(1) ಪ್ರಕರಣ 112ರ ಉಪಪ್ರಕರಣ (1)ರ ಅಡಿಯಲ್ಲಿ ಅಪೀಲು ನ್ಯಾಯಾಧಿಕರಣಕ್ಕೆ ಒಂದು ಅಪೀಲನ್ನು ನಮೂನೆ ಜಿಎಸ್ಟಿ ಎಪಿಎಲ್-05ರಲ್ಲಿ, ಸಂಬಂಧಪಟ್ಟ ದಸ್ತಾವೇಜುಗಳೊಂದಿಗೆ, ವಿದ್ಯುನ್ಮಾನ ರೀತಿಯಾಗಲಿ ಅಥವಾ ರಿಜಿಸ್ಟ್ರಾರ್ರಿಂದ ಅಧಿಸೂಚಸಬಹುದಾದಂತೆ ಅನ್ಯಥಾ ರೀತಿಯಲ್ಲಾಗಲಿ, ಸಾಮಾನ್ಯ ಪೋರ್ಟಲ್ನಲ್ಲಿ ಸಲ್ಲಿಸತಕ್ಕದ್ದು, ಮತ್ತು ಅಪೀಲುದಾರನಿಗೆ ಕೂಡಲೇ ಒಂದು ತಾತ್ಕಾಲಿಕ ಸ್ವೀಕೃತಿಯನ್ನು ನೀಡತಕ್ಕದ್ದು.
(2) ಪ್ರಕರಣ 112ರ ಉಪಪ್ರಕರಣ (5)ರ ಅಡಿಯಲ್ಲಿ ಅಪೀಲು ನ್ಯಾಯಾಧಿಕರಣಕ್ಕೆ ಒಂದು ಎದುರು ಆಕ್ಷೇಪಣೆಗಳ ವಿವರಣ ಪತ್ರವನ್ನು ನಮೂನೆ ಜಿಎಸ್ಟಿ ಎಪಿಎಲ್-06ರಲ್ಲಿ, ವಿದ್ಯುನ್ಮಾನ ರೀತಿಯಾಗಲಿ ಅಥವಾ ರಿಜಿಸ್ಟ್ರಾರ್ರಿಂದ ಅಧಿಸೂಚಸಬಹುದಾದಂತೆ ಅನ್ಯಥಾ ರೀತಿಯಲ್ಲಾಗಲಿ, ಸಲ್ಲಿಸತಕ್ಕದ್ದು,
(3) ಅಪೀಲು ಮತ್ತು ಎದುರು ಆಕ್ಷೇಪಣೆಗಳ ವಿವರಣ ಪತ್ರವನ್ನು, ನಿಯಮ 26ರಲ್ಲಿ ನಿರ್ದಿಷ್ಟಪಡಿಸಿರುವ ವಿಧಾನದಲ್ಲಿ ಸಹಿಮಾಡಿರತಕ್ಕದ್ದು.
(4) ಅದರ ವಿರುದ್ಧವಾಗಿ ಅಪೀಲು ಮಾಡಲಾಗಿರುವ ನಿರ್ಣಯ ಅಥವಾ ಆದೇಶದ ಪ್ರಮಾಣೀಕರಿಸಿದ ಪ್ರತಿಯನ್ನು ಉಪನಿಯಮ (5)ರಲ್ಲಿ ನಿರ್ದಿಷ್ಟಪಡಿಸಿದ ಶುಲ್ಕದೊಂದಿಗೆ, ಉಪನಿಯಮ (1)ರ ಅಡಿಯಲ್ಲಿ, ಅಪೀಲನ್ನು ಸಲ್ಲಿಸಿದ ಏಳು ದಿನಗಳ ಒಳಗಾಗಿ ರಿಜಿಸ್ಟ್ರಾರ್ಗೆ ಸಲ್ಲಿಸತಕ್ಕದ್ದು ಮತ್ತು ತದನಂತರ ರಿಜಿಸ್ಟ್ರಾರ್ರಿಂದ, ಅಪೀಲು ಸಂಖ್ಯೆಯನ್ನು ಸೂಚಿಸಿರುವ ಒಂದು ಅಂತಿಮ ಸ್ವೀಕೃತಿಯನ್ನು, ನಮೂನೆ ಜಿಎಸ್ಟಿ ಎಪಿಎಲ್-02ರಲ್ಲಿ ನೀಡತಕ್ಕದ್ದು.
