(1) ವ್ಯವಹಾರದ ಉದ್ದೇಶಗಳಿಗಾಗಿ ಭಾಗಶಃ ಉಪಯೋಗಿಸುತ್ತಿರುವಮತ್ತು ಭಾಗಶಃ ಇತರ ಉದ್ದೇಶಗಳಿಗಾಗಿ ಅಥವಾ ಶೂನ್ಯ-ದರದ ಪೂರೈಕೆಗಳನ್ನು ಒಳಗೊಂಡಂಥ ತೆರಿಗೆದಾಯಕ ಪೂರೈಕೆಗಳಿಗಾಗಿ ಭಾಗಶಃ ಉಪಯೋಗಿಸಿದಮತ್ತು ಭಾಗಶಃ ವಿನಾಯಿತಿ ಪೂರೈಕೆಗಳನ್ನು ಮಾಡುವುದಕ್ಕಾಗಿ ಉಪಯೋಗಿಸಲಾಗಿರುವ, ಪ್ರಕರಣ 17ರ ಉಪಪ್ರಕರಣ (1) ಅಥವಾ (2) ರ ಉಪಬಂಧಗಳನ್ನು ಆಕರ್ಷಿಸಿಸುವ, ಹೂಡುವಳಿಗಳು ಅಥವಾ ಹೂಡುವಳಿ ಸೇವೆಗಳಿಗೆ ಸಂಬಂಧಿಸಿದ ಹೂಡುವಳಿ ತೆರಿಗೆ ಜಮೆಯನ್ನು, ವ್ಯವಹಾರದ ಉದ್ದೇಶಗಳಿಗಾಗಿ ಅಥವಾ ತೆರಿಗೆದಾಯಕ ಪೂರೈಕೆಗಳನ್ನು ಮಾಡುವುದಕ್ಕೆ ಕೆಳಕಂಡ ವಿಧಾನದಲ್ಲಿ ನಿರ್ಧರಿಸತಕ್ಕದ್ದು, ಅಂದರೆ,-
(ಎ) ಒಂದು ತೆರಿಗೆ ಅವಧಿಯಲ್ಲಿನ ಹೂಡುವಳಿ ಮತ್ತು ಹೂಡುವಳಿ ಸೇವೆಗಳಲ್ಲಿ ಒಳಗೊಂಡಿರುವ ಒಟ್ಟು ಹೂಡುವಳಿ ತೆರಿಗೆಯನ್ನು ‘T’ಎಂದು ಸೂಚಿತವಾಗಲಿ;
( sಬಿ) ವ್ಯವಹಾರೇತರ ಉದ್ದೇಶಗಳಿಗಾಗಿ ಪ್ರತ್ಯೇಕವಾಗಿ ಬಳಸಲು ಉದ್ದೇಶಿಸಿರುವ ಹೂಡುವಳಿ ಮತ್ತು ಹೂಡುವಳಿ ಸೇವೆಗಳಿಗೆ ಎಂದು ಹೇಳಬಹುದಾದ “T”ಯಲ್ಲಿನ ಹೂಡುವಳಿ ತೆರಿಗೆ ಮೊತ್ತವು“T1”ಎಂದು ಸೂಚಿತವಾಗಲಿ;
(ಸಿ) ವಿನಾಯಿತಿ ಪೂರೈಕೆಗಳನ್ನು ಮಾಡುವುದಕ್ಕಾಗಿ ಪ್ರತ್ಯೇಕವಾಗಿ ಬಳಸಲು ಉದ್ದೇಶಿಸಿರುವ ಹೂಡುವಳಿ ಮತ್ತು ಹೂಡುವಳಿ ಸೇವೆಗಳಿಗೆ ಎಂದು ಹೇಳಬಹುದಾದ “T”ಯಲ್ಲಿನ ಹೂಡುವಳಿ ತೆರಿಗೆ ಮೊತ್ತವು”T2” ಎಂದು ಸೂಚಿತವಾಗಲಿ;
(ಡಿ) ಅವುಗಳ ಮೇಲೆ ಪ್ರಕರಣ 17ರ ಉಪ-ಪ್ರಕರಣ (5) ರ ಅಡಿಯಲ್ಲಿ ಜಮೆಯು ಲಭ್ಯವಿಲ್ಲದ ಹೂಡುವಳಿ ಮತ್ತು ಹೂಡುವಳಿ ಸೇವೆಗಳಿಗೆ ಸಂಬಂಧಿಸಿದಂತೆ “T”ಯಲ್ಲಿನ ಹೂಡುವಳಿ ತೆರಿಗೆ ಮೊತ್ತವು“T3”ಎಂದು ಸೂಚಿತವಾಗಲಿ;
