(1) ಒಬ್ಬ ಹೂಡುವಳಿ ಸೇವಾ ಹಂಚಿಕೆದಾರನು ಕೆಳಕಂಡವಿಧಾನದಲ್ಲಿ ಮತ್ತು ಷರತ್ತುಗಳಿಗೆ ಒಳಪಟ್ಟು ಹೂಡುವಳಿ ತೆರಿಗೆ ಜಮೆಯನ್ನು ಹಂಚಿಕೆ ಮಾಡತಕ್ಕದ್ದು, ಅಂದರೆ,-
(ಎ) ಒಂದು ತಿಂಗಳಲ್ಲಿ ಲಭ್ಯವಿರುವ ಹೂಡುವಳಿ ತೆರಿಗೆ ಜಮೆಯನ್ನು ಅದೇ ತಿಂಗಳಲ್ಲಿ ಹಂಚಿಕೆಮಾಡತಕ್ಕದ್ದು ಮತ್ತು ಅದರ ವಿವರಗಳನ್ನು ನಮೂನೆ ಜಿಎಸ್ಟಿಆರ್ –6ರಲ್ಲಿ ಈ ನಿಯಮಗಳ ಅಧ್ಯಾಯ VIIIರ ಉಪಬಂಧಗಳಿಗೆ ಅನುಸಾರವಾಗಿ ಸಲ್ಲಿಸತಕ್ಕದ್ದು.
(ಬಿ) ಹೂಡುವಳಿ ಸೇವೆ ಹಂಚಿಕೆದಾರನು, ಖಂಡ (ಡಿ)ಯ ಉಪಬಂಧಗಳಿಗೆ ಅನುಸಾರವಾಗಿ, ಅನರ್ಹ ಹೂಡುವಳಿ ತೆರಿಗೆ ಜಮೆಯ ಮೊತ್ತವನ್ನು (ಪ್ರಕರಣ 17ರ ಉಪಪ್ರಕರಣ (5) ರಉಪಬಂಧಗಳ ಅಡಿಯಲ್ಲಿ ಅನರ್ಹವಾದದು ಅಥವಾ ಅನ್ಯಥಾ) ಮತ್ತು ಅರ್ಹ ಹೂಡುವಳಿ ತೆರಿಗೆ ಜಮೆಯ ಮೊತ್ತವನ್ನು ಪ್ರತ್ಯೇಕವಾಗಿ ಹಂಚಿಕೆ ಮಾಡತಕ್ಕದ್ದು;
(ಸಿ)ಕೇಂದ್ರ ತೆರಿಗೆ, ರಾಜ್ಯ ತೆರಿಗೆ, ಕೇಂದ್ರಾಡಳಿತ ಪ್ರದೇಶ ತೆರಿಗೆ ಮತ್ತು ಏಕೀಕೃತ ತೆರಿಗೆಯ ಕಾರಣದಿಂದಾದ ಹೂಡುವಳಿ ತೆರಿಗೆ ಜಮೆಯನ್ನು ಖಂಡ (ಡಿ)ಯ ಉಪಬಂಧಗಳಿಗೆ ಅನುಸಾರವಾಗಿ ಪ್ರತ್ಯೇಕವಾಗಿ ಹಂಚಿಕೆ ಮಾಡತಕ್ಕದ್ದು.
