(1)ಭಾರತದ ಹೊರಗಡೆಗೆ ರಫ್ತಾದ ಸರಕುಗಳ ಮೇಲೆ ಸಂದಾಯ ಮಾಡಿದ ಏಕೀಕೃತ ತೆರಿಗೆಯ ಮರುಪಾವತಿಯನ್ನು ಹೊರತುಪಡಿಸಿದಂತೆ, ಆತನಿಂದ ಸಂದಾಯವಾದ ತೆರಿಗೆ, ದಂಡ, ಶುಲ್ಕಗಳು ಅಥವಾ ಯಾವುದೇ ಇತರ ಮೊತ್ತದ ಮರುಪಾವತಿಯನ್ನು ಕ್ಲೇಮು ಮಾಡುವ ಪ್ರಕರಣ 55ರ ಅಡಿಯಲ್ಲಿ ನೀಡಲಾದ ಅಧಿಸೂಚನೆಯಿಂದ ವ್ಯಾಪ್ತವಾಗುವ ವ್ಯಕ್ತಿಗಳನ್ನು ಹೊರತು ಪಡಿಸಿದ ಯಾಮೊಬ್ಬ ವ್ಯಕ್ತಿಯು, ಒಂದು ಅರ್ಜಿಯನ್ನು, ನಮೂನೆ ಜಿಎಸ್ಟಿ ಆರ್ಎಫ್ಡಿ-01ರಲ್ಲಿ ಸಾಮಾನ್ಯ ಪೋರ್ಟಲ್ನ ಮುಖಾಂತರ ನೇರವಾಗಿಯಾಗಲಿ ಅಥವಾ ಆಯುಕ್ತರಿಂದ ಅಧಿಸೂಚಿಸಲಾದ ಒಂದು ಸಹಾಯ ಕೇಂದ್ರದ ಮೂಲಕವಾಗಿಯಾಗಲಿ, ವಿದ್ಯುನ್ಮಾನ ರೀತಿಯಲ್ಲಿ ಒದಗಿಸತಕ್ಕದ್ದು.
ಪರಂತು, ಪ್ರಕರಣ 49ರ ಉಪಪ್ರಕರಣ (6)ರ ಉಪಬಂಧಗಳಿಗೆ ಅನುಸಾರವಾಗಿ ವಿದ್ಯುನ್ಮಾನ ನಗದು ಖಾತೆಯಲ್ಲಿನ ಉಳಿಕೆಗೆ ಸಂಬಂಧಿಸಿದ ಮರುಪಾವತಿಯ ಯಾವುದೇ ಕ್ಲೇಮನ್ನು, ಸಂಬಂಧಿಸಿದ ತೆರಿಗೆ ಅವಧಿಗಾಗಿ, ನಮೂನೆ ಜಿಎಸ್ಟಿಆರ್-3 ಅಥವಾ ನಮೂನೆ ಜಿಎಸ್ಟಿಆರ್-4 ಅಥವಾ ಸಂದರ್ಭಾನುಸಾರವಾಗಿ ನಮೂನೆ ಜಿಎಸ್ಟಿಆರ್ 7ರಲ್ಲಿಒದಗಿಸಿದ ರಿಟರ್ನಿನ ಮೂಲಕ ಮಾಡತಕ್ಕದ್ದು:
ಮತ್ತು ಪರಂತು, ವಿಶೇಷ ಆರ್ಥಿಕ ವಲಯ ಘಟಕ ಅಥವಾ ಒಂದು ವಿಶೇಷ ಆರ್ಥಿಕ ವಲಯ ಡೆವೆಲಪರ್ಗೆ ಸಂಬಂಧಿಸಿದಂತೆ, ಮರುಪಾವತಿಗಾಗಿ ಅರ್ಜಿಯನ್ನು ಕೆಳಕಂಡವರು ಸಲ್ಲಿಸತಕ್ಕದ್ದು-
(ಎ) ವಲಯದ ರ್ನಿಷ್ಟಪಡಿಸಿದ ಅಧಿಕಾರಿಯಿಂದ ಸಮ್ಮತಿಸಿದಂತಹ, ಪ್ರಾಧಿಕೃತ ಕಾರ್ಯಾಚರಣೆಗಳಿಗಾಗಿ ವಿಶೇಷ ಆರ್ಥಿಕ ವಲಯದಲ್ಲಿ ಅಂಥ ಸರಕುಗಳು ಪೂರ್ಣವಾಗಿ ಅಂಗೀಕಾರವಾದ ನಂತರ ಸರಕುಗಳ ಪೂರೈಕೆದಾರ;
(ಬಿ) ವಲಯದ ರ್ನಿಷ್ಟಪಡಿಸಿದ ಅಧಿಕಾರಿಯಿಂದ ಸಮ್ಮತಿಸಿದಂತಹ, ಪ್ರಾಧಿಕೃತ ಕಾರ್ಯಾಚರಣೆಗಳಿಗಾಗಿ ಸೇವೆಗಳ ಸ್ವೀಕೃತಿಗೆ ಸಂಬಂಧಿಸಿದ ಅಂಥ ಪುರಾವೆಗಳ ಜೊತೆಯಲ್ಲಿ ಸೇವೆಗಳ ಪೂರೈಕೆದಾರ ಅಲ್ಲದೆ ಪರಂತು, ಪರಿಭಾವಿತ ರಫ್ತಗಳು ಎಂದು ಗಣನೆಗೆ ತೆಗೆದುಕೊಳ್ಳಲಾದ ಪೂರೈಕೆಗಳಿಗೆ ಸಂಬಂಧಿಸಿದಂತೆ, ಅರ್ಜಿಯನ್ನು ಕೆಳಕಂಡವರುಗಳು ಸಲ್ಲಿಸಬಹದು,-
(ಎ) ಪರಿಭಾವಿತ ರಫ್ತಿನ ಪೂರೈಕಗಳನ್ನು ಸ್ವೀಕರಿಸುವವನು;
(ಬಿ) ಸ್ವೀಕರಿಸುವವನು ಅಂಥ ಪೂರೈಕೆಗಳ ಮೇಲೆ ಹೂಡುವಳಿ ತೆರಿಗೆ ಜಮೆಯನ್ನು ಉಪಯೋಗಿಸಿಕೊಂಡಿರದಿದ್ದಲ್ಲಿ ಮತ್ತು ಅದಕ್ಕಾಗಿ ಪೂರೈಕೆದಾರನು ಮರುಪಾವತಿಯನ್ನು ಕ್ಲೇಮು ಮಾಡಬಹುದು ಎಂದು ಒಂದು ವಾಗ್ದಾನ ಪತ್ರವನ್ನು ನೀಡಿರುವ ಸಂದರ್ಭದಲ್ಲಿ ಪರಿಭಾವಿತ ರಫ್ತಿನ ಪೂರೈಕಗಳ ಪೂರೈಕೆದಾರ;] ಅಲ್ಲದೆ ಪರಂತು, , ನೊಂದಣಿಯ ಸಮಯದಲ್ಲಿ ಪ್ರಕರಣ 27ರ ಅಡಿಯಲ್ಲಿ ಆತನಿಂದ ಠೇವಣಿಯಿಟ್ಟ ಮುಂಗಡ ತೆರಿಗೆಯಲ್ಲಿ, ಅರ್ಜಿದಾರನಿಂದ ಸಂದಾಯ ಮಾಡಬೇಕಾದ ತೆರಿಗೆಯನ್ನು ಹೊಂದಿಸಿದ ನಂತರದ ಯಾವುದೇ ಮೊತ್ತದ ಮರುಪಾವತಿಯನ್ನು, ಆತನಿಂದ ಒದಗಿಸುವುದು ಅಗತ್ಯವಿರುವ ಕೊನೆಯ ರಿಟರ್ನಿನಲ್ಲಿ ಕ್ಲೇಮು ಮಾಡತಕ್ಕದ್ದು.
