(1) ಪ್ರಕರಣ 97ರ ಉಪಪ್ರಕರಣ (1)ರ ಅಡಿಯಲ್ಲಿ ಪೂರ್ವಭಾವಿ ನಿರ್ಣಯಕ್ಕಾಗಿ ನಮೂನೆ ಜಿಎಸ್ಟಿ ಎಆರ್ಎ-1ರಲ್ಲಿ ಒಂದು ಅರ್ಜಿಯನ್ನು ಸಾಮಾನ್ಯ ಪೋರ್ಟಲ್ನಲ್ಲಿ ಹಾಕತಕ್ಕದ್ದು ಮತ್ತು ಅದು ಪ್ರಕರಣ 49ರಲ್ಲಿ ನಿರ್ದಿಷ್ಟಪಡಿಸಿದ ವಿಧಾನದಲ್ಲಿ ಠೇವಣಿ ಮಾಡಬೆಕಾದ ಐದು ಸಾವಿರ ರೂಪಾಯಿಗಳ ಶುಲ್ಕದಿಂದ ಜೊತೆಗೂಡಿರತಕ್ಕದ್ದು.
(2) ಉಪನಿಯಮ (1)ರಲ್ಲಿ ಉಲ್ಲೇಖಿಸಲಾದ ಅರ್ಜಿಯು, ಅದರಲ್ಲಿ ಒಳಗೊಂಡಿರುವ ಪರಿಶೀಲನೆ ಮತ್ತು ಅಂಥ ಅರ್ಜಿಯ ಜೊತೆಯಲ್ಲಿರುವ ಎಲ್ಲಾ ಸಂಬಂಧಪಟ್ಟ ದಸ್ತಾವೇಜುಗಳಿಗೆ ನಿಯಮ 26ರಲ್ಲಿ ನಿರ್ದಿಷ್ಟಪಡಿಸಿದ ವಿಧಾನದಲ್ಲಿ ಸಹಿಯಾಗಿರತಕ್ಕದ್ದು.