(1) ಪ್ರಕರಣ 37ರ ಅಡಿಯಲ್ಲಿ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಹೊರ ಮುಖ ಪೂರೈಕೆಯ ವಿವರಗಳನ್ನು ಸಲ್ಲಿಸುವುದು ಅಗತ್ಯವಿರುವ, ಏಕೀಕೃತ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ, 2017ರ ಪ್ರಕರಣ 14ರಲ್ಲಿ ಉಲ್ಲೇಖಿಸಲಾದ ವ್ಯಕ್ತಿಯನ್ನು ಹೊರತುಪಡಿಸಿದಂತಹ ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ಅಂಥ ವಿವರಗಳನ್ನು, ನಮೂನೆ ಜಿಎಸ್ಟಿಆರ್-1ರಲ್ಲಿ ಸಾಮಾನ್ಯ ಪೋರ್ಟಲ್ನ ಮುಖಾಂತರ ನೇರವಾಗಿಯಾಗಲಿ ಅಥವಾ ಆಯುಕ್ತರಿಂದ ಅಧಿಸೂಚಿಸಲಾದ ಒಂದು ಸಹಾಯ ಕೇಂದ್ರದ ಮೂಲಕವಾಗಿಯಾಗಲಿ, ವಿದ್ಯುನ್ಮಾನ ರೀತಿಯಲ್ಲಿ ಒದಗಿಸತಕ್ಕದ್ದು.
(2) ನಮೂನೆ ಜಿಎಸ್ಟಿಆರ್-1ರಲ್ಲಿ ಒದಗಿಸಿದ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಹೊರಮುಖ ವಿವರಗಳು, ಇತರ ವಿಷಯಗಳೊಡನೆ, ಕೆಳಕಂಡವುಗಳನ್ನು ಒಳಗೊಂಡಿರತಕ್ಕದ್ದು,-
(ಎ) ಈ ಕೆಳಕಂಡ ಎಲ್ಲವುಗಳ ಬೆಲೆಪಟ್ಟಿವಾರು ವಿವರಗಳು,-
(i) ನೋಂದಾಯಿತ ವ್ಯಕ್ತಿಗಳಿಗೆ ಮಾಡಲಾದ ರಾಜ್ಯದೊಳಗಿನ ಮತ್ತು ಅಂತರ ರಾಜ್ಯದ ಪೂರೈಕೆಗಳು; ಮತ್ತು
(ii) ನೋಂದಾಯಿತರಲ್ಲದ ವ್ಯಕ್ತಿಗಳಿಗೆ ಮಾಡಲಾದ ಎರಡೂವರೆ ಲಕ್ಷ ರೂಪಾಯಿಗಳಿಗಿಂತ ಅಧಿಕವಾದ ಬೆಲೆಪಟ್ಟಿಯ ಮೌಲ್ಯದ ರಾಜ್ಯವಾರು ಅಂತರ್ರಾಜ್ಯ ಪೂರೈಕೆಗಳು.
(ಬಿ) ಈ ಕೆಳಕಂಡ ಎಲ್ಲವುಗಳ ಕ್ರೋಡೀಕೃತ ವಿವರಗಳು,-
(i) ಪ್ರತಿ ತೆರಿಗೆ ದರಕ್ಕಾಗಿ ನೋಂದಾಯಿತರಲ್ಲದ ವ್ಯಕ್ತಿಗಳಿಗೆ ಮಾಡಲಾದ ರಾಜ್ಯದೊಳಗಿನ ಪೂರೈಕೆಗಳು; ಮತ್ತು
(ii) ನೋಂದಾಯಿತರಲ್ಲದ ವ್ಯಕ್ತಿಗಳಿಗೆ ಮಾಡಲಾದ ಎರಡೂವರೆ ಲಕ್ಷ ರೂಪಾಯಿಗಳ ವರೆಗಿನ ಬೆಲೆಪಟ್ಟಿಯ ಮೌಲ್ಯದ ರಾಜ್ಯವಾರು ಅಂತರ್ರಾಜ್ಯ ಪೂರೈಕೆಗಳು.
