(1) ಅನಿವಾಸಿ ತೆರಿಗೆದಾಯಕ ವ್ಯಕ್ತಿಯನ್ನು, ಪ್ರಕರಣ 51ರ ಅಡಿಯಲ್ಲಿ ಮೂಲದಲ್ಲಿ ತೆರಿಗೆಯನ್ನು ಮುರುಗಡೆ ಮಾಡಲು ಅಗತ್ಯಪಡಿಸಿದ ವ್ಯಕ್ತಿಯನ್ನು, ಪ್ರಕರಣ 52ರ ಅಡಿಯಲ್ಲಿ ಮೂಲದಲ್ಲಿ ತೆರಿಗೆಯನ್ನು ಸಂಗ್ರಹಿಸುವುದು ಮಾಡಲು ಅಗತ್ಯಪಡಿಸಿದ ವ್ಯಕ್ತಿಯನ್ನುಮತ್ತು ಭಾರತದ ಹೊರಗಡೆಯಿರುವ ಸ್ಥಳದಿಂದ, ಏಕೀಕೃತ ಸರಕು ಮತ್ತು ಸೇವೆಗಳ ಅಧಿನಿಯಮ, 2017ರ (2017ರ ಕೇಂದ್ರ ಅಧಿನಿಯಮ 13) ಪ್ರಕರಣ 14ರಲ್ಲಿ ಉಲ್ಲೇಖಿಸಲಾದ ತೆರಿಗೆದಾಯಕನಲ್ಲದ ಆನ್ಲೈನ್ನಲ್ಲಿ ಸ್ವೀಕರಿಸುವವನಿಗೆ, ಆನ್ಲೈನ್ ಮಾಹಿತಿ ಮತ್ತು ದತ್ತಾಂಶ ಸಂಗ್ರಹದ ಪ್ರವೇಶಾವಕಾಶ ಅಥವಾ ಮರುಪ್ರಾಪ್ತಿ ಸೇವೆಗಳ ಪೂರೈಕೆಯನ್ನು ಮಾಡುತ್ತಿರುವ ವ್ಯಕ್ತಿಯನ್ನು ಹೊರತು ಪಡಿಸಿದಂತೆ, ಪ್ರಕರಣ 25ರ ಉಪಪ್ರಕರಣ (1)ರ ಅಡಿಯಲ್ಲಿ ನೋಂದಣಿ ಮಾಡಿಸಿಕೊಳ್ಳಲು ಬಾಧ್ಯನಿರುವ ಪ್ರತಿಯೊಬ್ಬ ವ್ಯಕ್ತಿಯು ಮತ್ತು ಪ್ರಕರಣ 25ರ ಉಪಪ್ರಕರಣ (3)ರ ಅಡಿಯಲ್ಲಿ ನೋಂದಣಿಯನ್ನು ಕೋರುವ ಪ್ರತಿಯೊಬ್ಬ ವ್ಯಕ್ತಿಯು (ಈ ಅಧ್ಯಾಯದಲ್ಲಿ ಇನ್ನು ಮುಂದೆ “ಅರ್ಜಿದಾರ” ಎಂದು ಉಲ್ಲೇಖಿಸಲಾಗಿದೆ) ನೋಂದಣಿಗಾಗಿ ಅರ್ಜಿ ಸಲ್ಲಿಸುವ ಮುನ್ನ, ಆತನು ಸಾಮಾನ್ಯ ಪೋರ್ಟಲ್ನಲ್ಲಿ, ನೇರವಾಗಿಯಾಗಲಿ ಅಥವಾ ಆಯುಕ್ತರಿಂದ ಅಧಿಸೂಚಿಸಲಾದ ಒಂದು ಸಹಾಯ ಕೇಂದ್ರದ ಮೂಲಕವಾಗಿಯಾಗಲಿ, ತನ್ನ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್), ಮೊಬೈಲ್ ಸಂಖ್ಯೆ, ಮಿಂಚೋಲೆ ವಿಳಾಸ, ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವನ್ನು ನಮೂನೆ ಜಿಎಸ್ಟಿ ಆರ್ಇಜಿ-01 ದ ಭಾಗ-ಎನಲ್ಲಿ ಘೋಷಿಸತಕ್ಕದ್ದು:
ಪರಂತು, ವಿಶೇಷ ಆರ್ಥಿಕ ವಲಯದಲ್ಲಿ ಘಟಕ(ಗಳನ್ನು) ವನ್ನು ಹೊಂದಿರುವ ಅಥವಾ ವಿಶೇಷ ಆರ್ಥಿಕ ವಲಯದ ಅಭಿವೃದ್ಧಿದಾರನಾದ ವ್ಯಕ್ತಿಯು ವಿಶೇಷ ಆರ್ಥಿಕ ವಲಯದ ಹೊರಗೆ ಇರುವಅವನ ಇತರ ಘಟಕಗಳಿಂದ ಭಿನ್ನವಾದ ವ್ಯವಹಾರ ಶ್ರೇಣಿನ್ನಾಗಿ ನೋಂದಣಿ ಮಾಡಿಕೊಳ್ಳಲು ಒಂದು ಪ್ರತ್ಯೇಕ ಅರ್ಜಿಯನ್ನು ಸಲ್ಲಿಸತಕ್ಕದ್ದು:
ಮತ್ತು ಪರಂತು, ಹೂಡುವಳಿ ಸೇವೆ ಹಂಚಿಕೆದಾರನಾಗಿರುವ ಪ್ರತಿಯೊಬ್ಬ ವ್ಯಕ್ತಿಯು, ಅಂಥ ಹೂಡುವಳಿ ಸೇವೆ ಹಂಚಿಕೆದಾರನಾಗಿನೋಂದಣಿ ಮಾಡಿಕೊಳ್ಳಲು ಒಂದು ಪ್ರತ್ಯೇಕ ಅರ್ಜಿಯನ್ನು ಸಲ್ಲಿಸತಕ್ಕದ್ದು:
(2) (ಎ) ಶಾಶ್ವತ ಖಾತೆ ಸಂಖ್ಯೆಯನ್ನು ನೇರ ತೆರಿಗೆಗಳ ಕೇಂದ್ರ ಮಂಡಳಿಯು ನಿರ್ವಹಿಸಿರುವ ದತ್ತಾಂಶ ಸಂಗ್ರಹದಿಂದ ಸಾಮಾನ್ಯ ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ಸಿಂಧುಗೊಳಿಸತಕ್ಕದ್ದು;
(ಬಿ) ಉಪನಿಯಮ (1)ರ ಅಡಿಯಲ್ಲಿ ಘೋಷಿಸಲಾದ ಮೊಬೈಲ್ ಸಂಖ್ಯೆಯನ್ನು ಸದರಿ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ ಒಂದು ಬಾರಿಯ ಪಾಸ್ವರ್ಡ್ ಮೂಲಕ ಪರಿಶೀಲಿಸತಕ್ಕದ್ದು;
(ಸಿ)ಉಪನಿಯಮ (1)ರ ಅಡಿಯಲ್ಲಿ ಘೋಷಿಸಲಾದ ಮಿಂಚೋಲೆಯ ವಿಳಾಸವನ್ನು ಸದರಿ ಮಿಂಚೋಲೆಯ ವಿಳಾಸಕ್ಕೆ ಕಳುಹಿಸಲಾದ ಪ್ರತ್ಯೇಕ ಒಂದು ಬಾರಿಯ ಪಾಸ್ವರ್ಡ್ ಮೂಲಕ ಪರಿಶೀಲಿಸತಕ್ಕದ್ದು;
(3) ಶಾಶ್ವತ ಖಾತೆ ಸಂಖ್ಯೆ, ಮೊಬೈಲ್ ಸಂಖ್ಯೆ, ಮತ್ತು ಮಿಂಚೋಲೆ ವಿಳಾಸಗಳ ಯಶಸ್ವಿ ಪರಿಶೀಲನೆಯ ನಂತರ, ಒಂದು ತಾತ್ಕಾಲಿಕ ಉಲ್ಲೇಖ ಸಂಖ್ಯೆಯನ್ನು ಸೃಷ್ಟಿಸತಕ್ಕದ್ದು ಮತ್ತು ಸದರಿ ಮೊಬೈಲ್ ಸಂಖ್ಯೆ ಮತ್ತು ಮಿಂಚೋಲೆಯ ವಿಳಾಸದ ಮೂಲಕ ಅರ್ಜಿದಾರನಿಗೆ ತಿಳಿಸತಕ್ಕದ್ದು.