(ಇ) ನೋಂದಾಯಿತ ವ್ಯಕ್ತಿಯ ವಿದ್ಯುನ್ಮಾನ ಜಮೆ ಖಾತೆಗೆ ಜಮೆಗೊಳಿಸಿದ ಹೂಡುವಳಿ ತೆರಿಗೆ ಜಮೆಯ ಮೊತ್ತವು “ಅ1”ಎಂದು ಸೂಚಿತವಾಗಲಿ ಮತ್ತು ಕೆಳಕಂಡಂತೆ ಲೆಕ್ಕ ಹಾಕಲ್ಪಡಲಿ-
C1= T – (T1 + T2 + T3);
(ಎಫ್) ವಿನಾಯಿತಿಯನ್ನು ಹೊರತುಪಡಿಸಿದ ಆದರೆ ಶೂನ್ಯದರದ ಪೂರೈಕೆಗಳನ್ನು ಒಳಗೊಂಡ ಪೂರೈಕೆಗಳನ್ನು ಮಾಡುವುದಕ್ಕಾಗಿ ಪ್ರತ್ಯೇಕವಾಗಿ ಬಳಸಲು ಉದ್ದೇಶಿಸಿರುವ ಹೂಡುವಳಿ ಮತ್ತು ಹೂಡುವಳಿ ಸೇವೆಗಳಿಗೆ ಎಂದು ಹೇಳಬಹುದಾದ ಹೂಡುವಳಿ ತೆರಿಗೆ ಜಮೆಯ ಮೊತ್ತವು “ಖಿ4” ಎಂದು ಸೂಚಿತವಾಗಲಿ.
(ಜಿ) ಖಿ1 + ಖಿ2 + ಖಿ3 ಮತ್ತು ಖಿ4ನೋಂದಾಯಿತ ವ್ಯಕ್ತಿಯಿಂದ, ಬೆಲೆಪಟ್ಟಿಯ ಹಂತದಲ್ಲಿ ನಮಾನೆ ಜಿಎಸ್ಟಿಆರ್ –2ರಲ್ಲಿನಿರ್ಧರಿಸತಕ್ಕದ್ದುಮತ್ತು ಘೋಷಿಸತಕ್ಕದ್ದು.
(ಹೆಚ್) ಖಂಡ (ಜಿ)ಅಡಿಯಲ್ಲಿ ಹೂಡುವಳಿ ತೆರಿಗೆ ಜಮೆಯ ನಿರ್ದಿಷ್ಟಪಡಿಸುವಿಕೆಯ ನಂತರ ಉಳಿದ ಹೂಡುವಳಿ ತೆರಿಗೆ ಜಮೆಯನ್ನು ಸಾಮಾನ್ಯ ಜಮೆ ಎಂದು ಕರೆಯತಕ್ಕದ್ದು, “ಅ2” ಎಂದು ಸೂಚಿತವಾಗಲಿ ಮತ್ತು ಕೆಳಕಂಡಂತೆ ಲೆಕ್ಕ ಹಾಕಲ್ಪಡಲಿ-
C2 = C1 - T4;
(ಐ) ವಿನಾಯಿತಿ ಪೊರೈಕೆಗಳಿಗೆ ಎಂದು ಹೇಳಬಹುದಾದ ಹೂಡುವಳಿ ತೆರಿಗೆ ಜಮೆಯ ಮೊತ್ತವು “ಆ1” ಎಂದು ಸೂಚಿತವಾಗಲಿ ಮತ್ತು ಮತ್ತು ಕೆಳಕಂಡಂತೆ ಲೆಕ್ಕ ಹಾಕಲ್ಪಡಲಿ-
