(1) ಲೈಸೆನ್ಸ್ ನೀಡುವ ಪ್ರಾಧಿಕಾರಿ ಅಥವಾ ಆತನಿಂದ ಅಧಿಕೃತಗೊಂಡ ಅಧಿಕಾರಿ ಅಥವಾ ಪೊಲೀಸ್ ಠಾಣಾಧಿಕಾರಿಯ ದರ್ಜೆಗಿಂತ ಕಡಿಮೆಯಿಲ್ಲದ ಯಾರೇ ಪೊಲೀಸ್ ಅಧಿಕಾರಿ; ಅಥವಾ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಗ್ನಿಶಾಮಕ ಠಾಣಾಧಿಕಾರಿಯ ದರ್ಜೆಗಿಂತ ಕಡಿಮೆಯಿಲ್ಲದ ಯಾರೇ ಅಗ್ನಿಶಾಮಕ ಅಧಿಕಾರಿ; ಅಥವಾ ತಾಲ್ಲೂಕು ಆರೋಗ್ಯಾಧಿಕಾರಿ ದರ್ಜೆಗಿಂತ ಕಡಿಮೆಯಿಲ್ಲದ ಯಾರೇ ಆರೋಗ್ಯಾಧಿಕಾರಿ; ಅಥವಾ ವಿದ್ಯುಚ್ಛಕ್ತಿ ಪರಿಶೀಲಕನ ದರ್ಜೆಗಿಂತ ಕಡಿಮೆಯಿಲ್ಲದ ಯಾರೇ ಅಧಿಕಾರಿ; ಅಥವಾ ಪ್ರದೇಶದ ಅಧಿಕಾರವ್ಯಾಪ್ತಿಯನ್ನು ಹೊಂದಿರುವ ಯಾರೇ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್; ಅಥವಾ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು, ಅಥವಾ ಆತನಿಂದ ಅಧಿಕೃತಗೊಂಡ ಯಾರೇ ವ್ಯಕ್ತಿಯು, ಲೈಸೆನ್ಸ್ದಾರನು ಈ ಅಧಿನಿಯಮ ಮತ್ತು ನಿಯಮಗಳ ಮೇರೆಗೆ ರಚಿಸಿದ ಉಪಬಂಧಗಳನ್ನು ಪಾಲನೆ ಮಾಡಿರುವುದನ್ನು ಸ್ವತಃ ತಾನೇ ಮನದಟ್ಟು ಮಾಡಿಕೊಳ್ಳುವ ಉದ್ದೇಶಕ್ಕಾಗಿ ಈ ಅಧಿನಿಯಮದ ಮತ್ತು ನಿಯಮಗಳ ಮೇರೆಗೆ ಲೈಸೆನ್ಸ್ ಪಡೆದ ಅಥವಾ ಲೈಸೆನ್ಸ್ ನೀಡಲು ಉದ್ದೇಶಿಸಿದ ಸ್ಥಳವನ್ನು ಯಾವುದೇ ಸಮಯದಲ್ಲಿ ಪ್ರವೇಶಿಸಬಹುದು.
