(1) ಜಂಟಿ ಆಯುಕ್ತರ ಶ್ರೇಣಿಗಿಂತ ಕಡಿಮೆಯಿಲ್ಲದ ಯುಕ್ತ ಅಧಿಕಾರಿಯು, ಪ್ರಕರಣ 67ರ ಉಪಬಂಧಗಳಿಗೆ ಅನುಸಾರವಾಗಿ ತಪಾಸಣೆ, ಶೋಧನೆ, ಮತ್ತು ಸಂದರ್ಭಾನುಸಾರವಾಗಿ ವಶಕ್ಕೆ ತೆಗೆದುಕೊಳ್ಳುವ ಉದ್ದೇಶಗಳಿಗಾಗಿ, ಒಂದು ವ್ಯವಹಾರಸ್ಥಳವನ್ನು ಅಥವಾ ಯಾವುದೇ ಇತರ ಸ್ಥಳಕ್ಕೆ ಭೇಟಿ ನೀಡಬೇಕಾಗಿದೆ ಎಂದು ನಂಬಲು ಕಾರಣಗಳನ್ನು ಹೊಂದಿದ್ದಲ್ಲಿ, ತನಗೆ ಅಧೀನನಾದ ಯಾವುದೇ ಇತರ ಅಧಿಕಾರಿಯನ್ನು, ತಪಾಸಣೆ ಅಥವಾ ಶೋಧನೆಯನ್ನು ನಡೆಸುವುದಕ್ಕಾಗಿ ಅಥವಾ ಸಂದರ್ಭಾನುಸಾರವಾಗಿ ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಬಾಧ್ಯವಿರುವ ಸರಕುಗಳು, ದಸ್ತಾವೇಜುಗಳು, ಪುಸ್ತಕಗಳು ಅಥವಾ ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳುವುದಕ್ಕಾಗಿ ಪ್ರಾಧಿಕೃತಗೊಳಿಸಿ, ನಮೂನೆ ಜಿಎಸ್ಟಿ ಐಎನ್ಎಸ್-01ರಲ್ಲಿ ಪ್ರಾಧಿಕೃತತೆಯನ್ನು ನೀಡತಕ್ಕದ್ದು.
(2) ಪ್ರಕರಣ 67ರ ಉಪಪ್ರಕರಣ (2)ರ ಅಡಿಯಲ್ಲಿ ಯಾವುದೇ ಸರಕುಗಳು, ದಸ್ತಾವೇಜುಗಳು, ಪುಸ್ತಕಗಳು ಅಥವಾ ವಸ್ತುಗಳು ವಶಕ್ಕೆ ತೆಗೆದುಕೊಳ್ಳುವುದಕ್ಕೆ ಬಾಧ್ಯವಿದ್ದಲ್ಲಿ, ಯುಕ್ತ ಅಧಿಕಾರಿಯು ಅಥವಾ ಒಬ್ಬ ಪ್ರಾಧಿಕೃತ ಅಧಿಕಾರಿಯು ವಶಕ್ಕೆ ತೆಗೆದುಕೊಳ್ಳುವ ಆದೇಶವನ್ನು ನಮೂನೆ ಜಿಎಸ್ಟಿ ಐಎನ್ಎಸ್-02ರಲ್ಲಿ ಮಾಡತಕ್ಕದ್ದು.