(2) ಉಪನಿಯಮ (1)ರ ಅಡಿಯಲ್ಲಿನ ಅರ್ಜಿಯು, ಅರ್ಜಿದಾರನಿಗೆ ಮರುಪಾವತಿಯು ಬಾಕಿಯಿದೆ ಎಂದು ಸಂಸ್ಥಾಪಿಸಲು, ಅನ್ವಯವಾಗುವಂತೆ, ಕೆಳಕಂಡ ಯಾವುದಾದರೊಂದು ದಸ್ತಾವೇಜುಗಳ ಪುರಾವೆಗಳೊಂದಿಗೆ ಜೊತೆಗೂಡಿರತಕ್ಕದ್ದು:-
(ಎ) ಆದೇಶದ ಉಲ್ಲೇಖ ಸಂಖ್ಯೆ ಮತ್ತು ಅಂಥ ಮರುಪಾವತಿಗೆ ಕಾರಣವಾಗುವ ಯುಕ್ತ ಅಧಿಕಾರಿಯಿಂದ ಅಥವಾ ಒಂದು ಅಪೀಲು ಪ್ರಾಧಿಕಾರ ಅಥವಾ ಅಪೀಲು ನ್ಯಾಯಾಧಿಕರಣ ಅಥವಾ ನ್ಯಾಯಾಲಯದಿಂದ ಹೊರಡಿಸಿದ ಆದೇಶದ ಒಂದು ಪ್ರತಿ ಅಥವಾ ಪ್ರಕರಣ 107ರ ಉಪಪ್ರಕರಣ (6)ರಲ್ಲಿ ಅಥವಾ ಪ್ರಕರಣ 112ರ ಉಪಪ್ರಕರಣ (8)ರಲ್ಲಿ ನಿರ್ದಿಷ್ಟಪಡಿಸಿರುವ ಮರುಪಾವತಿಯಾಗಿ ಕ್ಲೇಮುಮಾಡಿರುವ ಸಂದಾಯದ ಉಲ್ಲೇಖ ಸಂಖ್ಯೆ;
(ಬಿ) ಶಿಪ್ಪಿಂಗ್ ಬಿಲ್ಲುಗಳ ಅಥವಾ ರಫ್ತುವಿನ ಬಿಲ್ಲುಗಳ ಸಂಖ್ಯೆ ಮತ್ತು ದಿನಾಂಕ ಮತ್ತು ಸರಕುಗಳ ರಫ್ತುವಿನ ಕಾರಣದಿಂದಾಗಿ ಮರುಪಾವತಿಯ ಸಂದರ್ಭದಲ್ಲಿ, ಸಂಬಂಧಿಸಿದ ರಫ್ತು ಬೆಲೆಪಟ್ಟಿಗಳ ಸಂಖ್ಯೆ ಮತ್ತು ದಿನಾಂಕವನ್ನು ಒಳಗೊಂಡಿರುವ ಒಂದು ವಿವರಪತ್ರ;
(ಸಿ) ಬೆಲೆಪಟ್ಟಿಗಳ ಮತ್ತು ಸೇವೆಗಳ ರಫ್ತುವಿನ ಕಾರಣದಿಂದಾಗಿ ಮರುಪಾವತಿಯ ಸಂದರ್ಭದಲ್ಲಿ, ಸಂಬಂಧಿಸಿದ ಬ್ಯಾಂಕಿನ ರಿಯಲೈಸೇಷನ್ ಪ್ರಮಾಣಪತ್ರಗಳು ಅಥವಾ ಸಂದರ್ಭಾನುಸಾರವಾಗಿ ವಿದೇಶಿ ಒಳಮುಖ ಹಣರವಾನೆ ಪ್ರಮಾಣಪತ್ರಗಳ ಸಂಖ್ಯೆ ಮತ್ತು ದಿನಾಂಕವನ್ನು ಒಳಗೊಂಡಿರುವ ಒಂದು ವಿವರಪತ್ರ;
(ಡಿ) ವಿಶೇಷ ಆರ್ಥಿಕ ವಲಯ ಘಟಕ ಅಥವಾ ವಿಶೇಷ ಆರ್ಥಿಕ ವಲಯ ಡೆವೆಲಪರ್ಗೆ ಮಾಡಲಾದ ಸರಕುಗಳ ಪೂರೈಕೆಯ ಸಂದರ್ಭದಲ್ಲಿ, ಉಪನಿಯಮ (1)ರ ದ್ವಿತೀಯ ಪರಂತುಕದಲ್ಲಿ ನಿರ್ದಿಷ್ಟಪಡಿಸಿದ ಹಿಂಬರಹಕ್ಕೆ ಸಂಬಂಧಿಸಿದ ಪುರಾವೆಯೊಂದಿಗೆ ನಿಯಮ 46ರಲ್ಲಿ ಉಪಬಂಧಿಸಿದಂತೆ ಬೆಲೆಪಟ್ಟಿಗಳ ಸಂಖ್ಯೆ ಮತ್ತು ದಿನಾಂಕವನ್ನು ಒಳಗೊಂಡಿರುವ ಒಂದು ವಿವರಪತ್ರ;