(ಡಿ) ವಿನಾಯಿತಿ ಪೂರೈಕೆಯನ್ನು ಮಾಡುವುದರಲ್ಲಿ ತೊಡಿಗಿರುವಂತಹ ಅಥವಾ ಅನ್ಯಥಾ ಯಾವುದೇ ಕಾರಣಗಳಿಗಾಗಿ ನೊಂದಾಯಿತನಾಗದಿರುವ ಸ್ವೀಕರಿಸುವವನ(ರ)ನ್ನು ಒಳಗೊಂಡಂತೆ, ಎಲ್ಲಾ ಸ್ವೀಕರಿಸುವವರ ಒಟ್ಟಾರೆಯ ಮಧ್ಯ ಒಬ್ಬ ಸ್ವೀಕರಿಸುವವನಿಗೆ ‘R1’ ನೋಂದಾಯಿತವಾಗಿರಲಿ ಅಥವಾ ಇಲ್ಲದಿರಲಿ, ಪ್ರಕರಣ 20ರ ಉಪಪ್ರಕರಣ (2) ರ ಖಂಡ (ಡಿ) ಮತ್ತು (ಇ)ಯ ಉಪಬಂಧಗಳಿಗೆ ಅನುಸಾರವಾಗಿ ಹಂಚಿಕೆ ಮಾಡುವುದು ಅಗತ್ಯವಿರುವ ಹೂಡುವಳಿ ತೆರಿಗೆ ಜಮೆಯು, ಕೆಳಕಂಡ ಸೂತ್ರವನ್ನು ಅನ್ವಯಿಸಿ ಲೆಕ್ಕಹಾಕಬೇಕಾದ ಮೊತ್ತ,“C1”, ಆಗಿರತಕ್ಕದ್ದು C1 = (t1÷T) × C
"C1 = (t1+T)xC ಇದರಲ್ಲಿ, “C” ಯು ಹಂಚಿಕೆ ಮಾಡಬೇಕಾದ ಜಮೆಯ ಮೊತ್ತವಾಗಿದೆ “t1” ಯು R1 ವ್ಯಕ್ತಿಯ ಸಂಬಂಧಿತ ಅವಧಿಯ ಸಮಯದಲ್ಲಿನ ಪ್ರಕರಣ 20ರಲ್ಲಿ ಉಲ್ಲೇಖಿಸಿದ ವಹಿವಾಟಾಗಿದೆ ಮತ್ತು “T” ಯು ಪ್ರಕರಣ 20ರ ಉಪಬಂಧಗಳಿಗೆ ಅನುಸಾರವಾಗಿ,ಹೂಡುವಳಿ ಸೇವೆಗಳು ಯಾರಿಗೆ ಸಂಬಂಧಿಸಿದುದು ಎನ್ನಬಹುದೋ ಅಂಥ ಎಲ್ಲಾ ಸ್ವೀಕರಿಸುವವರ ಸಂಬಂಧಿತ ಅವಧಿಯ ಸಮಯದಲ್ಲಿನ ಸಮಗ್ರ ವಹಿವಾಟಾಗಿದೆ;
(ಇ) ಏಕೀಕೃತ ತೆರಿಗೆಯಕಾರಣದಿಂದಾದ ಹೂಡುವಳಿ ತೆರಿಗೆ ಜಮೆಯನ್ನು, ಪ್ರತಿಯೊಬ್ಬ ಸ್ವೀಕೃತಿದಾರನಿಗೆ ಏಕೀಕೃತ ತೆರಿಗೆಯ ಹೂಡುವಳಿ ತೆರಿಗೆ ಜಮೆಯಂತೆ ಹಂಚಿಕೆ ಮಾಡತಕ್ಕದ್ದು;
(ಎಫ್) ಕೇಂದ್ರ ತೆರಿಗೆ, ರಾಜ್ಯ ತೆರಿಗೆ ಅಥವಾ ಕೇಂದ್ರಾಡಳಿತ ಪ್ರದೇಶ ತೆರಿಗೆಯ ಕಾರಣದಿಂದಾದಹೂಡುವಳಿ ತೆರಿಗೆ ಜಮೆಯನ್ನು -
