ಈ ನಿಯಮಗಳಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(ಎ) “ಅಧಿನಿಯಮ”ಎಂದರೆ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ, 2017ರ (2017ರ ಕರ್ನಾಟಕದ ಅಧಿನಿಯಮ 27);
(ಬಿ) “ನಮೂನೆ” ಎಂದರೆ ಈ ನಿಯಮಗಳಿಗೆ ಲಗತ್ತಿಸಿದ ನಮೂನೆ;
(ಸಿ) “ಪ್ರಕರಣ” ಎಂದರೆ ಅಧಿನಿಯಮದ ಪ್ರಕರಣ;
(ಡಿ) “ವಿಶೇಷ ಆರ್ಥಿಕ ವಲಯ” ಎಂಬುದು “ವಿಶೇಷ ಆರ್ಥಿಕ ವಲಯಗಳ ಅಧಿನಿಯಮ, 2005ರ (2005ರ ಕೇಂದ್ರ ಅಧಿನಿಯಮ 28) ಪ್ರಕರಣ 2ರ ಖಂಡ (ಝೆಡ್ಎ)ನಲ್ಲಿ ಇದಕ್ಕೆ ನೀಡಲಾದ ಅರ್ಥವನ್ನೇ ಹೊಂದಿರತಕ್ಕದ್ದು;
(ಇ) ಇದರಲ್ಲಿ ಉಪಯೋಗಿಸಿದ ಆದರೆ ಪರಿಭಾಷಿಸದಿರುವ ಮತ್ತು ಅಧಿನಿಯಮದಲ್ಲಿ ಪರಿಭಾಷಿಸಲಾದ ಪದಗಳು ಮತ್ತು ಪದಾವಳಿಗಳು, ಅಧಿನಿಯಮದಲ್ಲಿ ಅವುಗಳಿಗೆ ಸಂಬಂಧಿಸಿದಂತೆ ನೀಡಲಾದ ಅರ್ಥಗಳನ್ನೇ ಹೊಂದಿರತಕ್ಕದ್ದು.