(2) ಲೈಸೆನ್ಸ್ದಾರನು (1)ನೇ ಉಪ-ನಿಯಮದಲ್ಲಿ ಉಲ್ಲೇಖಿಸಲಾದ ಯಾರೇ ಅಧಿಕಾರಿಗಳು ಕೋರಿಕೆಯ ಮೇಲೆ ಪಡೆದಿರುವ ಲೈಸೆನ್ಸ್ನ್ನು ಯೋಜನೆ ಮತ್ತು ಅದರ ವಿವರಣೆಗಳನ್ನು ಲಗತ್ತಿಸಿ ಹಾಜರುಪಡಿಸತಕ್ಕದ್ದು. ಮತ್ತು ಸದರಿ ಅಧಿಕಾರಿಗಳು ಲೈಸನ್ಸ್ ಪ್ರಾಧಿಕಾರದ ಮುಖಾಂತರ ಲೈಸೆನ್ಸ್ದಾರನಿಗೆ, ಸಾರ್ವಜನಿಕ ಸುರಕ್ಷತೆಗೆ ಅಥವಾ ಅನುಕೂಲತೆಗೆ ಸಂಬಂಧಿಸಿದಂತೆ ಅಥವಾ ಕಾನೂನು ಸುವ್ಯವಸ್ಥೆ, ಶಾಂತಿ ಮತ್ತು ಸಾರ್ವಜನಿಕ ಸಭ್ಯತೆಗಳನ್ನು ಸಂರಕ್ಷಿಸುವುದಕ್ಕಾಗಿ ಮತ್ತು ನಿರ್ವಹಿಸುವುದಕ್ಕಾಗಿ ಕಾಲಕಾಲಕ್ಕೆ ಅಥವಾ ಸಂದರ್ಭವು ಒದಗಿ ಬಂದಂತೆ ತನ್ನ ಆದೇಶಗಳನ್ನು ಅವನಿಗೆ ತಿಳಿಸತಕ್ಕದ್ದು. ಸಂದರ್ಭಗಳು ಹಾಗೆ ಅಗತ್ಯಪಡಿಸಿದರೆ, ಲೈಸೆನ್ಸು ಪ್ರಾಧಿಕಾರವು ಲೈಸೆನ್ಸುದಾರನಿಗೆ ನೋಟೀಸನ್ನು ಕೊಟ್ಟ ತರುವಾಯ, ಹೆಚ್ಚುವರಿ ಸಂರಕ್ಷಣೆಗಳನ್ನು ಒದಗಿಸಿ ಆತನಿಗೆ ನಿರ್ದೇಶಿಸಬಹುದು ಮತ್ತು ಲೈಸೆನ್ಸ್ದಾರನು ಅಂತಹ ನಿರ್ದೇಶನಗಳನ್ನು ಪಾಲಿಸತಕ್ಕದ್ದು ಮತ್ತು ಅವನು ಅಂತಹ ನಿರ್ದೇಶನಗಳನ್ನು ಪಾಲಿಸಲು ವಿಫಲನಾದಲ್ಲಿ ಆ ಯಾವುದೇ ಲೈಸೆನ್ಸ್ ರದ್ದಿಯಾತಿಗೆ ಅಥವಾ ಅಮಾನತ್ತಿಗೆ ಗುರಿಯಾಗತಕ್ಕದ್ದು.
(3) ಸಾರ್ವಜನಿಕರು ಸಾಂಕ್ರಾಮಿಕ ರೋಗಗಳ ಅವಧಿಯಲ್ಲಿ ಮತ್ತು ಅದೇ ರೀತಿಯ ಆರೋಗ್ಯಕ್ಕೆ ಸಂಬಂಧಿಸಿದ ಅಪಾಯಗಳ ಕಾಲಾವಧಿಯಲ್ಲಿ ಅಥವಾ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಸಾಮಾನ್ಯವಾಗಿ, ಲೈಸೆನ್ಸ್ ಪ್ರಾಧಿಕಾರವು ಜಿಲ್ಲಾ ಆರೋಗ್ಯ ಅಧಿಕಾರಿ, ತಾಲ್ಲೂಕು ಆರೋಗ್ಯ ಅಧಿಕಾರಿ ಅಥವಾ ಪುರಸಭೆ. ಯಾವುದಾದರೂ ಇದ್ದರೆ ಅದರ ಆರೋಗ್ಯ ಅಧಿಕಾರಿಗಳೊಂದಿಗೆ ಸಮಾಲೋಚಿಸಬಹುದು, ಅವರು ಹಾಗೇ ನೀಡಿದ ಸಲಹೆಗಳೇನಾದ್ದರು ಇದ್ದರೆ, ಅದನ್ನು ವಿಶೇಷ ನೋಟೀಸಿನ ಮೂಲಕ ನಿರ್ದೇಶಿಸಬಹುದು,-
(ಎ) ಅಗತ್ಯತೆ ಉಂಟಾದ ಪಕ್ಷದಲ್ಲಿ, ಸಂಪೂರ್ಣವಾಗಿ ಮುಕ್ತಾಯಗೊಳಿಸುವುದು;
(ಬಿ). 49ನೇ ನಿಯಮದಲ್ಲಿ ನಿಯಮಿಸಲಾದ ಸ್ಥಳವಕಾಶದ ಪ್ರಮಾಣವನ್ನು ಕಡಿಮೆ ಮಾಡುವುದು;
(ಸಿ) ಆ ಯಾವುದೇ ಆವರಣಗಳು, ನಿಯತಕಾಲಿಕವಾಗಿ ಸೋಂಕು ನಿವಾರಣೆಗಾಗಿ ಸೋಂಕು ನಿವಾರಕಗಳನ್ನು ಸಿಂಪಡಿಸಲು; ಮತ್ತು ರೋಗಕಾರಕ ಕ್ರಿಮಿಗಳನ್ನು ನಾಶಗೊಳಿಸಲು ಒಳಗೊಳ್ಳಬಹುದು; ಮತ್ತು
(ಡಿ) ನೋಟಿಸಿನಲ್ಲಿ ನಿರ್ದಿಷ್ಟಪಡಿಸಿದಂತೆ ಉತ್ತಮ ಗಾಳಿ ಬೆಳಕಿಗೆ ಅಂತಹ ಇತರ ಮಾನ ದಂಡಗಳನ್ನು ಅಳವಡಿಸಿಕೊಳ್ಳಬಹುದು.
- ಮತ್ತು ಲೈಸೆನ್ಸ್ದಾರನು ಮೇಲೆ ಹೇಳಿದ ಯಾವುದೇ ಅಂತಹ ನಿರ್ದೇಶನಗಳನ್ನು ಪಾಲಿಸತಕ್ಕದ್ದು ಮತ್ತು ಅವನು ಅಂತಹ ನಿರ್ದೇಶನಗಳನ್ನು ಹಾಗೆ ಪಾಲಿಸಲು ವಿಫಲನಾದ ಸಂದರ್ಭದಲ್ಲಿ, ಅವನ ಆ ಯಾವುದೇ ಲೈಸೆನ್ಸ್ ರದ್ದಿಯಾತಿಗೆ ಅಥವಾ ಅಮಾನತಿಗೆ ಗುರಿಯಾಗತಕ್ಕದ್ದು. 116, ಅರೆಖಾಯಂ ಸಿನಿಮಾ ಕಟ್ಟಡದ ನಿರ್ಮಾಣಕ್ಕಾಗಿ ಅರ್ಜಿ.- ಅರೆಖಾಯಂ ಸಿನಿಮಾ ಕಟ್ಟ! ಡವನ್ನು ನಿರ್ಮಿಸುವುದಕ್ಕೆ ಅಪೇಕ್ಷಿಸುವ ಯಾರೇ ವ್ಯಕ್ತಿಯು ‘a’ ನಮೂನೆಯಲ್ಲಿ ಅರ್ಜಿಯನ್ನು ಲೈಸೆನ್ಸ್ ನೀಡುವ ಪ್ರಾಧಿಕಾರಿಗೆ ಸಲ್ಲಿಸತಕ್ಕದ್ದು. ಅವನು ಈ ಸಂಬಂಧದಲ್ಲಿ "ಬಿ' ನಮೂನೆಯಲ್ಲಿ ನೋಟೀಸನ್ನು ಉದ್ದೇಶಿತ ನಿವೇಶನದ ಮೇಲಿನ ಫಲಕದ ಮೇಲೆ ಅಥವಾ ಸಂದರ್ಭಾನುಸಾರ ಸಾರ್ವಜನಿಕ ಮುಖ್ಯ ರಸ್ತೆಯಿಂದ ಅದು ಸ್ಪಷ್ಟವಾಗಿ ನೋಡಬಹುದಾದಂಥ ಸ್ಥಳದಲ್ಲಿ ಫಲಕದ ಮೇಲೆ ಸಹ ನೋಟೀಸನ್ನು ಹಾಕತಕ್ಕದ್ದು. ಅಂತಹ ನೋಟೀಸು ಪ್ರಾದೇಶಿಕ ಭಾಷೆಯಲ್ಲಿ ಇರತಕ್ಕದ್ದು ಮತ್ತು ಇಂಗ್ಲೀಷಿನಲ್ಲೂ ಇರತಕ್ಕದ್ದು. ನೋಟೀಸನ್ನು ಲೈಸನ್ಸ್ ನೀಡುವ ಪ್ರಾಧಿಕಾರಿಯು ಲೈಸೆನ್ಸ್ಗಾಗಿ ಅರ್ಜಿಯನ್ನು ತೀರ್ಮಾನಿಸುವವರೆಗೂ ಅದನ್ನು ಫಲಕದ ಮೇಲೆ ಪ್ರದರ್ಶಿಸತಕ್ಕದ್ದು. ಆ ಫಲಕವು ಕನಿಷ್ಠ 1.25 ಮಿ ಘಿ 1.00 ಮೀಟರು ಅಳತೆಯದ್ದಾಗಿರತಕ್ಕದ್ದು ಮತ್ತು ಆ ನೋಟೀಸು ದಷ್ಟವಾದ ಹಾಗೂ ಸ್ಪಷ್ಟವಾಗಿ ಓದಬಹುದಾದ ಅಕ್ಷರಗಳಲ್ಲಿ ಇರತಕ್ಕದ್ದು.
(2) ಅರ್ಜಿಯೊಂದಿಗೆ ಇವುಗಳನ್ನು,
(i) — ಉದ್ದೇಶಿತ ಸ್ಥಳದಿಂದ 500 ಮೀಟರ್ಗಳ ದೂರದವರೆಗೆ ಇರುವ ಸುತ್ತಮುತ್ತಲ ರಸ್ತೆಗಳು ಮತ್ತು ಕಟ್ಟಡಗಳನ್ನು, ಸದರಿ ಸ್ಥಳದಿಂದ ಎಲ್ಲ ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳು, ದೇವಾಲಯಗಳು ಅಥವಾ ಇತರ ಪ್ರಮುಖ ಸಾರ್ವಜನಿಕರ ಸ್ಥಳಗಳ ದೂರಗಳನ್ನು ಸ್ವಷ್ಟವಾಗಿ ಸೂಚಿಸುವ ಒತ್ತು ರೇಖಾ ಚಿತ್ರ ಮತ್ತು ಡಿಜಿಟಲ್ನ ನಮೂನೆಯಲ್ಲಿರುವುದನ್ನು ಸಹ ಒಂದು ಮುದ್ರಿತ ನಕ್ಷೆಯೊಂದಿಗೆ ಅದರ ಆರು ಉದ್ಭತ ಪ್ರತಿಗಳನ್ನು, ಅವುಗಳನ್ನು ಪಟ್ಟಣ ನಕ್ಷೆಯಲ್ಲಿ ಸರಿಯಾಗಿ ಪ್ರಮಾಣೀಕರಿಸಿರುವುದನ್ನು ಮತ್ತು ಅದೇ ನಕ್ಷೆಯ ಆರು ಮುದ್ರಿತಗಳನ್ನು ಅಥವಾ ಪ್ರತಿಗಳನ್ನು ಒದಗಿಸತಕ್ಕದ್ದು.
