಕಾರಿಯು, ಸಂಬಂಧಪಟ್ಟ ದಾಖಲೆಗಳನ್ನು ಜಿಲ್ಲಾ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಕಳುಹಿಸತಕ್ಕದ್ದು. ಲೋಕೋಪಯೋಗಿ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರ, ವಿನ್ಯಾಸದ ಲೆಕ್ಕಗಳನ್ನು ಪರಿಶೀಲಿಸತಕ್ಕದ್ದು ಮತ್ತು ಪರಿಶೀಲನೆಯ ತರುವಾಯ ತಪಶೀಲು ಮತ್ತು ವಿನ್ಯಾಸಗಳಿಗೆ ಅನುಸಾರವಾಗಿ ಕಟ್ಟಡವನ್ನು ನಿರ್ಮಿಸಿದರೆ ಸಾಕಷ್ಟು ದೃಢವಾಗಿರುತ್ತದೆಯೆಂದು ಅವನಿಗೆ ಮನದಟ್ಟಾದರೆ ಅವನು ಹದಿನೈದು ದಿನಗಳೊಳಗೆ ತಪಶೀಲು ಮತ್ತು ವಿನ್ಯಾಸಗಳು ಅಂಗೀಕಾರಾರ್ಹವಾಗಿವೆಯೆಂಬ ಪ್ರಮಾಣಪತ್ರವನ್ನು ಲಗತ್ತಿಸಿ. ಲೈಸೆನ್ಸ್ ನೀಡುವ ಪ್ರಾಧಿಕಾರಿಗೆ ಅವನ ವರದಿಯನ್ನು ಕಳುಹಿಸಿಕೊಡತಕ್ಕದ್ದು.
(3) ಲೋಕೋಪಯೋಗಿ, wodd ಮತ್ತು. ಒಳನಾಡು ಸಾರಿಗೆ. ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರವರಿಂದ ವಿನ್ಯಾಸ ಮತ್ತು ತಪಶೀಲು ಒಪ್ಪಿಗೆಯನ್ನು ಸ್ವೀಕರಿಸಿದ ಮೇಲೆ, ನೀಲಿ ನಕ್ಷೆ (ಬ್ಲೂ ಪ್ರಿಂಟ್) ಅಥವಾ ಕಂಪ್ಯೂಟರ್ ನಕ್ಷೆಯಲ್ಲಿ ಮತ್ತು ಚಲನಚಿತ್ರ ಸಲಕರಣೆಗಳು ಇರುವಿಕೆಯನ್ನು ತೋರಿಸುವ ಡಿಜಿಟಲ್ ನಮೂನೆಯಲ್ಲಿ ಸಹ ನಕ್ಷೆ, ಉನ್ನತಿ ನಕ್ಷೆ ಮತ್ತು ಎಲೆಕ್ಟ್ರಿಕಲ್ ಡ್ರಾಯಿಂಗ್ಗಳನ್ನು ನಾಲ್ಕು ಪ್ರತಿಗಳಲ್ಲಿ ಮತ್ತು ಎಲ್ಲ ವೈರಿಂಗ್, ದೀಪದ ಪಾಯಿಂಟುಗಳು, ಸ್ವಿಚ್ಗಳು, ಪ್ಲಗ್ಗುಗಳು ಮತ್ತು ವಿತರಣಾ ಬೋರ್ಡ್ಗಳನ್ನು ತೋರಿಸುವ ವೈರಿಂಗ್ ರೇಖಾಚಿತ್ರದ ಮತ್ತು ವಿವಿಧ ಬಣ್ಣಗಳಲ್ಲಿ ವಿವಿಧ ಸಕ್ರ್ಯೂಟುಗಳನ್ನು ತೋರಿಸುವ ಇತರ ವಿದ್ಯುತ್ ಯಂತ್ರೋಪಕರಣದ ಸಂಪೂರ್ಣ ವಿದ್ಯುಚ್ಛಕ್ತಿ ಸ್ಥಾಪನೆಗಳು ಮತ್ತು ಅರ್ಥಿಂಗ್ ವಿವರಗಳನ್ನು ವಿದ್ಯುತ್ ಪರಿಶೀಲಕನಿಗೆ ಸಲ್ಲಿಸಲು ಲೈಸೆನ್ಸ್ ನೀಡುವ ಪ್ರಾಧಿಕಾರಿಯು ಅರ್ಜಿದಾರನಿಗೆ ನಿರ್ದೇಶಿಸತಕ್ಕದ್ದು.
(4) ಆ ತರುವಾಯ, ಅರ್ಜಿದಾರನು ಒಪ್ಪಿಸಿದ ವಿದ್ಯುತ್ ಸಿಸ್ಟಂ ಅನ್ನು ತೋರಿಸುವ ವಿದ್ಯುತ್ ವೈರಿಂಗ್ ರೇಖಾಚಿತ್ರ ಮತ್ತು ನಕ್ಷೆಯ ವಿವರಗಳೊಂದಿಗೆ ವಿದ್ಯುತ್ ಪರಿಶೀಲಕನು ಚಲನಚಿತ್ರ ಸ್ಥಾವರ ವಿದ್ಯುಚ್ಛಕ್ತಿ ಸ್ಥಾಪನೆಗೆ ಸಂಬಂಧಿಸಿದ ವಿನ್ಯಾಸಗಳನ್ನು ಪರಿಶೀಲಿಸತಕ್ಕದ್ದು ಮತ್ತು ಪರಿಶೀಲನೆಯ ತರುವಾಯ, ವಿದ್ಯುತ್ ಸ್ಥಾಪನೆಗಳು ಸಂರಕ್ಷಣೆಗೆ ಸಂಬಂಧಪಟ್ಟ ಈ ನಿಯಮಗಳ ಉಪಬಂಧಗಳಿಗನುಸಾರವಾಗಿವೆಯೆಂದು ಅವನಿಗೆ ಮನದಟ್ಟಾದರೆ, ಅವನು ಲೈಸೆನ್ಸ್ ಕೊಡುವ ಪ್ರಾಧಿಕಾರಿಗೆ ಹದಿನೈದು ದಿನಗಳೊಳಗೆ ತನ್ನ ವರದಿಯನ್ನು ಕಳುಹಿಸತಕ್ಕದ್ದು.