ಪ್ರಾಧಿಕಾರದ ರಚನೆಯು ಕೇಂದ್ರ ಸರಕು ಮತ್ರು ಸೇವೆಗಳ ತೆರಿಗೆ ನಿಯಮಗಳು, 2017ರ ನಿಯಮ 122ರ ಉಪಬಂಧಗಳಿಗೆ ಅನುಸಾರವಾಗಿರತಕ್ಕದ್ದು.]
ಪ್ರಾಧಿಕಾರದ ಛೇರ್ಮನ್ ಮತ್ತು ಸದಸ್ಯರುಗಳ ನೇಮಕಾತಿ, ವೇತನ, ಭತ್ಯೆಗಳು ಮತ್ತು ಸೇವೆಯ ಇತರೇ ನಿಬಂಧನೆಗಳು ಮತ್ತು ಷರತ್ತುಗಳುಕೇಂದ್ರ ಸರಕು ಮತ್ರು ಸೇವೆಗಳ ತೆರಿಗೆ ನಿಯಮಗಳು, 2017ರ ನಿಯಮ 124ರ ಉಪಬಂಧಗಳಿಗೆ ಅನುಸಾರವಾಗಿರತಕ್ಕದ್ದು.]
ಕೆಳಕಂಡವುಗಳು ಪ್ರಾಧಿಕಾರದ ಕರ್ತವ್ಯವಾಗಿರತಕ್ಕದ್ದು,-
(i) ಸರಕು ಅಥವಾ ಸೇವೆಗಳ ಪೂರೈಕೆಯ ಮೇಲಿನ ತೆರಿಗೆ ದರದ ಇಳಿಕೆಯು ಅಥವಾ ಹೂಡುವಳಿ ತೆರಿಗೆ ಜಮೆಯ ಅನುಕೂಲತೆಯು, ನೋಂದಾಯಿತ ವ್ಯಕ್ತಿಯಿಂದ ಸ್ವೀಕರಿಸುವವನಿಗೆ ಅದಕ್ಕನುಗುಣವಾಗಿ ಬೆಲೆಯಲ್ಲಿನ ಇಳಿಕೆಯ ರೂಪದಲ್ಲಿ ವರ್ಗಾಯಿಸಲಗಿದಯೇ ಎಂದು ನಿರ್ಧರಿಸುವುದು;
(ii) ಸರಕು ಅಥವಾ ಸೇವೆಗಳ ಪೂರೈಕೆಯ ಮೇಲಿನ ತೆರಿಗೆ ದರದ ಇಳಿಕೆಯು ಅಥವಾ ಹೂಡುವಳಿ ತೆರಿಗೆ ಜಮೆಯ ಅನುಕೂಲತೆಯು, ನೋಂದಾಯಿತ ವ್ಯಕ್ತಿಯಿಂದ ಸ್ವೀಕರಿಸುವವನಿಗೆ ಅದಕ್ಕನುಗುಣವಾಗಿ ಬೆಲೆಯಲ್ಲಿನ ಇಳಿಕೆಯ ರೂಪದಲ್ಲಿ ವರ್ಗಾಯಿಸಿಲ್ಲದಿರುವ ನೋಂದಾಯಿತ ವ್ಯಕ್ತಿಯನ್ನು ಗುರುತಿಸುವುದು;
(iii) ಕೆಳಕಂಡುವುಗಳಿಗಾಗಿ ಆದೇಶವನ್ನು ನೀಡುವುದು,
(ಎ) ಬೆಲೆಗಳನ್ನು ಇಳಿಸುವುದು;