(ii) ಅರೆಖಾಯಂ ಸಿನಿಮಾ ಕಟ್ಟಡ ಮತ್ತು ಅದರ ಆವರಣಗಳ ಸಂಬಂಧದಲ್ಲಿ ಅದಕ್ಕೆ ಒಂದಕ್ಕೊಂದು ಸೇರಿಕೊಂಡ ಕಟ್ಟಡಗಳು, ಉಪಗೃಹಗಳು ಮತ್ತು ಇತರ ರಚನೆಗಳು, ಒಳದಾರಿಗಳು, ರಸ್ತೆಗಳು, ಮೊಗಸಾಲೆಗಳು, ಬಾವಿಗಳು, ಹಳ್ಳಗಳು, ನೀರೆತ್ತುವ ಕೊಳಾಯಿಗಳು, ಯಾವುದಾದರೂ ಇದ್ದರೆ, ಅವುಗಳನ್ನು ಆ ಯಾವುದೇ ಸ್ಥಳದಲ್ಲಿ ಮಳೆಗಾಲದಲ್ಲಿ ಚರಂಡಿಗಳು, ನೀರಿನ ಚರಂಡಿ ಮತ್ತು ಅನಿಲ ಕೊಳವೆಗಳು, ಭೂಮಿಯೊಳಗಿರುವ ಕೇಬಲ್ಲುಗಳು, ಅತೀ ಹೆಚ್ಚು ಮತ್ತು ಅತ್ಯಧಿಕವಾಗಿರುವ ವೋಲ್ಟೇಜ್ ಲೈನ್ಗಳು, ಟೆಲಿಗ್ರಾಫ್ ಮತ್ತು ದೂರವಾಣಿ ಲೈನ್ಗಳು, ನದಿಗಳು ಅಥವಾ ನಾಲೆಗಳ ಸಮೀಪವಿರುವ ಅತೀ ಪ್ರವಾಹದ ಗುರುತುಗಳು, ಸ್ಥಳಕ್ಕೆ ಹೊಂದಿಕೊಂಡಿರುವ ಸರೋವರ, ಕೆರೆಗಳು ಇದ್ದರೆ ಅವುಗಳ ಗರಿಷ್ಠ ನೀರಿನ ಮಟ್ಟ, ಸ್ಥಳಕ್ಕೆ ಒಂದಕ್ಕೊಂದು ಸೇರಿಕೊಂಡ ಬಾವಿಗಳು ಇದ್ದರೆ ನಿವೇಶನದೊಳಗೆ ಮೆಳೆಗಾಲದಲ್ಲಿ ಮಳೆ ಉಂಟಾದರೆ ಮತ್ತು ಆ ಸ್ಥಳದೊಳಗೆ ಸ್ಥಳಾವಕಾಸ ಕಲ್ಪಿಸಬೇಕಾದ ಆಸನಗಳ ಸಂಖ್ಯೆಯೊಂದಿಗೆ ಉದ್ದೇಶಿತ ಕಟ್ಟಡದ ಸ್ಥಳವನ್ನು ಮತ್ತು ಮುಕ್ತ ಪ್ರದೇಶವನ್ನು ಚದರ ಮೀಟರುಗಳಲ್ಲಿ ನೀಡಿದ ಅಳತೆಯನ್ನು ಒತ್ತು ರೇಖಾ ಚಿತ್ರದ ಮೂಲ ಮುದ್ರಿತದಲ್ಲಿ ಸ್ಥಳದ ಯೋಜನೆ ಮತ್ತು ವಿಭಾಗ ಮಟ್ಟದಲ್ಲಿ ತೋರಿಸಿದ ಸ್ಥಾನಗಳ ಸೂಚನೆಗಳನ್ನು 1:500 ಕ್ಕಿಂತ ಕಡಿಮೆಯಿಲ್ಲದ ಅಳತೆಯಲ್ಲಿ ಸರಿಯಾಗಿ ಚಿತ್ರಿಸಿದ ಆರು ಮುದ್ರಿತಗಳೊಂದಿಗೆ ಡಿಜಿಟಲ್ ನಮೂನೆಗಳನ್ನು ಸಹ ಒದಗಿಸತಕ್ಕದ್ದು; ಮತ್ತು
(iii) ನಿರಾಕ್ಷೇಪಣಾ ಪ್ರಮಾಣಪತ್ರದ ಮಂಜೂರಾತಿಗಾಗಿ ಸರ್ಕಾರವು. ಕಾಲಕಾಲಕ್ಕೆ ಅಧಿಸೂಚಿಸಿದಂಥ ಫೀಜುಗಳನ್ನು ಜಮೆ ಮಾಡಿರುವುದಕ್ಕೆ ಖಜಾನೆ ಚಲನು.