(1) ಸಂಚಾರಿ ಸಿನಿಮಾದಲ್ಲಿ ಚಲನಚಿತ್ರಗಳ ಪ್ರದರ್ಶನಕ್ಕಾಗಿ ಲೈಸೆನ್ಸನ್ನು ಮಂಜೂರು ಮಾಡುವುದಕ್ಕಾಗಿ ಪ್ರತಿಯೊಂದು ಅರ್ಜಿಯನ್ನು ನಮೂನೆ ‘a-1’ ರಲ್ಲಿ ಲೈಸೆನ್ಸ್ ನೀಡುವ ಪ್ರಾಧಿಕಾರಿಗಳಿಗೆ ಒಂಭತ್ತು ಸೆಟ್ಗಳಲ್ಲಿ ಸಲ್ಲಿಸತಕ್ಕದ್ದು.
(2) (1)ನೇ ಉಪನಿಯಮದ ಮೇರೆಗೆ ನಿಗದಿಪಡಿಸಲಾದ ಶುಲ್ಕವನ್ನು ಸಂದಾಯ ಮಾಡಿದ್ದಕ್ಕಾಗಿ ಖಜಾನೆ ಚಲನ್ದೊಂದಿಗೆ ಅರ್ಜಿಯನ್ನು ಲಗತ್ತಿಸತಕ್ಕದ್ದು.
(3) (2)8e ಉಪನಿಯಮದ ಮೇರೆಗೆ ಲೈಸೆನ್ಸ್ನ್ನು ಮಂಜೂರು ಮಾಡುವುದಕ್ಕಾಗಿ ಫೀಜು ಸರ್ಕಾರವು ಕಾಲಕಾಲಕ್ಕೆ ನಿಗದಿಪಡಿಸಿದಂತಿರತಕ್ಕದ್ದು.
(4) ಲೈಸೆನ್ಸನ್ನು ನೀಡುವ ಪ್ರಾಧಿಕಾರವು ಅದರ ಅರ್ಜಿಯನ್ನು ಸ್ವೀಕರಿಸಿದ ತರುವಾಯ ಯಾವುದೇ ಜಾತ್ರೆ, ಮೇಳ ಅಥವಾ ಇತರ ಅದೇ ರೀತಿಯ ಸಂದರ್ಭಗಳಿಗೆ ಸಂಬಂಧಪಟ್ಟಂತೆ ಸಂಚಾರಿ ಸಿನಿಮಾಗಳನ್ನು ನಡೆಸುವ ಲೈಸೆನ್ಸನ್ನು, ಅದು ಮಂಜೂರು ಮಾಡಬಹುದು. ಅದು ಸೂಕ್ತವೆಂದು ಭಾವಿಸುವಂಥ ವಿಚಾರಣೆಯನ್ನು ನಡೆಸಿದ ತರುವಾಯ ನಿವೇಶನವು ಸಂಚಾರಿ ಸಿನಿಮಾಗೆ ಸೂಕ್ತವೆಂದು ಮತ್ತು 90ನೇ ನಿಯಮದ (2)ನೇ ಉಪ ನಿಯಮದ ಅಗತ್ಯತೆಗಳಿಗೆ ಅದು ಅನುರೂಪವಾಗಿರುವುದೆಂದು ತನಗೆ ಮನದಟ್ಟಾದರೆ, ಮೂರು ತಿಂಗಳು ಮೀರದ ಅವಧಿಯವರೆಗೆ ಜಾತ್ರೆ, ಮೇಳ ಅಥವಾ ಇತರ ಅದೇ ರೀತಿಯ ಸಂದರ್ಭಗಳ ಅವಧಿಗೆ ಸಂಚಾರಿ ಸಿನಿಮಾ ನಡೆಸುವುದಕ್ಕೆ ಲೈಸೆನ್ನನ್ನು ಮಂಜೂರು ಮಾಡಬಹುದು.