(ಬಿ)ಅದಕ್ಕನುಗುಣವಾಗಿ ಬೆಲೆಯಲ್ಲಿನ ಇಳಿಕೆಯ ರೂಪದಲ್ಲಿ ವರ್ಗಾಯಿಸಿಲ್ಲದಿರುವ ಒಂದು ಮೊತ್ತವನ್ನು ಸ್ವೀಕರಿಸುವವನಿಗೆ, ಹೆಚ್ಚಿನ ಮೊತ್ತದ ಸಂಗ್ರಹಣೆಯ ದಿನಾಂಕದಿಂದ ಅಂಥ ಮೊತ್ತವನ್ನು ಹಿಂದಿರುಗಿಸುವ ಅಥವಾ ಸಂದರ್ಭಾನುಸಾರವಾಗಿ ಹಿಂದಿರುಗಿಸದಿರುವ ಮೊತ್ತದ ವಸೂಲಾತಿಯ ದಿನಾಂಕದ ವರೆಗೆ ಶೇಕಡ ಹದಿನೆಂಟರ ದರದಲ್ಲಿನ ಬಡ್ಡಿದರದೊಂದಿಗೆ ಹಿಂದಿರುಗಿಸುವುದು, ಅರ್ಹ ವ್ಯಕ್ತಿಯು ಮೊತ್ತದ ಹಿಂದಿರುಗಿಸುವಿಕೆಯನ್ನು ಕ್ಲೇಮು ಮಾಡದಿದ್ದಲ್ಲಿ ಅಥವಾ ಆತನನ್ನು ಗುರುತಿಸಲಾಗದಿದ್ದ ಸಂದರ್ಭದಲ್ಲಿ, ಅದನ್ನು ಪ್ರಕರಣ 57ರಲ್ಲಿ ಉಲ್ಲೇಖಿಸಲಾದ ನಿಧಿಗೆ ಠೇವಣಿ ಮಾಡುವುದು;
(ಸಿ) ಅಧಿನಿಯಮದಲ್ಲಿ ನಿರ್ದಿಷ್ಟಪಡಿಸಿದ ದಂಡವನ್ನು ವಿಧಿಸುವುದು; ಮತ್ತು
(ಡಿ) ಅಧಿನಿಯಮದ ಅಡಿಯಲ್ಲಿನ ನೋಂದಣಿಯನ್ನು ರದ್ದುಗೊಳಿಸುವುದು;
(iv) ಪ್ರತಿ ತ್ರೈಮಾಸಿಕವು ಕೊನೆಗೊಳ್ಳುವ ಹತ್ತನೇ ದಿನದೊಳಗಾಗಿ ಕಾರ್ಯಕ್ಷಮತೆಯ ವರದಿಯನ್ನು ಒದಗಿಸುವುದು.] 47 “ಗೊತ್ತುಪಡಿಸಿದ ದಿನದ ತೊಂಬತ್ತು ದಿನಗಳ” ಎಂಬ ಪದಗಳಿಗೆ, ಅಧಿಸೂಚನೆ ಸಂ. ಆಇ 47 ಸಿಎಸ್ಎಲ್ 2017 (4- ಎಫ್/2017) ದಿನಾಂಕ 17-10-2017ರ ಮೂಲಕ ಈ ಪದಗಳನ್ನು ಪ್ರತಿಯೋಜಿಸಲಾಗಿದೆ.
48ಅಧಿಸೂಚನೆ ಸಂ. ಆಇ 47 ಸಿಎಸ್ಎಲ್ 2017 (4-ಇ/2017) ದಿನಾಂಕ 04-10-2017ರ ಮೂಲಕ ಸೇರಿಸಲಾಗಿದೆ.
491ನೇ ಜುಲೈ 2017ರಿಂದ ಜಾರಿಗೆ ಬರುವಂತೆ ಅಧಿಸೂಚನೆ ಸಂಖ್ಯೆ ಆಇ 47 ಸಿಎಸ್ಎಲ್ 2017 (4-ಡಿ/2017) ದಿನಾಂಕ 30-08- 2017ರ ಮೂಲಕ ನಿಯಮ 122ನ್ನು ಪ್ರತಿಯೋಜಿಸಲಾಗಿದೆ.