(ಸಿ) ಹಿಂದೆ ನೀಡಿದ ಬೆಲೆ ಪಟ್ಟಿಗಾಗಿ, ಆ ತಿಂಗಳಿನಲ್ಲಿ ನೀಡಿದ ಖರ್ಚು ಮತ್ತು ಜಮೆ ಚೀಟಿಗಳೇನಾದರು ಇದ್ದರೆ ಅವುಗಳು.
(3) ಪೂರೈಕೆದಾರನು ಒದಗಿಸಿದ ಹೊರ ಮುಖ ಪೂರೈಕೆಯ ವಿವರಗಳನ್ನು, ನಮೂನೆ ಜಿಎಸ್ಟಿಆರ್ 02ಎನಭಾಗ-ಎನಲ್ಲಿ, ನಮೂನೆ ಜಿಎಸ್ಟಿಆರ್-4ಎನಲ್ಲಿ ಮತ್ತು ನಮೂನೆ ಜಿಎಸ್ಟಿಆರ್-6ಎನಲ್ಲಿ, ಸಾಮಾನ್ಯ ಪೋರ್ಟಲ್ ಮೂಲಕ ಸಂಬಂಧಿತ ನೋಂದಾಯಿತ ವ್ಯಕ್ತಿಗಳಿಗೆ (ಸ್ವೀಕರಿಸುವವರು) ನಮೂನೆ ಜಿಎಸ್ಟಿಆರ್-1ನ್ನು ಸಲ್ಲಿಸುವ ಗಡುವು ದಿನಾಂಕದ ನಂತರ ವಿದ್ಯುನ್ಮಾನ ರೀತಿಯಲ್ಲಿ ಲಭ್ಯವಾಗುವಂತೆ ಮಾಡತಕ್ಕದ್ದು.
(4) ಸ್ವೀಕರಿಸುವವನು ಪ್ರಕರಣ 38ರ ಅಡಿಯಲ್ಲಿನ ತನ್ನ ನಮೂನೆ ಜಿಎಸ್ಟಿಆರ್-02ರಲ್ಲಿ, ಅಥವಾ ಪ್ರಕರಣ 39ರ ಅಡಿಯಲ್ಲಿನ ನಮೂನೆ ಜಿಎಸ್ಟಿಆರ್-4ರಲ್ಲಿ ಅಥವಾ ನಮೂನೆ ಜಿಎಸ್ಟಿಆರ್-6ರಲ್ಲಿ, ಸೇರ್ಪಡೆ ಮಾಡಿದ, ಸರಿಪಡಿಸಿದ ಅಥವಾ ತೆಗೆದುಹಾಕಿದ ಒಳಮುಖ ಪೂರೈಕೆಗಳ ವಿವರಗಳನ್ನು, ನಮೂನೆ ಜಿಎಸ್ಟಿಆರ್-1ಎನಲ್ಲಿ ಪೂರೈಕೆದಾರನಿಗೆ ಸಾಮಾನ್ಯ ಪೋರ್ಟಲ್ ಮೂಲಕ ವಿದ್ಯುನ್ಮಾನ ರೀತಿಯಲ್ಲಿ ಲಭ್ಯವಾಗುವಂತೆ ಮಾಡತಕ್ಕದ್ದು ಮತ್ತು ಅಂಥ ಪೂರೈಕೆದಾರನು ಸ್ವೀಕರಿಸುವವನಿಂದ ಮಾಡಲಾದ ಮಾರ್ಪಾಡುಗಳನ್ನು ಒಪ್ಪುವುದಾಗಲಿ ಅಥವಾ ತಿರಸ್ಕರಿಸುವುದಾಗಲಿ ಮಾಡುವುದು ಮತ್ತು ಮಾರ್ಪಾಡುಗಳನ್ನು ಒಪ್ಪಿದುದರಷ್ಟರ ಮಟ್ಟಿಗೆ ಈ ಮೊದಲು ಪೂರೈಕೆದಾರನಿಂದ ಒದಗಿಸಲಾದ ನಮೂನೆ ಜಿಎಸ್ಟಿಆರ್-1 ತಿದ್ದುಪಡಿಯಾಗತಕ್ಕದ್ದು.