(1) ಪ್ರಕರಣ 10ರ ಅಡಿಯಲ್ಲಿ ತೆರಿಗೆಯನ್ನು ಸಂದಾಯ ಮಾಡುವ ಆಯ್ಕೆಯನ್ನು ಚಲಾಯಿಸುವ ವ್ಯಕ್ತಿಯು ಕೆಳಕಂಡ ಷರತ್ತುಗಳನ್ನು ಪಾಲಿಸತಕ್ಕದ್ದು, ಅಂದರೆ:-
(ಎ) ಆತನು ಸಾಂದರ್ಭಿಕ ತೆರಿಗೆದಾಯಕ ವ್ಯಕ್ತಿಯಾಗಲಿ ಅಥವಾ ಅನಿವಾಸಿ ತೆರಿಗೆದಾಯಕ ವ್ಯಕ್ತಿಯಾಗಲಿ ಆಗಿರಬಾರದು;
(ಬಿ) ನಿಯಮ 3ರ ಉಪನಿಯಮ (1)ರ ಅಡಿಯಲ್ಲಿನ ಆಯ್ಕೆಯನ್ನು ಬಳಸಿಕೊಂಡಲ್ಲಿ, ಗೊತ್ತುಪಡಿಸಲಾದ ದಿನದಂದು ತಾನು ದಾಸ್ತಾನಿನಲ್ಲಿ ಹೊಂದಿರುವ ಸರಕುಗಳನ್ನು ಅಂತರ ರಾಜ್ಯ ವ್ಯಾಪಾರ ಅಥವಾ ವಾಣಿಜ್ಯ ಕ್ರಮದಲ್ಲಿ ಖರೀದಿಸಿರಬಾರದು ಅಥವಾ ಭಾರತದ ಹೊರಗಿನ ಸ್ಥಳದಿಂದ ಆಮದು ಮಾಡಿಕೊಂಡಿರಬಾರದು ಅಥವಾ ರಾಜ್ಯದ ಹೊರಗಡೆ ಇರುವಆತನ ಶಾಖೆಯಿಂದ ಅಥವಾ ರಾಜ್ಯದ ಹೊರಗಡೆ ಇರುವ ತನ್ನ ಏಜೆಂಟ್ ಅಥವಾ ಪ್ರಧಾನಕರ್ತನಿಂದ ಸ್ವೀಕರಿಸಿರಬಾರದು;
(ಸಿ) ತನ್ನ ದಾಸ್ತಾನಿನಲ್ಲಿ ಹೊಂದಿರುವ ಸರಕುಗಳನ್ನು ಅನೋಂದಾಯಿತ ಪೂರೈಕೆದಾರನಿಂದ ಖರೀದಿಸಿರಬಾರದು ಮತ್ತು ಖರೀದಿಸಿದ್ದಲ್ಲಿ ಪ್ರಕರಣ 9ರ ಉಪಪ್ರಕರಣ (4)ರ ಅಡಿಯಲ್ಲಿ ಆತನು ತೆರಿಗೆ ಸಂದಾಯ ಮಾಡಿರಬೇಕು;
(ಡಿ) ಆತನು ಸರಕು ಅಥವಾ ಸೇವೆಗಳ ಅಥವಾ ಅವುಗಳೆರಡರ ಒಳಮುಖ ಪೂರೈಕೆಯ ಮೇಲೆ ಪ್ರಕರಣ 9ರ ಉಪಪ್ರಕರಣ (3) ಅಥವಾ ಉಪಪ್ರಕರಣ (4)ರ ಅಡಿಯಲ್ಲಿ ತೆರಿಗೆ ಸಂದಾಯ ಮಾಡತಕ್ಕದ್ದು;
(ಇ) ಆತನು ಹಿಂದಿನ ಹಣಕಾಸು ವರ್ಷದಲ್ಲಿ, ಪ್ರಕರಣ 10ರ ಉಪಪ್ರಕರಣ (2)ರ ಖಂಡ (ಇ)ಯ ಅಡಿಯಲ್ಲಿ ಅಧಿಸೂಚಿಸಿದ ಸರಕುಗಳ ತಯಾರಿಕೆಯಲ್ಲಿ ತೊಡಗಿದ್ದಿರಬಾರದು;
(ಎಫ್) ಆತನು “ ರಾಜಿತೆರಿಗೆಯ ತೆರಿಗೆದಾಯಕ ವ್ಯಕ್ತಿ, ಪೂರೈಕೆಗಳ ಮೇಲೆ ತೆರಿಗೆಯನ್ನು ಸಂಗ್ರಹಿಸಲು ಅರ್ಹನಲ್ಲ” ಎನ್ನುವ ಪದಗಳನ್ನು ತಾನು ನೀಡಿದ ಪೂರೈಕೆ ಬಿಲ್ಲಿನ ಮೇಲ್ಬಾಗದಲ್ಲಿ ನಮೂದಿಸತಕ್ಕದ್ದು;
(ಜಿ) ಆತನು ಆತನ ಪ್ರಧಾನ ವ್ಯವಹಾರ ಸ್ಥಳದ ಅಥವಾ ಪ್ರತಿಯೊಂದು ಹೆಚ್ಚುವರಿ ವ್ಯವಹಾರ ಸ್ಥಳ ಅಥವಾ ಸ್ಥಳಗಳಎದ್ದು ಕಾಣುವ ಸ್ಥಳದಲ್ಲಿ ಪ್ರದರ್ಶಿಸುವ ಪ್ರತಿಯೊಂದು ಸೂಚನಾಫಲಕ ಅಥವಾ ನಾಮಫಲಕದಲ್ಲಿ “ ರಾಜಿತೆರಿಗೆಯ ತೆರಿಗೆದಾಯಕ ವ್ಯಕ್ತ್ಲಿ” ಎನ್ನುವ ಪದಗಳನ್ನು ನಮೂದಿಸತಕ್ಕದ್ದು.
(2) ಪ್ರಕರಣ 10ರ ಅಡಿಯಲ್ಲಿ ತೆರಿಗೆಯನ್ನು ಸಂದಾಯ ಮಾಡುವ ನೋಂದಾಯಿತ ವ್ಯಕ್ತಿಯು ಪ್ರತಿ ವರ್ಷಕ್ಕೆ ಹೊಸದಾಗಿತಿಳಿಸುವಿಕೆ ಪತ್ರವನ್ನು ಸಲ್ಲಿಸಬೇಕಾಗಿಲ್ಲ ಮತ್ತು ಆತನು ಅಧಿನಿಯಮದ ಮತ್ತು ಈ ನಿಯಮಗಳ ಉಪಬಂಧಗಳಿಗೆ ಒಳಪಟ್ಟು ಸದರಿ ಪ್ರಕರಣದ ಅಡಿಯಲ್ಲಿ ತೆರಿಗೆಯನ್ನು ಸಂದಾಯ ಮಾಡುವುದನ್ನು ಮುಂದುವರಿಸಬಹುದು.