501ನೇ ಜುಲೈ 2017ರಿಂದ ಜಾರಿಗೆ ಬರುವಂತೆ ಅಧಿಸೂಚನೆ ಸಂಖ್ಯೆ ಆಇ 47 ಸಿಎಸ್ಎಲ್ 2017 (4-ಡಿ/2017) ದಿನಾಂಕ 30-08- 2017ರ ಮೂಲಕ ನಿಯಮ 123ನ್ನು ಪ್ರತಿಯೋಜಿಸಲಾಗಿದೆ.
511ನೇ ಜುಲೈ 2017ರಿಂದ ಜಾರಿಗೆ ಬರುವಂತೆ ಅಧಿಸೂಚನೆ ಸಂಖ್ಯೆ ಆಇ 47 ಸಿಎಸ್ಎಲ್ 2017 (4-ಡಿ/2017) ದಿನಾಂಕ 30-08- 2017ರ ಮೂಲಕ ನಿಯಮ 124ನ್ನು ಪ್ರತಿಯೋಜಿಸಲಾಗಿದೆ.
521ನೇ ಜುಲೈ 2017ರಿಂದ ಜಾರಿಗೆ ಬರುವಂತೆ ಅಧಿಸೂಚನೆ ಸಂಖ್ಯೆ ಆಇ 47 ಸಿಎಸ್ಎಲ್ 2017 (4-ಡಿ/2017) ದಿನಾಂಕ 30-08- 2017ರ ಮೂಲಕ ನಿಯಮ 125ನ್ನು ಪ್ರತಿಯೋಜಿಸಲಾಗಿದೆ.
531ನೇ ಜುಲೈ 2017ರಿಂದ ಜಾರಿಗೆ ಬರುವಂತೆ ಅಧಿಸೂಚನೆ ಸಂಖ್ಯೆ ಆಇ 47 ಸಿಎಸ್ಎಲ್ 2017 (4-ಡಿ/2017) ದಿನಾಂಕ 30-08- 2017ರ ಮೂಲಕ ನಿಯಮ 126ನ್ನು ಪ್ರತಿಯೋಜಿಸಲಾಗಿದೆ.
(1)ನಿಯಮ 129ರ ಉಪನಿಯಮ (3) ಅಥವಾ (5)ಗಳು ಮತ್ತು ನಿಯಮ 133ರ ಉಪನಿಯಮ (2)ರಲ್ಲಿ ಏನೇ ಒಳಗೊಂಡಿದ್ದಾಗ್ಯೂ, ಮಾಹಿತಿ ಹಕ್ಕು ಅಧಿನಿಯಮ, 2005ರ (2005ರ ಕೇಂದ್ರ ಅಧಿನಿಯಮ 22) ಪ್ರಕರಣ 11ರ ಉಪಬಂಧಗಳು ಗೌಪ್ಯತೆಯ ಆಧಾರದಲ್ಲಿ ಪಡೆದ ಯಾವುದೇ ಮಾಹಿತಿ ಬಹಿರಂಗಕ್ಕೆ ಯಥೋಚಿತ ವ್ಯತ್ಯಾಸಗಳೊಡನೆ ಅನ್ವಯವಾಗತಕ್ಕದ್ದು.
(2) ಸಂರಕ್ಷಣೆಗಳ ಡೈರಕ್ಟರ್ ಜನರಲ್,ಗೌಪ್ಯತೆಯ ಆಧಾರದಲ್ಲಿ, ಮಾಹಿತಿಯನ್ನು ಒದಗಿಸುವ ಪಕ್ಷಕಾರರುಗಳಿಗೆ, ಅದರ ಗೌಪ್ಯೇತರ ಸಾರಾಂಶವನ್ನು ಒದಗಿಸುವಂತೆ ಅಗತ್ಯಪಡಿಸಬಹುದು, ಮತ್ತು ಅಂಥ ಮಾಹಿತಿಯನ್ನು ಒದಗಿಸುವ ಪಕ್ಷಕಾರನ ಅಭಿಪ್ರಾಯದಲ್ಲಿ, ಸದರಿ ಮಾಹಿತಿಯನ್ನು ಸಾರಾಂಶೀಕರಿಸಲು ಸಾಧ್ಯವಾಗುವುದಿಲ್ಲ ಎಂತಿದ್ದರೆ, ಅಂಥ ಪಕ್ಷಕಾರ ಸಾರಾಂಶೀಕರಣ ಏಕೆ ಸಾಧ್ಯವಾಗುವುದಿಲ್ಲ ಎನ್ನುವುದರ ಕಾರಣಗಳ ಒಂದು ವಿವರಪತ್ರವನ್ನು ಸಂರಕ್ಷಣೆಗಳ ಡೈರಕ್ಟರ್ ಜನರಲ್ಗೆ ಸಲ್ಲಿಸಬಹುದು.
