(1) ಪ್ರಕರಣ 49ರ ಉಪಪ್ರಕರಣ (1)ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ವಿದ್ಯುನ್ಮಾನ ನಗದು ಖಾತೆಯನ್ನು ತೆರಿಗೆ, ಬಡ್ಡಿ, ದಂಡ ಹಾಗೂ ವಿಳಂಬ ಶುಲ್ಕ ಅಥವಾ ಯಾವುದೇ ಇತರೇ ಮೊತ್ತವನ್ನು ಸಂದಾಯ ಮಾಡಲು ಬಾಧ್ಯನಿರುವ ಪ್ರತಿಯೊಬ್ಬ ವ್ಯಕ್ತಿಯು, ಠೇವಣಿ ಮಾಡಿದ ಮೊತ್ತವನ್ನು ಜಮೆಗೊಳಿಸುವುದಕ್ಕಾಗಿ ಮತ್ತು ಅದರಿಂದ ಸಂದಾಯವನ್ನು ತೆರಿಗೆ, ಬಡ್ಡಿ, ದಂಡ ಹಾಗೂ ವಿಳಂಬ ಶುಲ್ಕ ಅಥವಾ ಯಾವುದೇ ಇತರೇ ಮೊತ್ತಕ್ಕಾಗಿಖರ್ಚುಹಾಕುವುದಕ್ಕಾಗಿ, ಸಾಮಾನ್ಯ ಪೋರ್ಟಲ್ನಲ್ಲಿನ ನಮೂನೆ ಜಿಎಸ್ಟಿ ಪಿಎಂಟಿ-05ರಲ್ಲಿ ನಿರ್ವಹಿಸತಕ್ಕದ್ದು.
(2) ಯಾವುದೇ ವ್ಯಕ್ತಿಯು ಅಥವಾ ಆತನ ಪರವಾದ ಒಬ್ಬ ವ್ಯಕ್ತಿಯು, ಸಾಮಾನ್ಯ ಪೋರ್ಟಲ್ನಲ್ಲಿ ಒಂದು ಚಲನನ್ನು ನಮೂನೆ ಜಿಎಸ್ಟಿ ಪಿಎಂಟಿ-06ರಲ್ಲಿ ಸೃಷ್ಟಿಸತಕ್ಕದ್ದು ಮತ್ತು ತೆರಿಗೆ, ಬಡ್ಡಿ, ದಂಡ ಹಾಗೂ ವಿಳಂಬ ಶುಲ್ಕ ಅಥವಾ ಯಾವುದೇ ಇತರೇ ಮೊತ್ತಕ್ಕಾಗಿ ಠೇವಣಿ ಮಾಡಬೆಕಾದ ಮೊತ್ತದ ವಿವರಗಳನ್ನು ನಮೂದಿಸತಕ್ಕದ್ದು: ಪರಂತು, ಸಾಮಾನ್ಯ ಪೋರ್ಟಲ್ನಲ್ಲಿ, ಸೃಷ್ಟಿಸಲಾದ ನಮೂನೆ ಜಿಎಸ್ಟಿ ಪಿಎಂಟಿ-06ರಲ್ಲಿನ ಚಲನ್ ಹದಿನೈದು ದಿನಗಳ ಅವಧಿಯ ವರೆಗೆ ಸಿಂಧುವಾಗಿರತಕ್ಕದ್ದು:
ಮತ್ತು ಪರಂತು, ಭಾರತದ ಹೊರಗಡೆಯಿರುವ ಒಂದು ಸ್ಥಳದಿಂದ, ಏಕೀಕೃತ ಸರಕು ಮತ್ತು ಸೇವೆಗಳ ಅಧಿನಿಯಮ, 2017ರ (2017ರ ಕೇಂದ್ರ ಅಧಿನಿಯಮ 13) ಪ್ರಕರಣ 14ರಲ್ಲಿ ಉಲ್ಲೇಖಿಸಲಾದ ತೆರಿಗೆದಾಯಕನಲ್ಲದ ಆನ್ಲೈನ್ ಸ್ವೀಕರಿಸುವವನಿಗೆ, ಆನ್ಲೈನ್ ಮಾಹಿತಿ ಮತ್ತು ದತ್ತಾಂಶ ಸಂಗ್ರಹದ ಪ್ರವೇಶಾವಕಾಶ ಅಥವಾ ಮರುಪ್ರಾಪ್ತಿ ಸೇವೆಗಳ ಪೂರೈಕೆಯನ್ನು