D1 = (E / F) x c2 ಇದರಲ್ಲಿ, “E”ಯು ತೆರಿಗೆ ಅವಧಿಯಲ್ಲಿನ ವಿನಾಯಿತಿಪೊರೈಕೆಗಳ ಸಮಗ್ರ ಮೌಲ್ಯವಾಗಿರುವುದು ಮತ್ತು “F”ಯು ತರಿಗೆ ಅವಧಿಯಲ್ಲಿನ ನೋಂದಾಯಿತ ವ್ಯಕ್ತಿಯ ರಾಜ್ಯದಲ್ಲಿನ ಒಟ್ಟು ವಹಿವಾಟುವಾಗಿರುವುದು: ಪರಂತು ನೋಂದಾಯಿತ ವ್ಯಕ್ತಿಯು ಸದರಿ ತೆರಿಗೆ ಅವಧಿಯಲ್ಲಿ ಯಾವುದೇ ವಹಿವಾಟುನ್ನು ಹೊಂದಿರದಿದ್ದಲ್ಲಿ ಅಥವಾ ಮೇಲೆ ಹೇಳಲಾದ ಮಾಹಿತಿಯು ಲಭ್ಯವಿರದಿದ್ದಲ್ಲಿ, ಇ/ಈ ದ ಮೌಲ್ಯವನ್ನು, ಸದರಿ ಇ/ಈನ ಮೌಲ್ಯವನ್ನು ಲೆಕ್ಕಹಾಕಬೇಕಾದ ತಿಂಗಳಿನ ಹಿಂದಿನ, ಅಂಥ ವಹಿವಾಟಿನ ವಿವರಗಳು ಲಭ್ಯವಿರುವ,ಕೊನೆಯ ತೆರಿಗೆ ಅವಧಿಯ “ಇ” ಮತ್ತು “ಈ” ದ ಮೌಲ್ಯಗಳನ್ನು ತೆಗೆದುಕೊಂಡು ಲೆಕ್ಕಹಾಕತಕ್ಕದ್ದು;
ವಿವರಣೆ: ಈ ಖಂಡದ ಉದ್ದೇಶಗಳಿಗಾಗಿ, ವಿನಾಯಿತಿ ಪೊರೈಕೆಗಳ ಸಮಗ್ರ ಮೌಲ್ಯ ಮತ್ತು ಒಟ್ಟು ವಹಿವಾಟು, ಸಂವಿಧಾನದ ಏಳನೇ ಅನುಸೂಚಿಯ ಪಟ್ಟಿ Iರ ನಮೂದು 84ಮತ್ತು ಸದರಿ ಅನುಸೂಚಿಯ ಪಟ್ಟಿ II ರ ನಮೂದು 51 ಮತ್ತು 54 ರ ಅಡಿಯಲ್ಲಿ ವಿಧಿಸಲಾದ ಯಾವುದೇ ಸುಂಕಅಥವಾ ತೆರಿಗೆಯಮೊತ್ತವನ್ನು ಹೊರತುಪಡಿಸತಕ್ಕದ್ದು ಎಂದು ಈ ಮೂಲಕ ಸ್ಪಷ್ಟಪಡಿಸಲಾಗಿದೆ;
(ಜೆ) ಸಾಮಾನ್ಯ ಹೂಡುವಳಿಗಳು ಮತ್ತು ಹೂಡುವಳಿ ಸೇವೆಗಳು ಭಾಗಶಃ ವ್ಯವಹಾರದ ಉದ್ದೇಶಗಳಿಗಾಗಿ ಮತ್ತು ಭಾಗಶಃ ವ್ಯವಹಾರೇತರ ಉದ್ದೇಶಗಳಿಗಾಗಿ ಬಳಕೆಯಾದರೆ, ವ್ಯವಹಾರೇತರ ಉದ್ದೇಶಗಳಿಗಾಗಿ ಎಂದು ಹೇಳಬಹುದಾದ ಹೂಡುವಳಿ ತೆರಿಗೆ ಮೊತ್ತವು ‘D2’ ಎಂದು ಸೂಚಿತವಾಗತಕ್ಕದ್ದು, ಮತ್ತು C2ವಿನ ಶೇ. ಐದರಷ್ಟಕ್ಕೆ ಸಮನಾಗಿರತಕ್ಕದ್ದು; ಮತ್ತು
(ಕೆ) ಸಾಮಾನ್ಯ ಜಮೆಯ ಶೇಷ ಮೊತ್ತವು, ವ್ಯವಹಾರದ ಉದ್ದೇಶಗಳಿಗಾಗಿ ಮತ್ತು ಶೂನ್ಯ-ದರದ ಪೂರೈಕೆಗಳನ್ನು ಒಳಗೊಂಡಂತೆ ತೆರಿಗೆದಾಯಕ ಪೂರೈಕೆಗಳನ್ನು ಮಾಡುವುದಕ್ಕಾಗಿ ಎಂದು ಹೇಳಬಬಹುದಾದ ಅರ್ಹ ಹೂಡುವಳಿ ತೆರಿಗೆ ಜಮೆಯಾಗಿರತಕ್ಕದ್ದು ಮತ್ತು ‘C3’ ಎಂದು ಸೂಚಿತವಾಗತಕ್ಕದ್ದು, ಇಲ್ಲಿ,-