(1) ಸ್ಥಾಯಿ ಸಮಿತಿಯು, ಸರಕು ಅಥವಾ ಸೇವೆಗಳ ಪೂರೈಕೆಯ ಮೇಲಿನ ತೆರಿಗೆ ದರದ ಇಳಿಕೆಯ ಅನೂಕೂಲತೆ ಅಥವಾ ಹೂಡುವಳಿ ತೆರಿಗೆ ಜಮೆಯ ಅನುಕೂಲತೆಯು, ಸ್ವೀಕರಿಸುವವನಿಗೆ ಅದಕ್ಕನುಗುಣವಾಗಿ ಬೆಲೆಯಲ್ಲಿನ ಇಳಿಕೆಯ ರೂಪದಲ್ಲಿ ವರ್ಗಾಯಿಸಿಲ್ಲ ಎನ್ನುವುದನ್ನು ತೋರಿಸಲು ಮೇಲ್ನೋಟಕ್ಕೆ ಪುರಾವೆಯಿದೆ ಎಂದು ಮನದಟ್ಟು ಮಾಡಿಕೊಂಡಲ್ಲಿ, ಅದು ಆ ವಿಷಯವನ್ನು ವಿವರವಾದ ತನಿಖೆಗಾಗಿ, ಸಂರಕ್ಷಣೆಗಳ ಡೈರಕ್ಟರ್ ಜನರಲ್ಗೆ ಕಳುಹಿಸತಕ್ಕದ್ದು.
(2) ಸಂರಕ್ಷಣೆಗಳ ಡೈರಕ್ಟರ್ ಜನರಲ್, ತನಿಖೆಯನ್ನು ನಡೆಸತಕ್ಕದ್ದು ಮತ್ತುತೆರಿಗೆ ದರದ ಇಳಿಕೆಯ ಅನೂಕೂಲತೆ ಅಥವಾ ಹೂಡುವಳಿ ತೆರಿಗೆ ಜಮೆಯ ಅನುಕೂಲತೆಯು,ಸ್ವೀಕರಿಸುವವನಿಗೆ ಅದಕ್ಕನುಗುಣವಾಗಿ ಬೆಲೆಗಳಲ್ಲಿನ ಇಳಿಕೆಯ ರೂಪದಲ್ಲಿ ವರ್ಗಾಯಿಸಲಾಗಿದೆಯೇ ಎನ್ನುವುದನ್ನು ನಿರ್ಧರಿಸಲು ಅಗತ್ಯವಾದ ಪುರಾವೆಯನ್ನು ಸಂಗ್ರಹಿಸತಕ್ಕದ್ದು.