(ಇ) ಬೆಲೆಪಟ್ಟಿಗಳ ಸಂಖ್ಯೆ ಮತ್ತು ದಿನಾಂಕ, ಉಪನಿಯಮ (1)ರ ದ್ವಿತೀಯ ಪರಂತುಕದಲ್ಲಿ ನಿರ್ದಿಷ್ಟಪಡಿಸಿದ ಹಿಂಬರಹಕ್ಕೆ ಸಂಬಂಧಿಸಿದ ಪುರಾವೆ ಮತ್ತು ವಿಶೇಷ ಆರ್ಥಿಕ ವಲಯ ಘಟಕ ಅಥವಾ ವಿಶೇಷ ಆರ್ಥಿಕ ವಲಯ ಡೆವೆಲಪರ್ಗೆ ಮಾಡಲಾದ ಸರಕುಗಳ ಪೂರೈಕೆಯ ಸಂದರ್ಭದಲ್ಲಿ, ವಿಶೇಷ ಆರ್ಥಿಕ ವಲಯ ಅಧಿನಿಯಮ, 2005ರ ಅಡಿಯಲ್ಲಿ ಪರಿಭಾಷಿಸಿದಂತಹ ಪ್ರಾಧಿಕೃತ ಕಾರ್ಯಾಚರಣೆಗಳಿಗಾಗಿ, ಪೂರೈಕೆದಾರನಿಗೆ ಸ್ವೀಕರಿಸುವವನಿಂದ ಮಾಡಲಾದ, ಅವುಗಳ ಪುರಾವೆ ಜೊತೆಯಲ್ಲಿನ, ಸಂದಾಯದ ವಿವರಗಳನ್ನು ಒಳಗೊಂಡಿರುವ ಒಂದು ವಿವರಪತ್ರ;
(ಎಫ್) ವಿಶೇಷ ಆರ್ಥಿಕ ವಲಯ ಘಟಕ ಅಥವಾ ವಿಶೇಷ ಆರ್ಥಿಕ ವಲಯ ಡೆವೆಲಪರ್ಗೆ ಮಾಡಲಾದ ಸರಕು ಅಥವಾ ಸೇವೆಗಳ ಪೂರೈಕೆಯ ಸಂದರ್ಭದಲ್ಲಿ, ಸರಕು ಅಥವ ಸೇವೆಗಳ ಪೂರೈಕೆದಾರನಿಂದ ಸಂದಾಯ ಮಾಡಿದ ತೆರಿಗೆಯ ಹೂಡುವಳಿ ತೆರಿಗೆ ಜಮೆಯನ್ನು ವಿಶೇಷ ಆರ್ಥಿಕ ವಲಯ ಘಟಕ ಅಥವಾ ವಿಶೇಷ ಆರ್ಥಿಕ ವಲಯ ಡೆವೆಲಪರ್ ಉಪಯೋಗಿಸಿಲ್ಲ ಎನ್ನುವ ಒಂದು ಘೋಷಣಾ ಪತ್ರ;
(ಜಿ) ಪರಭಾವಿತ ರಫ್ತುಗಳ ಕಾರಣದಿಂದಾಗಿ ಮರುಪಾವತಿಯ ಸಂದರ್ಭದಲ್ಲಿ, ಈ ಸಂಗಬಂಧದಲ್ಲಿ ಅಧಿಸೂಚಿಸಬಹುದಾದ ಅಂಥ ಇತರೇ ಪುರಾವೆಯ ಜೊತೆಗಿನ ಬೆಲೆಪಟ್ಟಿಗಳ ಸಂಖ್ಯೆ ಮತ್ತು ದಿನಾಂಕವನ್ನು ಒಳಗೊಂಡಿರುವ ಒಂದು ವಿವರಪತ್ರ;