ಮಾಡುತ್ತಿರುವ ಒಬ್ಬ ವ್ಯಕ್ತಿಯು ಸಹ ಮಂಡಳಿಯ ಸಂದಾಯ ವ್ಯವಸ್ಥೆಯ ಅಂದರೆ ಮಂಡಳಿಯಿಂದ ಅಧಿಸೂಚಿಸಿದ ದಿನಾಂಕದಿಂದ ಅಬಕಾರಿ ಮತ್ತು ಸೇವಾ ತೆರಿಗೆಯಲ್ಲಿನ ವಿದ್ಯುನ್ಮಾನ ಲೆಕ್ಕದ ವ್ಯವಸ್ಥೆಯ ಮೂಲಕವು ಸಹ ಹಾಗೆ ಮಾಡಬಹುದು.] (3)ಉಪ-ನಿಯಮ (2)ರ ಅಡಿಯಲ್ಲಿನ ಠೇವಣಿಯನ್ನು ಕೆಳಕಂಡವುಗಳ ಯಾವುದಾದರೊಂದು ವಿಧಾನಗಳ ಮೂಲಕ ಮಾಡತಕ್ಕದ್ದು :
(i) ಪ್ರಾಧಿಕೃತ ಬ್ಯಾಂಕುಗಳ ಮೂಲಕ ಅಂತರ್ಜಾಲ ಬ್ಯಾಂಕಿಂಗ್;
(ii) ಪ್ರಾಧಿಕೃತ ಬ್ಯಾಂಕುಗಳ ಮೂಲಕ ಕ್ರಡಿಟ್ಕಾರ್ಡ್ ಅಥವಾ ಡೆಬಿಟ್ಕಾರ್ಡ್;
(iii) ಯಾವುದೇ ಬ್ಯಾಂಕಿನಿಂದ ರಾಷ್ಟ್ರೀಯ ವಿದ್ಯುನ್ಮಾನ ನಿಧಿ ವರ್ಗಾವಣೆ (ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ಫರ್) ಅಥವಾ ನೈಜ ಸಮಯದಲ್ಲಿ ಒಟ್ಟು ಇತ್ಯರ್ಥ (ರಿಯಲ್ ಟೈಮ್ ಗ್ರಾಸ್ ಸೆಟ್ಲ್ಮೆಂಟ್) ಅಥವಾ
(iv) ಪ್ರತಿ ತೆರಿಗೆ ಅವಧಿಗೆ ಪ್ರತಿಚಲನ್ಗೆ ಹತ್ತು ಸಾವಿರ ರೂಪಾಯಿವರೆಗಿನ ಠೇವಣಿಗಾಗಿ, ನಗದು, ಚೆಕ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ನ ಮೂಲಕ ಪ್ರಾಧಿಕೃತ ಬ್ಯಾಂಕುಗಳ ಮೂಲಕ ಕೌಂಟರ್ ಮೇಲಿನ ಸಂದಾಯ:
ಪರಂತು, ಕೌಂಟರ್ ಮೇಲಿನ ಸಂದಾಯ ಸಂದರ್ಭದಲ್ಲಿ ಪ್ರತಿ ಚಲನ್ಗೆ ಹತ್ತು ಸಾವಿರ ರೂಪಾಯಿಗಳ ಠೇವಣಿಯ ನಿರ್ಬಂಧವು ಕೆಳಕಂಡವರು ಮಾಡುವ ಠೇವಣಿಗಳಿಗೆ ಅನ್ವಯಿಸತಕ್ಕದಲ್ಲ-
(ಎ)ಸರ್ಕಾರಿ ಇಲಾಖೆಗಳು ಅಥವಾ ಆಯುಕ್ತರಿಂದ ಈ ಸಂಬಂಧದಲ್ಲಿ ಅಧಿಸೂಚಿಸಬಹುದಾದ ಯಾವುದೇ ವ್ಯಕ್ತಿಗಳಿಂದ ಮಾಡಬೇಕಾದ ಯಾವುದೇ ಇತರ ಠೇವಣಿಗಳು;