(3) ಸಂರಕ್ಷಣೆಗಳ ಡೈರಕ್ಟರ್ ಜನರಲ್, ತನಿಖೆಯನ್ನು ಪ್ರಾರಂಭಿಸುವ ಮುನ್ನ, ಆಸಕ್ತ ಪಕ್ಷಕಾರರುಗಳಿಗೆ, ಇತರೆ ವಿಷಯಗಳೊಡನೆ ಕೆಳಕಂಡ ಮಾಹಿತಿಗಳನ್ನು ಒಳಗೊಂಡಿರುವ ಒಂದು ಸೂಚನಾ ಪತ್ರವನ್ನು ನೀಡತಕ್ಕದ್ದು:-
(ಎ) ಯಾವುಗಳಿಗೆ ಸಂಬಂಧಿಸಿದಂತೆ ನಡಾವಳಿ ಆರಂಭಿಸಿಲಾಗಿದೆಯೋ ಆ ಸರಕು ಅಥವಾ ಸೇವೆಗಳ ವಿವರಣೆ;
(ಬಿ) ಯಾವುದರ ಆಧಾರದ ಮೇಲೆ ಆಪಾದನೆಯಿದೆಯೋ ಆ ಸಂಗತಿಗಳ ವಿವರಪತ್ರದ ಸಾರಾಂಶ; ಮತ್ತು
(ಸಿ) ಆಸಕ್ತ ಪಕ್ಷಕಾರರುಗಳಿಗೆ ಮತ್ತು ಅವರುಗಳು ಒದಗಿಸುವ ಉತ್ತರದ ನಡಾವಳಿಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಹೊಂದಿರುವ ಇತರೇ ವ್ಯಕ್ತಿಗಳಿಗೆ ಅನುಮತಿಸಲಾದ ಕಾಲ ಮಿತಿ.
(4) ಸಂರಕ್ಷಣೆಗಳ ಡೈರಕ್ಟರ್ ಜನರಲ್, ವಿಷಯಗಳ ಯೋಗ್ಯ ವಿಚಾರಣೆಗಾಗಿ ಸೂಕ್ತ ಎಂದು ಭಾವಿಸಬಹುದಾದ ಅಂಥ ಇತರೆ ವ್ಯಕ್ತಿಗಳಿಗೂ ಸಹ ಸೂಚನಾಪತ್ರಗಳನ್ನು ನೀಡಬಹದು.
(5) ಸಂರಕ್ಷಣೆಗಳ ಡೈರಕ್ಟರ್ ಜನರಲ್, ತನಗೆ ಹಾಜರುಪಡಿಸಿದ ಪುರಾವೆಯನ್ನು, ನಡಾವಳಿಗಳಲ್ಲಿ ಭಾಗವಹಿಸುವ, ಒಬ್ಬ ಆಸಕ್ತ ಪಕ್ಷಕಾರನಿಂದ ಮತ್ತೊಬ್ಬ ಆಸಕ್ತ ಪಕ್ಷಕಾರನಿಗೆ ಲಭ್ಯವಾಗುವಂತೆ ಮಾಡತಕ್ಕದ್ದು.
(6) ಸಂರಕ್ಷಣೆಗಳ ಡೈರಕ್ಟರ್ ಜನರಲ್, ಸ್ಥಾಯಿ ಸಮಿತಿಯಿಂದ ಉಲ್ಲೇಖವನ್ನು ಸ್ವೀಕರಿಸಿದ ಮೂರು ತಿಂಗಳ ಒಳಗಾಗಿ ಅಥವಾ ಸ್ಥಾಯಿ ಸಮಿತಿಯಿಂದ ಲಿಖಿತವಾಗಿ ದಾಖಲಿಸಬೇಕಾದ ಕಾರಣಗಳಿಗಾಗಿ, ಮೂರು ತಿಂಗಳನ್ನು ಮೀರಿಲ್ಲದ ಅಂಥ ವಿಸ್ತರಿಸಿದ ಅವಧಿಯ ಒಳಗಾಗಿ ತನಿಖೆಯನ್ನು ಪೂರ್ಣಗೊಳಿಸತಕ್ಕದ್ದು ಮತ್ತ ತನಿಖೆಯನ್ನು ಪೂರ್ಣಗೊಳಿಸಿದ ನಂತರ, ಅದರ ನಿರ್ಣಯಗಳ ಒಂದು ವರದಿಯನ್ನು, ಸಂಬಂಧಿಸಿದ ದಾಖಲೆಗಳೊಂದಿಗೆ ಪ್ರಾಧಿಕಾರಕ್ಕೆ ಒದಗಿಸತಕ್ಕದ್ದು.