ಪರಂತು, ನಿರ್ಣಯ ಅಥವಾ ಆದೇಶದ ಪ್ರಮಾಣೀಕರಿಸಿದ ಪ್ರತಿಯನ್ನು ನಮೂನೆ ಜಿಎಸ್ಟಿ ಎಪಿಎಲ್-05ನ್ನು ಸಲ್ಲಿಸಿದ ಏಳುದಿನಗಳ ಒಳಗಾಗಿ ಸಲ್ಲಿಸಿದ್ದಲ್ಲಿ, ಅಪೀಲಿನ ಸಲ್ಲಿಸುವಿಕೆಯ ದಿನಾಂಕವು ತಾತ್ಕಾಲಿಕ ಸ್ವೀಕೃತಿಯನ್ನು ನೀಡಿದ ದಿನಾಂಕವಾಗಿರತಕ್ಕದ್ದು ಮತ್ತು ಸದರಿ ಪ್ರತಿಯನ್ನು ಏಳು ದಿನಗಳ ನಂತರ ಸಲ್ಲಿಸಿದ್ದಲ್ಲಿ, ಅಪೀಲಿನ ಸಲ್ಲಿಸುವಿಕೆಯ ದಿನಾಂಕವು ಅಂಥ ಪ್ರತಿಯನ್ನು ಸಲ್ಲಿಸಿದ ದಿನಾಂಕವಾಗಿರತಕ್ಕದ್ದು ವಿವರಣೆ.- ಈ ನಿಯಮದ ಉಪಬಂಧಗಳಿಗಾಗಿ, ಅಪೀಲು ಸಂಖ್ಯೆಯನ್ನು ಸೂಚಿಸಿದ ಒಂದು ಅಂತಿಮ ಸ್ವೀಕೃತಿಯನ್ನು ನೀಡಿದಾಗ ಮಾತ್ರ ಅಪೀಲು ಸಲ್ಲಿಕೆಯಾಗಿದೆ ಎಂದು ಪರಿಗಣಿಸತಕ್ಕದ್ದು.
(5) ಅಪೀಲು ಅಥವಾ ಒಂದು ಅಪೀಲಿನ ಪುನಃಸ್ಥಾಪನೆಗಾಗಿ ಶುಲ್ಕವು, ಗರಿಷ ಇಪ್ಪತ್ತೈದು ಸಾವಿರ ರೂಪಾಯಿಗಳಿಗೆ ಒಳಪಟ್ಟು ಅದರ ವಿರುದ್ಧವಾಗಿ ಅಪೀಲು ಮಾಡಲಾಗಿರುವ ಆದೇಶದಲ್ಲಿ, ನಿರ್ಧರಿಸಲಾಗಿರುವ ತೆರಿಗೆ ಅಥವಾ ಒಳಗೊಂಡ ಹೂಡುವಳಿ ತೆರಿಗೆ ಜಮೆ, ಅಥವಾ ಒಳಗೊಂಡಿರುವ ತೆರಿಗೆ ಅಥವಾ ಹೂಡುವಳಿ ತೆರಿಗೆ ಜಮೆಯಲ್ಲಿನ ವ್ಯತ್ಯಾಸ ಅಥವಾ ಜುಲ್ಮಾನೆ, ಶುಲ್ಕ ಅಥವಾ ದಂಡದ ಮೊತ್ತದ ಪ್ರತಿ ಒಂದು ಲಕ್ಷ ರೂಪಾಯಿಗಳಿಗೆ ಒಂದು ಸಾವಿರ ರೂಪಾಯಿಗಳಾಗಿರತಕ್ಕದ್ದು. (6) ಪ್ರಕರಣ 112ರ ಉಪಪ್ರಕರಣ (10)ರ ಅಡಿಯಲ್ಲಿ ಉಲ್ಲೇಖಿಸಲಾದ ತಪ್ಪುಗಳ ಸರಿಪಡಿಸುವಿಕೆಗಾಗಿ ಅಪೀಲು ನ್ಯಾಯಾಧಿಕರಣದ ಮುಂದೆ ಸಲ್ಲಿಸಿರುವ ಅರ್ಜಿಗಾಗಿ ಯಾವುದೇ ಶುಲ್ಕವಿರತಕ್ಕದ್ದಲ್ಲ;