ಪೂರ್ವಭಾವಿ ನಿರ್ಣಯದ ಅಪೀಲು ಪ್ರಾಧಿಕಾರದಿಂದ ಉಚ್ಚರಿತವಾದ ಮತ್ತು ಸದಸ್ಯರುಗಳಿಂದ ಯುಕ್ತವಾಗಿ ಸಹಿ ಮಾಡಿದ ಪೂರ್ವಭಾವಿ ನಿರ್ಣಯದ ಒಂದು ಪ್ರತಿಯನ್ನು, ಅಧಿನಿಯಮದ ಪ್ರಕರಣ 101ರ ಉಪಪ್ರಕರಣ (4)ರ ಉಪಬಂಧಗಳಿಗೆ ಅನುಸಾರವಾಗಿ ಕೆಳಕಂಡವರುಗಳಿಗೆ ಕಳುಹಿಸಿಕೊಡತಕ್ಕದ್ದು-
(ಎ) ಅರ್ಜಿದಾರ ಮತ್ತು ಅಪೀಲುದಾರ;
(ಬಿ) ಕೇಂದ್ರ ತೆರಿಗೆ ಮತ್ತು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ತೆರಿಗೆಯ ಸಂಬಂಧಪಟ್ಟ ಅಧಿಕಾರಿ;
(ಸಿ) ಕೇಂದ್ರ ತೆರಿಗೆ ಮತ್ತು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ತೆರಿಗೆಯ ಕ್ಷೇತ್ರವ್ಯಾಪ್ತಿಯ ಅಧಿಕಾರಿ; ಮತ್ತು
(ಡಿ) ಪ್ರಾಧಿಕಾರ.
39ಅಧಿಸೂಚನೆ ಸಂಖ್ಯೆ ಆಇ 47 ಸಿಎಸ್ಎಲ್ 2017 (4-ಸಿ/2017) ದಿನಾಂಕ 29-08-2017ರ ಮೂಲಕ ಪ್ರತಿಯೋಜಿಸಲಾಗಿದೆ.
40[107ಎ. ಖುದ್ದು ಸಲ್ಲಿಕೆ ಮತ್ತು ಸಂಸ್ಕರಣೆ,- ಇದರಲ್ಲಿ ನಿಯಮಿಸಲಾದ ಯಾವುದೇ ಪ್ರಕ್ರಿಯೆ ಅಥವಾ ಕಾರ್ಯವಿಧಾನಕ್ಕೆ, ಒಂದು ಅರ್ಜಿಯ, ತಿಳಿಸುವಿಕೆಯ, ಉತ್ತರದ, ಘೋಷಣೆಯ, ವಿವರ ಪತ್ರದ ವಿದ್ಯುನ್ಮಾನ ರೀತಿಯಲ್ಲಿನ ಸಲ್ಲಿಕೆಯ ಯಾವುದೇ ಉಲ್ಲೇಖಕ್ಕೆ ಅಥವಾ ಸಾಮಾನ್ಯ ಪೋರ್ಟಲ್ನಲ್ಲಿ ಒಂದು ಸೂಚನಾ ಪತ್ರ, ಆದೇಶ ಅಥವಾ ಪ್ರಮಾಣ ಪತ್ರ ನೀಡಿಕೆಗೆ ಸಂಬಂಧಿಸಿದಂತೆ ಈ ಅಧ್ಯಾಯದಲ್ಲಿ ಏನೇ ಒಳಗೊಂಡಿದ್ದಾಗ್ಯೂ, ಆ ಪ್ರಕ್ರಿಯೆ ಅಥವಾ ಕಾರ್ಯ ವಿಧಾನವು, ಸದರಿ ಅರ್ಜಿಯ, ತಿಳಿಸುವಿಕೆಯ, ಘೋಷಣೆಯ, ವಿವರ ಪತ್ರದ ಖದ್ದು ಸಲ್ಲಿಕೆ ಅಥವಾ ಸದರಿ ಸೂಚನಾ ಪತ್ರ, ಆದೇಶ ಅಥವಾ ಪ್ರಮಾಣ ಪತ್ರದ ಖುದ್ದು ನೀಡಿಕೆಯನ್ನು ಒಳಗೊಳ್ಳತಕ್ಕದ್ದು.]