(i) ಹೂಡುವಳಿ ಸೇವೆ ಹಂಚಿಕೆದಾರನು ನೆಲೆಗೊಂಡಿರುವ ಅದೇ ರಾಜ್ಯದಲ್ಲಿಯೇ ಸ್ವೀಕರಿಸುವವನು ನೆಲೆಗೊಂಡಿರುವುದಕ್ಕೆ ಸಂಬಂಧಿಸಿದಂತೆ, ಅನುಕ್ರಮವಾಗಿ ಕೇಂದ್ರ ತೆರಿಗೆ, ರಾಜ್ಯ ತೆರಿಗೆ ಅಥವಾ ಕೇಂದ್ರಾಡಳಿತ ಪ್ರದೇಶ ತೆರಿಗೆಯ ಹೂಡುವಳಿ ತೆರಿಗೆ ಜಮೆಯಂತೆ ಹಂಚಿಕೆ ಮಾಡತಕ್ಕದ್ದು;
(ii) ಹೂಡುವಳಿ ಸೇವೆ ಹಂಚಿಕೆದಾರನು ನೆಲೆಗೊಂಡಿರುವುದನ್ನು ಹೊರತುಪಡಿಸಿದ ಬೇರೆ ರಾಜ್ಯದಲ್ಲಿಸ್ವೀಕರಿಸುವವನು ನೆಲೆಗೊಂಡಿರುವುದಕ್ಕೆ ಸಂಬಂಧಿಸಿದಂತೆ, ಏಕೀಕೃತ ತೆರಿಗೆಯಂತೆ ಹಂಚಿಕೆ ಮಾಡತಕ್ಕದ್ದು ಮತ್ತು ಹಾಗೆ ಹಂಚಿಕೆ ಮಾಡಬೇಕಾದ ಮೊತ್ತವು, ಖಂಡ (ಡಿ)ಗೆ ಅನುಸಾರವಾಗಿಅಂಥ ಸ್ವೀಕರಿಸುವವನಿಗೆ ಹಂಚಿಕೆ ಮಾಡಲು ಅರ್ಹವಾಗಿರುವಂತಹ ಕೇಂದ್ರ ತೆರಿಗೆ ಮತ್ತು ರಾಜ್ಯ ತೆರಿಗೆಯ ಅಥವಾ ಕೇಂದ್ರಾಡಳಿತ ಪ್ರದೇಶ ತೆರಿಗೆಯ ಹೂಡುವಳಿ ತೆರಿಗೆ ಜಮೆಯ ಸಮಗ್ರ ಮೊತ್ತಕ್ಕೆ ಸಮನಾಗಿರತಕ್ಕದ್ದು.
(ಜಿ) ಹೂಡುವಳಿ ಸೇವೆ ಹಂಚಿಕೆದಾರನು ನಿಯಮ 54ರ ಉಪನಿಯಮ (1)ರಲ್ಲಿ ನಿಯಮಿಸಲಾದಂತೆ ಹೂಡುವಳಿ ಸೇವೆ ಹಂಚಿಕೆಬೆಲೆಪಟ್ಟಿಯನ್ನು ಕೇವಲ ಅದನ್ನು ಹೂಡುವಳಿ ತೆರಿಗೆ ಜಮೆಯ ಹಂಚಿಕೆಗಾಗಿ ಮಾತ್ರ ನೀಡಲಾಗಿದೆ ಎಂಬುದನ್ನು ಸ್ಟಷ್ಟವಾಗಿ ಅಂಥ ಬೆಲೆ ಪಟ್ಟಿಯಲ್ಲಿ ಸೂಚಿಸಿ ನೀಡತಕ್ಕದ್ದು.
(ಹೆಚ್) ಹೂಡುವಳಿ ಸೇವೆ ಹಂಚಿಕೆದಾರನು ನಿಯಮ 54ರ ಉಪನಿಯಮ (1)ರಲ್ಲಿ ನಿಯಮಿಸಲಾದಂತೆ ಹೂಡುವಳಿ ಸೇವೆ ಹಂಚಿಕೆಯ ಜಮೆಚೀಟಿಯನ್ನು, ಈಗಾಗಲೇ ಹಂಚಿಕೆ ಮಾಡಲಾದ ಹೂಡುವಳಿ ತೆರಿಗೆ ಜಮೆಯುಯಾವುದಾದರುಕಾರಣಗಳಿಗಾಗಿಇಳಿಕೆಯಾಗಿರುವ ಸಂದರ್ಭದಲ್ಲಿ ಜಮೆಯನ್ನು ಇಳಿಕೆ ಮಾಡುವುದಕ್ಕಾಗಿ ನೀಡತಕ್ಕದ್ದು.