(ಹೆಚ್) ದರವಿಲ್ಲದ ಅಥವಾ ಸಂಪೂರ್ಣ ವಿನಾಯಿತಿ ಪೂರೈಕೆಗಳನ್ನು ಹೊರತುಪಡಿಸಿದಂತೆ ಹುಟ್ಟುವಳಿ ಪೂರೈಕೆಗಳ ಮೇಲಿನ ತೆರಿಗೆ ದರಕ್ಕಿಂತ ಹೂಡುವಳಿಗಳ ಮೇಲಿನ ತೆರಿಗೆ ದರ ಹೆಚ್ಚಿರುವ ಕಾರಣಕ್ಕಾಗಿ ಜಮೆಯು ಸಂಚಿತಗೊಂಡಿದ್ದಲ್ಲಿ, ಪ್ರಕರಣ 54ರ ಉಪಪ್ರಕರಣ (3)ರ ಅಡಿಯಲ್ಲಿ ಬಳಕೆಯಾಗದ ಹೂಡುವಳಿ ತೆರಿಗೆ ಜಮೆಯ ಮರುಪಾವತಿಗೆ ಕ್ಲೇಮು ಸಂಬಂಧಿಸಿರುವ ಸಂದರ್ಭದಲ್ಲಿ, ಒಂದು ತೆರಿಗೆ ಅವಧಿಯಲ್ಲಿ ಸ್ವೀಕರಿಸಿದ ಮತ್ತು ನೀಡಿದ ಬೆಲೆಪಟ್ಟಿಗಳ ಸಂಖ್ಯೆ ಮತ್ತು ದಿನಾಂಕವನ್ನು ಒಳಗೊಂಡಿರುವ ನಮೂನೆ ಜಿಎಸ್ಟಿ ಆರ್ಎಫ್ಡಿ-01ರ ಅನುಬಂಧ 1ರಲ್ಲಿ ಒಂದು ವಿವರಪತ್ರ;
(ಐ) ತಾತ್ಕಾಲಿಕ ಕರನಿರ್ಧರಣೆಯ ಅಂತಿಮಗೊಳಿಸುವಿಕೆಯ ಕಾರಣದಿಂದಾಗಿ ಮರುಪಾವತಿ ಉದ್ಭವಿಸಿದ ಸಂದರ್ಭದಲ್ಲಿ, ಅಂತಿಮ ಕರನಿರ್ಧರಣಾ ಆದೇಶದ ಉಲ್ಲೇಖ ಸಂಖ್ಯೆ ಮತ್ತು ಸದರಿ ಆದೇಶದ ಒಂದು ಪ್ರತಿ;
(ಜೆ) ರಾಜ್ಯದೊಳಗಿನ ಪೂರೈಕೆ ಎಂದು ಪರಿಗಣಿಸಲಾಗಿರುವ ಆದರೆ ತರುವಾಯವಾಗಿ ಅಂತರ-ರಾಜ್ಯ ಪೂರೈಕೆ ಎಂದಾದ ವ್ಯವಹಾರಗಳ ವಿವರಗಳನ್ನು ತೋರಿಸುವ ಒಂದು ವಿವರಪತ್ರ;
(ಕೆ) ತೆರಿಗೆಯ ಹೆಚ್ಚುವರಿ ಸಂದಾಯದ ಕಾರಣದಿಂದಾದ ಕ್ಲೇಮಿನ ಮೊತ್ರದ ವಿವರಗಳನ್ನು ತೋರಿಸುವ ಒಂದು ವಿವರಪತ್ರ;
(ಎಲ್) ಕ್ಲೇಮು ಮಾಡಿರುವ ಮರುಪಾವತಿಯ ಮೊತ್ತವು ಎರಡು ಲಕ್ಷ ರೂಪಾಯಿಗಳನ್ನು ಮೀರದಿದ್ದಲ್ಲಿ, ಮರುಪಾವತಿ ಎಂದು ಕ್ಲೇಮು ಮಾಡಿರುವ ತೆರಿಗೆ, ಬಡ್ಡಿ ಅಥವಾ ಯಾವುದೇ ಇತರ ಮೊತ್ತದೆ ಹೊರೆಯನ್ನು ಯಾಮೊಬ್ಬ ಇತರ ವ್ಯಕ್ತಿಗೆ ವರ್ಗಾಯಿಸಿಲ್ಲ ಎನ್ನುವ ಒಂದ ಘೋಷಣಾ ಪತ್ರ:
ಪರಂತು, ಪ್ರಕರಣ 54ರ ಉಪಪ್ರಕರಣ (8)ರ ಖಂಡ (ಎ) ಅಥವಾ ಖಂಡ (ಬಿ) ಅಥವಾ ಖಂಡ (ಸಿ) ಅಥವಾ ಖಂಡ (ಡಿ) ಅಥವಾ ಖಂಡ (ಎಫ್)ನ ಅಡಿಯಲ್ಲಿ ವ್ಯಾಪ್ತವಾದ ಪ್ರಕರಣಗಳಿಗೆ ಸಂಬಂಧಿಸಿದಂತೆ, ಒಂದು ಘೋಷಣೆಯನ್ನು ಒದಗಿಸಬೇಕಾದ ಅಗತ್ಯತೆಯಿರುವುದಿಲ್ಲ;
