(1) ಪ್ರಕರಣ 98ರ ಉಪಪ್ರಕರಣ (6)ರ ಅಡಿಯಲ್ಲಿ ನೀಡಲಾದ ಪೂರ್ವಭಾವಿ ನಿರ್ಣಯದ ವಿರುದ್ದವಾಗಿ ಒಂದು ಅಪೀಲನ್ನು, ಅರ್ಜಿದಾರನು, ನಮೂನೆ ಜಿಎಸ್ಟಿ ಎಆರ್ಎ-2ರಲ್ಲಿ ಸಾಮಾನ್ಯ ಪೋರ್ಟಲ್ನಲ್ಲಿ ಹಾಕತಕ್ಕದ್ದು ಮತ್ತು ಅದು ಪ್ರಕರಣ 49ರಲ್ಲಿ ನಿರ್ದಿಷ್ಟಪಡಿಸಿದ ವಿಧಾನದಲ್ಲಿ ಠೇವಣಿ ಮಾಡಬೆಕಾದ ಹತ್ತು ಸಾವಿರ ರೂಪಾಯಿಗಳ ಶುಲ್ಕದಿಂದ ಜೊತೆಗೂಡಿರತಕ್ಕದ್ದು.
(2) ಪ್ರಕರಣ 98ರ ಉಪಪ್ರಕರಣ (6)ರ ಅಡಿಯಲ್ಲಿ ನೀಡಲಾದ ಪೂರ್ವಭಾವಿ ನಿರ್ಣಯದ ವಿರುದ್ದವಾಗಿ ಒಂದು ಅಪೀಲನ್ನು, ಸಂಬಂದಪಟ್ಟ ಅಧಿಕಾರಿ ಅಥವಾ ಪ್ರಕರಣ 100ರಲ್ಲಿ ಉಲ್ಲೇಖಿಸಲಾದ ಕ್ಷೇತ್ರವ್ಯಾಪ್ತಿಯ ಅಧಿಕಾರಿಯು ನಮೂನೆ ಜಿಎಸ್ಟಿ ಎಆರ್ಎ-3ರಲ್ಲಿ ಸಾಮಾನ್ಯ ಪೋರ್ಟಲ್ನಲ್ಲಿ ಹಾಕತಕ್ಕದ್ದು ಮತ್ತು ಅಪೀಲನ್ನು ಸಲ್ಲಿಸುವುದಕ್ಕಗಿ ಸದರಿ ಅಧಿಕಾರಿಯು ಯಾವುದೇ ಶುಲ್ಕವನ್ನು ಸಂದಾಯ ಮಾಡತಕ್ಕದ್ದಲ್ಲ.
(3) ಉಪನಿಯಮ (1)ರಲ್ಲಿ ಅಥವಾ ಉಪನಿಯಮ (2)ರಲ್ಲಿ ಉಲ್ಲೇಖಿಸಲಾದ ಅಪೀಲು, ಅದರಲ್ಲಿ ಒಳಗೊಂಡಿರುವ ಪರಿಶೀಲನೆ ಮತ್ತು ಅಂಥ ಅಪೀಲಿನ ಜೊತೆಯಲ್ಲಿರುವ ಎಲ್ಲಾ ಸಂಬಂಧಪಟ್ಟ ದಸ್ತಾವೇಜುಗಳನ್ನು ಕೆಳಕಂಡಂತೆ ಸಹಿಯಾಗಿರತಕ್ಕದ್ದು,-
(ಎ) ಸಂಬಂದಪಟ್ಟ ಅಧಿಕಾರಿ ಅಥವಾ ಕ್ಷೇತ್ರವ್ಯಾಪ್ತಿಯ ಅಧಿಕಾರಿಯ ಸಂದರ್ಭದಲ್ಲಿ, ಅಂಥ ಅಧಿಕಾರಿಯಿಂದ ಲಿಖಿತವಾಗಿ ಪ್ರಾಧಿಕೃತನಾದ ಒಬ್ಬ ಅಧಿಕಾರಿಯಿಂದ; ಮತ್ತು
(ಬಿ) ಅರ್ಜಿದಾರನ ಸಂದರ್ಭದಲ್ಲಿ, ನಿಯಮ 26ರಲ್ಲಿ ನಿರ್ದಿಷ್ಟಪಡಿಸಿದ ವಿಧಾನದಲ್ಲಿ