(4) ಉಪನಿಯಮ (3)ರ ಅಡಿಯಲ್ಲಿ ಸೃಷ್ಟಿಸಲಾದ ಉಲ್ಲೇಖ ಸಂಖ್ಯೆಯನ್ನು ಉಪಯೋಗಿಸಿಕೊಂಡು ಅರ್ಜಿದಾರನು, ಯುಕ್ತವಾಗಿ ಸಹಿಮಾಡಿದ ಅಥವಾ ವಿದ್ಯುನ್ಮಾನ ಪರಿಶೀಲನಾ ಕೋಡ್ನ ಮುಖಾಂತರ ಪರಿಶೀಲಿಸಲಾದ, ನಮೂನೆ ಜಿಎಸ್ಟಿ ಆರ್ಇಜಿ-01ದ ಭಾಗ-ಬಿನಲ್ಲಿ ಒಂದು ಅರ್ಜಿಯನ್ನು, ಸದರಿ ನಮೂನೆಯಲ್ಲಿ ನಿರ್ದಿಷ್ಟಪಡಿಸಿದ ದಸ್ತಾವೇಜುಗಳೊಂದಿಗೆ, ಸಾಮಾನ್ಯ ಪೋರ್ಟಲ್ನಲ್ಲಿ, ನೇರವಾಗಿಯಾಗಲಿ ಅಥವಾ ಆಯುಕ್ತರಿಂದ ಅಧಿಸೂಚಿಸಲಾದ ಒಂದು ಸಹಾಯ ಕೇಂದ್ರದ ಮೂಲಕವಾಗಿಯಾಗಲಿ, ವಿದ್ಯುನ್ಮಾನ ರೀತಿಯಲ್ಲಿ ಸಲ್ಲಿಸತಕ್ಕದ್ದು.
(5) ಉಪನಿಯಮ (4)ರ ಅಡಿಯಲ್ಲಿ ಅರ್ಜಿಯನ್ನು ಸ್ವೀಕರಿಸಿದ ನಂತರ, ಅರ್ಜಿದಾರನಿಗೆ ನಮೂನೆ ಜಿಎಸ್ಟಿ ಆರ್ಇಜಿ-02ರಲ್ಲಿ ಒಂದು ಸ್ವೀಕೃತಿಯನ್ನು ವಿದ್ಯುನ್ಮಾನ ರೀತಿಯಲ್ಲಿ ನೀಡತಕ್ಕದ್ದು.
(6) ಸಾಂದರ್ಭಿಕ ತೆರಿಗೆದಾಯಕ ವ್ಯಕ್ತಿಯಾಗಿ ನೋಂದಣಿಗೆ ಅರ್ಜಿಯನ್ನು ಸಲ್ಲಿಸುವ ಒಬ್ಬ ವ್ಯಕ್ತಿಗೆ, ಪ್ರಕರಣ 27ರ ಉಪಬಂಧಗಳಿಗೆ ಅನುಸಾರವಾಗಿ ತೆರಿಗೆಯ ಮುಂಗಡ ಠೇವಣಿಯನ್ನು ಇಡುವ ಸಲುವಾಗಿ ಒಂದು ತಾತ್ಕಾಲಿಕ ಉಲ್ಲೇಖ ಸಂಖ್ಯೆಯನ್ನು ನೀಡತಕ್ಕದ್ದು ಮತ್ತು ಉಪನಿಯಮ (5)ರ ಅಡಿಯಲ್ಲಿ ಸ್ವೀಕೃತಿಯನ್ನು ಸದರಿ ಠೇವಣಿ ಇಟ್ಟ ನಂತರ ಮಾತ್ರ ನೀಡತಕ್ಕದ್ದು.