(ಎಮ್) ಕ್ಲೇಮು ಮಾಡಿರುವ ಮರುಪಾವತಿಯ ಮೊತ್ತವು ಎರಡು ಲಕ್ಷ ರೂಪಾಯಿಗಳನ್ನು ಮೀರಿದ್ದಲ್ಲಿ, ಮರುಪಾವತಿ ಎಂದು ಕ್ಲೇಮು ಮಾಡಿರುವ ತೆರಿಗೆ, ಬಡ್ಡಿ ಅಥವಾ ಯಾವುದೇ ಇತರ ಮೊತ್ತದೆ ಹೊರೆಯನ್ನು ಯಾಮೊಬ್ಬ ಇತರ ವ್ಯಕ್ತಿಗೆ ವರ್ಗಾಯಿಸಿಲ್ಲ ಎಂದು ಚಾರ್ಟರ್ಡ್ ಅಕೌಂಟೆಂಟ್ ಅಥವಾ ಒಬ್ಬ ಕಾಸ್ಟ್ ಅಕೌಂಟೆಂಟ್ನಿಂದ ನಮೂನೆ ಜಿಎಸ್ಟಿ ಆರ್ಎಫ್ಡಿ-01ರ ಅನುಬಂಧ 2ರಲ್ಲಿ ನೀಡಿರುವ ಒಂದು ಪ್ರಮಾಣಪತ್ರ:
ಪರಂತು, ಪ್ರಕರಣ 54ರ ಉಪಪ್ರಕರಣ (8)ರ ಖಂಡ (ಎ) ಅಥವಾ ಖಂಡ (ಬಿ) ಅಥವಾ ಖಂಡ (ಸಿ) ಅಥವಾ ಖಂಡ
(ಡಿ) ಅಥವಾ ಖಂಡ (ಎಫ್)ನ ಅಡಿಯಲ್ಲಿ ವ್ಯಾಪ್ತವಾದ ಪ್ರಕರಣಗಳಿಗೆ ಸಂಬಂಧಿಸಿದಂತೆ, ಒಂದು ಘೋಷಣೆಯನ್ನು ಒದಗಿಸಬೇಕಾದ ಅಗತ್ಯತೆಯಿರುವುದಿಲ್ಲ;
ವಿವರಣೆ.- ಈ ನಿಯಮದ ಉದ್ದೇಶಗಳಿಗಾಗಿ-
(i) ಪ್ರಕರಣ 54ರ ಉಪಪ್ರಕರಣ (8)ರ ಖಂಡ (ಸಿ)ಯಲ್ಲಿ ಉಲ್ಲೇಖಿಸಿದ ಮರುಪಾವತಿಗಳ ಸಂದರ್ಭದಲ್ಲಿ, ಪದಾವಳಿಯಾದ “ಬೆಲೆಪಟ್ಟಿ” ಎಂದರೆ ಪ್ರಕರಣ 31ರಲ್ಲಿ ಒಳಗೊಂಡಿರುವ ಉಪಬಂಧಗಳನ್ನು ಧೃಢೀಕರಿಸುವ ಬೆಲೆಪಟ್ಟಿ;
(ii) ಸ್ವೀಕರಿಸುವವನಿಂದ ತೆರಿಗೆಯ ಮೊತ್ತವನ್ನು ವಸೂಲು ಮಾಡಲಾಗಿದ್ದಲ್ಲಿ, ತೆರಿಗೆಯ ಹೊರೆಯು ಅಂತಿಮ ಗ್ರಾಹಕನಿಗೆ ವರ್ಗಾಯಿಸಲಾಗಿದೆ ಎಂದು ಪರಿಭಾವಿತವಾಗತಕ್ಕದ್ದು.
(3) ಅರ್ಜಿಯು, ಹೂಡುವಳಿ ತೆರಿಗೆ ಜಮೆಯ ಮರುಪಾವತಿಗೆ ಸಂಬಂಧಿಸಿದಲ್ಲಿ, ವಿದ್ಯುನ್ಮಾನ ಜಮೆ ಖಾತೆಗೆ, ಅರ್ಜಿದಾರನಿಂದ ಹಾಗೆ ಕ್ಲೇಮು ಮಾಡಿದ ಮರುಪಾವತಿಗೆ ಸಮಾನವಾದ ಒಂದು ಮೊತ್ತವನ್ನು ಖರ್ಚುಹಾಕತಕ್ಕದ್ದು.