(ಬಿ) ಯುಕ್ತ ಅಧಿಕಾರಿ ಅಥವಾ ನೋಂದಣಿಯಾಗಿರಲಿ ಅಥವಾ ಇಲ್ಲದಿರಲಿ, ಯಾವುದೇ ವ್ಯಕ್ತಿಯಿಂದಸಂದಾಯವಾಗೆ ಉಳಿದಿರುವ ಬಾಕಿಯನ್ನು, ಜಪ್ತಿ ಅಥವಾ ಚರಾಸ್ತಿ ಅಥವಾ ಚಿರಾಸ್ತಿಯ ಮಾರಾಟದ ಮೂಲಕ ವಸೂಲಿ ಮಾಡುವುದನ್ನು ಒಳಗೊಂಡಂತೆ, ವಸೂಲಿ ಮಾಡಲು ಪ್ರಾಧಿಕೃತನಾದ ಯಾವುದೇ ಇತರ ಅಧಿಕಾರಿ;
(ಸಿ) ಯುಕ್ತ ಅಧಿಕಾರಿ ಅಥವಾ ಯಾವುದೇ ತನಿಖೆ ಅಥವಾ ಜಾರಿ ಚಟುವಟಿಕೆ ಅಥವಾ ಮುಂಗಡ ಠೇವಣಿಯ ಸಂದರ್ಭದಲ್ಲಿ ನಗದು, ಚೆಕ್ ಅಥವಾ ಡಿಮ್ಯಾಂಡ್ಡ್ರಾಫ್ಟ್ ರೂಪದಲ್ಲಿ ಮೊತ್ತಗಳನ್ನು ಸಂಗ್ರಹಿಸುವುದಕ್ಕಾಗಿ ಪ್ರಾಧಿಕರಣವನ್ನು ಪಡೆದಿರುವ ಯಾವುದೇ ಇತರೇ ಅಧಿಕಾರಿ;
ಮತ್ತು ಪರಂತು, ಭಾರತದ ಹೊರಗಡೆಯಿರುವ ಒಂದು ಸ್ಥಳದಿಂದ, ಏಕೀಕೃತ ಸರಕು ಮತ್ತು ಸೇವೆಗಳ ಅಧಿನಿಯಮ, 2017ರ (2017ರ ಕೇಂದ್ರ ಅಧಿನಿಯಮ 13) ಪ್ರಕರಣ 14ರಲ್ಲಿ ಉಲ್ಲೇಖಿಸಲಾದ ತೆರಿಗೆದಾಯಕನಲ್ಲದ ಆನ್ಲೈನ್ ಸ್ವೀಕರಿಸುವವನಿಗೆ, ಆನ್ಲೈನ್ ಮಾಹಿತಿ ಮತ್ತು ದತ್ತಾಂಶ ಸಂಗ್ರಹದ ಪ್ರವೇಶಾವಕಾಶ ಅಥವಾ ಮರುಪ್ರಾಪ್ತಿ ಸೇವೆಗಳ ಪೂರೈಕೆಯನ್ನು ಮಾಡುತ್ತಿರುವ ಒಬ್ಬ ವ್ಯಕ್ತಿಯು, ವಿಶ್ವವ್ಯಾಪಿ ಅಂತರಬ್ಯಾಂಕು ಹಣಕಾಸು ದೂರಸಂಪರ್ಕ ಸಂದಾಯ ಜಾಲಕ್ಕಾಗಿ ಸೊಸೈಟಿಯ ಮೂಲಕ ಅಂತರರಾಷ್ಟ್ರೀಯ ಹಣ ವರ್ಗಾವಣೆಯ ಮೂಲಕವು ಸಹ, ಮಂಡಳಿಯು ಅಧಿಸೂಚಿಸಬೇಕಿರುವ ದಿನಾಂಕದಿಂದ ಉಪನಿಯಮ (2)ರ ಅಡಿಯಲ್ಲಿ ಠೇವಣಿಯನ್ನು ಮಾಡಬಹುದು.] ವಿವರಣೆ:- ಈ ಉಪನಿಯಮದ ಉದ್ದೇಶಗಳಿಗಾಗಿ, ಚಲನ್ನಲ್ಲಿ ಸೂಚಿಸಲಾದ ಯಾವುದೇ ಮೊತ್ತವನ್ನು ಸಂದಾಯ ಮಾಡುವುದಕ್ಕಾಗಿ, ಅಂಥ ಸಂದಾಯಕ್ಕೆ ಸಂಬಂಧಿಸಿದಂತೆ ಸಂದಾಯ ಮಾಡಬೇಕಾದ ಕಮಿಷನ್ ಯಾವುದಾದರು ಇದ್ದರೆ, ಅಂಥ ಸಂದಾಯವನ್ನು ಮಾಡುವ ವ್ಯಕ್ತಿಯಿಂದ ಅದನ್ನು ಭರಿಸತಕ್ಕದ್ದು ಎಂದು ಈ ಮೂಲಕ ಸ್ಷಷ್ಟಪಡಿಸಲಾಗಿದೆ.