(1) ಸ್ಥಾಯಿ ಸಮಿತಿಯು, ಅದರಿಂದ ನಿರ್ದಿಷ್ಟಪಡಿಸಬಹುದಾದ ಅಂಥ ನಮೂನೆ ಮತ್ತು ವಿಧಾನದಲ್ಲಿ, ಒಬ್ಬ ಆಸಕ್ತ ಪಕ್ಷಕಾರ ಅಥವಾ ಆಯುಕ್ತರು ಅಥವಾ ಯಾಮೊಬ್ಬ ಇತರೇ ವ್ಯಕ್ತಿಯಿಂದ, ಲಿಖಿತ ಅರ್ಜಿಯನ್ನು ಸ್ವೀಕರಿಸಿದ ದಿನಾಂಕದ ಎರಡು ತಿಂಗಳ ಒಳಗಾಗಿ, ಸರಕು ಅಥವಾ ಸೇವೆಗಳ ಪೂರೈಕೆಯ ಮೇಲಿನ ತೆರಿಗೆ ದರದ ಇಳಿಕೆಯ ಅನುಕೂಲತೆ ಅಥವಾ ಹೂಡುವಳಿ ತೆರಿಗೆ ಜಮೆಯ ಅನುಕೂಲತೆಯು, ಸ್ವೀಕರಿಸುವವನಿಗೆ ಅದಕ್ಕನುಗುಣವಾಗಿ ಬೆಲೆಯಲ್ಲಿನ ಇಳಿಕೆಯ ರೂಪದಲ್ಲಿ ವರ್ಗಾಯಿಸಿಲ್ಲ ಎನ್ನುವ ಅರ್ಜಿದಾರನ ಕ್ಲೇಮೀಗೆ ಮೇಲ್ನೋಟಕ್ಕೆ ಪೂರಕವಾದ ಆಧಾರವೇ ಎನ್ನುವುದನ್ನು ನಿರ್ಧರಿಸುವುದಕ್ಕಾಗಿ ಅರ್ಜಿಯಲ್ಲಿ ಒದಿಗಿಸಲಾದ ಪುರಾವೆಯ ಯಥಾರ್ಥತೆ ಮತ್ತು ಪರ್ಯಾಪ್ತತೆಯನ್ನು ಪರೀಕ್ಷಿಸತಕ್ಕದ್ದು.
(2) ಆಸಕ್ತ ಪಕ್ಷಕಾರರುಗಳಿಂದ ಸಲ್ಲಿಸಲಾಗಿರುವ ಸ್ಥಳೀಯ ಸ್ವರೂಪದ ವಿಷಯಗಳ ಮೇಲಿನ ಅರ್ಜಿಗಳನ್ನು, ಮೊದಲು ರಾಜ್ಯ ಮಟ್ಟದ ಪರಿಶೋಧನಾ ಸಮಿತಿಯಿಂದ ಪರೀಕ್ಷಿಸತಕ್ಕದ್ದು ಮತ್ತು ಪರಿಶೋಧನಾ ಸಮಿತಿಯು, ಪ್ರಕರಣ 171ರ ಉಪಬಂಧಗಳನ್ನು ಪೂರೈಕೆದಾರ ಉಲ್ಲಂಘಿಸಿದ್ದಾನೆ ಎಂದು ಮನದಟ್ಟು ಮಾಡಿಕೊಂಡ ನಂತರ, ಅರ್ಜಿಯನ್ನು, ಸ್ಥಾಯಿ ಸಮಿತಿಗೆ ಮುಂದಿನ ಕ್ರಮಕ್ಕಾಗಿ ತನ್ನ ಶಿಫಾರಸ್ಸುಗಳೊಂದಿಗೆ ರವಾನಿಸತಕ್ಕದ್ದು.