(4) ಏಕೀಕೃತ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ, 2017 (2017ರ ಕೇಂದ್ರ ಅಧಿನಿಯಮ 13)ರ ಪ್ರಕರಣ 16ರ ಉಪಪ್ರಕರಣ(3)ರ ಉಪಬಂಧಗಳಿಗೆ ಅನುಸಾರವಾಗಿ, ಬಾಂಡ್ ಅಥವಾ ವಾಗ್ದಾನ ಪತ್ರದ ಅಡಿಯಲ್ಲಿ ತೆರಿಗೆಯನ್ನು ಸಂದಾಯ ಮಾಡದೇ ಸರಕು ಅಥವಾ ಸೇವೆಗಳ ಅಥವಾ ಅವುಗಳೆರೆಡರ ಶೂನ್ಯ-ದರ ಪೂರೈಕೆಯ ಸಂದರ್ಭದಲ್ಲಿ, ಹೂಡುವಳಿ ತೆರಿಗೆ ಜಮೆಯ ಮರುಪಾವತಿಯನ್ನು ಕೆಳಕಂಡ ಸೂತ್ರದ ಪ್ರಕಾರ ಮಂಜೂರು ಮಾಡತಕ್ಕದ್ದು ಮರುಪಾವತಿ ಮೊತ ್ತ= (ಶೂನ್ಯ-ದರ ಸರಕುಗಳ ಪೂರೈಕೆಯ ವಹಿವಾಟು +ಶೂನ್ಯ-ದರ ಸೇವೆಗಳ ಪೂರೈಕೆಯ ವಹಿವಾಟು) ಥ ನಿವ್ವಳ ಐಟಿಸಿ ಹೊಂದಿಸಿದ ಒಟ್ಟು ವಹಿವಾಟು ಇದರಲ್ಲಿ,-
(ಎ) “ಮರುಪಾವತಿ ಮೊತ್ರ” ಎಂದರೆ, ಅಂಗೀಕರಿಸಬಹುದಾದ ಗರಿಷ್ಟ ಮರುಪಾವತಿ;
(ಬಿ) “ನಿವ್ವಳ ಐಟಿಸಿ” ಎಂದರೆ, ಸಂಬಂಧಿಸಿದ ಅವಧಿಯಲ್ಲಿನ ಹೂಡುವಳಿಗಳು ಮತ್ತು ಹೂಡುವಳಿ ಸೇವೆಗಳ ಮೇಲೆ ಉಪಯೋಗಿಸಿದ ಹೂಡುವಳಿ ತೆರಿಗೆ ಜಮೆ;
(ಸಿ) “ಶೂನ್ಯ-ದರ ಸರಕುಗಳ ಪೂರೈಕೆಯ ವಹಿವಾಟು” ಎಂದರೆ ಸಂಬಂಧಿಸಿದ ಅವಧಿಯಲ್ಲಿ, ಬಾಂಡ್ ಅಥವಾ ವಾಗ್ದಾನ ಪತ್ರದ ಅಡಿಯಲ್ಲಿ ತೆರಿಗೆಯನ್ನು ಸಂದಾಯರಹಿತವಾಗಿ ಮಾಡಿದ ಸರಕುಗಳ ಶೂನ್ಯ-ದರ ಪೂರೈಕೆ;
(ಡಿ) “ಶೂನ್ಯ-ದರ ಸೇವೆಗಳ ಪೂರೈಕೆಯ ವಹಿವಾಟು” ಎಂದರೆ ಬಾಂಡ್ ಅಥವಾ ವಾಗ್ದಾನ ಪತ್ರದ ಅಡಿಯಲ್ಲಿ ತೆರಿಗೆಯನ್ನು ಸಂದಾಯರಹಿತವಾಗಿ, ಕೆಳಕಂಡ ವಿಧಾನದಲ್ಲಿ ಲೆಕ್ಕಾಹಾಕಿ ಮಾಡಿದ ಸೇವೆಗಳ ಶೂನ್ಯ-ದರ ಪೂರೈಕೆ, ಎಂದರೆ:- ಶೂನ್ಯ-ದರ ಸೇವೆಗಳ ಪೂರೈಕೆಯು, “ಶೂನ್ಯ-ದರ ಸೇವೆಗಳ ಪೂರೈಕೆಗಳಿಗಾಗಿ ಸಂಬಂಧಿಸಿದ ಅವಧಿಯಲ್ಲಿ ಸ್ವೀಕರಿಸಿರುವ ಮತ್ತು “ಶೂನ್ಯ-ದರ ಸೇವೆಗಳ ಪೂರೈಕೆಗಾಗಿ ಸ್ವೀಕರಿಸಿದ, ಅದಕ್ಕಾಗಿ ಸೇವೆಗಳ ಪೂರೈಕೆ ಸಂಬಂಧಿಸಿದ ಅವಧಿಯಲ್ಲಿ ಪೂರ್ಣಗೊಳ್ಳದಿರುವ, ಮುಂಗಡಗಳಷ್ಟು ಇಳಿಕೆ ಮಾಡಿ, ಪೂರೈಕೆಯು ಪೂರ್ಣಗೊಂಡಿರುವ ಅದಕ್ಕಾಗಿ ಸಂದಾಯವನ್ನು, ಸಂಬಂಧಿಸಿದ ಅವಧಿಗಿಂತ ಹಿಂದಿನ ಯಾವುದೇ ಅವಧಿಯಲ್ಲಿ “ಶೂನ್ಯ-ದರ ಸೇವೆಗಳ ಪೂರೈಕೆಗಾಗಿ ಮುಂಗಡವಾಗಿ ಸ್ವೀಕರಿಸಿರುವ ಸಂದಾಯಗಳ ಸಮಗ್ರವಾಗಿರುತ್ತದೆ;
(ಇ) “ಹೊಂದಿಸಿದ ಒಟ್ಟು ವಹಿವಾಟು” ಎಂದರೆ, ಸಂಬಂಧಿಸಿದ ಅವಧಿಯಲ್ಲಿನ “ಶೂನ್ಯ-ದರದ ಪೂರೈಕೆಗಳನ್ನು ಹೊರತುಪಡಿಸಿದ ವಿನಾಯಿತಿ ಪೂರೈಕೆಗಳನ್ನು ಹೊರತುಪಡಿಸಿ, ಪ್ರಕರಣ 2ರ ಖಂಡ (112)]ರಲ್ಲಿ ಪರಿಭಾಷಿಸಿದಂತೆ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿನ ವಹಿವಾಟು;
(ಎಫ್) “ಸಂಬಂಧಿಸಿದ ಅವಧಿ” ಎಂದರೆ ಕ್ಲೇಮನ್ನು ಸಲ್ಲಿಸಲಾಗಿರುವ ಅವಧಿ.
(5) ವಿಲೋಮ ಸುಂಕ ಸ್ವರೂಪದ ಕಾರಣದಿಂದಾಗಿ ಮರುಪಾವತಿಯ ಸಂದರ್ಭದಲ್ಲಿ, ಹೂಡುವಳಿ ತೆರಿಗೆ ಜಮೆಯ ಮರುಪಾವತಿಯನ್ನು ಕೆಳಕಂಡ ಸೂತ್ರದ ಪ್ರಕಾರ ಮಂಜೂರು ಮಾಡತಕ್ಕದ್ದು ಗರಿಷ ್ಟ ಮರುಪಾವತಿ ಮೊತ್ರ= (ವಿಲೋಮ ದರದ ಸರಕುಗಳ ಪೂರೈಕೆಯ ವಹಿವಾಟು) ಥ ನಿವ್ವಳ ಐಟಿಸಿ ಹೊಂದಿಸಿದ ಒಟ್ಟು ವಹಿವಾಟು-ಅಂಥ ವಿಲೋಮ ದರದ ಸರಕುಗಳ ಪೂರೈಕೆ ಮೇಲೆ ಸಂದಾಯ ಮಾಡಬೇಕಾದ ತೆರಿಗೆ.
ವಿವರಣೆ,- ಈ ಉಪ ನಿಯಮದ ಉದ್ದೇಶಗಳಿಗಾಗಿ ಪದಾವಳಿಯಾದ “ನಿವ್ವಳ ಐಟಿಸಿ” ಮತ್ತು “ಹೊಂದಿಸಿದ ಒಟ್ಟು ವಹಿವಾಟು” ಎನ್ನುವುದು ಉಪ ನಿಯಮ (4)ರಲ್ಲಿ ಅವುಗಳಿಗೆ ನೀಡಲಾದ ಅದೇ ಅರ್ಥವನ್ನು ಹೊಂದಿರತಕ್ಕದ್ದು.
30ಅಧಿಸೂಚನೆ ಸಂಖ್ಯೆ ಆಇ 47 ಸಿಎಸ್ಎಲ್ 2017 (4-ಹೆಚ್/2017) ದಿನಾಂಕ 09-11-2017ರ ಮೂಲಕ ಮೂರನೇ ಪರಂತುಕವನ್ನು ಪ್ರತಿಯೋಜಿಸಲಾಗಿದೆ.