(ಐ) ಪೂರೈಕೆದಾರನಿಂದ ಹೂಡುವಳಿ ಸೇವೆ ಹಂಚಿಕೆದಾರನಿಗೆ ಒಂದು ಖರ್ಚುಚೀಟಿಯ ನೀಡಿಕೆಯ ಕಾರಣದಿಂದಾದಹೂಡುವಳಿ ತೆರಿಗೆ ಜಮೆಯಯಾವುದೇ ಹೆಚ್ಚುವರಿ ಮೊತ್ತವನ್ನು,(ಎ) ಯಿಂದ (ಎಫ್) ವರೆಗಿನ ಖಂಡಗಳಲ್ಲಿ ನಿರ್ದಿಷ್ಟಪಡಿಸಿರುವ ವಿಧಾನದಲ್ಲಿ ಮತ್ತು ಷರತ್ತುಗಳಿಗೆ ಒಳಪಟ್ಟು ಹಂಚಿಕೆ ಮಾಡತಕ್ಕದ್ದು ಮತ್ತು ಯಾವುದೇ ಸ್ವೀಕರಿಸುವವನಿಗೆಎನ್ನಬಹುದಾದ ಮೊತ್ತವನ್ನು ಖಂಡ (ಡಿ)ಯಲ್ಲಿ ಉಪಬಂಧಿಸಿದ ವಿಧಾನದಲ್ಲಿಲೆಕ್ಕಹಾಕತಕ್ಕದ್ದು ಮತ್ತು ನಮೂನೆ ಜಿಎಸ್ಟಿಆರ್-6ರಲ್ಲಿನ ರಿಟರ್ನಿನಲ್ಲಿ ಖರ್ಚು ಚೀಟಿಯನ್ನು ಸೇರಿಸಿದ ತಿಂಗಳಲ್ಲಿ ಅಂಥ ಜಮೆಯನ್ನು ಹಂಚಿಕೆ ಮಾಡತಕ್ಕದ್ದು;
(ಜೆ) ಪೂರೈಕೆದಾರನಿಂದ ಹೂಡುವಳಿ ಸೇವೆ ಹಂಚಿಕೆದಾರನಿಗೆ ಒಂದು ಜಮೆಚೀಟಿಯ ನೀಡಿಕೆಯ ಕಾರಣದಿಂದಾಗಿ ಇಳಿಕೆ ಮಾಡಬೇಕಾದ ಹೂಡುವಳಿ ತೆರಿಗೆ ಜಮೆಯನ್ನು ಖಂಡ(ಡಿ)ಯ ನಿಬಂಧನೆಗಳಿಗೆ ಅನುಸಾರವಾಗಿ ಹಂಚಲಾದ ಮೂಲ ಬೆಲೆಪಟ್ಟಿಯಲ್ಲಿ ಒಳಗೊಂಡಿರುವ ಹೂಡುವಳಿ ತೆರಿಗೆ ಜಮೆಯ ಅದೇ ಅನುಪಾತದಲ್ಲಿ ಪ್ರತಿಯೊಬ್ಬ ಸ್ವೀಕರಿಸುವವನಿಗೆಭಾಗ ಮಾಡತಕ್ಕದ್ದು ಮತ್ತು ಹಾಗೆ ಭಾಗ ಮಾಡಿದ ಮೊತ್ತವನ್ನು-
(i) ನಮೂನೆ ಜಿಎಸ್ಟಿಆರ್-6ರಲ್ಲಿನ ರಿಟರ್ನಿನಲ್ಲಿ ಜಮೆ ಚೀಟಿಯನ್ನು ಸೇರಿಸಿದ ತಿಂಗಳಲ್ಲಿ ಹಂಚಿಕೆ ಮಾಡಬೇಕಾದ ಮೊತ್ತದಿಂದ ಇಳಿಕೆ ಮಾಡತಕ್ಕದ್ದು; ಅಥವಾ
(ii) ಹಂಚಿಕೆಯ ಅಡಿಯಲ್ಲಿನ ಜಮೆಯ ಮೊತ್ತವು ಹೊಂದಾಣಿಕೆ ಮಾಡಬೇಕಾದ ಮೊತ್ತಕ್ಕಿಂತ ಕಡಿಮೆಯಾಗಿರುವ ಕಾರಣದಿಂದಾಗಿ ಹಾಗೆ ಭಾಗ ಮಾಡಿದ ಮೊತ್ತವು ಋಣಾತ್ಮಕವಾಗಿದ್ದಲ್ಲಿ, ಸ್ವೀಕರಿಸುವವನ ಹುಟ್ಟುವಳಿ ತೆರಿಗೆ ಬಾಧ್ಯತೆಗೆ ಸೇರಿಸತಕ್ಕದ್ದು.