(4) ಅಧಿನಿಯಮದ ಅಡಿಯಲ್ಲಿ ನೊಂದಾಯಿತನಾಗಿಲ್ಲದಿರುವ ವ್ಯಕ್ತಿಯಿಂದ ಮಾಡುವುದು ಅಗತ್ಯವಿರುವ ಯಾವುದೇ ಸಂದಾಯವನ್ನು, ಸಾಮಾನ್ಯ ಪೋರ್ಟಲ್ ಮೂಲಕ ಸೃಷ್ಟಿಸಲಾದ ತಾತ್ಕಾಲಿಕ ಗುರುತಿನ ಸಂಖ್ಯೆಯ ಆಧಾರದ ಮೇಲೆ ಮಾಡತಕ್ಕದ್ದು.
(5) ಯಾವುದೇ ಬ್ಯಾಂಕಿನಿಂದ ರಾಷ್ಟ್ರೀಯ ವಿದ್ಯುನ್ಮಾನ ನಿಧಿ ವರ್ಗಾವಣೆ (ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ಫರ್) ಅಥವಾ ನೈಜ ಸಮಯದಲ್ಲಿ ಒಟ್ಟು ಇತ್ಯರ್ಥ (ರಿಯಲ್ ಟೈಮ್ ಗ್ರಾಸ್ ಸೆಟ್ಲ್ಮೆಂಟ್) ರೂಪದಲ್ಲಿ ಸಂದಾಯ ಮಾಡಿದ್ದಲ್ಲಿ, ಆಜ್ಞಾಪನಾ ನಮೂನೆಯನ್ನು ಸಾಮಾನ್ಯ ಪೋರ್ಟಲ್ನಲ್ಲಿ ಚಲನ್ನೊಂದಿಗೆ ಸೃಷ್ಟಿಸತಕ್ಕದ್ದು ಮತ್ತು ಅದನ್ನು ಸಂದಾಯವನ್ನು ಎಲ್ಲಿ ಮಾಡಲಾಗಿರುತ್ತದೆಯೋ ಆ ಬ್ಯಾಂಕಿಗೆ ಸಲ್ಲಿಸತಕ್ಕದ್ದು:
ಪರಂತು, ಆಜ್ಞಾಪನಾ ನಮೂನೆಯು ಚಲನನ್ನು ಸೃಷ್ಟಿಸಿದ ದಿನಾಂಕದಿಂದ ಹದಿನೈದು ದಿನಗಳ ಒಂದು ಅವಧಿಯವರೆಗೆ ಸಿಂಧುವಾಗಿರುತಕ್ಕದ್ದು.
(6) ಪ್ರಾಧಿಕೃತ ಬ್ಯಾಂಕಿನಲ್ಲಿ ನಿರ್ವಹಿಸಲಾಗಿರುವ ಸಂಬಂಧಿತ ಸರ್ಕಾರಿ ಖಾತೆಗೆ ಮೊತ್ತವು ಯಶಸ್ವಿಯಾಗಿ ಜಮೆಗೊಂಡ ಮೇಲೆ, ಸಂಗ್ರಹಣಾ ಬ್ಯಾಂಕಿನಿಂದ ಒಂದು ಚಲನ್ ಗುರುತಿನ ಸಂಖ್ಯೆಯನ್ನು ಸೃಷ್ಟಿಸತಕ್ಕದ್ದು ಮತ್ತು ಅದನ್ನು ಚಲನ್ನಲ್ಲಿ ಸೂಚಿಸತಕ್ಕದ್ದು.
