ನಮೂನೆ ಜಿಎಸ್ಟಿ ಡಿಆರ್ಸಿ-17 [ನಿಯಮ 147(4) ನೋಡಿ]
ಪ್ರಕರಣ 79(1)(ಡಿ)ಯ ಅಡಿಯಲ್ಲಿ ಸ್ಥಿರ / ಚರಸ್ವತ್ತುಗಳಹರಾಜಿಗಾಗಿ ಸೂಚನಾಪತ್ರ
| ತಗಾದೆ ಆದೇಶ ಸಂಖ್ಯೆ | : | ದಿನಾಂಕ : |
| ವಸೂಲಾತಿಯ ಉಲ್ಲೇಖದ ಸಂಖ್ಯೆ | : | ದಿನಾಂಕ : |
| ಅವಧಿ : |
----------- ರೂಗಳ ಮೊತ್ತ ಮತ್ತು ಅದರ ಮೇಲಿನ ಬಡ್ಡಿಯ ಮತ್ತು ಪ್ರಕರಣ 79ರ ಉಪಬಂಧಗಳಿಗೆ ಅನುಸಾರವಾಗಿ, ವಸೂಲಿ ಪ್ರಕ್ರಿಯೆಯಲ್ಲಿ ಭರಿಸಿದಅಂಗೀಕಾರಾರ್ಹ ವೆಚ್ಚಗಳ ವಸೂಲಾತಿಗಾಗಿ ಕೆಳಗಿನ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಜಫ್ತಿ ಮಾಡಲಾದ ಅಥವಾ ತಡೆಹಿಡಿಯಲಾದ ಸರಕುಗಳ ಮಾರಾಟಕ್ಕಾಗಿ ನಾನು ಒಂದು ಆದೇಶವನ್ನು ಹೊರಡಿಸಿರುತ್ತೇನೆ.
ಮಾರಾಟವು ಸಾರ್ವಜನಿಕ ಹರಾಜಿನ ಮೂಲಕ ನಡೆಯಲಿದ್ದು, ಮಾರಾಟಕ್ಕಾಗಿ ಸರಕುಗಳನ್ನು ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದಂತೆ ಲಾಟ್ಗಳಲ್ಲಿ ಇರಿಸಲಾಗುತ್ತದೆ. ಇದು ಬಾಕಿದಾರನ ಹಕ್ಕು, ಸ್ವಾಮ್ಯ ಹಾಗೂ ಹಿತಾಸಕ್ತಿಯ ಮಾರಾಟವಾಗಿರುತ್ತದೆ. ಮತ್ತು ಸದರಿ ಸ್ವತ್ತುಗಳಿಗೆ ಸಂಬಂಧಿಸಿದ ಹೊಣೆಗಾರಿಕೆಗಳು ಮತ್ತು ಕ್ಲೇಮುಗಳು, ಅವುಗಳನ್ನು ನಿಶ್ಚಿತಪಡಿಸಿಕೊಳ್ಳುವಷ್ಟರ ಮಟ್ಟಿಗೆ ಪ್ರತಿಯೊಂದು ಲಾಟ್ಗೆ ಪ್ರತಿಯಾಗಿಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದಂತಿರುತ್ತದೆ.
ಮಾರಾಟವನ್ನು ಮುಂದಕ್ಕೆ ಹಾಕುವ ಯಾವುದೇ ಆದೇಶವು ಇಲ್ಲದಿದ್ದಲ್ಲಿ, ಹರಾಜು ಪ್ರಕ್ರಿಯೆಯು ದಿನಾಂಕ------ರಂದು------ -ಪೂರ್ವಾಹ್ನ/ಅಪರಾಹ್ನ ನಡೆಯುತ್ತದೆ. ಒಂದುವೇಳೆ ಸೂಚನಾಪತ್ರ ನೀಡುವ ಮೊದಲೇ ಬಾಕಿ ಇರುವ ಇಡೀ ಮೊತ್ತವನ್ನು ಸಂದಾಯ ಮಾಡಿದಲ್ಲಿ,ಹರಾಜನ್ನು ರದ್ದುಪಡಿಸಲಾಗುವುದು.
ಪ್ರತಿಯೊಂದು ಲಾಟ್ನ ಬೆಲೆಯನ್ನು ಮಾರಾಟದ ಸಮಯದಲ್ಲಿ ಅಥವಾ ಯುಕ್ತ ಅಧಿಕಾರಿ / ನಿರ್ದಿಷ್ಟಪಡಿಸಿದ ಅಧಿಕಾರಿಯ ನಿರ್ದೇಶನದಂತೆ ಸಂದಾಯ ಮಾಡತಕ್ಕದ್ದು. ತಪ್ಪಿದಲ್ಲಿ, ಸರಕುಗಳನ್ನು ಮತ್ತೊಮ್ಮೆ ಹರಾಜಿಗೆ ಇಡಲಾಗುತ್ತದೆ ಮತ್ತು ಮರು-ಮಾರಾಟ ಮಾಡಲಾಗುವುದು.