(2) ಒಬ್ಬ ಹೂಡುವಳಿ ಸೇವೆ ಹಂಚಿಕೆದಾರನಿಂದ ಹಂಚಿಕೆಮಾಡಲಾದ ಹೂಡುವಳಿ ತೆರಿಗೆ ಜಮೆಯ ಮೊತ್ತವು,ಹೂಡುವಳಿ ಸೇವಾ ಹಂಚಿಕೆದಾರನಿಂದ ತಪ್ಪಾದಸ್ವೀಕರಿಸುವವನಿಗೆ ಹಂಚಿಕೆ ಹಾಗಿರುವುದನ್ನು ಒಳಗೊಂಡಂತೆ ಯಾವುದೇ ಇತರೇ ಕಾರಣಗಳಿಗಾಗಿಯಾವುದೇ ಸ್ವೀಕರಿಸುವವನಿಗೆ ನಂತರ ಇಳಿಕೆಯಾದರೆ, ಹೂಡುವಳಿ ಸೇವೆ ಜಮೆಯ ಇಳಿಕೆಗಾಗಿ, ಉಪನಿಯಮ(1) ರ ಖಂಡ (ಜೆ)ಯಲ್ಲಿ ನಿರ್ದಿಷ್ಟಪಡಿಸಿದ ಪ್ರಕ್ರಿಯೆಯೆಯು ಯಥೋಚಿತ ವ್ಯತ್ಯಾಸಗಳೊಂದಿಗೆ ಅನ್ವಯವಾಗತಕ್ಕದ್ದು.
(3) ಉಪನಿಯಮ (2)ಕ್ಕೆ ಒಳಪಟ್ಟು, ಹೂಡುವಳಿ ಸೇವೆ ಹಂಚಿಕೆದಾರನು, ಉಪನಿಯಮ (1)ರ ಖಂಡ (ಹೆಚ್)ನಲ್ಲಿ ನಿರ್ದಿಷ್ಟಪಡಿಸಿದಂತೆ ಹೂಡುವಳಿ ಸೇವೆ ಹಂಚಿಕೆ ಜಮಾ ಚೀಟಿಯ ಆಧಾರದ ಮೇಲೆ,ಅಂಥ ಜಮೆಗೆ ಹಕ್ಕುಳ್ಳಸ್ವೀಕರಿಸುವವನಿಗೆ, ಹೂಡುವಳಿ ಸೇವೆ ಹಂಚಿಕೆಬೆಲೆಪಟ್ಟಿಯನ್ನು ನೀಡತಕ್ಕದ್ದು ಮತ್ತು ಅಂಥ ಜಮಾ ಚೀಟಿ ಮತ್ತು ಬೆಲೆಪಟ್ಟಿ ನೀಡಲಾದ ತಿಂಗಳಿನ ನಮೂನೆ ಜಿಎಸ್ಟಿ –6 ರರಿಟರ್ನಿನಲ್ಲಿ ಅಂಥ ಹೂಡುವಳಿ ಸೇವೆ ಹಂಚಿಕೆ ಜಮಾ ಚೀಟಿ ಮತ್ತು ಹೂಡುವಳಿ ಸೇವೆ ಹಂಚಿಕೆಬೆಲೆಪಟ್ಟಿಯನ್ನು ಸೇರಿಸತಕ್ಕದ್ದು.