(7) ಸಂಗ್ರಹಣಾ ಬ್ಯಾಂಕಿನಿಂದ ಒಂದು ಚಲನ್ ಗುರುತಿನ ಸಂಖ್ಯೆಯನ್ನು ಸ್ವೀಕರಿಸಿದ ಮೇಲೆ, ಸದರಿ ಮೊತ್ತವನ್ನು, ಯಾರ ಪರವಾಗಿ ಠೇವಣಿಯನ್ನು ಮಾಡಲಾಗಿದೆಯೋ ಆ ವ್ಯಕ್ತಿಯ ವಿದ್ಯುನ್ಮಾನ ನಗದು ಖಾತೆಗೆ ಜಮ ಮಾಡತಕ್ಕದ್ದು ಮತ್ತು ಇದರ ಪರಿಣಾಮವಾಗಿ ಸಾಮಾನ್ಯ ಪೋರ್ಟಲ್ ಒಂದು ರಶೀದಿಯನ್ನು ಲಭ್ಯವಾಗುವಂತೆ ಮಾಡತಕ್ಕದ್ದು.
(8)ಸಂಬಂಧಪಟ್ಟ ವ್ಯಕ್ತಿಯ ಬ್ಯಾಂಕ್ ಖಾತೆ ಅಥವಾ ಆತನ ಪರವಾಗಿ ಠೇವಣಿ ಮಾಡುವ ವ್ಯಕ್ತಿಯ ಠೇವಣಿಗೆ ಖರ್ಚುಹಾಕಲಾಗಿದ್ದು ಆದರೆ ಚಲನ್ ಗುರುತಿನ ಸಂಖ್ಯೆ ಸೃಷ್ಟಿಯಾಗದಿದ್ದಲ್ಲಿ ಅಥವಾ ಸೃಷ್ಟಿಯಾಗಿದ್ದೂ, ಸಾಮಾನ್ಯ ಪೋರ್ಟಲ್ನಲ್ಲಿ ತಿಳಿಸಲಾಗದಿದ್ದಲ್ಲಿ, ಸದರಿ ವ್ಯಕ್ತಿಯು ಸಾಮಾನ್ಯ ಪೋರ್ಟಲ್ನಲ್ಲಿ ನಮೂನೆ ಜಿಎಸ್ಟಿ ಪಿಎಂಟಿ-07ರಲ್ಲಿ ಬ್ಯಾಂಕಿಗೆ ಅಥವಾ ಠೇವಣಿಯನ್ನು ಪ್ರಾರಂಭಿಸಿದ ವಿದ್ಯುನ್ಮಾನ ಗೇಟ್ವೇ ಮೂಲಕ ನಿವೇದಿಸಬಹುದು.
(9)ಪ್ರಕರಣ 51ರ ಅಡಿಯಲ್ಲಿಮುರುಗಡೆಗೊಳಿಸಲಾದ ಅಥವಾ ಪ್ರಕರಣ 52ರ ಅಡಿಯಲ್ಲಿ ಸಂಗ್ರಹಿಸಲಾದ ಮತ್ತು ತೆರಿಗೆದಾಯಕ ವ್ಯಕ್ತಿಯಿಂದ ಸದರಿ ಮೊತ್ತವನ್ನು ಮುರುಗಡೆಗೊಳಿಸಿದವನಿಂದ ಅಥವಾ ಸಂದರ್ಭಾನುಸಾರವಾಗಿ ಸಂಗ್ರಹಿಸಿದವರಿಂದ ನಮೂನೆ ಜಿಎಸ್ಟಿಆರ್-02ರಲ್ಲಿ ಕ್ಲೇಮು ಮಾಡಲಾದ ಯಾವುದೇ ಮೊತ್ತವನ್ನು ನಿಯಮ 87ರ ಉಪಬಂಧಗಳಿಗೆ ಅನುಸಾರವಾಗಿ ವಿದ್ಯುನ್ಮಾನ ನಗದು ಖಾತೆಗೆ ಜಮೆ ಮಾಡತಕ್ಕದ್ದು.
(10)ಒಬ್ಬ ವ್ಯಕ್ತಿಯವಿದ್ಯಾನ್ಮಾನ ನಗದು ಖಾತೆಯಿಂದ, ಯಾವುದೇ ಮೊತ್ತದ ಮರುಪಾವತಿಯನ್ನು ಕ್ಲೇಮ್ ಮಾಡಿದ್ದಲ್ಲಿ, ಸದರಿ ಮೊತ್ತವನ್ನು ವಿದ್ಯುನ್ಮಾನ ನಗದು ಖಾತೆಯಲ್ಲಿ ಖರ್ಚುಹಾಕತಕ್ಕದ್ದು.