C3 = C2 – (D1 + D2)
(ಎಲ್) ‘ಅ3’ ಮೊತ್ತವನ್ನು ಕೇಂದ್ರ ತೆರಿಗೆ, ರಾಜ್ಯ ತೆರಿಗೆ, ಕೇಂದ್ರಾಡಳಿತ ತೆರಿಗೆ ಮತ್ತು ಸಮಗ್ರ ತೆರಿಗೆಯ ಹೂಡುವಳಿ ತೆರಿಗೆ ಜಮೆಗಾಗಿ ಪ್ರತ್ಯೇಕವಾಗಿ ಲೆಕ್ಕಹಾಕತಕ್ಕದ್ದು;
(ಎಮ್) ‘ಆ1’ ಮತ್ತು ‘ಆ2’ನ ಸಮಗ್ರ ಮೊತ್ತಕ್ಕೆ ಸಮಾನವಾದ ಮೊತ್ತವನ್ನು ನೋಂದಾಯಿತ ವ್ಯಕ್ತಿಯ ಹುಟ್ಟುವಳಿ ತೆರಿಗೆ ಬಾದ್ಯತೆಗೆ ಸೇರಿಸತಕ್ಕದ್ದು:
ಪರಂತು ಭಾಗಶಃ ವ್ಯವಹಾರೇತರ ಉದ್ದೇಶಗಳಿಗಾಗಿ ಮತ್ತು ಭಾಗಶಃ ವಿನಾಯಿತಿ ಪೂರೈಕೆಗಳನ್ನು ಮಾಡುವುದಕ್ಕಾಗಿ ಉಪಯೋಗಿಸಿದ ಹೂಡುವಳಿಗಳು ಅಥವಾ ಹೂಡುವಳಿ ಸೇವೆಗಳಿಗೆ ಸಂಬಂಧಿಸಿದ ಹೂಡುವಳಿ ತೆರಿಗೆ ಮೊತ್ತವು ನೋಂದಾಯಿತ ವ್ಯಕ್ತಿಯಿಂದ ಬೆಲೆಪಟ್ಟಿಯ ಹಂತದಲ್ಲಿ ಗುರಿತಿಸಲ್ಪಟ್ಟು ಮತ್ತು ಪ್ರತ್ಯೇಕಿಸಲ್ಪಪಟ್ಟಿದ್ದಲ್ಲಿ, ಅದನ್ನು ಅನುಕ್ರಮವಾಗಿ ‘ಖಿ1’ ಮತ್ತು ‘ಖಿ2’ರಲ್ಲಿ ಸೇರಿಸತಕ್ಕದ್ದು ಮತ್ತು ಅಂಥ ಹೂಡುವಳಿ ಅಥವಾ ಹೂಡುವಳಿ ಸೇವೆಗಳ ಮೇಲೆ ಬಾಕಿ ಉಳಿದ ಜಮೆಯ ಮೊತ್ತವನ್ನು ‘ಖಿ4’ರಲ್ಲಿ ಸೇರಿಸತಕ್ಕದ್ದು.
(2) ಉಪ-ನಿಯಮ (1) ರ ಅಡಿಯಲ್ಲಿ ನಿರ್ಧರಿಸಲಾದ ಹೂಡುವಳಿ ತೆರಿಗೆ ಜಮೆಯನ್ನು ಹಣಕಾಸು ವರ್ಷಕ್ಕಾಗಿ, ಸದರಿ ಉಪನಿಯಮದಲ್ಲಿ ನಿರ್ದಿಷ್ಟಪಡಿಸಿದ ವಿಧಾನದಲ್ಲಿ, ಅಂಥ ಜಮೆಯ ಸಂಬಂಧಿಸಿರುವ ಹಣಕಾಸು ವರ್ಷಮುಕ್ತಾಯದ ತರುವಾಯ ಬರುವ ಸಪ್ಟೆಂಬರ್ ತಿಂಗಳಿಗ ರಿಟರ್ನ್ ಸಲ್ಲಿಸಲು ಇರುವ ಗಡವು ದಿನಾಂಕಕ್ಕಿಂತ ಮುಂಚಿತವಾಗಿ, ಅಂತಿಮವಾಗಿ ಲೆಕ್ಕಹಾಕತಕ್ಕದ್ದು.
(ಎ)‘ಆ1’ ಮತ್ತು ‘ಆ2’ಗೆ ಸಂಬಂಧಿಸಿದಂತೆ ಅಂತಿಮವಾಗಿ ಲೆಕ್ಕಹಾಕಲಾದ ಸಮಗ್ರ ಮೊತ್ತಗಳು,ಉಪನಿಯಮ (1)ರ ಅಡಿಯಲ್ಲಿ ‘ಆ1’ ಮತ್ತು ‘ಆ2’ಗೆ ಸಂಬಂಧಿಸಿದಂತೆ ನಿರ್ಧರಿಸಲಾದ ಸಮಗ್ರ ಮೊತ್ತಗಳನ್ನು ಮೀರಿದ್ದಲ್ಲಿ, ಅಂಥ ಹೆಚ್ಚುವರಿಯನ್ನುಅಂಥ ಜಮೆಯು ಸಂಬಂಧಿಸಿರುವ ಹಣಕಾಸು ವರ್ಷ ಮುಗಿದ ನಂತರ ಬರುವ ಸಪ್ಟೆಂಬರ್ ತಿಂಗಳಿಗಿಂತ ತರುವಾಯವಾಗಿಯಲ್ಲದ ತಿಂಗಳಿನಲ್ಲಿನೋಂದಾಯಿತ ವ್ಯಕ್ತಿಯ ಹುಟ್ಟುವಳಿ ತೆರಿಗೆ ಬಾಧ್ಯತೆಗೆ ಸೇರಿಸತಕ್ಕದುಮತ್ತು ಸದರಿ ಜಮೆಯ ಮೇಲೆ ತರುವಾಯ ಬರುವ ಹಣಕಾಸು ವರ್ಷದ ಏಪ್ರಿಲ್ನ ಮೊದಲನೇ ದಿನದಿಂದ ಪ್ರಾರಂಭಗೊಂಡು ಸಂದಾಯದದಿನಾಂಕದ ವರೆಗೆ ಪ್ರಕರಣ 50ರ ಉಪಪ್ರಕರಣ (1)ರ ಅಡಿಯಲ್ಲಿ ಅಧಿಸೂಚಿಸಿದ ದರದಲ್ಲಿ ಬಡ್ಡಿಯನ್ನು ಸಂದಾಯ ಮಾಡುವುದಕ್ಕೆ ಬಾಧ್ಯನಿರತಕ್ಕದ್ದು; ಅಥವಾ
(ಬಿ) ಉಪನಿಯಮ (1)ರ ಅಡಿಯಲ್ಲಿ ‘ಆ1’ ಮತ್ತು ‘ಆ2’ಗೆ ಸಂಬಂಧಿಸಿದಂತೆ ನಿರ್ಧರಿಸಲಾದ ಸಮಗ್ರ ಮೊತ್ತಗಳು, ‘ಆ1’ ಮತ್ತು ‘ಆ2’ಗೆ ಸಂಬಂಧಿಸಿದಂತೆ ಅಂತಿಮವಾಗಿ ಲೆಕ್ಕಹಾಕಲಾದ ಸಮಗ್ರ ಮೊತ್ತಗಳನ್ನು ಮೀರಿದ್ದಲ್ಲಿ, ಅಂಥ ಹೆಚ್ಚುವರಿ ಮೊತ್ತವನ್ನುಅಂಥ ಜಮೆಯು ಸಂಬಂಧಿಸಿರುವ ಹಣಕಾಸು ವರ್ಷ ಮುಗಿದ ನಂತರ ಬರುವ ಸಪ್ಟೆಂಬರ್ ತಿಂಗಳಿಗಿಂತ ತರುವಾಯವಾಗಿಯಲ್ಲದ ತಿಂಗಳಿನ ತನ್ನ ರಿಟರ್ನಿನಲ್ಲಿನೋಂದಾಯಿತ ವ್ಯಕ್ತಿಯು ಜಮೆಯನ್ನಾಗಿ ಕ್ಲೇಮು ಮಾಡತಕ್ಕದ್ದು.