(3) ಯುಕ್ತ ಅಧಿಕಾರಿಯು ಅಥವಾ ಒಬ್ಬ ಪ್ರಾಧಿಕೃತ ಅಧಿಕಾರಿಯು, ಅಂಥ ಸರಕುಗಳು ಅಥವಾ ವಸ್ತುಗಳನ್ನು ಯಾರ ಅಭಿರಕ್ಷಣೆಯಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆಯೋ ಅಂಥ ಸರಕುಗಳ ಮಾಲೀಕನಿಗೆ ಅಥವಾ ಅಭಿರಕ್ಷಕನಿಗೆ, ಅಂಥ ಸರಕುಗಳು ಅಥವಾ ವಸ್ತುಗಳ ಅಭಿರಕ್ಷಣೆಯನ್ನು ಸುರಕ್ಷಿತ ಸುಸ್ಥಿತಿಯಲ್ಲಿಡುವುದಕ್ಕಾಗಿ ವಹಿಸಿಸಕೊಡಬಹುದು ಮತ್ತು ಸದರಿ ವ್ಯಕ್ತಿಯು ಅಂಥ ಅಧಿಕಾರಿಯ ಪೂರ್ವಾನುಮತಿಯಿಲ್ಲದೆ ಸರಕುಗಳನ್ನು ತೆಗೆಯುವುದು, ಬಿಟ್ಟುಕೊಡುವುದು ಅಥವಾ ಅನ್ಯಥಾ ವ್ಯವಹರಿಸತಕ್ಕದ್ದಲ್ಲ.
(4) ಯಾವುದೇ ಅಂಥ ಸರಕುಗಳನ್ನು ವಶಕ್ಕೆ ತೆಗೆದುಕೊಳ್ಳುವುದಕ್ಕೆ ಕಾರ್ಯಸಾಧ್ಯವಾಗದಿದ್ದಲ್ಲಿ, ಯುಕ್ತ ಅಧಿಕಾರಿಯು ಅಥವಾ ಪ್ರಾದಿಕೃತ ಅಧಿಕಾರಿಯು, ಸರಕುಗಳ ಮಾಲೀಕನಿಗೆ ಅಥವಾ ಅಭಿರಕ್ಷಕನಿಗೆ, ಅಂಥ ಅಧಿಕಾರಿಯ ಪೂರ್ವಾನುಮತಿಯಿಲ್ಲದೆ ಸರಕುಗಳನ್ನು ತೆಗೆಯುವುದು, ಬಿಟ್ಟುಕೊಡುವುದು ಅಥವಾ ಅನ್ಯಥಾ ವ್ಯವಹರಿಸತಕ್ಕದ್ದಲ್ಲ ಎನ್ನುವ ನಿಷೇಧದ ಒಂದು ಆದೇಶವನ್ನು ನಮೂನೆ ಜಿಎಸ್ಟಿ ಐಎನ್ಎಸ್-03ರಲ್ಲಿ ನೀಡಬಹುದು.
(5) ಸರಕುಗಳು, ದಸ್ತಾವೇಜುಗಳು, ಪುಸ್ತಕಗಳು ಅಥವಾ ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳುವ ಅಧಿಕಾರಿಯು, ಅಂಥ ಸರಕುಗಳು, ದಸ್ತಾವೇಜುಗಳು, ಪುಸ್ತಕಗಳು ಅಥವಾ ವಸ್ತುಗಳ ಅನ್ವಯವಾಗುವಲ್ಲಿ, ಇತರ ವಿಷಯಗಳ ನಡುವೆ, ವಿವರಣೆ, ಪ್ರಮಾಣ ಅಥವಾ ಘಟಕ, ರಚನೆ, ಗುರುತು ಅಥವಾ ಮಾದರಿಯನ್ನು ಒಳಗೊಂಡಿರುವ ತಪಶೀಲು ಪಟ್ಟಿಯನ್ನು, ಸಿದ್ಧಪಡಿಸತಕ್ಕದ್ದು ಮತ್ತು ಯಾರಿಂದ ಅಂಥ ಸರಕುಗಳು, ದಸ್ತಾವೇಜುಗಳು, ಪುಸ್ತಕಗಳು ಅಥವಾ ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆಯೋ, ಆ ವ್ಯಕ್ತಿಯಿಂದ ಸಹಿ ಪಡೆಯತಕ್ಕದ್ದು.
5901-07-2017ರಿಂದ ಜಾರಿಗೆ ಬರುವಂತೆ ಅಧಿಸೂಚನೆ ಆಇ 47 ಸಿಎಸ್ಎಲ್ 2017 (4-ಎ/2017) ದಿನಾಂಕ 05- 07-2017ರ ಮೂಲಕ, ಸೇರಿಸಲಾಗಿದೆ