(11) ಹಾಗೆ ಸಲ್ಲಿಸಿದ ಮರುಪಾವತಿ, ಪೂರ್ಣವಾಗಿಯಾಗಲಿ ಅಥವಾ ಭಾಗಶಃವಾಗಿಯಾಗಲಿ, ತಿರಸ್ಕೃತಗೊಂಡರೆ, ಉಪನಿಯಮ (10)ರ ಅಡಿಯಲ್ಲಿ ಖರ್ಚುಹಾಕಲಾದ ಮೊತ್ತವನ್ನು, ತಿರಸ್ಕೃತವಾದುದಷ್ಟರ ಮಟ್ಟಿಗೆ, ಯುಕ್ತ ಅಧಿಕಾರಿಯು, ನಮೂನೆ ಜಿಎಸ್ಟಿ ಪಿಎಂಟಿ-03ರಲ್ಲಿನ ಒಂದು ಆದೇಶದ ಮೂಲಕ ವಿದ್ಯುನ್ಮಾನ ಜಮೆ ಖಾತೆಗೆ ಪುನರ್-ಜಮೆಗೊಳಿಸತಕ್ಕದ್ದು.
(12) ಒಬ್ಬ ನೋಂದಾಯಿತ ವ್ಯಕ್ತಿಯು, ಆತನ ವಿದ್ಯುನ್ಮಾನ ನಗದು ಖಾತೆಯಲ್ಲಿ ಯಾವುದೇ ನ್ಯೂನ್ಯತೆಗಳನ್ನು ಗಮನಿಸಿದ ತರುವಾಯ, ಅದನ್ನು ಈ ವಿಷಯದಲ್ಲಿನ ಅಸ್ತಿತ್ವದಲ್ಲಿರುವ ಕ್ಷೇತ್ರವ್ಯಾಪ್ತಿಯ ಅಧಿಕಾರಿಗೆ, ಸಾಮಾನ್ಯ ಪೋರ್ಟಲ್ನಲ್ಲಿ ನಮೂನೆ ಜಿಎಸ್ಟಿ ಪಿಎಂಟಿ-04ರಲ್ಲಿ ತಿಳಿಸತಕ್ಕದ್ದು.
ವಿವರಣೆ 1.- ಅಪೀಲು ಅಂತಿಮವಾಗಿ ತಿರಸ್ಕೃತವಾದರೆ ಮರುಪಾವತಿಯು ತಿರಸ್ಕೃತವಾಗಿದೆ ಪರಿಭಾವಿಸತಕ್ಕದ್ದು.
ವಿವರಣೆ 2.- ಈ ನಿಯಮದ ಉದ್ದೇಶಕ್ಕಾಗಿ, ಅಪೀಲು ಅಂತಿಮವಾಗಿ ತಿರಸ್ಕೃತಗೊಂಡರೆ ಅಥವಾ ಕ್ಲೇಮುದಾರ ಯುಕ್ತ ಅಧಿಕಾರಿಗೆ ಆತನು ಅಪೀಲನ್ನು ಸಲ್ಲಿಸುವುದಿಲ್ಲ ಎನ್ನುವ ಒಂದು ವಾಗ್ದಾನವನ್ನು ನೀಡಿದರೆ, ಮರುಪಾವತಿ ತಿರಸ್ಕೃತಗೊಂಡಿದೆ ಎಂದು ಪರಿಭಾವಿಸತಕ್ಕದ್ದು, ಎಂದು ಈ ಮೂಲಕ ಸ್ಷಷ್ಟಪಡಿಸಲಾಗಿದೆ.
28ಅಧಿಸೂಚನೆ ಸಂಖ್ಯೆ ಆಇ 47 ಸಿಎಸ್ಎಲ್ 2017 (4-ಸಿ/2017) ದಿನಾಂಕ 29-08-2017ರ ಮೂಲಕ ಪರಂತುಕಗಳನ್ನು ಸೇರಿಸಲಾಗಿದೆ.
29ಅಧಿಸೂಚನೆ ಸಂಖ್ಯೆ ಆಇ 47 ಸಿಎಸ್ಎಲ್ 2017 (4-ಸಿ/2017) ದಿನಾಂಕ 29-08-2017ರ ಮೂಲಕ ಎರಡನೇ ಪರಂತುಕವನ್ನು ಪ್ರತಿಯೋಜಿಸಲಾಗಿದೆ.